Wednesday, 1 September 2021

ಸಂಕೀರ್ಣ ಇದೇ ವೀಳ್ಯ ಅಡಕ್ಯೆಂಬುದು ನೋಡಿ ಹದನಿಸಿ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಸಂಕೀರ್ಣ ಇದೇ ವೀಳ್ಯ ಅಡಕ್ಯೆಂಬುದು ನೋಡಿ ಹದನಿಸಿ ನಾಲ್ಕುಗುಣ ಚೂರ್ಣಮಾಡಿ ಪ  

ಅಡಕೆಂಬದನುಮಾನಪೂಟ ಒಡೆದ ಹೋಳು ಮಾಡಿ ಚೊಕಷ್ಟ ಮಡಿಚಿಮ್ಮನೆಂಬುದು ವೀಳ್ಯ ನೀಟ ತೊಡೆದು ಅಹಂ ಸುಣ್ಣ ಖಾರಟಾ 1 
ಗುರುವರ್ಮ ಕಾಚೆಂಬುದು ಪೂರ್ಣ ಸುರಮುನಿ ಜನರ ನಿಧಾನ ತೋರುತಿಹ್ಯದೊಂದೆ ನಿಜ ಖೂನ ಕರಗಿಹೋಯಿತು ಮೂರೊಂದು ವರ್ಣ 2 
ವೀಳ್ಯ ಮಾಡಲು ಮರ್ದನ ಕಳದ್ಹೋಯಿತು ಅದರವಗುಣ ಕಳೆ ಹೆಚ್ಚಿತು ರಂಗ ಸಗುಣ ಥಳಿಥಳಿಸುವ ಜ್ಞಾನ ಸುಬಣ್ಣ 3 
ನುಂಗಿ ತಾಂಬೂಲ ರಸ ಹಲವಂಗ ಹಿಂಗಿ ಹೋಯಿತು ಭವಭಯಭಂಗ ಕಂಗಳದ್ಯರಿಯತು ಅಂತರಂಗ ರಂಗದೋರಿತ್ಯನ್ನೊಳು ಸತ್ಸಂಗ 4 
ವೀಳ್ಯ ಅಡಕಿ ಮಹಿಪತಿಗೆ ನೋಡಿ ತಿಳದವರಿದೆ ನಿಜಪೂರ್ಣ ಮಾಡಿ ಕಳೆದು ಕಲ್ಪನಿ ಕೊನೆ ಆಗ್ಯೀಡ್ಯಾಡಿ ಇಳಿಯೊಳಗಿದೆ ಸವಿ ಸುಖಗೂಡಿ 5
***

No comments:

Post a Comment