Tuesday, 1 June 2021

ನೀರಜಾಕ್ಷ ನಿರ್ದಯವ್ಯಾಕೊ ಕರುಣದಿ ಎನ್ನಾ ankita hanumesha vittala

ನೀರಜಾಕ್ಷ ನಿರ್ದಯವ್ಯಾಕೊ ಕರುಣದಿ ಎನ್ನಾ ಪ


ಒಡಲಿಗನ್ನಾ ತೊಡಲು ಅರಿವೆ ಕೊಡುವವರನು ನಾ ಕಾಣೆ ಹರಿಯೇ

ಬಡತನ ಕಂಗೆಡಿಸಿತೋ ಕಡೆಗ್ಹಾಯಿಸಯ್ಯ ತ್ವರದಿ ಗುಣಮಣಿಯೇ 1


ಖೂಳ ಜನರ ಆಳಾಗಿ ನಾ ಹಾಳು ಒಡಲನ್ನು ಹೊರೆಯಲಾರೇ

ಕೂಳಿಗೋಸುಗ ಬಾಳಾಯ್ತೀಪರಿ ತಾಳಲಾರೆ ಕಾಯೋ ಮುರಾರೇ2


ಕಷ್ಟಾಬಟ್ಟಾ ದುಷ್ಟಾಮೃಗ ನಾನು ದೃಷ್ಟಿಲಿ ನೋಡೋ

ನೀ ಕೈಬಿಡಬ್ಯಾಡೋ

ಶ್ರೀ ಹನುಮೇಶವಿಠಲನೆ ಎನ್ನಾ ಇಷ್ಟದಂದರಿ ಥಟ್ಟನೆ ಮಾಡೋ 3

****


No comments:

Post a Comment