Friday 27 December 2019

ಮಧ್ವಾಂತರ್ಗತ ಶ್ರೀನಿವಾಸಾ ಕಾಯೊಸಿದ್ಧ ಮೂರುತಿ ankita vyasa vittala

ಮಧ್ವಾಂತರ್ಗತ ಶ್ರೀನಿವಾಸಾ | ಕಾಯೊಸಿದ್ಧ ಮೂರುತಿ ವೆಂಕಟೇಶಾ ಪ

ಇದ್ಧರೆಯೊಳು ನಿನ್ನ | ಹೊದ್ದಿದವರ ಪಾಪಬದ್ಧವಾಗದು ಅನ್ಯೋಪದ್ರವೆ ಮೊದಲಿಲ್ಲ ಅ.ಪ.

ಸಾಕಾರ ಸರ್ವಾಧಾರೀ | ಸ್ವಾಮಿಲೋಕನಾಯಕನೆ ಉದಾರೀ ||ಭೂಕಾಂತ ಭವ ಭಯಹರೀ | ಜಗದೇಕನೆ ಪರ ಉಪಕಾರೀ |ನಾ ಕರ ಮುಗಿವೆ ಕೃಪಾಕರ ಮೂರ್ತಿ ಇ |ನ್ಯಾಕೆ ನಿರ್ದಯ ಮಾಡಿ ನೀಕರಿಸುವಿ ಎನ್ನ ||ಸಾಕು ನಿನಗೆ ಪರಾಕು ಪೇಳುವ | ದ್ಯಾಕೆ ಭಕುತರ ಸಾಕಲರಿಯೆಸಾಕು ಭವ ಸುಖನೇಕ ಪರಿಯಲಿ | ಬೇಕು ಪಾಲಿಸು ಏಕ ಭಕುತಿಯ 1

ಧರೆಗೆ ವೈಕುಂಠದ ಪರಿಯೇ | ತೋರಿಮರೆವಿ ಮಹಾತ್ಮ ಶ್ರೀಹರಿಯೇ ||ಸರಿ ನಿನಗಿದು ಹೊಸ ಪರಿಯೇ | ಭಾಗ್ಯಮರಿಯಾದ ಮರಿತಿ ನೀ ಧೊರೆಯೇ ||ಶಿರಿಯೆ ಮಂದಿರವಾಗಿ ಪರಿಪರಿ ರೂಪದಿಕರವ ಜೋಡಿಸಿ ಉಪಚರಿಯ ಮಾಡಲು ಇತ್ತಸರಸಿಜೋದ್ಭವ ಗರುಡ ನರಹರ | ಸುರಪಮುಖ ದಿವಿಜರು ಪರಾಕೆನೆಪರಮ ಪದ ಸಂಪದವಿದಲ್ಲದೆ | ಶಿರಿಯ ಭಾಗ್ಯದಿ ಪರವೆ ನಿನಗೇ 2

ಮಣಿಮಯ ಖಚಿತ ಕಿರೀಟಾ | ಸಾರೆಅನುವಾದ ನಾಮ ಲಲಾಟಾ ||ಮಿನುಗುವ ನಗೆ ವಾರೆನೋಟಾ | ದಿನಮಣಿ ಕರ್ಣ ಕುಂಡಲ ಮಾಟಾ ||ಘನ ಶಂಖ ಚಕ್ರ ಭೂಷಣ ಶ್ರೀ ವತ್ಸಾಂಕ ಶೋ-ಭನ ಕೌಸ್ತುಭ ಮಣಿ ಗಣ ಹಾರ ಶೃಂಗಾರ ||ಖಣಿಯೆ ಕಟಿಕರ ಕನಕಮಯ ಸುವಸನ ಕಾಂಚೀದಾಮ ಒಪ್ಪಲುಪ್ರಣತರ ಭಯಪ್ರದಕರ ಕುಂಭಿಣಿಗೆ ತೋರುವ ಅನಘ ವೆಂಕಟನೆ 3

ನಿಗಮ ಗೋಚರ ನಿತ್ಯ ಮೋದಾ | ವಾದಝಗ ಝಗಿಸುವ ದಿವ್ಯ ಪಾದಾ ||ಯುಗಳಾರಾಧನಿ ಪರರಾದಾ | ವರಿಗೆಅಗಣಿತ ಸುಖವೀವ ಶ್ರೀದಾ ||ಗಗನ ಭೂಮಿಪ ಗತಿಪ್ರದ ದಶರಥ ಪಂಚಮೊಗನಾದಿ ಭುವನದೊಳಣುಗ ಮೊದಲಾದ ||ಜಗದಿ ಬಹು ತಾಪಸಿಗಳ ಭಾವದಿ | ಸಿಗದೆ ಮೋಹಾದಿಗಳ ಪಾಶದಿ ಮುಗದಿ ಕರಗಳ ಪೊಗಳುವರಿಗೆ | ಬಗೆ ಬಗೆಯ ಕಾಮಗಳ ಹರಿಸಿದ 4

ಸ್ವಾಮಿ ಪುಷ್ಕರಣಿ ನಿವಾಸಾ | ನಾದಕಾಮಿತ ಪ್ರದನೆ ಲಕ್ಷ್ಮೀಶಾ ||ಧೀಮಂತ ಮಣಿ ದೀನ ಪೋಷಾ | ಎನ್ನಯ ಮರೆಯದಿರು ನಿನ್ನ ದಾಸಾ ||ಸಾಮಗಾಯನ ಲೋಲ ಸತತ ಸದ್ಗುಣ ಶೀಲಸಾಮಜ ವರದ ಮಹಾ ಮಹಿಮನೆ ಸಾರ್ವ ||ಭೌಮ ಭವ್ಯ ತ್ರಿಧಾಮ ಸಂತರ ಪ್ರೇಮ ಪೂರಣ ಕಾಮ ದಿವಿಜ ಲ-ಲಾಮ ಭೂಡÀರ ವ್ಯಾಸ ವಿಠಲ ಯಾಮ ಯಾಮಕೆ ಎನ್ನ ಪಾಲಿಸೋ 5
**********

No comments:

Post a Comment