Tuesday 5 October 2021

ಅರಿಯರು ಮನುಜರು ಅರಿತೂ ಅರಿಯರು purandara vittala ARIYARU MANUJARU ARITU ARIYARU



ಪುರಂದರದಾಸರು

ಅರಿಯರು ಮನುಜರರಿಯರು ||ಪ||

ಅರಿಯರು ಮನುಜರು ಅರಿತೂ ಅರಿಯರು
ಧರೆ ಈರೇಳಕ್ಕೆ ಹರಿಯಲ್ಲದಿಲ್ಲವೆಂದು ||ಅ||

ನಾರದಮುನಿ ಬಲ್ಲ ವಾರಿಜೋದ್ಭವ ಬಲ್ಲ
ಪಾರಾಶರ ಬಲ್ಲ ಮನು ಬಲ್ಲನು
ಧೀರ ಭೀಷ್ಮನು ಬಲ್ಲ ಪಾರ್ವತಿ ಬಲ್ಲಳು
ಕಾರುಣಿಕನು ಶ್ರೀ ಹರಿಯಲ್ಲದಿಲ್ಲವೆಂದು ||

ಶಿವ ಬಲ್ಲ ಧ್ರುವ ಬಲ್ಲ ದ್ರೌಪದಿ ಬಲ್ಲಳು
ಅವನಿಪಾಲಕ ಜನಕನೃಪ ಬಲ್ಲನು
ಯುವತಿಗೆ ಶಾಪವಿತ್ತ ಗೌತಮ ಮುನಿ ಬಲ್ಲ
ಭವರೋಗ ವೈದ್ಯ ಶ್ರೀ ಹರಿಯಲ್ಲದಿಲ್ಲವೆಂದು ||

ದಿಟ್ಟ ಪ್ರಹ್ಲಾದ ಬಲ್ಲ ಕೆಟ್ಟ ಅಜಮಿಳ ಬಲ್ಲ
ಸಿಟ್ಟಿನಿಂದಲಿ ಒದ್ದ ಭೃಗು ಬಲ್ಲನು
ಕೊಟ್ಟ ಬಲಿ ಬಲ್ಲ ಮೊರೆಯಿಟ್ಟ ಗಜೇಂದ್ರ ಬಲ್ಲ
ಸೃಷ್ಟೀಶ ಪುರಂದರ ವಿಠಲನೆ ಪರ ದೈವವೆಂದು ||
***


pallavi

ariyaru manujariyaru

anupallavi

ariyaru manujaru aritU ariyaru dhare IrELakke shrI hariyalladillavendu

caraNam 1

shiva balla dhruva balla draupadi ballaLu avani pAlaka janaka nrpa ballanu
yuvatige shApavitta gautama muni balla bhavarOga vaidya shrI hariyalladillavendu

caraNam 2

nAradamuni balla vArijOdbhava balla parAshara balla manu ballaru
dhIra bhISmanu balla pArvati ballaLu kAraNIkanu shrI hariyalladillavendu

caraNam 3

diTTa prahlADa balla keTTa ajamila balla siTTinindali odda bhrugu ballanu
koTTa bali balla moreyiTTa gajEndra balla shrSTIsha purandara viTTalane para daivavendu
***

ರಾಗ ಪಂತುವರಾಳಿ ಅಟ ತಾಳ (raga, taala may differ in audio)

ಅರಿಯರು ಮನುಜರು ಅರಿತೂ ಅರಿಯರುಧರೆಗೆ ಒಡೆಯ ಶ್ರೀ ಹರಿಯಲ್ಲದಿಲ್ಲವೆಂದು ಪ

ಶಿವಬಲ್ಲ ಧ್ರುವಬಲ್ಲ ದ್ರೌಪದಿ ಬಲ್ಲಳುಅವನಿ ಪಾಲಿಪ ಜನಕನೃಪ ಬಲ್ಲನು ||ಯುವತಿಗೆ ಶಾಪವಿತ್ತ ಗೌತಮ ಬಲ್ಲನುಭವರೋಗ ವೈದ್ಯ ಶ್ರೀಹರಿಯಲ್ಲದಿಲ್ಲವೆಂದು 1

ನಾರದ ಮುನಿ ಬಲ್ಲವಾರಿಜೋದ್ಭವ ಬಲ್ಲಪಾರಾಶರನು ಬಲ್ಲ ಮನು ಬಲ್ಲನು ||ಧೀರ ಭೀಷ್ಮನು ಬಲ್ಲ ಪಾರ್ವತಿ ಬಲ್ಲಳುಕಾರಣಕರ್ತ ಶ್ರೀಹರಿಯಲ್ಲದಿಲ್ಲವೆಂದು 2

ದಿಟ್ಟ ಪ್ರಹ್ಲಾದ ಮೊರೆಯಿಟ್ಟ ಗಜೇಂದ್ರ ಬಲ್ಲದೃಷ್ಟಾಂತ ಕಂಡ ಭೃಗುಮುನಿ ಬಲ್ಲನು ||ಕೊಟ್ಟ ಬಲಿಯು ಬಲ್ಲ ಕೆಟ್ಟಜಾಮಿಳ ಬಲ್ಲಸೃಷ್ಟಿಗೆ ಪುರಂದರವಿಠಲನಲ್ಲದಿಲ್ಲವೆಂದು 3
*******

No comments:

Post a Comment