Monday, 2 August 2021

ಏಕಮೇವ ಅದ್ವಿತೀಯಾ ಅಪ್ರಾಕೃತ ಕಾಯಾ ankita uragadrivasa vittala

ಏಕಮೇವ ಅದ್ವಿತೀಯಾ ಅಪ್ರಾಕೃತ ಕಾಯಾ ಪ


ಶ್ರೀಕರಾರ್ಚಿತಪಾದ ಲೋಕೇಶ ವಂದಿತ ಅ-

ವ್ಯಾಕೃತಾಕಾಶದೊಡೆಯನೆ ವಾಸುಕೀಶಯನ ಸರ್ವೇಶ ನೀನೆ

ಮುಕ್ತಾಶ್ರಯ ಸರ್ವಲೋಕಾಶ್ರಯನಾಗಿಹೆ

ಪ್ರಾಕೃತ ಸಜ್ಜಮಜ್ಜನ

ಕಾರ್ಯಕೆ ಕಾರಣನಯ್ಯ ಏಕೋ ನಾರಾಯಣ ಅ.ಪ


ಪ್ರಳಯಕಾಲದಿ ಜೀವರ ನಿಲಯಾ ಕಲ್ಪಿಸಿ ತತ್ತ

ಸ್ಥಳದಲ್ಲಿಡೆ ನಾಲ್ಕು ಸ್ಥಳಗಳನ್ನಾಗಿ ನಿನ್ನ ಕಳೆಯಾ

ನಾಲ್ಕುವಿಧಗಳ ರೂಪಗಳನು ಧರಿಸಿ ಪ್ರಳಯದೊಳಿಂಬಿಟ್ಟು

ಲೀಲೆಯೊಳು ನಿಂದೆ ನಳಿನನಾಭ ನೀ ಪಸುಳೆಯಂತೆ

ನಲಿದಾಲದೆಲೆಯೊಳು ಪೊಳೆಯುತಲಿದ್ದು

ಎಳೆಸಿದ ಕಟಾಕ್ಷವೀಕ್ಷಣದಿಂದಲಿ 1

ಅಳವು ಇಲ್ಲದ ಸೃಷ್ಟಿಯನೆಸಗಿದೇ

ಸಾಧುಜೀವರು ತಮ್ಮ ಸಾಧನ ಪೊರೈಸಿ

ಸ್ವದೇಹದೊಳು ಬಂದ ಮೋದದಿಂದಲಿ ನೋಡಿ

ಬಾಧಿಪ ಲಿಂಗಭಂಗವೈದಿಹ ಪ್ರಾರಬ್ಧನಾಶನವಿಹ ವಿ-

ವಿಧ ಸುಜೀವರ ಮೋದಪಡಿಸಿ ನಿ-

ಷೇಧಿಸದೆ ಸ್ವರೂಪಾನಂದವೀಯಲೋಸುಗ

ಉದರದೊಳಿಟ್ಟ್ಯಯ್ಯ ಸದಮಲಮೂರುತಿ

ಅದುಭುತಮಹಿಮ ಶ್ರೀ ವಾಸುದೇವನೆ2

ಆಗಾಮಿ ಸಂಚಿತ ನೀಗಿ ಪ್ರಾರಬ್ಧ ಶೇಷ

ಭೋಗ ಉಳ್ಳವರೆಲ್ಲ ಆಗದೆ ಪೂರ್ಣ ಸಾಧನೆ

ನೀಗದೆ ಲಿಂಗಭಂಗ ಆಗ ಬಿಂಬನ್ನ ನೋಳ್ಪರ

ನಾಗಶಯನ ನಿನ್ನಂಗದೊಳಿಂಬಿಟ್ಟೆ

ಜಾಗುಮಾಡದೆ ನೀನಾಗಲೆ ಜೀವರ ಭೋಗವ ತರಲು

ಭಾಗವಗೈಸಿ ಭೂಭಾಗದ ಸಾಧನ ಮಾಳ್ಪ ಜೀವಗಣ

ಭಾಗವ ಕಾಯ್ದೆ ಸಂಕರುಷಣ ಮೂರುತೆ 3

ನಿತ್ಯಸಂಸಾರಿಗಳಿಗೆ ಇತ್ತೆ ನಿನ್ನುದರದೊಳು

ಗತಿಪ್ರದ ಪ್ರದ್ಯುಮ್ನ ನಿತ್ಯಸಾಧನರಿಗೆ

ಮುಕ್ತರೊಡೆಯ ದೇವ ಶಕ್ತನಹುದೋ ನೀ

ಮತ್ತೆ ಮುಂದಿನ ಬ್ರಹ್ಮನ ಹತ್ತಿಬರುವ ಜೀವರ

ಮೊತ್ತ ಮೊದಲು ನೀನಿತ್ತು ಪೊರೆದೆ ಬರಲಿತ್ತ ಕಾರಣ ಪ್ರ-

ಕೃತಿಯಿಂದಲಿ ಸುತ್ತಿ ತಂದು ಮತ್ತೆ

ಸುತ್ತಿ ಸುತ್ತಿರುವೆ ಬಿತ್ತರಿಸಲೇನನಿರುದ್ಧಮೂರುತೇ 4

