Monday 2 August 2021

ಭಜಿಸಿ ಬದುಕಿರೋ ಭರದಿ ಸುಜನ ರೆನಿಸಿರೋ ankita krishnavittala

ಭಜಿಸಿ ಬದುಕಿರೋ ಭರದಿ

ಸುಜನ ರೆನಿಸಿರೋ ಪ


ಭಜಕ ಭೂಜ _ ಸುಜನ ರಾಜ

ರಾಘವೇಂದ್ರರಾ ಅ.ಪ


ಕಲಿಯ ತುಳಿಯಲು _ ಸುಜನ ಮಲಿನ ಕಳಿಯಲು

ಒಲಿದು ಭವಿಯೊಳು _ ಬಂದ ಅಲವ ಮಹಿಮರ 1

ವೇಧ ದೂತರ _ ಪ್ರಹ್ಲಾದರೆಂಬರ

ಸಾಧು ಸೇವ್ಯರ _ ದುರ್ಬೋಧೆ ಕಳಿವರ 2

ನಾರಸಿಂಹನ ಕರುಣ ಸೂರೆ ಪಡದಿಹ

ಭಾರಿ ಭಕ್ತರ ದೇವರ್ಷಿ ಛಾತ್ರರ 3

ವ್ಯಾಸರಾಯರ _ ಶ್ರೀನಿವಾಸ ಯಜಕರ

ಶೇಷದೇವರ ಆವೇಶ ಯುಕ್ತರ 4

ರಾಜ ಗುರುಗಳು ಕವಿರಾಜ ಮಾನ್ಯರು

ನೈಜ ತೇಜರು ನಿವ್ರ್ಯಾಜ ಪ್ರೇಮರು 5

ಹರಿಯ ತರಿಸಿದಾ ಮುರಹರನ ಕುಣಿಸಿ ದಾ

ಮುರವ ಹರಿಸಿದಾ ಧೊರೆಗೆ ಹರುಷ ಸುರಿಸಿದಾ 6

ಮಾನವಂತರಾ ಬಹುe್ಞÁನವಂತರಾ

ದಾನ ಶೀಲರಾ ಅನುಮಾನ ರಹಿತರ 7

ಭ್ರಾಂತಿ ವಾದವ ವಿಶ್ರಾಂತಿ ಗೊಳಿಸಿದ

ಶಾಂತಿ ಸಾಗರ ವೇದಾಂತ ಭಾಸ್ಕರ 8

ಶ್ರೀ ಸುಧೀಂದ್ರರ ವಿಶ್ವಾಸ ಪುತ್ರರ

ದೋಷದೂರರ _ ಗುರು ದೋಷ ಕಳಿವರ 9

ಮಂತ್ರ ಸಿದ್ಧರು ಬಹು ಗ್ರಂಥ ಕರ್ತರು

ತಂತ್ರ ಮಲ್ಲರು ಹರಿ ಮಂತ್ರಿ ಸಚಿವರು 10

ಯೋಗಿ ವರ್ಯರ ಭವ ರೋಗ ವೈದ್ಯರ

ರಾಗ ರಹಿತರ ವೈರಾಗ್ಯ ಭಾಗ್ಯರ 11

ವಾದಿ ಭೀಕರ ಶ್ರೀವಿಜೀಂದ್ರ ಪೌತ್ರರ

ಮೋದ ತೀರ್ಥದಿ ನಿತ್ಯ ಮಿಂದು ಮೀಯ್ವರ 12

ತರ್ಕದಿಂದಲು ಹರಿಯು ಶಕ್ತಿಯಿಂದಲು

ಯುಕ್ತಿಯಿಂದಲು ಒಲಿಯ ಭಕ್ತಿ ಇಲ್ಲದೆ 13

ಶ್ರೀಶ ದಾಸರ ಪದ ಪಾಂಶು ಧರಿಸದೆ

ದೇಶ ತಿರುಗಲು ಬರಿಘಾಸಿ ಸಿದ್ಧವು 14

ಭಕ್ತರೊಲಿಯದೆ ನಿಜ ಭಕ್ತಿ ಸಿಕ್ಕದು

ಪಕ್ವವಾಗದೆ ಭಕ್ತಿ ದಕ್ಕ ಶ್ರೀ ಹರಿ 15

ಇವರ ಮಂತ್ರವ ಭಕ್ತ ಜವದಿ ಜಪಿಸಲು

ಅವಗೆ ಕರಗತ ಸಿದ್ಧ ಭವದಿ ವಾಂಛಿತ 16

e್ಞÁನಿಯಾಗುವ ಬಹುಮಾನ ಪಡೆಯುವ

ಶ್ರೀನಿವಾಸನ ಭಕ್ತ ಶ್ರೇಣಿ ಸೇರುವ 17

ಅಲ್ಪ ಸೇವೆಯೆ ಮೇರು ಕಲ್ಪ ವಾಹುದೊ

ಕಲ್ಪಕಾದರು ಕಾಕು ಸ್ವಲ್ಪ ತಟ್ಟದೊ 18

ಸುತ್ತಿ ನಮಿಸಲು ನಿಖಿಳ ಯಾತ್ರೆಯಾ ಫಲ

ಭಕ್ತ ಪಡೆಯುವ ಸಂದೇಹ ಸಲ್ಲದೊ 19

ಪುತ್ರ ನೀಡುವ ಸಂಪತ್ತು ದೊರಕಿಪ

ವೃತ್ತಿ ಕಲ್ಪಿಪ ಆಪತ್ತು ಕಳಿಯುವ 20

ರಾಮ ನರಹರಿ ಕೃಷ್ಣ ಬಾದರಾಯಣ

ಪ್ರೇಮದಿಂದಲಿ ದಿವಿಜ ಸ್ತೋಮ ವೆಲ್ಲವು 21

ಸೇರಿ ಇವರಿಗೆ ಕೀರ್ತಿ ಸೂರೆ ಕೊಡುತಿರೆ

ಪಾರವಿಲ್ಲವು ಸತ್ಯ ಮಹಿಮೆ ಗೆಂಬುವೆ 22

ಅಗ್ನಿ ತುಲ್ಯರು ಶಂಕು ಕರ್ಣ ವಿದಿತರು

ವಿಘ್ನ ಕಳಿವರು ಶ್ರೀ ಸತ್ಯ ಸಂಧರು 23

ಗುರುವು ಒಲಿದರೆ ತಾ ಹರಿಯು ಒಲಿಯುವ

ಗುರುವು ಮುನಿದರೆ ಯಾರು ಪೊರೆವರಿಲ್ಲವೊ 24

ಶುದ್ಧ ಭಕ್ತಿಲಿ ಈ ಪದವ ಪಠಿಸಲು

ಸಿಧ್ಧಿ ಸತ್ಯವು ಸರ್ವತ್ರ ವಿಜಯವು25

ಸಾರಿ ಸಾರುವೆ ಕೇಳಿ ಕ್ರೂರ ಕಲಿಯಲಿ

ದೂರ ಸಾಧನೆ ಇವರ ಸೇರ ದಿರ್ಪಗೆ26

ಜಿಷ್ಣು ಸೂತ ಶ್ರೀ ಕೃಷ್ಣ ವಿಠಲನ

ಶ್ರೇಷ್ಟ ಭಕ್ತರ ಶ್ರೀ ರಾಘವೇಂದ್ರರ27

****


No comments:

Post a Comment