Wednesday, 1 September 2021

ಯಾಕೆ ರಂಗ ನಿನಗೆ ಮಾಕಾಂತೆಯೊಳು ಗರ್ವ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು


ಯಾಕೆ ರಂಗ ನಿನಗೆ ಮಾಕಾಂತೆಯೊಳು ಗರ್ವ | ಲೋಕದೊಳು ಅಬಲೆಯೇನೋ ಕೇಳಯ್ಯಾ ನೀನು ಪ 


ಮೀನಾವತಾರವ ನೀನಂದು ವಿಡಿದರೆ | ಮೀನಾಂಬಕಿ ತಾನಾದಳೋ1 

ಬೆಟ್ಟವ ಬೆನ್ನಿಲಿ ಕಷ್ಟದಿ ನೆಗೆದರೆ | ಬಟ್ಟ ಕುಚಗಳ ಹೊತ್ತಳೋ 2 

ಧರೆಯ ಭಾರವ ತಾಳಿದರ ನಿನ್ನಾಭಾರವನು | ಧರಿಸಿದಳಂದಗಲದಲೆ 3 

ಸಿಂಹಾನನನಾಗಿ ಮಹಿಮೆ ದೋರಿಸಿದರೆ | ಸಿಂಹದಂತೆ ನಡು ನಡುವಾದಳೋ 4 

ಬಲಿ ಬಾಗಿಲಕಾಯಿದರೆ ನೆಲೆಸಿಹಳವಳಲ್ಲಿ | ಬಲಿಯಾ ಭಾಗ್ಯ ರೂಪವಾಗಿ5 

ಸುರರ ಹೊರಿಯಲಿಕ್ಕೆ ಪರಶವ ಪಿಡಿದರೆ | ಪರಸಗೈಯ್ಯ ತಾನಾದಳೋ 6 

ಹರನಾ ಚಾಪವನೆಗೆದರೆ ಅದನೆವೆ ಮುನ್ನೆ | ಕರೆದಲೆ ತ್ಯಾಡಿದಳೊ 7 

ಸೆರೆಹರಿದು ಸ್ತ್ರೀಯರಾ ತಂದರೆ ನಾರದರಿಂದ | ಸೆರೆವಿಡಿಸೆ ಕೊಂಡಳೋ 8 

ಮುಪ್ಪರ ಹೊಕ್ಕರೆ ನೀವಪ್ಪುತಲಿ ಹನಿನ್ನಾ | ಮುಪ್ಪುರದಲಿ ಮೆರೆದಳೋ 9 

ತುರುಗವ ಏರಿಕೊಂಡು ತಿರುಗಲು ನಿನ್ನಾಕೂಡ | ತುರಗಮನಿ ತಾನಾದಳೋ 10 

ಕಡೆಯಕಾಲಕ ನೀರೊಳೊಡಗೂಡಿ ಮಲಗಲು | ಒಡನೆ ವಟದೆಲೆ ಯಾದಳೋ11 

ಗುರು ಮಹಿಪತಿ ಪ್ರಭು ಚರಿತೆಯಾ ನಿಮ್ಮೀರ್ವರ | ಭರದಿ ಹೇಳಲೆನ್ನಳವೇ 12

***


No comments:

Post a Comment