Thursday, 26 December 2019

ಪ್ರವೃಜ್ಯ ಕುಲಶಿರೋರತ್ನ ಜಯತೀರ್ಥರ ಸುವೃತತಿ prasannashreenivasa jayateertha stutih

 ..

kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru

ಪ್ರಥಮ ಕೀರ್ತನೆ


ಪ್ರವೃಜ್ಯ ಕುಲಶಿರೋರತ್ನ ಜಯತೀರ್ಥರ

ಸುವೃತತಿ ಜಾಂಫ್ರಿಯಲಿ ಶರಣಾದೆ ಸತತ

ಸರ್ವೇಷ್ಟದಾತರು ವಿಜ್ಞಾನ ಬೋಧಕರು

ಮಧ್ವೇಷ್ಟ ಶ್ರೀ ರಮಾಪತಿಗೆ ಪ್ರಿಯತಮರು ಪ


ಅಖಿಳ ಗುಣ ಆಧಾರ ನಿರ್ದೋಷ ಶ್ರೀರಮಣ

ಜಗದಾದಿ ಮೂಲಗುರು ಅಗುರು ಶ್ರೀ ಹಂಸ

ವಾಗೀಶ ಸನಕಾದಿ ದೂರ್ವಾಸಾದಿಗಳ

ಪೀಳಿಗೆ ಗುರುಗಳಿಗೆ ಶರಣು ಶರಣೆಂಬೆ 1

ಪುರುಷೋತ್ತಮ ತೀರ್ಥ ಅಚ್ಯುತ ಪ್ರೇಕ್ಷರಿಗೆ

ಪುರುಷೋತ್ತ ಮಾರ್ಯರ ಕರ ಕಮಲ ಜಾತ

ವರ ವಾತ ಅವತಾರ ಆನಂದತೀರ್ಥರ

ಚರಣ ಪದ್ಮದಲಿ ನಾ ಶರಣಾದೆ ಸತತ 2

ಶ್ರೀ ಮಧ್ವ ಆನಂದ ತೀರ್ಥ ಕರ ಅಬ್ಜಜರು

ಪದ್ಮನಾಭ ನೃಹರಿ ಮಾಧವಾಕ್ಷೋಭ್ಯ

ಈ ಮಹಾ ಗುರುಗಳು ಸರ್ವರಿಗು ಆನಮಿಪೆ

ಶ್ರೀ ಮನೋಹರ ಪ್ರಿಯರು ಸಂತೈಪರೆಮ್ಮ 3

ತ್ರೇತೆಯಲ್ಲಿ ಶ್ರೀ ರಾಮಚಂದ್ರನ್ನ ಸೇವಿಸಲು

ಸೀತಾ ಪ್ರತಿಕೃತಿಯಲ್ಲಿ ತಾಪೊಕ್ಕ

ವಾತನ್ನೊಲಿಸಿಕೊಳ್ಳ ದವರ್ಗೆ ಹರಿ ಒಲಿಯ

ಎಂದು ಜಗಕೆ ತೋರ್ದ ವಾಲಿಯೇ ಇಂದ್ರ 4

ವಾತಾವತಾರ ಹನುಮಂತನೇ ದ್ವಾಪರದಿ

ಕೌಂತೇಯ ಭೀಮನು ಅವನಿಗೆ ಅನುಜ

ಇಂದ್ರ ಅರ್ಜುನನಾಗಿ ಸೇವಿಸಿ ಹನುಮಧ್ವಜ

ಪಾದ ಮೂಲದಿ ಕುಳಿತ ಕೃಷ್ಣನು ಒಲಿದ 5

ಅಖಂಡೈಕ ಸಾರಾತ್ಮ ಅನಂತರೂಪಾಭಿನ್ನ

ಶ್ರೀಕೃಷ್ಣ ರಾಮನೇ ಋಷಿವಂಶದಲ್ಲಿ

ಈ ಕುವಲಯದಲ್ಲಿ ಪ್ರಾದುರ್ಭವಿಸಿದ ವ್ಯಾಸ

ಅಕಳಂಕ ಸುಖಜಿತ್ ವಪುಷ ಶ್ರೀಪತಿಯು 6

ಆಮ್ನಾಯ ತತಿ ಪುರಾಣಗಳು ಪೇಳ್ವಂತೆ

ರಮೆಯರಸ ವ್ಯಾಸನ್ನ ಸೇವಿಸಲು ಇಳೆಯೋಳ್

ಭೀಮನೇ ಯತಿ ರೂಪದಲ್ಲಿ ಬಂದಿಹನೆಂದು

ಸುಮನಸ ರಾಜ ಪುಟ್ಟಿದನು ಪುನಃ7

ಹದಿನೆಂಟು ವರುಷಗಳು ಎತ್ತಾಗಿ ತಾನಿದ್ದು

ಹೊತ್ತು ಮಧ್ವಾಚಾರ್ಯರ ಪುಸ್ತಕಗಳ

ಭಕ್ತಿಯಲಿ ಸೇವಿಸಿ ಮಧ್ವರಾಯರು ಪಾಠ

ಬೋಧಿಸುವದು ಕೇಳ್ದ ವೃಷಭರಾಟ್ ಇಂದ್ರ 8

ಆನಂದಪ್ರದ ತತ್ವಬೋಧಕ ಭಾಷ್ಯಾದಿಗಳ

ಆನಂದ ಮುನಿಮಧ್ವ ಬೋಧಿಸಲು ಗ್ರಹಿಸಿ

ವಿನಯದಿ ಕೇಳ್ದರು ಶಿಷ್ಯರು ಟೀಕೆಗಳ

ಗ್ರಂಥಗಳಿಗೆ ಯಾರು ಮಾಡುವುದು ಎಂದು 9

ಈ ಗೋರಾಜನೇ ಟೀಕೆಗಳ ಸಂರಚಿಸಿ

ಜಗತ್ತಲ್ಲಿ ಸತ್ತತ್ವ ಶಾಸ್ತ್ರ ಪ್ರಕಟಿಸುವ

ಹೀಗೆಂದು ಶ್ರೀ ಮಧ್ವಾಚಾರ್ಯರಾಜ್ಞಾಪಿಸಲು

ಮಿಗೆ ಹರುಷದಲಿ ಗೋರಾಟ್ ಶಿರವ ಬಾಗಿದನು 10

ಯುಕ್ತ ಕಾಲದಿ ಈ ಗೋರಾಜ ನೇವೆ

ರಘುನಾಥ ದೇಶಪಾಂಡೆ ರುಕ್ಮಾಬಾಯಿಗೆ

ಮಗನಾಗಿ ಜನಿಸಿದನು ಮಂಗಳವೇಢೆಯಲಿ

ಈ ಗ್ರಾಮ ಪಂಢರಪುರದ ಸಮೀಪ 11

