ಅಸೂರಿ ರಾಮಸ್ವಾಮಿ ಅಯ್ಯಂಗಾರ್ ankita ramadasa
ಅಹುದೋ ದೇವ ನೀ ದಯಯುತನೆಂಬುದು ಸಹಜವೋ ಎಲೆ ರಂಗ ಪ
ಮಹದುಪಕಾರವ ಗೈವೆ ಜಗಕೆಲ್ಲ ಅಹುದೋ ಅಹುದೋ ಸಲೆ ಸಲಹುವ ಪಿತ ನೀ ಅ.ಪ ಅಜಗೆ ನೇತ್ರವನಿತ್ತೆ ಗಜಕೆ ಪ್ರಾಣವನಿತ್ತೆ ಅಜಮಿಳನಿಗೆ ಮೋಕ್ಷಪದವಿಯನಿತ್ತೆ ಭಜನೆಗೈಯುವ ತುಂಬುರು ನಾರದರಿಂಗೆ ನಿಜಸುಖ ಸಾಮ್ರಾಜ್ಯ ಪದವಿಯನಿತ್ತೆ 1
ತರಳನ ನುಡಿಕೇಳಿ ಕಂಬದೊಳುದಯಿಸಿ ದುರುಳರಕ್ಕಸನಶಿಕ್ಷಿಸಿದೆ ತರಳ ಧ್ರುವನು ಗೈದಾ ತಪಸಿಗೆ ನಲಿಯುತೆ ವರಸುಖಪದವಿತ್ತ ಕರುಣಾಕರನೀ 2
ಭೂತಳದೊಳು ಜನ್ಮವಾಂತಿಹ ಸಾಸಿರ ಚೇತನಾಚೇತನ ವಸ್ತುಗಳನು ನೀ ಪ್ರೀತಿಸಿ ಪೊರೆಯುವ ರೀತಿಯದಾಶ್ಚರ್ಯ ಏ ತೆರ ಪೇಳ್ದೊಡನಂತಮಹಿಮ ನೀ 3
ದೇವದೇವನೆ ನಿನ್ನ ಪಾವನಚರಣವು ದೇವಮುನಿಗಳೆಲ್ಲ ಸೇವಿಸಲರಿದೈ ಭಾವಜಪಿತ ರಾಮದಾಸಾಚೇತ ಸಾಕು ಜನ್ಮವಬಿಡಿಸೊ ಮಾವಿನಕೆರೆರಂಗಾ 4
***
No comments:
Post a Comment