ಅಣುವಿಗೆ ಅಣುವಾಗಿ ಘನತೆ ಘನತಮನಾಗಿ

ತೃಣಜೀವರಾದಿ ಬ್ರಹ್ಮಗಣರೆಲ್ಲರೊಳು

ಗಣನೆ ಇಲ್ಲದ ಕಾರ್ಯ ಕ್ಷಣಬಿಡದಲೆ ನಡೆಸಿ

ಗುಣನಿಧೆ ತೇನ ವಿನಾ ತೃಣಮಪಿನಚಲತಿ ಎಂಬ

ಎಣೆಯಿಲ್ಲದಿಹ ಸುಗುಣ ಸಾಂದ್ರನೆ

ಪ್ರಣವದೊಳು ಪ್ರತಿಪಾದ್ಯನಾಗಿಹೆ ತ್ರಿಗುಣರಹಿತ ಮುಖ್ಯ

ಪ್ರಾಣಾಂತರ್ಗತ ಪ್ರಣತಕಾಮದ ಪೂರ್ಣ ಸಂಪೂರ್ಣ5

ಮುಕ್ತಾಮುಕ್ರಾಶ್ರಯ ಭಕ್ತಪರಾಧೀನ

ಶಕ್ತಾನೆ ಸರ್ವವೇದೋಕ್ತ ಮಹಿಮಾತೀತ

ಉಕ್ತನಾಗಿಹೆ ಪುರುಷಸೂಕ್ತಾದೊಳಪ್ರಮೇಯ

ವ್ಯಕ್ತಾನಲ್ಲವೊ ನೀನು ಭಕ್ತಿಯಿಂದಲ್ಲದೆ

ಮುಕ್ತಿದಾತ ಪುರುಷೋತ್ತಮ ನಿನ್ನಯ

ಶಕ್ತಿಯನರಿಯರು ಅಜಭವಾದ್ಯರು

ಶಕ್ತನೆ ಜೀವನ್ಮುಕ್ತರೌಘ

ಸಕ್ತರಾಗಿ ನಿನ್ನ ಸ್ತೋತ್ರವ ಮಾಳ್ಪರು 6

ಶ್ರೀಶಾ ಸರ್ವೋತ್ತಮ ವಾಸ ವೈಕುಂಠಾಧೀಶ

ಶ್ವಾಶಾನಿಂದಲಿ ಶೇಷನಹಂಕಾರ ಬಿಡಿಸಿದೆ

ವಾಸವಾದಿ ವಂದಿತ ಭಾಸುರಾಂಗನೆ

ವಿಶ್ವಾಸ ನಿನ್ನೊಳಿಟ್ಟ ದಾಸ ಜನರ ಕಾಯ್ವ

ಈಶಾವ್ಯಾಸಮಿದಂಸರ್ವಂ ಎಂದೆಂದು ಎಂದು

ಉಸುರುವ ವೇದಗಳ್ ಏಸುಕಾಲಕು ಸಾಕಲ್ಯದಿ ವರ್ಣಿಸ

ಲೀಶ ಕೋಟಿ ಪ್ರವಿಷ್ಟೆಗೆ ಅಸದಳ 7

ಅಂಗಜಪಿತ ರಂಗ ಮಂಗಳಾಂಗನೆ ಮಾ-

ತಂಗವರದ ದೇವ ಗಂಗಾಜನಕ ಕಾಳಿಂಗನಾ ಮದ ಮೆಟ್ಟಿ

ಭಂಗಾಗೈಸಿದ ಭುಜಂಗಶಯನ ಎನ್ನಂತಾ-

ರಂಗದಿ ನಿಲ್ಲೋ ಇಂಗಿತ ಬಲ್ಲೆ ಶ್ರೀರಂಗಶಾಯಿ ಸಾ-

ರಂಗಪಾಣಿ ಕೃಪಾಂಗ ಎನ್ನಯ ಭವಭಂಗಗೈಸಿ ಸ-

ತ್ಸಂಗವೀಯೋ ಯದುಪುಂಗವ ಮಂಗಳಮೂರುತಿ ಶೌರೇ8

ಕಾಲನಾಮಕ ನೀನೆ ಕಾಲ ಮಹತ್ಕಾಲ ಕಾಲಕಲ್ಪಾಂತ

ಕಾಲದಲ್ಲಿ ಸೃಷ್ಟಿಯ ಲೀಲೆತನದಿ ಲಯ ಲೀಲೆಯ ತೋರಿ

ಬಾಲಲೀಲೆಯಿಂದಲಿ ಆಲದೆಲೆಯೊಳು ಪವಳಿಸಿದೆ

ಶ್ರೀಲಲನೆಯ ಲೋಲ ನೀನೆಲೊ ಈ ಜನಲೀಲೆಗೆ ಜೀವರ

ಜಾಲವ ತಂದೆ ಪಾಲಿಪ ಸಲಹಿಪ ಕರ್ತ ನೀನಲ್ಲದಿ-

ನ್ನಿಲ್ಲವಯ್ಯ ಶ್ರೀ ವೇಂಕಟೇಶ ಪ್ರಭೋ 9

****


No comments:

Post a Comment