ಧೋಂಡುರಾಯನು ಎಂಬ ನಾಮದಲಿ ಬೆಳೆದ

ಗಂಡಿಗೆ ಉಪನಯನ ಮದುವೆಯೂ ಆಯ್ತು

ಹೆಂಡತಿ ಭೀಮಾಬಾಯಿ ಸುಗುಣೆ ಸೌಂದರ್ಯವತಿ

ಚಂಡ ಶ್ರೀಮಂತರ ಮನೆತನದವಳು 12

ಒಂದುದಿನ ಧೋಂಡುರಾಯನು ನದೀ ದಡಕೆ

ಬಂದನು ಕುದುರೆಯ ಮೇಲೇರಿಕೊಂಡು

ಅಂದು ಅಕ್ಷೋಭ್ಯ ಮಠ ಸಂಚಾರ ಕ್ರಮದಲ್ಲಿ

ನಿಂತಿತ್ತು ಮೊಕ್ಕಾಮಾಗಿ ಆಚೆಕಟ್ಟೆಯಲಿ 13

ನದೀತೀರ ಕುಳಿತಿದ್ದ ಅಕ್ಷೋಭ್ಯ ತೀರ್ಥರು

ಎದುರಾಗಿ ನದಿಯಲ್ಲಿ ಆಚೆದಡದಿಂದ

ಕುದುರೆ ಸವಾರನು ವರ್ಚಸ್ವಿ ಯುವಕನು

ಬೆದರದೆ ಪ್ರವಾಹದಲಿ ಬರುವದು ನೋಡಿದರು 14

ಕುದುರೆ ಮೇಲ್ ಅಸೀನನಾಗಿದ್ದ ಯುವಕನು

ಕ್ಷುತ್ ತೃಷೆ ಶಮನಕ್ಕೆ ಯತ್ನ ಮಾಡುತ್ತಾ

ಉದಕವ ಕೈಯಿಂದ ತುಂಬಿಕೊಳ್ಳದಲೇ

ಎತ್ತಗಳು ಕುಡಿವಂತೆ ಬಾಯಿ ಹಚ್ಚಿದನು 15

ಮಾಧವ ಮಧ್ವರು ಮೊದಲೇ ಸೂಚಿಸಿದಂತೆ

ಇಂದು ಆ ಕುರುಹ ಅರಿತು ಅಕ್ಷೋಭ್ಯರು

ಇದು ಏನು `ಪಶು' ವಂತೆ ಎಂದು ಧ್ವನಿಕೊಟ್ಟರು

ಹಿಂದಿನ ಜನ್ಮ ಧೊಂಡೋಗೆ ನೆನಪಾಯ್ತು 16

ಪ್ರವಾಹದ ನಗಾರಿಯ ಸಮಬಲಿ ಧೋಂಡು

ವೇಗ ಲೆಕ್ಕಿಸದಲೇ ದಡಕೆ ತಾ ಬಂದು

ಮುಗಿದ ಕರ ಬಾಗಿ ಶಿರ ನಮಿಸಿ ಅಕ್ಷೋಭ್ಯರ

ಆಗಲೇ ಸಂನ್ಯಾಸಕೊಡಲು ಬೇಡಿದನು17

ಗಾಧಿ ಅರ್ಜುನ ಸಮ ಬಲ ರೂಪದಲಿ ತೋರ್ಪ

ಈತ ರಾಯರ ಸುತನಾದರೂ ವೈರಾಗ್ಯ

ಯುತ ಭಕ್ತಿಮಾನ್ ಸುಶುಭ ಲಕ್ಷಣನೆಂದು ಹರಿ

ಮಧ್ವ ನಿಯಮಿತ ಅವಗೆ ಕೊಟ್ಟರು ಸಂನ್ಯಾಸ 18

ಶ್ರೀಯಃಪತಿಗೆ ಪ್ರಿಯತರ ಜಯತೀರ್ಥನಾಮವ

ಜಯ ಶೀಲ ಹೊಸಯತಿಗೆ ಇತ್ತು ಅಭಿಷೇಕ

ಅಕ್ಷೋಭ್ಯಗುರು ಮಾಡೆ ಗಗನದಿ ಪೂವರ್ಷ

ಜಯ ಷೋಷ ಹರಡಿತು ಪರಿಮಳ ಸುಗಂಧ 19

ತಂದೆ ರಘುನಾಥರಾಯನು ಸುದ್ದಿ ಕೇಳಿ

ಬಂದು ಅಕ್ಷೋಭ್ಯರ ಕಂಡು ಬಲುಕೋಪ

ದಿಂದ ಯಾಕೆ ಸಂನ್ಯಾಸ ಯುವಕಗೆ ಕೊಟ್ಟಿರಿ

ಎಂದು ವಾದಿಸಿದನು ಪುತ್ರ ಮೋಹದಲಿ 20

ಪೂರ್ವಧೋಂಡುರಾಯ ಈಗ ಜಯತೀರ್ಥರು

ತಾವೇ ಸ್ವೇಚ್ಛೆಯಿಂದ ಕೊಂಡರು ಸಂನ್ಯಾಸ

ಈ ವಿಷಯ ತಿಳಕೊಂಡರೂ ಸಹ ರಘುನಾಥ

ಸೇವಕರ ಸಹ ಮಗನ ಕರಕೊಂಡು ಹೋದ 21

ರಾಯನು ಮಗನನ್ನ ಗೃಹಸ್ಥ ಚರ್ಯದಲಿರಿಸೆ

ಶಯನಗೃಹದೊಳು ಪತ್ನಿ ಸಹಿತ ಕಳುಹಿದನು

ಶಯನ ತಲ್ಪದಿ ದೊಡ್ಡ ಸರ್ಪಕಂಡಳು ಯುವತಿ

ಭಯದಿಂದ ಹೊರಬಂದು ಹೇಳಿದಳು ವಿಷಯ 22

ತನ್ನ ಪತಿ ಧೊಂಡರಾಯನ್ನ ತಲ್ಪದಲಿ

ಕಾಣದೆ ಅವರಿದ್ದ ಸ್ಥಾನದಲಿ ಸರ್ಪ

ಘನ ಧೀರ್ಘ ಗಾತ್ರ ವಿಸ್ತಾರ ಹೆಡೆಯಿಂದ

ಮಿನುಗುತ್ತ ಕುಳಿತಿದ್ದ ವಿವರ ಪೇಳಿದಳು 23

ರಘುನಾಥರಾಯನು ಹರಿಚಿತ್ತ ಇದು ಎಂದು

ಮಗನ ಪ್ರಭಾವವ ಅರಿತು ತ್ವರಿತದಲಿ

ಅಕ್ಷೋಭ್ಯರಲಿ ಹೋಗಿ ಶಿಷ್ಯನ್ನ ಒಪ್ಪಿಸಿ

ಬಾಗಿ ಶಿರ ಸನ್ನಮಿಸಿ ಕ್ಷಮೆಯ ಬೇಡಿದನು 24

ವಂಶ ವೃಧ್ಧಿಗೆ ಮತ್ತೂ ಪುತ್ರಪುಟ್ಟವನೆಂದು

