ಕಾಖಂಡಕಿ ಶ್ರೀ ಕೃಷ್ಣದಾಸರು
ಆರಿಲ್ಲಿಲ್ಲೋ ಮನುಜಾ | ಅರಿಲ್ಲಿಲ್ಲೋ | ಹರಿಭಕ್ತರಿಗೆ ಸರಿ ಉಂಟೇನಣ್ಣಾ | ಆರಿಲ್ಲಿಲ್ಲೋ ತಮ್ಮಾ | ಬಿರದಿನ ಘಲಗಳ ನಡೆಸುವರಯ್ಯಾ ಪ
ಕಂಭದೊಳಗ ಹರಿ ಬಿಂಬವ ತೋರಿಸಿ | ಹಿರಣ್ಯ ಕನಾ | ವೆಂಬ ಶಾರ್ದೂಲ ಕರಳವ ಹಾರಿಸಿದ | ನಂಬಿದ ಪ್ರಲ್ಹಾದ ಮಾಸಾಳ ನಮಾ 1
ಕಂಡು ಸೀತಾಪತಿ ನೊಯ್ದು ರಾವಣ ನೆಂಬಾ | ಖಂಡಿಸಿ ಮದ ಸೊಕ್ಕಿದಾನಿಯನು | ತುಂಡ ಮುಂಡ ಮಾಡಿ ಪದವಿಯ ಪಡದಾ | ಚಂಡ ವಿಭೀಷಣ ಮಾಸಾಳ ನಮಾ 2
ಖಂಡ ದಾಸನಬೇಡಿ ಹೊಂದಿದ್ದ ಕಾಯನ | ಸಂದ ಬಿಡಿಸಿ ಮಲ್ಲಯುದ್ಧದಲಿ | ಮಂದರ ಧರನತಿ ಮೆಚ್ಚಿಸಿ ಮೆರೆದಾ | ನಂದ ಭೀಮಶೇನ ಮಾ-ಸಾಳ ನಮಾ 3
ಬೊಮ್ಮ ಸಾರಥಿ | ಉರಗಸ ಹದಿ ಮೇರು ಗಿರಿ ಪಾಪವು | ಹರಿಶರದಿಂದಲಿ ತ್ರಿಪುರವ ಕೆಡಹಿದ | ಸುರ ರಕ್ಷ ಮಹೇಶ ಮಾಸಾಳನಮಾ 4
ಹಿಂದಿನ ಮಾತಿಂದು ಇಂದಿಲ್ಲ ವೆನಬ್ಯಾಡಿ | ಎಂದೆಂದು ಸ್ವರ್ಗದ ಸುಖಗಳಿಗೆ | ಕುಂದವ ನಿಡುವರು ಮಹಿಪತಿ ಸುತ ಪ್ರಭು | ಹೊಂದಿದ್ದ ದಾಸರು ಮಾಸಾಳರೈಯ್ಯಾ 5
****
No comments:
Post a Comment