Thursday, 17 October 2019

ಆರೀಗ ನೀ ಎನ್ನ ಕಣ್ಣು ಮುಚ್ಚಿದೆಯೊ ankita vijaya vittala

ವಿಜಯದಾಸ

ಆರೀಗ ನೀ ಎನ್ನ ಕಣ್ಣು ಮುಚ್ಚಿದೆಯೊ ಕು - l

ಮಾರ ಮೌನದಲ್ಲಿದ್ದಿ ಮಾತನಾಡಯ್ಯಾ ll ಪ ll


ಇಂದಿರಾ ಭೂದೇವಿ ಆಳಿದವನೊ l

ನಂದ ಗೋಕುಲದಲ್ಲಿ ಪುಟ್ಟಿದವನೊ ll

ಮಂದಿರ ವೈಕುಂಠ ಶ್ರೀನಿವಾಸನೊ l ಕರಿ - l

ಬಂಧನ ವಿನಾಶದ ವಿಟ್ಠಲನೊ ll 1 ll


ಅಂಬರೀಷನ ಶಾಪ ಪರಿಹರನೊ l

ಶಂಭು ಮೊರೆಯಿಡಲು ಕಾಯಿದವನೊ ll

ಕಂಭದಿಂದೊಡೆದು ಬಂದವನೊ l ತ್ರಿ - l

ಯಂಬಕನ ಭಕ್ತನ ಸಂಹರನೊ ll 2 ll


ಬೆರಳಲ್ಲಿ ಬೆಟ್ಟವನೆತ್ತಿದವನೊ l

ದುರುಳ ಕಾಳಿಂಗನ ತುಳಿದವನೊ ll

ಒರಳನು ಕಾಲಲ್ಲಿ ಎಳೆದವನೊ l

ಚೆಲ್ವ ಸಿರಿ ವಿಜಯವಿಟ್ಟಠಲರಾಯನೊ ll 3 ll

***


pallavi

ArIga nI enna kaNNu muccideyO kumAra maunadaliddi mAtanADayya

caraNam 1

indirA bhUdEvi Alidavanu nandagOkuladalli puTTidavanO
mandira vaikuNTha shrInivAsanO kari bandhana vinAshada viThalanO

caraNam 2

ambarIshana shApa parharanO shambu moreyiDalu kAyidavanO
kambadindoDedu bandavanO triyambakana bhaktana samharanO

caraNam 3

beraLalli bettava nettidavanO duruLa kALingana tuLidavanO
oraLanu kAlalli eLedavanO celva siri vijayaviThalarAyavanO
***

ಆರೀಗ ನೀ ಎನ್ನ ಕಣ್ಣು ಮುಚ್ಚಿದೆಯೊ ಕು- |
ಮಾರ ಮೌನದಲಿದ್ದಿ ಮಾತನಾಡಯ್ಯಾ ಪ

ಇಂದಿರಾ ಭೂದೇವಿ ಆಳಿದವನೊ |
ನಂದ ಗೋಕುಲದಲ್ಲಿ ಪುಟ್ಟಿದವನೊ ||
ಕರಿ - |
ಬಂಧನ ವಿನಾಶದ ವಿಠ್ಠಲನೊ 1

ಅಂಬರೀಷನ ಶಾಪ ಪರಿಹರನೊ |
ಶಂಭು ಮೊರೆಯಿಡಲು ಕಾಯಿದವನೊ ||
ಕಂಭದಿಂದೊಡೆದು ಬಂದವನೊ | ತ್ರಿ -
ಯಂಬಕನ ಭಕ್ತನ ಸಂಹರನೊ 2

ಬೆರಳಲ್ಲಿ ಬೆಟ್ಟವನೆತ್ತಿದವನೊ |
ದುರುಳ ಕಾಳಿಂಗನ ತುಳಿದವನೊ ||
ಒರಳನು ಕಾಲಲ್ಲಿ ಎಳೆದವನೊ |
ಸಿರಿ ವಿಜಯವಿಠ್ಠಲರಾಯನೊ 3
***


No comments:

Post a Comment