Tuesday 5 October 2021

ಅಪರಾಧವೆಣಿಸದಲೆ ಕಾಯಬೇಕು ಕೃಪಣ ankita jagannatha vittala APARADHAVENISADALE KAAYABEKO KRUPANA

Raga  Madhuvanthi Tala kandha chaapu


ಅಪರಾಧವೆಣಿಸದಲೆ ಕಾಯಬೇಕು ||ಪ||

ಕೃಪಣವತ್ಸಲನೆ ಶ್ರೀ ಮಧ್ವಮುನಿ ಗುರುರಾಯ ||ಅ.ಪ||

ನೀ ಮಾಡಿದುಪಕಾರ ನಾ ಮರೆವುದೆಂತೊ ಲ-
ಕ್ಷ್ಮೀಮನೋಹರನ ನಿಜ ದಾಸಾಗ್ರಣಿ
ಪಾಮರ ಲೋಕದೊಳು ಧೀಮಂತನೆನಿಸಿದೆ ಮ-
ಹಾಮಹಿಮ ನಿನ್ನ ಕರುಣಾಮೃತದ ಮಳೆಗರೆದು ||೧||

ಅವಿನೀತ ನಾನು ನಿನ್ನವನೆಂದು ತಿಳಿದು ಎ-
ನ್ನವಗುಣಗಳೆಣಿಸದಲೆ ನಿತ್ಯದಲ್ಲಿ
ಸುವಿವೇಕಿಯನು ಮಾಡು ಕವಿರಾಜ ತವ ಮನೋ-
ತ್ಸವಕೆ ಎಣೆಗಾಣೆ ನಾನವನಿಯೊಳಗಾವಲ್ಲಿ ||೨||

ಏನೂ ಅರಿಯದ ಮೂಢ ಮಾನವನು ನಾನು ಸು-
ಜ್ಞಾನಿವರ್ಯನು ನೀನೇ ಕಾಯಬೇಕು ||
ಮಾನನಿಧಿ ಜಗನ್ನಾಥವಿಠಲನ ಪದಯುಗಳ
ಧ್ಯಾನ ಮಾಡುವ ಧೀರ ಪ್ರಾಣ ಪಂಚಕರಾಯ ||೩||
*****


ರಾಗ - ಕಾಂಬೋಧಿ(ಬಾಗೇಶ್ರೀ) ಝಂಪೆತಾಳ(raga tala may differ in audio)
 
ರಾಗ ಕಲ್ಯಾಣಿ      ಖಂಡಛಾಪುತಾಳ

Aparadhavenisadale kayabeku
Krupanavatsalane sri madhvamuni gururaya ||pa||

Ni madidupakara na marevudemto la
Kshmi manoharana nijadasagrani
Pamarana lokadolu dhimantaneniside ma
Hamahima ninna karunamrutada malegaredu ||1||

Aviveki nanu ninnavanendu tilidu e
Nnavagunagalenisade nityadalli
Suvivekiyane madu kavivarya tava mano
Tsavake enegane nanavaniyolagavalli ||2||

Enariyada mudha manavanu nanu
Suj~jana varyanu nine kayabeku
Manuta jagannatha vithalana padayugala sa
Dhyana maduva dhiraprana panchakaraya ||3||
***
 
pallavi

aparAdhavenisadale kAyabEku

anupallavi

krapaNa vatsalane shrI madhvamuni gururAya

caraNam 1

nI mADidupakAra nA marevudentO lakSmI manOharana nija dAsAgraNi
pAmara lOkadoLu dhImanta nenisida mahA mahima ninna karuNAmrtada maLegaredu

caraNam 2

avinIta nAnun ninnavanendu tiLidu ennavaguNagaLaNisadele nityadalli
suvivEkiyanu mADu kavirAja tava manOtsavake eNegANe nAnavaniyoLagAvalli

caraNam 3

Enu ariyada mUDha mAnavanu nAnu sujnAnivaryanu nInE kAyabEku
mAnanidhi jagannAtha viThalana pada yugaLa dhyAna mADuva dhIra prANa pancakarAya
***


ಅಪರಾಧವೆಣಿಸದಲೆ ಕಾಯಬೇಕು
ಕೃಪಣವತ್ಸಲನೆ ಶ್ರೀ ಮಧ್ವಮುನಿ ಗುರುರಾಯ ||pa||

ನೀ ಮಾಡಿದುಪಕಾರ ನಾ ಮರೆವುದೆಂತೋ ಲ
ಕ್ಷ್ಮೀ ಮನೋಹರನ ನಿಜದಾಸಾಗ್ರಣೀ
ಪಾಮರನ ಲೋಕದೊಳು ಧೀಮಂತನೆನಿಸಿದೆ ಮ
ಹಾಮಹಿಮ ನಿನ್ನ ಕರುಣಾಮೃತದ ಮಳೆಗರೆದೂ ||1||

ಅವಿವೇಕಿ ನಾನು ನಿನ್ನವನೆಂದು ತಿಳಿದು ಎ
ನ್ನವಗುಣಗಳೆಣಿಸದೆ ನಿತ್ಯದಲ್ಲಿ
ಸುವಿವೇಕಿಯನೆ ಮಾಡು ಕವಿವರ್ಯ ತವ ಮನೋ
ತ್ಸವಕೆ ಎಣೆಗಾಣೆ ನಾನವನಿಯೊಳಗಾವಲ್ಲಿ ||2||

ಏನರಿಯದ ಮೂಢ ಮಾನವನು ನಾನು
ಸುಜ್ಞಾನ ವರ್ಯನು ನೀನೆ ಕಾಯಬೇಕು
ಮಾನುತ ಜಗನ್ನಾಥ ವಿಠಲನ ಪದಯುಗಳ ಸ
ಧ್ಯಾನ ಮಾಡುವ ಧೀರಪ್ರಾಣ ಪಂಚಕರಾಯ ||3||
*********

No comments:

Post a Comment