Sunday, 1 August 2021

ಇಂದಿರೇಶಾನಂದ ಕಂದನೇ ಮಂದರಧರ ಗೋವಿಂದ ಗೋಪತಿಯೇ ankita shanti

 ..

kruti by shantibai dasaru ಶಾಂತಿಬಾಯಿ ದಾಸರು


ಇಂದಿರೇಶಾನಂದ ಕಂದನೇ

ಮಂದರಧರ ಗೋವಿಂದ ಗೋಪತಿಯೇ ಪ


ಮುದ್ದು ಮೋಹನ ಕೃಷ್ಣಾ

ಸಿದ್ಧನಾಗಿಹೆ ನೀ

ಇದ್ದು ನೀ ಇಲ್ಲದಂತೆನ್ನಾ

ಬುದ್ಧಿವಂತನೆ ನೀನು ಕದ್ದು ಪೋಗುವೆಯೊ 1


ಮರೆತು ನಾಬಿಟ್ಟೆನು

ಧರೆಯೊಳು ನಿನಗೆ

ಪರಮ ಪುರುಷ ಹರಿಯೇ

ಚರಾಚರವ ತುಂಬಿ ಭರಿತನಾಗಿರುವಿ 2


ಎಡೆಬಿಡದೀಗಲೆ

ಮೃಡಸಭಾ ನಿನಗೆ

ತಡಮಾಡದೆ ಪಿಡಿದು

ದೃಢದಿಂ ಕಟ್ಟುವೆ ಕಡಲೊಡೆಯನೇ 3


ವಾಸುದೇವನೇ ಜಗ

ದೀಶ ಗೋಪಾಲಾ

ಈಶ ಶಾಂತಿಯ ಪಾಲಿಪಾ

ಶೇಷ ಶಯನನೆ ಸರ್ವೇಶಾ ಶ್ರೀ ಗುರುವೇ 4

***


No comments:

Post a Comment