ಕಾಖಂಡಕಿ ಶ್ರೀ ಕೃಷ್ಣದಾಸರು
ಜಯದೇವ ಜಯದೇವ ಜಯಗುರು ಮಹೇಶಾ ಭಯವನಿವಾರಿಸಿ ಶ್ರಯಕುಡು ನೋಡದೆ ಗುಣದೋಷಾ ಪ
ಶಿವಶಿವಶಿವಶಿವಯೆಂದು ನೆನಿಯಲು ದೃಡವಾಗಿ ಅವನಿಲಿಹಿಂಗುದು ಪೂರ್ವದ ದುಷ್ಕøತಗತವಾಗಿ ಭವಭವ ಭವಭವಯನಲಾಮ್ಯಾಲನಿಶ್ಚಲನಾಗಿ ಜವದಲಿ ಹರಿವುದುದುರ್ಧರ ಭವಭಯಭಯಾಗಿ 1
ಅನನ್ಯ ಭಾವದಿಹೊಕ್ಕು ಶರಣವ ನಿಮ್ಮಡಿಗೆ ತನುಮನಧನವನು ಅರ್ಪಿಸಿ ವಂಚನೆ ನಿಲದ್ಹಾಗೆ ಅನುದಿನ ಮಾಡಿಲು ಧ್ಯಾನಾಸ್ವರೂಪಹೃದಯದೊಳಗೆ ಘನ ತರದಿಹನಿಜಸ್ಥಾನವು ಸುಲಬಾಗುವದೀಗೆ2
ನಿನ್ನಾ ಮಹಿಮೆಯುತಿಳಿಯದು ನಿಗಮಕ ಶ್ರೀಗುರವೇ ಇನ್ನು ಅಂತಿಂತೆಂಬುದು ನರಗುರಿಗಳಿಗಳವೇ ಎನ್ನಾನಯನದಿನೋಡಿ ಸುಮ್ಮನು ಸುರದಿರುವೇ ಭಿನ್ನವಿಲ್ಲದೆ ಸಲಹು ಮಹಿಪತಿ ಸುತಪ್ರಭುವೇ 3
***
No comments:
Post a Comment