Saturday, 7 December 2019

ಹರಿನಾಮದರಗಿಣಿಯು ಹಾರುತಿದೆ ಜಗದಿ purandara vittala HARINAAMADARAGINIYU HAARUTIDE JAGADI


ರಾಗ :  ಕಾಂಬೋದಿ  ತಾಳ : ಅಟ್ಟ

ಹರಿನಾಮದರಗಿಣಿಯು ಹಾರುತಿದೆ ಜಗದಿ
ಪರಮ ಭಾಗವತರು ಬಲೆಯ ಬೀಸುವರು           ||ಪ||

ಕೋಪವೆಂಬ ಮಾರ್ಜಾಲ ಕಂಡರೆ ನುಂಗುವುದು
ತಾಪವೆಂಬುವ ಹುಲಿಯ ಕೊಂಡೊಯ್ವುದು
ಕಾಪಾಡಲದನೊಯ್ದು ಹೃದಯದೊಳಗಿಂಬಿಟ್ಟು
ಆಪತ್ತಿಗೊದಗುವುದು ಆ ಮುದ್ದು ಅರಗಿಣಿಯು      ||೧||

ದಾರಿಯಲಿ ನಡೆವಾಗ ಚೋರರುಪಟಳವಿಲ್ಲ
ಮಾರಿ ಬಂದರೆ ಅದನು ಹೊಡೆದು ನೂಕುವುದು
ಕ್ರೂರ ಯಮಭಟರನು ಮೂಗು ರೆಕ್ಕಿಲಿ ಬಡಿದು
ದಾರಿ ತೋರುವುದು ಮುರಾರಿ ಪಟ್ಟಣಕೆ            ||೨||

ಎಷ್ಟು ವರ್ಣಿಸಲಿ ನಾ ಈ ಮುದ್ದು ಅರಗಿಣಿಯ
ಹೊಟ್ಟೆಯೊಳಗೀರೇಳು ಜಗವನಿಂಬಿಟ್ಟು
ಸೃಷ್ಟೀಶ ಪುರಂದರ ವಿಠಲನ ನೆನೆ ನೆನೆದು
ಮುಟ್ಟಿ ಭಜಿಸುವುದು ಈ ಮುದ್ದು ಅರಗಿಣಿಯು     ||೩||
***


Harinamadaraginiyu harutide jagadi
Parama bagavataru baleya bisuvaru ||pa||

Kopavemba marjala kandare nunguvudu
Tapavembuva huliya kondoyvudu
Kapadaladanoydu hrudayadolagimbittu
Apattigodaguvudu A muddu araginiyu ||1||

Dariyali nadevaga chorarupatalavilla
Mari bamdare adanu hodedu nukuvudu
Krura yamabataranu mugu rekkili badidu
Dari toruvudu murari pattanake ||2||

Eshtu varnisali na I muddu araginiya
Hotteyolagirelu jagavanimbittu
Srushtisa purandara vithalana nene nenedu
Mutti Bajisuvudu I muddu araginiyu ||3||
***

pallavi

hari nAma daragiNiyu hArutide jagadi parama bhAgavataru baleya bIsuvaru

caraNam 1

kOpavemba mArjAla kaNDare nunguvudu tApavembuva huliyu koNDAivudu
kApADaladanoivadu hrdaya doLagimbiTTu Apattigodaguvudu A muddu aragiNiyu

caraNam 2

dAriyoLu naDevAga cOrarupaTaLavilla mAri bandare adanu hoDedu nAkuvudu
krUra yamabhaTaranu mUgu rekkili baDedu dAri tOruvudu murAri paTTaNage

caraNam 3

eSTu varNisali nInI muddu aragiNiya hoTTeyoLagirELu jagavanimbiTTu
shrSTIsha purandara viTTalana nene nenedu muTTi bhajisuvudu I muddu aragiNiyu
***

ಹರಿನಾಮದರಗಿಣಿಯು ಹಾರುತಿದೆ ಜಗದಿ|
ಪರಮಭಾಗವತರು ಬಲೆಯ ಬೀಸುವರು ಪ

ಕೋಪವೆಂಬ ಮಾರ್ಜಾಲವು ಕಂಡರೆ ನುಂಗುವುದು |
ತಾಪವೆಂಬ ಹುಲಿಯು ಕೊಂಡೊಯ್ವುದದನು ||
ಕಾಪಾಡಿರದನು ಹೃದಯದೊಳಗಿಂಬಿಟ್ಟು |
ಅಪತ್ತಿಗೊದಗುವುದು ಈ ಮುದ್ದು ಗಿಣಿಯು 1

ದಾರಿಯ ನಡೆವಾಗ ಚೋರರ ಭಯವಿಲ್ಲ |
ಮಾರಿಬಂದರದನು ಹೊಡೆದು ನೂಕುವುದು ||
ಕ್ರೂರ ಯಮಭಟರನು ಮೂಗು ರೆಕ್ಕೆಯಲಿ ಬಡಿದು |
ದಾರಿ ತೋರುವುದು ಮುರಾರಿಯ ಪಟ್ಟಣಕೆ 2

ಎಷ್ಟೆಂದು ವರ್ಣಿಸಲಿ ಈ ಮುದ್ದು ಅರಗಿಣಿಯು |
ಹೊಟ್ಟೆಯೊಳೀರೇಳು ಜಗವನಿಂಬಿಟ್ಟ ||
ಸೃಷ್ಟೀಶ ಪುರಂದರವಿಠಲನ ನೆನೆ ನೆನೆದು |
ಮುಟ್ಟಿ ಭಜಿಸುವುದು ಈ ಮುದ್ದು ಗಿಣಿಯು 3
***********

No comments:

Post a Comment