ದೇಶಪಾಂಡೆಯ ಅನುಗ್ರಹಿಸಿ ಕಳುಹಿಸಿ

ದಶಪ್ರಮತಿ ಪೀಳಿಗೆಯೊಳು ಅಕ್ಷೋಭ್ಯಮುನಿಗ¼ Àು

ಶಿಷ್ಯ ಜಯತೀರ್ಥರಿಗೆ ಸ್ಥಾನ ನೇಮಿಸಿದರು 25

ಶ್ರೀ ಮದ್ವಾಚಾರ್ಯರು ಬೋಧಿಸಿ ತೋರಿಸಿದ

ಶ್ರೀ ರಮಾಪತಿ ಪೂಜಾ ಸತ್ತತ್ವವಾದ

ದುರ್ಮತ ಖಂಡನದ ರೀತಿಯ ಜಯಾರ್ಯರಿಗೆ

ಸಮ್ಮುದದಿ ಅರುಹಿದರು ಅಕ್ಷೋಭ್ಯ ಗುರುವು 26

ಶಕ ವರುಷ ಹನ್ನೊಂದು ನೂರು ಅರವತ್ತೇಳು

ಮಾರ್ಗ ಶಿರ ಕೃಷ್ಣ ಪಂಚಮಿ ವಿಶ್ವಾವಸುವಲ್ಲಿ

ಅಕ್ಷೋಭ್ಯ ತೀರ್ಥರ ಪೀಠ ಆರೋಹಿಸಿ

ಶ್ರೀಕರಗೆ ಪ್ರೀತಿಕರ ಪಟ್ಟವಾಳಿದರು 27

ದೇವತಾರ್ಚನೆ ಶಿಷ್ಯ ಉಪದೇಶ ಮಾಡುತ್ತ

ದಿಗ್ವಿಜಯದಲಿ ದುರ್ವಾದಿಗಳ ಗೆದ್ದು

ಮಧ್ವಗ್ರಂಥಗಳಿಗೆ ಟೀಕೆಗಳ ರಚಿಸಿ

ಪ್ರಖ್ಯಾತರಾದರು ಜಯತೀರ್ಥ ಆರ್ಯ 28

ವನರುಹಾಸನ ಪಿತ ಶ್ರೀ ಪ್ರಸನ್ನ ಶ್ರೀನಿವಾಸ

ಪೂರ್ಣ ಪ್ರಜ್ಞರ ಹೃತ್‍ಸ್ಥ ಜನ್ಮಾದಿ ಕರ್ತ

ಗುಣ ಪೂರ್ಣ ನಿರ್ದೋಷ ಶ್ರೀಯಃ ಪತಿಗೆ ಪ್ರಿಯಘನ ಕರುಣಿ

ಜಯತೀರ್ಥ ಗುರು ನಮೋ ಪಾಹಿ 29

|| ಪ್ರಥಮ ಕೀರ್ತನೆ ಸಮಾಪ್ತ ||

ದ್ವಿತೀಯ ಕೀರ್ತನೆ

ಪ್ರವೃಜ್ಯ ಕುಲಶಿರೋರತ್ನ ಜಯತೀರ್ಥರ

ಸುವೃತತಿ ಜಾಂಫ್ರಿಯಲಿ ಶರಣಾದೆ ಸತತ

ಸರ್ವೇಷ್ಟದಾತರು ವಿಜ್ಞಾನ ಬೋಧಕರು

ಮಧ್ವೇಷ್ಟ ಶ್ರೀ ರಮಾಪತಿಗೆ ಪ್ರಿಯತಮರು ಪ

ನರಹರಿಯ ಮಹಾದುರ್ಗೆಯ ಕುರಿತು ತಪಸ್ ಆಚರಿಸಿ

ವರವ ಪಡೆದಿಹರು ಈ ಜಯತೀರ್ಥ ಆರ್ಯ

ಬರೆವುದಕೆ ಲೇಖನವು ಅಡಿಕೆಯು

ಅರದೂರ ದುರ್ಗೆಯು ಕೊಟ್ಟಿಹಳು ಇವರ್ಗೆ 1

ಎರಗೋಳದಲ್ಲಿದ್ದು ಶ್ರೀ ಮದಾಚಾರ್ಯರ

ಪರಸುಖಪ್ರಮೂಲಗ್ರಂಥಗಳ ಟೀಕಾ

ಬರೆದಿಹರು ಅನುಪಮ ಉತ್ತಮ ರೀತಿಯಲಿ

ಭರದಿ ಓದುವವರೇ ಬಲ್ಲರು ಮಹಿಮೆ 2

ಶ್ರೀ ಮಧ್ವಕೃತವು ಶ್ರೀ ಬ್ರಹ್ಮ ಸೂತ್ರ ಭಾಷ್ಯವು

ಆ ಮೂಲಗ್ರಂಥವು ಎರಡು ಸಾವಿರವು

ಆ ಮಹಾಭಾಷ್ಯಕ್ಕೆ ಟೀಕೆ ಅಷ್ಟ ಸಹಸ್ರವು

ಅಮ್ಮಮ್ಮ ಏನೆಂಬೆ ಈ ಮಹಾ ಕಾರ್ಯ 3

ಅನುವ್ಯಾಖ್ಯಾನದ ನಾಲಕ್ಕು ಸಾವಿರ

ಘನತರ ಗ್ರಂಥಕ್ಕೆ ಜಯತೀರ್ಥರ

ಜ್ಞಾನಪ್ರದ ಅಜ್ಞಾನಗಿರಿ ವಜ್ರ ಟೀಕೆಯ

ಗ್ರಂಥ ಇಪ್ಪತ್ತೆಂಟು ಸಾವಿರ ಸಂಖ್ಯಾ 4

ಈ ನುಡಿ ಬರೆವಾಗ ಬಿಂದುಮಾಧವ ಪೇಳ್ದ

ಘನ್ನ ಶುಭತರ ಮಧ್ವ ವಿಜಯದಲ್ಲಿ

ಅನುವ್ಯಾಖ್ಯಾನದ ಟೀಕಾ ಸುಧಾ ಎಂದು

ಶ್ರೀ ನಾರಾಯಣಾಚಾರ್ಯ ಸೂಚಿಸಿಹರೆಂದು 5

ತತ್ವ ಸಂಖ್ಯಾನಕ್ಕೂ ಕಥಾ ಲಕ್ಷಣಕ್ಕೂ

ತತ್ವ ವಿವೇಕಕ್ಕೂ ಋಗ್ಬಾಷ್ಯಕ್ಕೂ

ತತ್ವ ನಿರ್ಣಯಕ್ಕೂ ಪ್ರಮಾಣ ಲಕ್ಷಣಕ್ಕೂ

ತತ್ವೋದ್ಯೋತಕ್ಕೂ ಕರ್ಮ ನಿರ್ಣಯಕ್ಕೂ 6

ಮಾಯಾವಾದ ಉಪಾಧಿ ಖಂಡನಗಳಿಗೂ

ಮಿಥ್ಯಾತ್ವಾನುಮಾನ ಖಂಡನಕ್ಕೂ

ನ್ಯಾಯ ವಿವರಣಕ್ಕೂ ಗೀತಾ ಭಾಷ್ಯಕ್ಕೂ

ನ್ಯಾಯ ತೇಜೋಜ್ವಲ ಗೀತಾ ತಾತ್ವರ್ಯಕ್ಕೂ 7

