ಹರಿಯೆ................................................ ಪ
ಹರಿನಿನ್ನ ಕೃಪೆಯೆನಗೆ ಚಂದ್ರ - ತಾರಾಬಲವು |ಹರಿನಿನ್ನ ಕರುಣವೇ ರವಿಯ ಬಲವು ||ಹರಿನಿನ್ನೊಲುಮೆಯೆನಗೆ ಗುರುಬಲವು ಭೃಗುಬಲವು |ಹರಿನಿನ್ನ ಮೋಹವೇ ಶನಿಯ ಬಲವು 1
ಮಂಗಳಾತ್ಮಕ ನಿನ್ನ ಅಂಗದರುಶನವೆನಗೆ |ಮಂಗಳನ ಬಲವು ಎನ್ನಂಗಕೀಗ ||ರಂಗಯ್ಯ ನಿನ್ನ ಚರಣಾರವಿಂದವ ನೋಡೆ |ಹಿಂಗಿ ಪೋಪುದು ಅಘವು ಸೌಮ್ಯಬಲವು 2
ಆದಿಪುರುಷನೆ ನಿನ್ನ ಅರಿಪುದೇ ಕೇತುಬಲ |ಅದಿಮೂಲನೆ ನಿನ್ನಗುಣಕಥನವ ||ಆದರಿಸಿ ಕೊಂಡಾಡುವುದೆ ಎನಗೆ ರಾಹುಬಲ |ಆದಿಮೂರುತಿ ಬ್ರಹ್ಮಪುರಂದರವಿಠಲ 3
*********
No comments:
Post a Comment