ರಾಗ - : ತಾಳ -
ವಿಟ್ಠಲದೇವಾ ವಿಬುಧ ಸಂಜೀವ
ರಟ್ಟು ಮಾಡದಿರೆನ್ನ ರಿಭುಗಳ ಕಾವಾ ll ಪ ll
ಪಾಂಡವಸೂತ ಪರಮವಿಖ್ಯಾತಾ
ಪುಂಡಲೀಕಗೆ ಸರ್ವ ಪುರುಷಾರ್ಥದಾತಾ ll 1 ll
ಸ್ವರ್ಣವದಾತ ಸುವರ್ಣವರೂಥಾ
ಗೋಕರ್ಣಮಠೀಯ ದುಗ್ಧಾರ್ಣವನಾಥ ll 2 ll
ಆಶ್ರಿತ ಸುರ ವೃಕ್ಷ ಅಸುರೇಶ ವನದಕ್ಷ
ಸ್ವಾಶ್ರಯ ಕೊಡು ಶೇಷಗಿರಿಶಿಖರಾಧ್ಯಕ್ಷ ll 3 ll
***
No comments:
Post a Comment