ಪಟ್ಟ್ರಶ್ನ ಈಶಾವಾಸ್ಯ ಭಾಷ್ಯಗಳಿಗೂ

ಅಷ್ಟಾದಶ ಈ ಗ್ರಂಥಗಳಿಗೆ

ಪಟು ಪಟೀಯಸವಾಗಿ ಟೀಕೆಯಾ ಬರೆದಿಹರು

ಇಷ್ಟೇ ಅಲ್ಲದೇ ಇನ್ನೂ ನಾಲ್ಕು ರಚಿಸಿಹರು 8

ಪ್ರತ್ಯಕ್ಷ ಅನುಮಾನ ಆಗಮ ಪ್ರಮಾಣಗಳ

ರೀತಿ ಲಕ್ಷಣ ಪೇಳ್ವ ಪ್ರಮಾಣ ಪದ್ಧತಿಯು

ಮಾಧವನ ಸರ್ವೋತ್ತಮ ಜಗತ್ ಸತ್ಯತ್ವ

ಇಂಥಾದ್ದು ಸಾಧಿಸುವ ವಾದಾವಳಿಯು 9

ತಂತ್ರಸಾರ ಪಾಂಚರಾತ್ರಾಗಮಾನುಸರಿಸಿ

ಪದ್ಯಮಾಲಾನಾಮ ಗ್ರಂಥದಲ್ಲಿ

ಶ್ರೀಧರ ಸರ್ವೋತ್ತಮಾರ್ಚನೆ ಬಗೆ ಪೇಳಿದರು

ಶತಾಪರಾಧ ಸ್ತೋತ್ರವು ಮಾಡಿಹರು 10

ದಿಗ್ವಿಜಯ ಮಾಡಿ ಸಜ್ಜನರ ಉದ್ಧರಿಸುತ್ತಾ

ದುರ್ವಿದ್ಯಾ ದುರ್ಮತಗಳನ್ನ ಛೇದಿಸುತ

ಸುವೈದಿಕ ಮಧ್ವಸಿದ್ಧಾಂತ ಸ್ಥಾಪಿಸುತ

ಭುವಿಯಲಿ ಪ್ರಖ್ಯಾತರಾದರು ಜಯಾರ್ಯ 11

ಒಂದು ಸಮಯದಿ ವಿದ್ಯಾರಣ್ಯರು ಶ್ರೀಮಧ್ವ

ಗ್ರಂಥ ಓದಿ ನೋಡಿ ಅರ್ಥವಾಗದಲೆ

ಗ್ರಂಥಕ್ಕೆ ಜಯರಾಯರು ಬರೆದ ಟೀಕೆಯ

ಓದಲು ಅರ್ಥವು ವಿಶದವಾಯ್ತು 12

ಪೂರ್ವಾಪರ ಸಂಗತಿ ಮತ್ತು ವಾಕ್ಯಾರ್ಥ

ಸರ್ವ ಪ್ರಕಾರದಲೂ ಉತ್ತಮವಾಗಿಹುದು

ಸರ್ವಜ್ಞ ಮುನಿಗಳ ಗ್ರಂಥದ ಸರಿಯಾದ

ಭಾವವ ವಿವರಿಸುವುದೆಂದು ಹೇಳಿದರು 13

ಈ ರೀತಿ ವಿದ್ಯಾರಣ್ಯರು ಕೊಂಡಾಡಿ

ಪುರಿ ರಾಜಬೀದಿಯಲಿ ಆನೆ ಅಂಬಾರಿ

ಮೆರವಣಿಗೆ ಮಾಡಿಸಿ ಜಯಘೋಷ ಮಾಡುತ್ತಾ

ಮರ್ಯಾದೆ ಮಾಡಿದರು ವಿಜಯನಗರದಲಿ 14

ಮಧ್ವಗಂಥಗಳನ್ನು ಜಯಾರ್ಯ ಬರೆದಿರುವ

ಉತ್ತಮ ಟೀಕೆಗಳ ಬಲು ಶ್ಲಾಘಿಸುತ್ತ

ವಿದ್ಯಾರಣ್ಯರು ನಮಸ್ಕಾರ ಮಾಡಿದರು

ಎಂದು ಇತಿಹಾಸವ ಸುಜನರು ಪೇಳುವರು 15

ಸ್ವಮತ ಪರಮತ ವಿದ್ವಜ್ಜನರಿಂದ

ಈ ಮಹಾಮಹಿಮ ಟೀಕಾಚಾರ್ಯ ಆರ್ಯ

ಈ ಮಹಿಯಲ್ಲಿ ಪ್ರಖ್ಯಾತ ಪೂಜಿತರಾಗಿ

ತಮ್ಮ ಗುರುಕ್ಷೇತ್ರ ಮಳಖೇಡ ಸೇರಿದರು 16

ಮಳಖೇಡ ಕ್ಷೇತ್ರದಲ್ಲಿ ಕಾಗಿನೀ ನದಿತೀರ

ಮಾಲೋಲ ಪ್ರಿಯ ಅಕ್ಷೋಭ್ಯರ ವೃಂದಾವನ

ಶೀಲತಮ ಜಯರಾಯ ಅಲ್ಲಿಯೇ ನಿಂತರು

ಅಳವೇ ವರ್ಣಿಸಲು ಈ ಮಹಾತ್ಮರ ಮಹಿಮೆ 17

ಹನ್ನೊಂದು ತೊಂಭತ್ತು ಶಕ ವಿಭವ ಆಷಾಢ

ಕೃಷ್ಣ ಪಂಚಮಿ ಪುಣ್ಯದಿನದಲ್ಲಿ ಇವರು

ತನ್ನ ಸೇವಾ ವಿಷ್ಣು ಮಧ್ವರಿಗೆ ಪೂರೈಸಿ

ಶ್ರೀ ನಾರಾಯಣನ ಪಾದ ಸೇರಿದರು 18

ಮತ್ತೊಂದು ಅಂಶದಲ್ಲಿ ವೃಂದಾವನದಲ್ಲಿ

ಇದ್ದು ಸೇವಿಸುವವರ್ಗೆ ವಾಂಛಿತವೀಯುತ್ತ

ಮಧ್ವಸ್ಥ ಶ್ರೀ ಹರಿಯ ಧ್ಯಾನಿಸುತ ತಮ್ಮ

ಗುರುಬದಿಯಲ್ಲಿ ಕುಳಿತಿಹರು ಸ್ಮರಿಸೆ ಪಾಲಿಪರು 19

ವನರುಹಾಸನ ಪಿತ ಶ್ರೀ ಪ್ರಸನ್ನ ಶ್ರೀನಿವಾಸಪೂರ್ಣ 

ಪ್ರಜÕರ ಹೃತ್‍ಸ್ಥ ಜನ್ಮಾದಿಕರ್ತಗುಣಪೂರ್ಣ

ನಿರ್ದೋಷಶ್ರೀಯಃ ಪತಿಗೆ ಪ್ರಿಯಘನಕರುಣಿ ಜಯತೀರ್ಥಗುರುನಮೋಪಾಹಿ20||
ಇತಿ ಶ್ರೀ ಜಯತೀರ್ಥವಿಜಯಸಂಪೂರ್ಣಂ

