Wednesday, 1 September 2021

ಶ್ರೀರಾಘವೇಂದ್ರ ಗುರುರಾಜ ಶ್ರೀ ಗುರುರಾಜ ankita shyamasundara

 ..

ಶ್ರೀ ರಾಘವೇಂದ್ರ ಗುರುರಾಜ ಶ್ರೀ ಗುರುರಾಜ |

ಶ್ರೀಗುರುರಾಜ ಬಾರೈ | ಭಕ್ತರಾಮರ ಭೋಜ ಶ್ರೀಗುರುರಾಜ ಪ


ಮಂಗಳಮಹಿಮನಿ ಸಂಗೀತ ಪ್ರಿಯನೆ |

ಅಂಗಜದೂರನೆ ಯತಿವರನೆ 1


ಶೃಂಗಾರ ವೃಂದಾವನ ನಿಲಯ | ಡಿಂಗರ ಪಾಲ

ಕವಿಗೇಯ | ಶ್ರೀ ರಾಘವೇಂದ್ರ ಶ್ರೀಗುರುರಾಜ 2


ಶ್ರೀ ಶಾಮಸುಂದರ ಪ್ರಿಯದಾಸ | ಕ್ಲೇಶನಾಶನ |

ವ್ಯಾಸಾರ್ಯನತಪೋಷ | ದೈಶಿಕನಾಥ |

ಭಾಸುರಚರಿತ | ವರಕಾಷಾಯ ಭೂಷಿತ ಮಾಂಪಾಹಿ 3

***


No comments:

Post a Comment