Friday 6 August 2021

ಇದನಾ ಬೇಡಿದವನಲ್ಲಾ ಬುಧರಂತರ್ಯಾಮಿ ಲಕುಮಿನಲ್ಲ ankita vijayaramachandra vittala appavara stutih

 ..

Kruti by ವಿಜಯರಾಮಚಂದ್ರ ವಿಠಲ ದಾಸರು mysore kattemane 

ರಾಗ : ಕಾಂಬೋಧಿ ತಾಳ : ಝ೦ಪೆ


ಇದನಾ ಬೇಡಿದವನಲ್ಲಾ

ಬುಧರಂತರ್ಯಾಮಿ ಲಕುಮಿನಲ್ಲ ಪ


ಪಾಪ ಕಾರ್ಯದ ಪಾಪ ವ್ಯಾಪಿಸಿ ದೇಹದಿ

ಲೋಪಗೈಸೋದು ಸತ್ಕರ್ಮ

ದೀಪ ನೀನಾಗಿರೆ ಉಪದೇಶಿಸೀ ಭವ

ಕೂಪದಿಂದೆತ್ತೆಂದು ಬೇಡಿದೆನಲ್ಲದೆ 1


ವಿಷಯದೊಳ್ ಸಂಚರಿಪ ದೋಷಕಾರಿ ಮನ

ಆಶೆಯೊಳು ಪೊಕ್ಕು

ನಾಶಗೈಪೋದೆನ್ನ ವಿಶೇಷ ಸಾಧನಗಳ ನೀ

ಪೋಷಿಸು ಎಂದು ಬೇಡಿದೆನಲ್ಲದೇ 2


ಸುಧೆ ತಂದ ವಿಜಯ ರಾಮಚಂದ್ರವಿಠಲ ನಿನ

ಗೆದುರ್ಯಾರೊ ಪೇಳುವರು

ಮುದದಿಂದ ಕೃಷ್ಣಾರ್ಯರೊಳು ಬೇಡಿದೆನಲ್ಲದೇ 3

***

ರಾಗ : ಕಾಂಬೋಧಿ ತಾಳ : ಝ೦ಪೆ

ಇದನಾ ಬೇಡಿದವನಲ್ಲಾ ।

ಬುಧರಂತರ್ಯಾಮಿ -

ಲಕುಮೀ ನಲ್ಲಾ ।। ಪಲ್ಲವಿ ।।

ಪಾಪ ಕಾರ್ಯದ ಪಾಪ -

ವ್ಯಾಪಿಸಿ ದೇಹದಿ ।

ಲೋಪಗೈಸೋದು ಸತ್ಕರ್ಮ ।

ದೀಪ ನೀನಾಗಿರೆ -

ಉಪದೇಶಿಸೀ ಭವ ।

ಕೂಪದಿಂದೆತ್ತೆಂದು -

ಬೇಡಿದೆನಲ್ಲದೆ ।। ಚರಣ ।।

ವಿಷಯದೊಳ್ಸಂಚರಿಪ -

ದೋಷಕಾರಿ ಮನ ।

ಆಶೆಯೊಳು ಪೊಕ್ಕು ।

ನಾಶ ಗೈದೆನ್ನ ವಿ-

ಶೇಷ ಸಾಧನಗಳ । ನೀ ।

ಪೋಷಿಸು ಎಂದು -

ಬೇಡಿದನಲ್ಲದೆ ।। ಚರಣ ।।

ಸುಧೆ ತಂದ ವಿಜಯರಾಮ-

ಚಂದ್ರವಿಠಲ । ನಿನ ।

ಗೆದಿರ್ಯಾರೋ ಪೇಳುವರು ।

ಮುದದಿಂದ ಕೃಷ್ಣಾರ್ಯರೊಳು -

ಬೇಡಿದೆನಲ್ಲದೆ ।। ಚರಣ ।।

***

No comments:

Post a Comment