***

ಪ್ರಸನ್ನ ಶ್ರೀನಿವಾಸದಾಸರು

ಪ್ರಥಮ ಕೀರ್ತನೆ
ಪ್ರವೃಜ್ಯ ಕುಲಶಿರೋರತ್ನ ಜಯತೀರ್ಥರಸುವೃತತಿ 
ಜಾಂಫ್ರಿಯಲಿ ಶರಣಾದೆ ಸತತಸರ್ವೇಷ್ಟದಾತರುವಿಜ್ಞಾನಬೋಧಕರುಮಧ್ವೇಷ್ಟ ಶ್ರೀ ರಮಾಪತಿಗೆ ಪ್ರಿಯತಮರು ಪ

ಅಖಿಳಗುಣಆಧಾರ ನಿರ್ದೋಷ ಶ್ರೀರಮಣಜಗದಾದಿ ಮೂಲಗುರು ಅಗುರು ಶ್ರೀ ಹಂಸವಾಗೀಶಸನಕಾದಿ ದೂರ್ವಾಸಾದಿಗಳಪೀಳಿಗೆ ಗುರುಗಳಿಗೆ ಶರಣು ಶರಣೆಂಬೆ 1

ಪುರುಷೋತ್ತಮತೀರ್ಥಅಚ್ಯುತಪ್ರೇಕ್ಷರಿಗೆಪುರುಷೋತ್ತ ಮಾರ್ಯರಕರಕಮಲಜಾತವರವಾತಅವತಾರ ಆನಂದತೀರ್ಥರಚರಣಪದ್ಮದಲಿ ನಾ ಶರಣಾದೆ ಸತತ2

ಶ್ರೀ ಮಧ್ವ ಆನಂದತೀರ್ಥಕರಅಬ್ಜಜರುಪದ್ಮನಾಭನೃಹರಿ ಮಾಧವಾಕ್ಷೋಭ್ಯಈ ಮಹಾ ಗುರುಗಳು ಸರ್ವರಿಗು ಆನಮಿಪೆಶ್ರೀ ಮನೋಹರ ಪ್ರಿಯರು ಸಂತೈಪರೆಮ್ಮ 3

ತ್ರೇತೆಯಲ್ಲಿ ಶ್ರೀ ರಾಮಚಂದ್ರನ್ನ ಸೇವಿಸಲುಸೀತಾ ಪ್ರತಿಕೃತಿಯಲ್ಲಿ ತಾಪೊಕ್ಕವಾತನ್ನೊಲಿಸಿಕೊಳ್ಳ ದವರ್ಗೆಹರಿಒಲಿಯಎಂದು ಜಗಕೆ ತೋರ್ದ ವಾಲಿಯೇ ಇಂದ್ರ 4

ವಾತಾವತಾರ ಹನುಮಂತನೇ ದ್ವಾಪರದಿಕೌಂತೇಯ ಭೀಮನು ಅವನಿಗೆಅನುಜಇಂದ್ರ ಅರ್ಜುನನಾಗಿ ಸೇವಿಸಿ ಹನುಮಧ್ವಜಪಾದಮೂಲದಿ ಕುಳಿತ ಕೃಷ್ಣನು ಒಲಿದ5

ಅಖಂಡೈಕ ಸಾರಾತ್ಮ ಅನಂತರೂಪಾಭಿನ್ನಶ್ರೀಕೃಷ್ಣ ರಾಮನೇ ಋಷಿವಂಶದಲ್ಲಿಈ ಕುವಲಯದಲ್ಲಿ ಪ್ರಾದುರ್ಭವಿಸಿದ ವ್ಯಾಸಅಕಳಂಕ ಸುಖಜಿತ್ವಪುಷಶ್ರೀಪತಿಯು6

ಆಮ್ನಾಯತತಿಪುರಾಣಗಳು ಪೇಳ್ವಂತೆರಮೆಯರಸ ವ್ಯಾಸನ್ನ ಸೇವಿಸಲು ಇಳೆಯೋಳ್ಭೀಮನೇ ಯತಿ ರೂಪದಲ್ಲಿ ಬಂದಿಹನೆಂದುಸುಮನಸರಾಜ ಪುಟ್ಟಿದನು ಪುನಃ7

ಹದಿನೆಂಟು ವರುಷಗಳು ಎತ್ತಾಗಿ ತಾನಿದ್ದುಹೊತ್ತು ಮಧ್ವಾಚಾರ್ಯರ ಪುಸ್ತಕಗಳಭಕ್ತಿಯಲಿ ಸೇವಿಸಿ ಮಧ್ವರಾಯರು ಪಾಠಬೋಧಿಸುವದು ಕೇಳ್ದ ವೃಷಭರಾಟ್ ಇಂದ್ರ 8

ಆನಂದಪ್ರದ ತತ್ವಬೋಧಕ ಭಾಷ್ಯಾದಿಗಳಆನಂದ ಮುನಿಮಧ್ವ ಬೋಧಿಸಲು ಗ್ರಹಿಸಿವಿನಯದಿ ಕೇಳ್ದರು ಶಿಷ್ಯರು ಟೀಕೆಗಳಗ್ರಂಥಗಳಿಗೆ ಯಾರು ಮಾಡುವುದು ಎಂದು 9

ಈ ಗೋರಾಜನೇ ಟೀಕೆಗಳ ಸಂರಚಿಸಿಜಗತ್ತಲ್ಲಿ ಸತ್ತತ್ವ ಶಾಸ್ತ್ರ ಪ್ರಕಟಿಸುವಹೀಗೆಂದು ಶ್ರೀ ಮಧ್ವಾಚಾರ್ಯರಾಜ್ಞಾಪಿಸಲುಮಿಗೆ ಹರುಷದಲಿ ಗೋರಾಟ್ ಶಿರವ ಬಾಗಿದನು 10

ಯುಕ್ತ ಕಾಲದಿ ಈ ಗೋರಾಜ ನೇವೆರಘುನಾಥ ದೇಶಪಾಂಡೆ ರುಕ್ಮಾಬಾಯಿಗೆಮಗನಾಗಿ ಜನಿಸಿದನು ಮಂಗಳವೇಢೆಯಲಿಈ ಗ್ರಾಮ ಪಂಢರಪುರದ ಸಮೀಪ 11

