ನಿತ್ಯದಿತಿಜರು ಕಲಿಗೆ ದೂರುತಿಹರೋ
ಸತ್ಯಧ್ಯಾನರ ಕಾಟ ತಾಳಲಾರೆವೊಯೆಂದು ಪ
ನೀ ಕಲಿಸಿದಾಟವನು ತಾ ಕಳೆದು ಜನರ ಅಘನೂಕಿ
ಜಗಸತ್ಯ ಶ್ರೀ ಹರಿಯು ಪರನು
ಶ್ರೀಕಮಲಭವರೆಲ್ಲ ದಾಸರೆಂದರುಪಲು
ತಾ ಕಲ್ಪಿಸಿದ ಪಾಠಶಾಲೆ ಸಭೆಗಳನೆಂದು 1
ಭೂಸುರರಿಗನ್ನ ಧನ ಭೂಷಣಗಳಿತ್ತು
ಅಭ್ಯಾಸಗೈಸಿದ ಸಕಲ ವೇದಶಾಸ್ತ್ರ
ಏಸು ವಿಧ ಯತ್ನಗಳು ನಾ ಮಾಡಿದರು ಜಯ
ಲೇಸು ಕಾಣದೆ ನಿನ್ನ ಬಳಿಗೆ ಬಂದೆವು ಎಂದು 2
ಇಂತು ತಾ ಮಾಡಿದನು ಪಿಂತಿನಾಶ್ರಮದಿ
ಈ ಗಂತು ನಮ್ಮವರಾದ ವದು ಮತ್ಸರಾ
ಕಂತು ಕೋಪಾದಿಗಳಿಗಂತಕನು ಯನಿಸಿ
ಮುನಿ ಸಂತತಿಪನಾಗಿರುವದೆಂತು ನೋಳ್ಪೆವು ಎಂದು 3
ತಾಪಸೋತ್ತಮ ಸತ್ಯದ್ಯಾನದಿಂ ಭೂತಳದಿ
ಪಾಪ ಸರಿದಿತು ಪುಣ್ಯವೆಗ್ಗಳಿಸಿತು
ಲೇಪಿಸದು ಖತಿಜನಕ ಇವರ ದಯದಿಂದೆಮ್ಮ
ವ್ಯಾಪಾರ ಧರೆಯೊಳಗೆ ಭೂಪ ಇನ್ಯಾಕೆಂದು 4
ನಿರುತ ಸಿರಿಗೋವಿಂದ ವಿಠಲನ್ನ ಸೇವಿಸುತಾ
ಪರಹಿಂಸೆ ಧನಯುವತಿ ದ್ಯೂತತೊರದಾ
ವರಯತಿಯ ಮೋಹಿಸುವ ಶಕ್ತಿ ತನಗಿಲ್ಲೆಂದು
ಅರುಹಿದನು ಭೃತ್ಯರಿಗೆ ಕಲಿ ಮನನೊಂದು 5
****
No comments:
Post a Comment