Wednesday, 1 September 2021

ಸ್ವಾಮಿ ಸಗುಣ ನಿರ್ಗುಣ ಬಾರಯ್ಯ ಬ್ರಹ್ಮಾನಂದ ಸುಖವು ದೋರಯ್ಯ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಸ್ವಾಮಿ ಸಗುಣ ನಿರ್ಗುಣ ಬಾರಯ್ಯ ಬ್ರಹ್ಮಾನಂದ ಸುಖವು ದೋರಯ್ಯ ಪ  


ಕಣ್ಣು ಬಡೆಯುತದೆ ನಿಮ್ಮ ನೋಡೇನೆಂದು ಪುಣ್ಯಚರಣ ಸುಪ್ರಭೆದೋರೋ ನೀ ಬಂದು ಧನ್ಯಧನ್ಯಗೈಸುವದೋ ಕೃಪಾಸಿಂಧು ಎನ್ನೊಡೆಯ ನೀನಹುದೋ ದೀನಬಂಧು 1 

ಅನುದಿನ ಸುಸೇವೆ ನಿಮ್ಮ ಮಾಡೇನೋ ಕ್ಷಣಕ್ಕೊಮ್ಮೆ ಸ್ವರೂಪ ನಾನೋಡೇನೋ ಘನ ಸುಖದೊಳು ನಾ ಬೆರೆದಾಡೇನೋ ನೆನೆವಂಥ ದಾಸರ ನಿಮ್ಮ ಕೂಡೇನೋ 2 

ಹೃದಯದೊಳು ನಿಜವಾಗಬೇಕಿಗ ಸದಾಸರ್ವದಾ ಮಾಡೋ ಏನ್ನೊಳೀವ್ಹಾಂಗ ಪಾದಪದ್ಮಕ್ಯೋಗ್ಯ ಮಾಡೋ ಮಹಿಪತಿಗೆ ಇದೆ ಪುಣ್ಯ ನೋಡಯ್ಯ ಕುಲಕೋಟಿಗೆ 3

***


No comments:

Post a Comment