ಎಂಥಾತ ಗುರುರಾಯನು ಜಗದಂತರ್ನಿಯಾಮಕನ ನಿಜದೂತನು ||ಪ||
ಸಂತೋಷದಿಂದಲಿ ಅಂತೇ ವಾಸಿಗಳ ನಿಂತು ಪಾಲಿಸುತಿಹನು || ಅಪ ||
ಚಿಂತೆಯು ಯಾಕೆಂದನು ನಿಶ್ಚಿಂತಿ ಮಾರ್ಗವಿದೆಂದನು
ಅಂತರದೊಳು ಸಿರಿಕಾಂತನ ಪದವೇಕಾಂತದಿ ಭಜಿಸೆಂದನು ||೧||
ಯಾತಕೆ ಶ್ರಮವೆಂದನು ನಿನಗೆ ಪಾತಕವಿಲ್ಲೆಂದನು
ದೂತಾನೆ ಎನ್ನೊಳಿಪ್ಪ ಮಾತರಿಶ್ವಗೆ ಸಿರಿನಾಥನ ಭಜಿಸೆಂದನು ||೨||
ಪೋತನೆ ಕೇಳೆಂದನು ಎನ್ನ ಮಾತು ಮೀರದಿರೆಂದನು
ಪಾಥೋಜ ಗುರು ಜಗನ್ನಾಥ ವಿಠಲ ನಿನ್ನ ಮಾತು ಲಾಲಿಪನೆಂದನು ||೩||
***
eMthaata gururaayanu jagadaMtarniyaamakana nijadUtanu ||pa||
saMtOShadiMdali aMtE vaasigaLa niMtu paalisutihanu || apa ||
ciMteyu yaakeMdanu nishciMti maargavideMdanu
aMtaradoLu sirikaaMtana padavEkaaMtadi bhajiseMdanu ||1||
yaatake shramaveMdanu ninage paatakavilleMdanu
dUtAne ennoLippa maatarishvage sirinaathana bhajiseMdanu ||2||
pOtane kELeMdanu enna maatu mIradireMdanu
paathOja guru jagannaatha viThala ninna maatu laalipaneMdanu ||3|
***
|ಎಂಥಾತ ಗುರುರಾಯನು ಜಗ - ದಂತರ್ನಿಯಾಮಕನು ಪ
ಸಂತೋಷದಿಂದಲಿ ಅಂತೇವಾಸಿಗಳ
ನಿಂತು ಪಾಲಿಸುತಿಹನು ಅ.ಪ
ಚಿಂತೆಯು ಯಾಕೆಂದನು ನಿ - ಶ್ಚಿಂತಿ ಮಾರ್ಗವಿದೆಂದನು
ಅಂತರದೊಳು ಶಿರಿಕಾಂತನ ಪದವೇಕಾಂತದಿ ಭಜಿಸೆಂದನು 1
ಯಾತಕೆ ಶ್ರಮವೆಂದನು ನಿನಗೆ ಪಾತಕÀವಿಲ್ಲೆಂದನು
ದೂತಾನೆ ಎನ್ನೊಳಿಪ್ಪ ಮಾತರಿಶ್ವಗೆ
ಶಿರಿ ನಾಥನ ಭಜಿಸೆಂದನು 2
ಪೋತಾನೆ ಕೇಳೆಂದನು ಎನ್ನ -
ಮಾತು ಮೀರದಿರೆಂದಾನು
ಪಾಥೋಜ ಗುರುಜಗನ್ನಾಥ ವಿಠಲ ನಿನ್ನ
ಮಾತು ಲಾಲಿಪÀನೆಂದನು 3
***
No comments:
Post a Comment