Friday, 24 December 2021

ಜನನಿ ಜನ್ಮಭೂಮಿ others JANANI JANMA BHOOMI rss


 

ಜನನಿ ಜನ್ಮಭೂಮಿ

ಓ ಜನನಿ ಜನ್ಮಭೂಮಿ


ಭಾರತಿ ನಿನ್ನಯ ಅಡಿಗಳಿಗೆ

ಪೊಡಮಡುವೆ ನಾ ಅಡಿಗಡಿಗೆ

ಜನನಿ ಓ ಜನನೀ

ಜನನಿ ಜನ್ಮಭೂಮಿ || ಪ ||


ಜನ್ಮ ಜನ್ಮದಾ ಪುಣ್ಯದ ಫಲವೊ

ಕರುಣಿಯೆ, ತೋರಿದ ಒಲವಿನ ಬಲವೊ

ಬಂದಿಹೆ ಧರೆಗೆ, ನಿನ್ನೊಡಲೊಳಗೆ

ಕೋಟಿ ಕೋಟಿ ಜನ ಸೋದರರೆನಗೆ || 1 ||


ಮೇಲೆ ಹಿಮಾಚಲ ಕಾಲಡಿ ಕಡಲು

ಬಂಗಾರದ ನಿಧಿ ತುಂಬಿದ ಒಡಲು

ಶ್ರೀಗಂಧದ ಸೌಗಂಧವು ತುಂಬ

ಏನೆಂಬೆನು ನೀ ಸ್ವರ್ಗದ ಬಿಂಬ ! || 2 ||


ಉಜ್ವಲ ಕಲೆ ಸಂಸ್ಕøತಿಗಳ ನಾಡು

ಕೆಚ್ಚೆದೆ ಕಲಿಗಳ ಸಾಹಸ ಬೀಡು

ಶಂಕರ ಬಸವ ವಿವೇಕರ ನೆಲವು

ಪಾವನವು, ಸೌಭಾಗ್ಯದ ಫಲವು || 3 ||


ಸಾವಿರ ಜನ್ಮವು ಬಂದರೆ ಬರಲಿ

ತಾಯೇ, ನಿನ್ನಯ ಮಡಿಲೆನಗಿರಲಿ

ನಿನ್ನಲೆ ಜನನ ನಿನ್ನಲೆ ಮರಣ

ನನ್ನೀ ಜೀವನ ನಿನಗೇ ಶರಣ || 4 ||

***


jananI janmaBUmi...

BArati ninnaya aDigaLige

poDamaDuve nA aDigaDige

jananI O jananI, jananI janmaBUmi ||pa||


janma janmadA puNyada Palavu karuNeya tOrida olavina balavu

baMdihe dharege ninnoDaloLage kOTi kOTi jana sOdararenage ||1||


mEle himAcala kAlaDi kaDalu baMgArada nidhi tuMbide oDalu

SrIgaMdhada sougaMdhavu tuMba EneMbenu nI svargada biMba ||2||


ujvala kale saMskRutigaLa nADu keccede kaligaLa sAhasa bIDu

SaMkara basava vivEkara nelavu pAvanavu soubhAgyada phalavu ||3||


saavira janmavu baMdare barali tAye ninnaya maDilenagirali

ninnale janana ninnale maraNa ennaya jIvana ninagE SaraNa ||4||

***

ಜನನೀ ಜನ್ಮಭೂಮಿ...

ಭಾರತಿ ನಿನ್ನಯ ಅಡಿಗಳಿಗೆ

ಪೊಡಮಡುವೆ ನಾ ಅಡಿಗಡಿಗೆ

ಜನನೀ ಓ ಜನನೀ, ಜನನೀ ಜನ್ಮಭೂಮಿ ||ಪ||


ಜನ್ಮ ಜನ್ಮದಾ ಪುಣ್ಯದ ಫಲವು ಕರುಣೆಯ ತೋರಿದ ಒಲವಿನ ಬಲವು

ಬಂದಿಹೆ ಧರೆಗೆ ನಿನ್ನೊಡಲೊಳಗೆ ಕೋಟಿ ಕೋಟಿ ಜನ ಸೋದರರೆನಗೆ ||೧||


ಮೇಲೆ ಹಿಮಾಚಲ ಕಾಲಡಿ ಕಡಲು ಬಂಗಾರದ ನಿಧಿ ತುಂಬಿದೆ ಒಡಲು

ಶ್ರೀಗಂಧದ ಸೌಗಂಧವು ತುಂಬ ಏನೆಂಬೆನು ನೀ ಸ್ವರ್ಗದ ಬಿಂಬ ||೨||


ಉಜ್ವಲ ಕಲೆ ಸಂಸ್ಕೃತಿಗಳ ನಾಡು ಕೆಚ್ಚೆದೆ ಕಲಿಗಳ ಸಾಹಸ ಬೀಡು

ಶಂಕರ ಬಸವ ವಿವೇಕರ ನೆಲವು ಪಾವನವು ಸೌಭಾಗ್ಯದ ಫಲವು ||೩||


ಸಾವಿರ ಜನ್ಮವು ಬಂದರೆ ಬರಲಿ ತಾಯೆ ನಿನ್ನಯ ಮಡಿಲೆನಗಿರಲಿ

ನಿನ್ನಲೆ ಜನನ ನಿನ್ನಲೆ ಮರಣ ಎನ್ನಯ ಜೀವನ ನಿನಗೇ ಶರಣ ||೪||

***



No comments:

Post a Comment