ರಾಜರ ನೋಡಿದಿರಾ ಗುರುರಾಜರ ನೊಡಿದಿರಾ ಪ
ರಾಜರ ನೊಡಿ _ ಭಕುತಿಯ ಮಾಡಿ
ಗೋಜನ ಕರುಣಕೆ _ ಭಾಜನ ರಾದೀರಾ ಅ.ಪ.
ತುಂಗ ಮಹಿಮರು _ ನರ - ಸಿಂಗ ಭಕ್ತರು
ಭಂಗರಹಿತರು _ ಸುರ _ ಸಂಘ ಮಾನಿತರು 1
ಯೋಗಿ ವರ್ಯರು _ ಬಹು _ ತ್ಯಾಗಶೀಲರು
ರಾಗ ಶೂನ್ಯರು _ ಭವ _ ರೋಗ ವೈದ್ಯರು 2
ತಂತ್ರ ಮಲ್ಲರು _ ಬಹು _ ಗ್ರಂಥಕರ್ತೃಗಳು
ಮಂತ್ರ ಸಿದ್ಧರು _ ಮ _ ಹಂತ ಮಠದವರು 3
ಶಾಂತ ಮೂರ್ತಿಗಳು _ ವೇ _ ದಾಂತ ಬಲ್ಲವರು
ದಾಂತ ಶೇಖರರು _ ಏ _ ಕಾಂತ ಭಕ್ತರು 4
ರಾಘವೇಂದ್ರರು _ ಇವರೆ _ ವ್ಯಾಸರಾಜರು
ಭಾಗ್ಯವಂತರು _ ಪ್ರ _ ಹ್ಲಾದರಾಜರು 5
ದೂಡು ಸಂಶಯಾ ನೀ _ ಮಾಡು ಭಕುತಿಯಾ
ಬೇಡು ಬಯಕೆಯಾ ಪೋ _ ಗಾಡು ದುಃಖವಾ 6
ಸೃಷ್ಠಿ ನಾಯಕಾ _ ಶ್ರೀ _ ಕೃಷ್ಣವಿಠಲನ
ಶ್ರೇಷ್ಠ ಭಕ್ತರೂ _ ಸಂ-ತುಷ್ಠಿ ನೀಡುವರು 7
****
No comments:
Post a Comment