Thursday, 5 August 2021

ಪಾಲಿಸೆ ಎನ್ನ ನಾಮಗಿರಿಯಮ್ಮ ಹರಿಗುರುಗಳ ಕೃಪಾಬಲ ಎನ್ನಲ್ಲಿರುವಂತೆ ankita namagiri

 ..

kruti by ವಿದ್ಯಾರತ್ನಾಕರತೀರ್ಥರು vidyaratnakara teertharu 


ಪಾಲಿಸೆ ಎನ್ನ ನಾಮಗಿರಿಯಮ್ಮ

ಹರಿಗುರುಗಳ ಕೃಪಾಬಲ ಎನ್ನಲ್ಲಿರುವಂತೆ ಪ


ಕರುಣದಿ ನೋಡೆ ನಾಮಗಿರಿಯಮ್ಮ

ವರಗಳ ನೀಡೆ ಇಂದಿರೆ ಎನ್ನ

ಸುಖಿಯನ್ನೆ ಮಾಡೆ ವಾರಿಜಮುಖಿ

ನರಪಾಲಾಧಮರ ದುರ್ಮುಖವ ನೋಡಿಸದಂತೆ 1


ಸುಖಚಿದಾಕಾರೆ ಎನ್ನ ಮನೆಗೆ

ದಯವಿಟ್ಟು ಬಾರೆ ನಾರೆಯರಲ್ಲಿ

ಸರಿ ನಿನಗಾರೆ ಪಂಕಜನೇತ್ರೆ

ಕಿಂಕರನೆಂದು ಆತಂಕ ಬಿಡಿಸೆ ತಾಯೆ 2


ಚರಣಾರವಿಂದ ಸೇವಕನಲಿ

ಕೃಪೆಯಿಟ್ಟು ಮಂದಹಾಸದೆ ಬಂದು

ಸುಖಬುದ್ಧಿಯಿಂದ ಇಂದಿರಾದೇವಿ

ಚಂದ್ರವದನೆ ಎನ್ನ ಮಂದಿರದೊಳಗಿದ್ದು 3


ಶ್ರಿತ ಸುರಧೇನು ದೇವಿ ನೀನೆಂದು

ಬಂದೆನು ನಾನು ಇಂದಿರೆ ಇಷ್ಟುಪೇಕ್ಷೆ ನಿಂಗೇನು

ಕಷ್ಟಗಳೆಲ್ಲ ನಷ್ಟವಾಗುವ ಪರಿ

ದೃಷ್ಟಿ ಎನ್ನೊಳಗಿಟ್ಟು 4


ನರಹರಿ ಜಾಯೆ ನಾಮಗಿರಿಯಮ್ಮ

ಬಂದು ನೀ ಕಾಯೇ ಪೇಳುವುದೇನು

ಸರ್ವಜ್ಞ ತಾಯೇ ವಾರಿಜಮುಖಿ

ನಿಜ ವರ್ಣಾಶ್ರಮಧರ್ಮ ಚ್ಯುತಿ ಎಂದೂ ಬರದಂತೆ 5

***


No comments:

Post a Comment