Monday, 2 August 2021

ನಂದವೃಜ ಮಧುರಿ ದ್ವಾರಕೀಯೊಳಾಡಿದ ಕೂಸೆಎಂದು ಬಾಹುವಿ ಇಲ್ಲಿಗೆ ankita indiresha

ನಂದ ವೃಜ ಮಧುರಿ ದ್ವಾರಕೀಯೊಳಾಡಿದ ಕೂಸೆಎಂದು ಬಾಹುವಿ ಇಲ್ಲಿಗೆ ಪ


ಕಂದರ್ಪ ಕೋಟಿ ಸುಂದರಾನಿನ ಬಿಟ್ಟುನಿಂದಿರಲೊಲ್ಲದು ಮನಸಾ ಶ್ರೀಶಾ ಅ.ಪ.


ಮಧುರೆಯಲಿ ನೀಪುಟ್ಟಿ ಪಿತೃಗಳ ರಕ್ಷಿಸಿದಿಹಿತದಿಂದ ಯಾದವರ ತಲೆಯ ಕಾಯ್ದಿಮೃತವಾದ ಮಗುವನು ಗುರುಸತಿಯ ಮಾತಿಗೆ ಕೊಟ್ಟೆಪ್ರತಿಗಾಣೆನೊ ನಿನ್ನ ಬಲಕೆ ಛಲಕೆ 1

ಘೋರ ದಿತಿಜನು ತನ್ನ ಪೋರನಿಗೆ ಭಯವಿತ್ತುಸಾರಿ ಕಂಬದಿ ನಿನ್ನ ತಂದು ತೋರೆನಲುನಾರಸಿಂಹನೆ ನೀನು ವೈರಿ ಬಾಧೆಯ ಬಿಡಿಸಿಭೂರಿ ಸುಖವಿತ್ತು ಪೊರೆದಿ ಭರದಿ 2

ಸರಯು ತೀರದಿ ಅಯೋಧ್ಯಾ ಪುರದೊಳಗೆ ಕಾಂಚನದಪರಮ ಪೀಠದಿ ಕುಳಿತು ಸೀತೆಯೊಡನೆಹರಳು ಕೆತ್ತಿದ ನಾನಾ ಭೂಷಣಂಗಳನಿಟ್ಟುಮರುಳು ಮಾಡುವಿ ನಮ್ಮನೂ ನೀನು 3

ನಂದ ಗೋಕುಲದಿ ರವಿ ನಂದನೀಯ ತೀರದಲ್ಲಿಚಂದದಿಂದಲಿ ನಿಂತು ಕೊಳಲನೂದಿಮಂದಗಮನಿಯರ ಮನಸು ಮರುಳು ಮಾಡುತ ಸುಖವು ದ್ವಂದ್ವಲೋಕದಿ ಕೊಟ್ಟಿ ಭೆಟ್ಟಿ 4

ಮಂದಿ ಮಾತುಗಳೊಲ್ಲೆ ಚೆಂದವೆಂಬುವುದೊಲ್ಲೆಸುಂದರ ಸಿರಿ ಸಂಪತ್ತು ಬಲ್ಲೆಇಂದಿರೇಶನೆ ಎನ್ನ ಚಿತ್ತ ಮಂದಿರದೊಳು ನಿನ್ನಸುಂದರಾನನ ತೋರೋ ಬಾರೋ5

****


No comments:

Post a Comment