ಧೋಂಡುರಾಯನು ಎಂಬ ನಾಮದಲಿ ಬೆಳೆದಗಂಡಿಗೆ ಉಪನಯನ ಮದುವೆಯೂ ಆಯ್ತುಹೆಂಡತಿ ಭೀಮಾಬಾಯಿ ಸುಗುಣೆ ಸೌಂದರ್ಯವತಿಚಂಡ ಶ್ರೀಮಂತರ ಮನೆತನದವಳು 12

ಒಂದುದಿನ ಧೋಂಡುರಾಯನು ನದೀ ದಡಕೆಬಂದನು ಕುದುರೆಯ ಮೇಲೇರಿಕೊಂಡುಅಂದು ಅಕ್ಷೋಭ್ಯ ಮಠ ಸಂಚಾರ ಕ್ರಮದಲ್ಲಿನಿಂತಿತ್ತು ಮೊಕ್ಕಾಮಾಗಿ ಆಚೆಕಟ್ಟೆಯಲಿ 13

ನದೀತೀರ ಕುಳಿತಿದ್ದ ಅಕ್ಷೋಭ್ಯ ತೀರ್ಥರುಎದುರಾಗಿ ನದಿಯಲ್ಲಿ ಆಚೆದಡದಿಂದಕುದುರೆ ಸವಾರನು ವರ್ಚಸ್ವಿ ಯುವಕನುಬೆದರದೆ ಪ್ರವಾಹದಲಿ ಬರುವದು ನೋಡಿದರು 14

ಕುದುರೆ ಮೇಲ್ ಅಸೀನನಾಗಿದ್ದ ಯುವಕನುಕ್ಷುತ್ತೃಷೆಶಮನಕ್ಕೆ ಯತ್ನ ಮಾಡುತ್ತಾಉದಕವ ಕೈಯಿಂದ ತುಂಬಿಕೊಳ್ಳದಲೇಎತ್ತಗಳು ಕುಡಿವಂತೆ ಬಾಯಿ ಹಚ್ಚಿದನು 15

ಮಾಧವಮಧ್ವರು ಮೊದಲೇ ಸೂಚಿಸಿದಂತೆಇಂದುಆ ಕುರುಹ ಅರಿತು ಅಕ್ಷೋಭ್ಯರುಇದು ಏನು `ಪಶು' ವಂತೆ ಎಂದು ಧ್ವನಿಕೊಟ್ಟರುಹಿಂದಿನ ಜನ್ಮ ಧೊಂಡೋಗೆ ನೆನಪಾಯ್ತು 16

ಪ್ರವಾಹದ ನಗಾರಿಯ ಸಮಬಲಿ ಧೋಂಡುವೇಗ ಲೆಕ್ಕಿಸದಲೇ ದಡಕೆ ತಾ ಬಂದುಮುಗಿದಕರಬಾಗಿ ಶಿರ ನಮಿಸಿ ಅಕ್ಷೋಭ್ಯರಆಗಲೇ ಸಂನ್ಯಾಸಕೊಡಲು ಬೇಡಿದನು 17

ಗಾಧಿ ಅರ್ಜುನ ಸಮ ಬಲ ರೂಪದಲಿ ತೋರ್ಪಈತ ರಾಯರ ಸುತನಾದರೂ ವೈರಾಗ್ಯಯುತ ಭಕ್ತಿಮಾನ್ ಸುಶುಭ ಲಕ್ಷಣನೆಂದುಹರಿಮಧ್ವ ನಿಯಮಿತ ಅವಗೆ ಕೊಟ್ಟರು ಸಂನ್ಯಾಸ 18

ಶ್ರೀಯಃಪತಿಗೆ ಪ್ರಿಯತರ ಜಯತೀರ್ಥನಾಮವಜಯ ಶೀಲ ಹೊಸಯತಿಗೆ ಇತ್ತು ಅಭಿಷೇಕಅಕ್ಷೋಭ್ಯಗುರು ಮಾಡೆ ಗಗನದಿ ಪೂವರ್ಷಜಯ ಷೋಷ ಹರಡಿತು ಪರಿಮಳ ಸುಗಂಧ 19

ತಂದೆ ರಘುನಾಥರಾಯನು ಸುದ್ದಿಕೇಳಿಬಂದು ಅಕ್ಷೋಭ್ಯರ ಕಂಡು ಬಲುಕೋಪದಿಂದ ಯಾಕೆ ಸಂನ್ಯಾಸ ಯುವಕಗೆ ಕೊಟ್ಟಿರಿಎಂದು ವಾದಿಸಿದನು ಪುತ್ರ ಮೋಹದಲಿ 20

ಪೂರ್ವಧೋಂಡುರಾಯ ಈಗ ಜಯತೀರ್ಥರುತಾವೇ ಸ್ವೇಚ್ಛೆಯಿಂದ ಕೊಂಡರು ಸಂನ್ಯಾಸಈ ವಿಷಯ ತಿಳಕೊಂಡರೂ ಸಹ ರಘುನಾಥಸೇವಕರ ಸಹ ಮಗನ ಕರಕೊಂಡು ಹೋದ 21

ರಾಯನು ಮಗನನ್ನ ಗೃಹಸ್ಥ ಚರ್ಯದಲಿರಿಸೆಶಯನಗೃಹದೊಳು ಪತ್ನಿ ಸಹಿತ ಕಳುಹಿದನುಶಯನ ತಲ್ಪದಿ ದೊಡ್ಡ ಸರ್ಪಕಂಡಳು ಯುವತಿಭಯದಿಂದ ಹೊರಬಂದು ಹೇಳಿದಳು ವಿಷಯ 22

ತನ್ನಪತಿಧೊಂಡರಾಯನ್ನ ತಲ್ಪದಲಿಕಾಣದೆ ಅವರಿದ್ದ ಸ್ಥಾನದಲಿ ಸರ್ಪಘನಧೀರ್ಘಗಾತ್ರವಿಸ್ತಾರ ಹೆಡೆಯಿಂದಮಿನುಗುತ್ತ ಕುಳಿತಿದ್ದ ವಿವರ ಪೇಳಿದಳು 23

ರಘುನಾಥರಾಯನು ಹರಿಚಿತ್ತ ಇದು ಎಂದುಮಗನ ಪ್ರಭಾವವ ಅರಿತು ತ್ವರಿತದಲಿಅಕ್ಷೋಭ್ಯರಲಿ ಹೋಗಿ ಶಿಷ್ಯನ್ನ ಒಪ್ಪಿಸಿಬಾಗಿ ಶಿರ ಸನ್ನಮಿಸಿ ಕ್ಷಮೆಯ ಬೇಡಿದನು 24

