Friday, 27 December 2019

ಸೂತ್ರನಾಮಕ ಸುಂದರನೇಕ ಸೂತ್ರನಾಮಕ ankita vyasa vittala SOOTRANAAMAKA SUNDARANEKA SOOTRANAAMAKA



ಸೂತ್ರನಾಮಕ ಸುಂದರನೇಕ ಸೂತ್ರನಾಮಕ ||ಪ||
ಸೂತ್ರನಾಮಕ ಸತ್ಪಾತ್ರ ಗರುಡ ಸಿಖಿನೇತ್ರ ವಿನುತ ಶುಭಗಾತ್ರ ಪವಿತ್ರ ||ಅಪ||

ರಾಮ ಪದಾಬ್ಜ ಭೃಂಗ ರಾವಣ ಮದಭಂಗ ಕಾಮಜ ಸಿಂಗ
ತಾಮಸ ಕುಲವನ ಧೂಮಕೇತು ಬುಧ ಸೌಮನಸಾಗ್ರಣಿ ಕಾಮಿತ ಫಲದಾ ||೧||

ಪಾಂಡುನಂದನ ಪಾಲಿಸೋ ಎನ್ನ ಅಖಂಡ ಪಾವನ
ಅಂಡಜಾಧಿಪನ ಕಂಡು ಭಜಿಪುದೋರ್ದಂಡ ಖಳಕುಲ ಚಂಡ ಪ್ರಚಂಡ ||೨||

ಜ್ಞಾನದಾಯಕ ಆನಂದತೀರ್ಥದೀನ ಪೋಷಕ
ಭಾನುಕೋಟಿ ಶ್ರೀ ವ್ಯಾಸವಿಠಲನ ಧ್ಯಾನದೊಳಿಹ ಸನ್ಮಾನಸ ಹಂಸ ||೩||
***

sUtranAmaka suMdaranEka sUtranAmaka ||pa||
sUtranAmaka satpAtra garuDa siKinEtra vinuta SuBagAtra pavitra ||apa||
 
rAma padAbja BRuMga rAvaNa madaBaMga kAmaja siMga
tAmasa kulavana dhUmakEtu budha saumanasAgraNi kAmita PaladA ||1||
 
pAMDunaMdana pAlisO enna aKaMDa pAvana
aMdajAdhipana kaMDu BajipudOrdaMDa KaLakula caMDa pracaMDa ||2||
 
j~jAnadAyaka AnaMdatIrthadIna pOShaka
BAnukOTi SrI vyAsaviThalana dhyAnadoLiha sanmAnasa haMsa ||3||
***

ಸೂತ್ರನಾಮಕ | ಸುಂದರನೇಕ | ಸೂತ್ರನಾಮಕ ಪ

ಸೂತ್ರನಾಮಕ ಸತ್ಪಾತ್ರ ಗರಡ ಶಿಖಿನೇತ್ರ ವಿನುತ ಶುಭಗಾತ್ರ ಪವಿತ್ರ ಅ.ಪ.

ರಾಮಪದ ಭೃಂಗಾ | ರಾವಣ ಮದಭಂಗ | ಗಜಸಿಂಗಾತಾಮಸ ಕುಲಕೆ ನೀ ಧೂಮಕೇತು ಬುಧಸೌಮನಸಾಗ್ರಣಿ ಕಾಮಿತ ಫಲದಾ 1

ಪಾಂಡುನಂದನಾ | ಪಾಲಿಸು ಯನ್ನಾ | ಖಂಡ ಪಾವನಾಅಂಡಜಾಧಿಪನ ಕಂಡು ಭಜಿಸಿ ದೋ-ರ್ದಂಡ ಖಳ ಕುಲ ಚಂಡ ಪ್ರಚಂಡಾ 2

ಜ್ಞಾನದಾಯಕಾ | ಆನಂದತೀರ್ಥ | ದೀನ ಪೋಷಕಭಾನುಕೋಟಿ ತೇಜ ವ್ಯಾಸ ವಿಠಲನಧ್ಯಾನದೊಳಿಹ ಮಮ ಮಾನಸ ಹಂಸಾ 3
*********

No comments:

Post a Comment