Saturday 4 December 2021

ಜಯಪ್ರದನು ಜಗಕೆ ಶ್ರೀ ಹಯವದನ ಮೂರ್ತಿರೆ ಭಯ ankita hayavadana JAYAPRADANU JAGAKE SRI HAYAVADANA MOORTIRE BHAVA



ಜಯಪ್ರದನು ಜಗಕೆ ಶ್ರೀ ಹಯವದನ 

ಮೂರ್ತಿಯಿರೆ ಭಯವ್ಯಾತಕೆ ಭಕ್ತಜನಕೆ ||ಪ||


ನಯದಿಂದ ಗೆಲಿಸುವನು 

ನಾಲ್ದಿಕ್ಕಿನೊಳಗಿದ್ದ ಮಾಯವಾದಿಗಳನ್ನು ||ಅಪ||


ಆದಿಯಲಿ ಬ್ರಹ್ಮನಿಗೆ ಭೀತಿಯನು ಬಿಡಿಸಿದ 

ನಾದಮಯನಾದ ದೇವ 

ಭೇದವಿಲ್ಲದೆ ಎಲ್ಲಾ ಅಭೇದವೆಂಬುವರನ್ನು 

ಕಾದ ಬಾಣಲೆಗೆ ತಟ್ಟಿ ಮೋದಿಸಿ ಕೊಲುವ ||೧||


ಉದಯದಲ್ಲಿ ಎದ್ದು ನರ ಸದಮಲಾತ್ಮಕನಾಗಿ 

ಹೃದಯದೊಳಗೆ ಹರಿಯ ತಂದು ಮುಂದು

ಸದಯನು  ಸದ್ವೃತ್ತಿಉದಯನು ನೀನೆನುತ 

ದಧಿಚೋರ ಕೃಷ್ಣನ್ನ ಮುದದಿ ಭಜಿಪರಿಗೆ ||೨||


ದುಷ್ಟಮಲ್ಲರ ಎದೆ ಮೆಟ್ಟಿ ಮೆರೆವ ಜಗ-

ಜಟ್ಟಿ ಮಧ್ವರಾಯರ ಮುಟ್ಟಿ ಭಜಿಸುತ ನಿತ್ಯ

ಇಷ್ಟವನು ಬೇಡಿದರೆ ಕಷ್ಟಗಳನು ಕಳೆವ ಉ-

ತ್ಕೃಷ್ಟ ಹಯವದನ ದೊರೆಯು ||೩||

***


jayapradanu jagake SrI hayavadana 

mUrtiyire BayavyAtake Baktajanake ||pa||


nayadiMda gelisuvanu 

nAldikkinoLagidda mAyavAdigaLannu ||apa||


Adiyali brahmanige BItiyanu biDisida 

nAdamayanAda dEva 

BEdavillade ellA aBEdaveMbuvarannu 

kAda bANalege taTTi mOdisi koluva ||1||


udayadalli eddu nara sadamalAtmakanAgi 

hRudayadoLage hariya taMdu muMdu

sadayanu  sadvRuttiudayanu nInenuta 

dadhicOra kRuShNanna mudadi Bajiparige ||2||


duShTamallara ede meTTi mereva jaga-

jaTTi madhvarAyara muTTi Bajisuta nitya

iShTavanu bEDidare kaShTagaLanu kaLeva u-

tkRuShTa hayavadana doreyu ||3||

***


pallavi


jayapradanu jagakE srI hayavadana mUrtirE bhayavyAtakE bhakta janakE


anupallavi


nayaNa dim gelisuvanu naadhikkinolaggidha maayavaadi galannU


caraNam 1


Adiyali brahmanige bhItiyanu biDisidanu nAda mayanAda dEva

bhEda villadE ella abhEda vembuvarannu kAda baNDalege taTTi modisi kolluvanu


caraNam 2


udaya dali eddu narakadhamalathmakha nAgi hrudaya dolagE hariya tandu mundU

sadhayanu tathvrutti udayanU nInenutha dadhi cOra kriSnanna bhajiparige


caraNam 3


DuSTa mallara yedhe metti mereva jaga jatti madhva rAyara bhajisutA nityA

ISTagaLanu bhEdidharE kaSTagaLanu kaLeva UthkruSTa hayavadana dhoreyU

***


ಜಯಪ್ರದನು ಜಗಕೆ ಶ್ರೀಹಯವದನ ಮೂರ್ತಿರೆ

ಭಯವ್ಯಾಕೆ ಭಕ್ತ ಜನಕೆ ಪ.


ನಯದಿಂದ ಗೆಲಿಸುವನು ನಾಲ್ದಿಕ್ಕಿನೊಳಗಿದ್ದ

ಮಾಯವಾದಿಗಳನ್ನು ಅ.ಪ.

ಆದಿಯಲ್ಲಿ ಬ್ರಹ್ಮನಿಗೆ ಭೀತಿಯನು ಬಿಡಿಸಿದ

ನಾದಮಯನಾದ ದೇವ ಭೇದವಿಲ್ಲದೆ ಎಲ್ಲಾ

ಭೇದವೆಂಬುವರನ್ನು

ಕಾದ ಬಾಣಲೆಗೆ ತಟ್ಟಿ ಮೋದಿಸಿ ಕೊಲುವ 1


ಉದಯದಲ್ಲಿ ಎದ್ದು ನರ ಸದಮಲಾತ್ಮಕನಾಗಿ

ಹೃದಯದೊಳಗೆ ಹರಿಯ ತಂದು ಮುಂದು

ಸದಯನು ನೀನೆನುತ ಸದ್ವøತ್ತಿಲುದಯನು ನೀನೆನುತ

ದಧಿಚೋರ ಕೃಷ್ಣನ್ನ ಮುದದಿ ಭಜಿಪರಿಗೆ 2


ದುಷ್ಟಮಲ್ಲರ ಎದೆ ಮೆಟ್ಟಿ ಮೆರೆವ ಜಗ-

ಜಟ್ಟಿ ಮಧ್ವರಾಯರ ಮುಟ್ಟಿ ಭಜಿಸುತ ನಿತ್ಯ

ಇಷ್ಟವನು ಬೇಡಿದರೆ ಕಷ್ಟಗಳನು ಕಳೆವ ಉ-

ತÀ್ಕøಷ್ಟ ಹಯವದನ ದೊರೆ 3

***

 

No comments:

Post a Comment