ಗುರುರಾಜ | ನಮಿಪರ ಸುರಭೋಜ
ಗುರುರಾಜ ಪ.
ವರತಂದೆ ಮುದ್ದುಮೋಹನರೆಂದೆನಿಸುತ
ಮೆರೆಯುತ ಜಗದೊಳು ಪೊರೆಯುವ ಕರುಣಿ 1
ಅಜ್ಞತೆ ತೊಲಗಿಸಿ ಸುಜ್ಞತೆ ಕೊಡುತಲಿ
ವಿಘ್ನವ ತರಿಯುವ ಪ್ರಾಜ್ಞ ಮೂರುತಿಯೆ 2
ಸರಸಿಜಾಕ್ಷನ ಪದ ಹರುಷದಿ ಭಜಿಸುವ
ಪರಮಪ್ರಿಯರು ಎಂದು ಬಿರುದು ಪೊತ್ತಿಹರೆ 3
ನಾಗಶಯನನಿಗೆ ಭೋಗವಪಡಿಸುವ
ಆಗಮಜ್ಞರೆ ನಿಮಗೆ ಬಾಗುವೆ ಸತತ 4
ಸಾಸಿರ ಫಣೆಯಿಂದ ಸೂಸುವ ಕಾಂತಿಯೊಳ್
ಶ್ರೀಶನ ಕಾಣುವ ವಾಸವ ವಿನುತ 5
ದೇವತಾಂಶದ ಗುರು ಪವಮಾನಿಗೆ ಪ್ರಿಯ
ಭಾವಿಸಿ ಭಜಿಪರ ಕಾವ ಕರುಣಾಳು 6
ಶಾಂತಚಿತ್ತದಿ ಬಹು ಸಂತೋಷಪಡುತಲಿ
ಅಂತರಂಗದಿ ಹರಿಯ ಚಿಂತಿಸುತಿರುವ 7
ಉದ್ಭವಿಸಿ ಜಗದಿ ಅಧ್ಭುತ ಮಹಿಮೆಯ
ಒಬ್ಬೊಬ್ಬರಿಗೆ ತೋರಿ ಹಬ್ಬಿಪೆ ಹರುಷ 8
ಸೃಷ್ಟೀಶ ಗೋಪಾಲಕೃಷ್ಣವಿಠ್ಠಲನನು
ದೃಷ್ಟಿಗೆ ತೋರಿಸಿ ಕಷ್ಟ ಬಿಡಿಸಿರಿ 9
****
No comments:
Post a Comment