Thursday, 25 February 2021

ಕಂಡೆ ನಾ ಯತಿರಾಜನಾ ಪುಂಡರೀಕಾಕ್ಷನ ankita shyamasundara

 ಶ್ರೀ ಗುರು ಶ್ಯಾಮಸುಂದರ ದಾಸರ ಕೃತಿ 


ಕಂಡೆ ನಾ ಯತಿರಾಜನಾ 

ಪುಂಡರೀಕಾಕ್ಷನ ಪಾದ ಭಜಕನಾ |ಪ|


ದಂಡ ಕಮಂಡಲ ಧರಿಸಿಹನಾ 

ಉದ್ದಂಡರ ವಾದದಿ ಗೆಲಿದಿಹನಾ |

ತಂಡತಂಡದಿ ಬರುವ ಭಕುತರನಾ 

ಹಿಂಡು ಪಾಪವ ತರಿದು ಪೊರೆವನಾ  | 1 |


ಕಾಷಾಯ ವಸನ ವಿಭೂಷಣ 

ವಿಶೇಷ ಮಹಿಮೆಲಿ ಮೆರೆವನಾ 

ವಾಸುಕಿ ಶಯನನ ನಿಜದಾಸನ 

ಭೂಷಿತ ಮಂತ್ರನಿಲಯ ನಾಥನಾ | 2 | 


ಕರಿವರದನ ದಿವ್ಯ ದಯವ ಪಡೆದನಾ 

ವರತುಂಗತೀರ ವಿರಾಜಿಪನ 

ಗುರು ಶ್ಯಾಮಸುಂದರನ ನಿಜವರ ಭಕ್ತನಾ 

ಗುರುಸಾರ್ವಭೌಮನಾ ಪರಿಮಳಾರ್ಯನ | 3 |

***


No comments:

Post a Comment