Monday, 2 August 2021

ಭಾವಿ ಅಜನಂಘ್ರಿಯುಗವ ಭಜಿಸಬಾರದೆ ankita karpara narahari

ಭಾವಿ ಅಜನಂಘ್ರಿಯುಗವ ಭಜಿಸಬಾರದೆ ಪ


ಭಜಕ ಮಾನವರ ವೃಜಿನಘನಸಮೀರ

ಕುಜನವನಕುಠಾರ ಸುಜನರಿಗೆ ಮಂದಾರನೆಂದು

ಭಜಿಸಬಾರದೆಅ.ಪ

ಭೂತಳದಿ ಶ್ರೀರಾಮ ದೂತನೆನಿಸಿ ಭಕುತ

ವ್ರಾತಕೆ ಸಕಲೇಷ್ಟದಾತನೆಂದು ಪ್ರೀತಿಯಿಂದ 1


ಪುಂಡ ಕೌರವರ ಹಿಂಡುಗೆಲಿದು ರಮೆಯ

ಗಂಡನೊಲಿಸಿದ ಮಧ್ಯ ಪಾಂಡವನ ಪದ ಪಂಡರೀಕ 2


ಶ್ರೀನರಸಿಂಹನೆ ಜಗನಿರ್ಮಾಣ ಕಾರಣನೆಂದು

e್ಞÁನದಾಯಕ ಮಧ್ವ ಮೌನಿಯೆನಿಸಿದ ಪ್ರಾಣಪತಿಯ 3

***


No comments:

Post a Comment