ವಂಶ ವೃಧ್ಧಿಗೆ ಮತ್ತೂ ಪುತ್ರಪುಟ್ಟವನೆಂದುದೇಶಪಾಂಡೆಯ ಅನುಗ್ರಹಿಸಿ ಕಳುಹಿಸಿದಶಪ್ರಮತಿ ಪೀಳಿಗೆಯೊಳು ಅಕ್ಷೋಭ್ಯಮುನಿಗ¼ Àುಶಿಷ್ಯ ಜಯತೀರ್ಥರಿಗೆ ಸ್ಥಾನ ನೇಮಿಸಿದರು 25

ಶ್ರೀ ಮದ್ವಾಚಾರ್ಯರು ಬೋಧಿಸಿ ತೋರಿಸಿದಶ್ರೀ ರಮಾಪತಿ ಪೂಜಾ ಸತ್ತತ್ವವಾದದುರ್ಮತ ಖಂಡನದ ರೀತಿಯ ಜಯಾರ್ಯರಿಗೆಸಮ್ಮುದದಿ ಅರುಹಿದರು ಅಕ್ಷೋಭ್ಯ ಗುರುವು 26

ಶಕ ವರುಷ ಹನ್ನೊಂದು ನೂರು ಅರವತ್ತೇಳುಮಾರ್ಗಶಿರ ಕೃಷ್ಣ ಪಂಚಮಿ ವಿಶ್ವಾವಸುವಲ್ಲಿಅಕ್ಷೋಭ್ಯ ತೀರ್ಥರ ಪೀಠ ಆರೋಹಿಸಿಶ್ರೀಕರಗೆ ಪ್ರೀತಿಕರ ಪಟ್ಟವಾಳಿದರು 27

ದೇವತಾರ್ಚನೆ ಶಿಷ್ಯ ಉಪದೇಶ ಮಾಡುತ್ತದಿಗ್ವಿಜಯದಲಿ ದುರ್ವಾದಿಗಳ ಗೆದ್ದುಮಧ್ವಗ್ರಂಥಗಳಿಗೆ ಟೀಕೆಗಳ ರಚಿಸಿಪ್ರಖ್ಯಾತರಾದರು ಜಯತೀರ್ಥ ಆರ್ಯ 28

ವನರುಹಾಸನ ಪಿತ ಶ್ರೀ ಪ್ರಸನ್ನ ಶ್ರೀನಿವಾಸಪೂರ್ಣ ಪ್ರಜÕರ ಹೃತ್‍ಸ್ಥ ಜನ್ಮಾದಿಕರ್ತಗುಣಪೂರ್ಣನಿರ್ದೋಷಶ್ರೀಯಃ ಪತಿಗೆ ಪ್ರಿಯಘನ ಕರುಣಿಜಯತೀರ್ಥಗುರುನಮೋಪಾಹಿ29

|| ಪ್ರಥಮ ಕೀರ್ತನೆ ಸಮಾಪ್ತ ||

ದ್ವಿತೀಯಕೀರ್ತನೆ

ಪ್ರವೃಜ್ಯ ಕುಲಶಿರೋರತ್ನ ಜಯತೀರ್ಥರಸುವೃತತಿ ಜಾಂಫ್ರಿಯಲಿ ಶರಣಾದೆ ಸತತಸರ್ವೇಷ್ಟದಾತರುವಿಜ್ಞಾನಬೋಧಕರುಮಧ್ವೇಷ್ಟ ಶ್ರೀ ರಮಾಪತಿಗೆ ಪ್ರಿಯತಮರು ಪ

ನರಹರಿಯ ಮಹಾದುರ್ಗೆಯ ಕುರಿತು ತಪಸ್ ಆಚರಿಸಿವರವ ಪಡೆದಿಹರು ಈ ಜಯತೀರ್ಥ ಆರ್ಯಬರೆವುದಕೆ ಲೇಖನವು ಅಡಿಕೆಯುಅರದೂರದುರ್ಗೆಯು ಕೊಟ್ಟಿಹಳು ಇವರ್ಗೆ1

ಎರಗೋಳದಲ್ಲಿದ್ದು ಶ್ರೀ ಮದಾಚಾರ್ಯರಪರಸುಖಪ್ರಮೂಲಗ್ರಂಥಗಳ ಟೀಕಾಬರೆದಿಹರು ಅನುಪಮ ಉತ್ತಮ ರೀತಿಯಲಿಭರದಿ ಓದುವವರೇ ಬಲ್ಲರು ಮಹಿಮೆ 2

ಶ್ರೀ ಮಧ್ವಕೃತವು ಶ್ರೀ ಬ್ರಹ್ಮಸೂತ್ರಭಾಷ್ಯವುಆ ಮೂಲಗ್ರಂಥವು ಎರಡು ಸಾವಿರವುಆ ಮಹಾಭಾಷ್ಯಕ್ಕೆ ಟೀಕೆ ಅಷ್ಟ ಸಹಸ್ರವುಅಮ್ಮಮ್ಮ ಏನೆಂಬೆ ಈ ಮಹಾ ಕಾರ್ಯ 3

ಅನುವ್ಯಾಖ್ಯಾನದ ನಾಲಕ್ಕು ಸಾವಿರಘನತರ ಗ್ರಂಥಕ್ಕೆ ಜಯತೀರ್ಥರಜ್ಞಾನಪ್ರದ ಅಜ್ಞಾನಗಿರಿವಜ್ರಟೀಕೆಯಗ್ರಂಥ ಇಪ್ಪತ್ತೆಂಟು ಸಾವಿರ ಸಂಖ್ಯಾ 4

ಈ ನುಡಿ ಬರೆವಾಗ ಬಿಂದುಮಾಧವ ಪೇಳ್ದಘನ್ನ ಶುಭತರ ಮಧ್ವ ವಿಜಯದಲ್ಲಿಅನುವ್ಯಾಖ್ಯಾನದ ಟೀಕಾ ಸುಧಾ ಎಂದುಶ್ರೀ ನಾರಾಯಣಾಚಾರ್ಯ ಸೂಚಿಸಿಹರೆಂದು 5

ತತ್ವ ಸಂಖ್ಯಾನಕ್ಕೂ ಕಥಾ ಲಕ್ಷಣಕ್ಕೂತತ್ವ ವಿವೇಕಕ್ಕೂ ಋಗ್ಬಾಷ್ಯಕ್ಕೂತತ್ವ ನಿರ್ಣಯಕ್ಕೂ ಪ್ರಮಾಣ ಲಕ್ಷಣಕ್ಕೂತತ್ವೋದ್ಯೋತಕ್ಕೂಕರ್ಮನಿರ್ಣಯಕ್ಕೂ6

ಮಾಯಾವಾದಉಪಾಧಿಖಂಡನಗಳಿಗೂಮಿಥ್ಯಾತ್ವಾನುಮಾನ ಖಂಡನಕ್ಕೂನ್ಯಾಯ ವಿವರಣಕ್ಕೂ ಗೀತಾ ಭಾಷ್ಯಕ್ಕೂನ್ಯಾಯ ತೇಜೋಜ್ವಲ ಗೀತಾ ತಾತ್ವರ್ಯಕ್ಕೂ 7

