ದೋಷ ಬಪ್ಪದೆ ಇಪ್ಪದೆ ಪಾಮರನಿಗೆ ಪ
ಜಲಜನಾಭನ ಮರೆತು ಜಲದಲ್ಲಿ ಮಿಂದು ಹೆ
ಬ್ಬುಲಿ ಬಣ್ಣದಂತೆ ನಾಮಗಳ ಧರಿಸಲೇನು 1
ಸನಕಾದಿ ಮುನಿವಂದ್ಯ ಮನಸಿಜ ಜನಕಾ
ನಮ್ಮನನು ಕಾಯುತಿರೆ ಭೂಮಿಧನವೇ ಜೀವನನೆಂಬುವಗೆ 2
ಶಿರಿಗೋವಿಂದ ವಿಠಲನ ಸಂಸ್ತುತಿಸುವ
ಹರಿದಾಸನ ತಿರಸ್ಕರಿಸುವ ದುರುಳಗೆ 3
***
||ದೋಷ ಬಪ್ಪದೆ ಇಪ್ಪದೆ ಪಾಮರನಿಗೆ|| ಪ||
ಜಲಜನಾಭನ ಮರೆತು ಜಲದಲ್ಲಿ ಮಿಂದು
ಹೆಬ್ಬುಲಿ ಬಣ್ಣದಂತೆ ನಾಮಗಳ ಧರಿಸಲೇನು ||1||
ಸನಕಾದಿ ಮುನಿವಂದ್ಯ ಮನಸಿಜ ಜನಕಾ|
ನಮ್ಮನನು ಕಾಯುತಿರೆ ಭೂಮಿ ಧನವೇ ಜೀವನನೆಂಬುವಗೆ|| 2||
ಶಿರಿಗೋವಿಂದ ವಿಠಲನ ಸಂಸ್ತುತಿಸುವ|
ಹರಿದಾಸನ ತಿರಸ್ಕರಿಸುವ ದುರುಳಗೆ|| 3||
***
No comments:
Post a Comment