Wednesday 1 September 2021

ಶ್ರೀಮತ್ ಕವಿಕುಲ ನಾಯಕ ಜಯ ಜಯ ಪ್ರೆಮಾಂಬುಧಿ ಶುಭದಾಯಕ ಜಯ ankita shyamasundara

 ..

ಶ್ರೀಮತ್ ಕವಿಕುಲ ನಾಯಕ ಜಯ ಜಯ

ಪ್ರೆಮಾಂಬುಧಿ ಶುಭದಾಯಕ ಜಯ ಜಯ 1

ಪ್ರಹ್ಲಾದಾವರ ಜಾತನೆ ಜಯಯ

ಶಲ್ಯ ನೃಪಾಲಕ ಯೋಧನೆ ಜಯ ಜಯ 2

ಪುರುಹೂತಾರ್ಯ ಪೋತನೆ ಜಯ ಜಯ

ಮರುತ ಪದಾರ್ಹರ ಪ್ರೀತನೆ ಜಯ ಜಯ 3

ನರಸಿಂಹಾರ್ಯರ ಪುತ್ರನೆ ಜಯ ಜಯ

ಗುರುವರದೇಂದ್ರರ ಛಾತ್ರನೆ ಜಯ ಜಯ 4

ತುರುರಕ್ಷಕ ವಿಜಯಾರ್ಯರ ಜಯ ಜಯ

ಕರುಣ ಪೂರ್ಣ ಪಡೆದಾತನೆ ಜಯ ಜಯ 5

ಪಂಕಜವೈರಿಯ ಭಾಗದಿ ಜಯ ಜಯ

ಅಂಕಿತ ಪಡೆದ ಅಕಳಂಕನೆ ಜಯ ಜಯ 6

ಪಂಢರಿನಾಥನ ಮೂರುತಿ ಜಯ ಜಯ

ಕಂಡು ಕೊಂಡಾಡಿದ ಧೀರನೆ ಜಯ ಜಯ 7

ರಂಗವಲಿದ ದಾಸ್ತೋತಮ ಜಯ ಜಯ

ತುಂಗ ಮಹಿಮ ಶುಭಾಂಗನೆ ಜಯ ಜಯ 8

ನತಜನ ತತಿ ಮಂದಾರನೆ ಜಯ ಜಯ

ಕೃತ ಹರಿಕಥಾಸುಧೆ ಸಾರವ ಜಯ ಜಯ 9

ಮೂಕರ ಮುಖದಿಂ ಕರುಣದಿ ಜಯ ಜಯ

ವಾಕು ಪೇಳಿಸಿದ ಗುಣನಿಧಿ ಜಯ ಜಯ 10

ಮಾನವಿ ಮಂದಿರ ಮಾನಿತ ಜಯ ಜಯ

ಕ್ಷೋಣಿ ವಿಬುಧ ಗಣ ಸೇವಿತ ಜಯ ಜಯ 11

ಕುಂಭಿಣಿನಾಥ ದಾಸಾಗ್ರಣಿ ಜಯ ಜಯ

ನಂಬಿದೆ ನಿನ್ನ ಪದಾಂಬುಜ ಜಯ ಜಯ 12

ಸಾಧು ವರಿಯ ಪ್ರಹ್ಲಾದನೆ ಜಯ ಜಯ

ಭೇದಜ್ಞಾನ ಸುಬೋಧಕ ಜಯ ಜಯ 13

ಭೂಸುರ ಕುಮುದಕೆ ಭೇಶನೆ ಜಯ ಜಯ

ಭಾಸುರ ಸ್ತಂಭ ನಿವಾಸನೆ ಜಯ ಜಯ 14

ಪವನಾಗಮ ಪ್ರವೀಣನೆ ಜಯ ಜಯ

ಕವಿಜನ ಸನ್ನುತ ಮಹಿಮನೆ ಜಯ ಜಯ 15

ತಂದೆ ನಮಗೆ ನೀನೆಂದಿಗು ಜಯ ಜಯ

ಕುಂದು ಕ್ಷಮಿಸಿ ದ್ವಿಜ ವಂದ್ಯನೆ ಜಯ ಜಯ 16

ಕಂಸಾರಿಯ ಪ್ರೀಯ ಸಾಂಶನೆ ಜಯ ಜಯ

ಧ್ವಂಸಗೊಳಿಸು ಭವ ಹಿಂಸೆಯ ಜಯ ಜಯ 17

ನಿನ್ನ ತಾಣ ಸುಕ್ಷೇತ್ರವು ಜಯ ಜಯ

ನಿನ್ನ ಕವನ ಶೃತ್ಯರ್ಥವು ಜಯ ಜಯ 18

ಕಲುಷ ಕುಲಾದ್ರಿಗೆ ಕುಲಿಶನೆ ಜಯ ಜಯ

ವಲಿದು ಕರಪಿಡಿದು ಸಲಹೈ ಜಯ ಜಯ 19

ಆರ್ತರಿಷ್ಟಾರ್ಥವ ಸಲಿಸಲು ಜಯ ಜಯ

ಸ್ವಾರ್ಥರಹಿತರಿಗೆ ಕೀರ್ತಿಯು ಜಯ ಜಯ 20

ಎನ್ನವವ ಚನವಿದಲ್ಲವು ಜಯ ಜಯ

ನಿನ್ನನು ಭವಕಿದು ಬಂದದು ಜಯ ಜಯ 21

ಮಂದ ಬುದ್ಧಿಯಲಿ ನಿಮ್ಮನು ಜಯ ಜುಯ

ನಿಂದಿಪ ಮನುಜ ದಿವಾಂಧನು ಜಯ ಜಯ 22

ಧರ್ಮದ ಮಾರ್ಗವ ತೋರಿಸು ಜಯ ಜಯ

ಕರ್ಮಜ ದೇವನೆ ಕೈಪಿಡಿ ಜಯ ಜಯ 23

ಅನಿಲ ಮತಾಂಬುಧಿ ಮೀನನೆ ಜಯ ಜಯ

ಪ್ರಣತಾಮರಮಣಿಧೇನುವೆ ಜಯ ಜಯ 24

***


No comments:

Post a Comment