ಪಟ್ಟ್ರಶ್ನ ಈಶಾವಾಸ್ಯ ಭಾಷ್ಯಗಳಿಗೂಅಷ್ಟಾದಶ ಈ ಗ್ರಂಥಗಳಿಗೆಪಟು ಪಟೀಯಸವಾಗಿ ಟೀಕೆಯಾ ಬರೆದಿಹರುಇಷ್ಟೇ ಅಲ್ಲದೇ ಇನ್ನೂ ನಾಲ್ಕು ರಚಿಸಿಹರು 8

ಪ್ರತ್ಯಕ್ಷ ಅನುಮಾನಆಗಮಪ್ರಮಾಣಗಳರೀತಿ ಲಕ್ಷಣ ಪೇಳ್ವ ಪ್ರಮಾಣ ಪದ್ಧತಿಯುಮಾಧವನ ಸರ್ವೋತ್ತಮ ಜಗತ್ ಸತ್ಯತ್ವಇಂಥಾದ್ದು ಸಾಧಿಸುವ ವಾದಾವಳಿಯು 9

ತಂತ್ರಸಾರಪಾಂಚರಾತ್ರಾಗಮಾನುಸರಿಸಿಪದ್ಯಮಾಲಾನಾಮ ಗ್ರಂಥದಲ್ಲಿಶ್ರೀಧರ ಸರ್ವೋತ್ತಮಾರ್ಚನೆ ಬಗೆ ಪೇಳಿದರುಶತಾಪರಾಧ ಸ್ತೋತ್ರವು ಮಾಡಿಹರು 10

ದಿಗ್ವಿಜಯ ಮಾಡಿ ಸಜ್ಜನರ ಉದ್ಧರಿಸುತ್ತಾದುರ್ವಿದ್ಯಾ ದುರ್ಮತಗಳನ್ನ ಛೇದಿಸುತಸುವೈದಿಕ ಮಧ್ವಸಿದ್ಧಾಂತ ಸ್ಥಾಪಿಸುತಭುವಿಯಲಿ ಪ್ರಖ್ಯಾತರಾದರು ಜಯಾರ್ಯ 11

ಒಂದು ಸಮಯದಿ ವಿದ್ಯಾರಣ್ಯರು ಶ್ರೀಮಧ್ವಗ್ರಂಥ ಓದಿ ನೋಡಿ ಅರ್ಥವಾಗದಲೆಗ್ರಂಥಕ್ಕೆ ಜಯರಾಯರು ಬರೆದ ಟೀಕೆಯಓದಲು ಅರ್ಥವು ವಿಶದವಾಯ್ತು 12

ಪೂರ್ವಾಪರ ಸಂಗತಿ ಮತ್ತು ವಾಕ್ಯಾರ್ಥಸರ್ವ ಪ್ರಕಾರದಲೂ ಉತ್ತಮವಾಗಿಹುದುಸರ್ವಜÕ ಮುನಿಗಳ ಗ್ರಂಥದ ಸರಿಯಾದಭಾವವ ವಿವರಿಸುವುದೆಂದು ಹೇಳಿದರು 13

ಈ ರೀತಿ ವಿದ್ಯಾರಣ್ಯರು ಕೊಂಡಾಡಿಪುರಿ ರಾಜಬೀದಿಯಲಿ ಆನೆ ಅಂಬಾರಿಮೆರವಣಿಗೆ ಮಾಡಿಸಿ ಜಯಘೋಷ ಮಾಡುತ್ತಾಮರ್ಯಾದೆ ಮಾಡಿದರು ವಿಜಯನಗರದಲಿ 14

ಮಧ್ವಗಂಥಗಳನ್ನು ಜಯಾರ್ಯ ಬರೆದಿರುವಉತ್ತಮ ಟೀಕೆಗಳ ಬಲು ಶ್ಲಾಘಿಸುತ್ತವಿದ್ಯಾರಣ್ಯರು ನಮಸ್ಕಾರ ಮಾಡಿದರುಎಂದು ಇತಿಹಾಸವ ಸುಜನರು ಪೇಳುವರು 15

ಸ್ವಮತ ಪರಮತ ವಿದ್ವಜ್ಜನರಿಂದಈ ಮಹಾಮಹಿಮ ಟೀಕಾಚಾರ್ಯ ಆರ್ಯಈ ಮಹಿಯಲ್ಲಿ ಪ್ರಖ್ಯಾತ ಪೂಜಿತರಾಗಿತಮ್ಮ ಗುರುಕ್ಷೇತ್ರ ಮಳಖೇಡ ಸೇರಿದರು 16

ಮಳಖೇಡ ಕ್ಷೇತ್ರದಲ್ಲಿ ಕಾಗಿನೀ ನದಿತೀರಮಾಲೋಲ ಪ್ರಿಯ ಅಕ್ಷೋಭ್ಯರ ವೃಂದಾವನಶೀಲತಮ ಜಯರಾಯ ಅಲ್ಲಿಯೇ ನಿಂತರುಅಳವೇ ವರ್ಣಿಸಲು ಈ ಮಹಾತ್ಮರ ಮಹಿಮೆ 17

ಹನ್ನೊಂದು ತೊಂಭತ್ತು ಶಕವಿಭವಆಷಾಢಕೃಷ್ಣ ಪಂಚಮಿ ಪುಣ್ಯದಿನದಲ್ಲಿ ಇವರುತನ್ನ ಸೇವಾ ವಿಷ್ಣು ಮಧ್ವರಿಗೆ ಪೂರೈಸಿಶ್ರೀ ನಾರಾಯಣನಪಾದಸೇರಿದರು18

ಮತ್ತೊಂದು ಅಂಶದಲ್ಲಿ ವೃಂದಾವನದಲ್ಲಿಇದ್ದು ಸೇವಿಸುವವರ್ಗೆ ವಾಂಛಿತವೀಯುತ್ತಮಧ್ವಸ್ಥ ಶ್ರೀ ಹರಿಯ ಧ್ಯಾನಿಸುತ ತಮ್ಮಗುರುಬದಿಯಲ್ಲಿ ಕುಳಿತಿಹರು ಸ್ಮರಿಸೆ ಪಾಲಿಪರು 19

ವನರುಹಾಸನ ಪಿತ ಶ್ರೀ ಪ್ರಸನ್ನ ಶ್ರೀನಿವಾಸಪೂರ್ಣ ಪ್ರಜÕರ ಹೃತ್‍ಸ್ಥ ಜನ್ಮಾದಿಕರ್ತಗುಣಪೂರ್ಣನಿರ್ದೋಷಶ್ರೀಯಃ ಪತಿಗೆ ಪ್ರಿಯಘನಕರುಣಿ ಜಯತೀರ್ಥಗುರುನಮೋಪಾಹಿ20||
ಇತಿ ಶ್ರೀ ಜಯತೀರ್ಥವಿಜಯಸಂಪೂರ್ಣಂ ||
*********

No comments:

Post a Comment