Tuesday, 13 April 2021

ಶ್ರೀದೇವಿ ತಾನು ಶ್ರೀ ಧಾಮನ್ನ ಮನೆಯಲ್ಲಿ ankita hayavadana ಶ್ರೀ ಲಕ್ಷ್ಮೀ ಹೃದಯ sri lakshmi hrudaya

 ಶ್ರೀ ವಾದಿರಾಜ ಯತಿಗಳ " ಶ್ರೀ ಲಕ್ಷ್ಮೀ ಹೃದಯ "


ಶ್ರೀ ದೇವಿ ತಾನು ಶ್ರೀ ಧಾಮನ್ನ ಮನೆಯಲ್ಲಿ

ಆದಿ ಅಂತ್ಯಗಳಿಲ್ಲದಿರಲು   l ಚೌಧ್ಯ ಸುಖರೂಪದಿಂದ ಅವಳಿಗೆ ವೇದವಾಲಿಗಳ ಓದುತ್ತಿರಲು  l ಅವಳಿಂದ ಹರಿಯು ಮೂರು ಮನೆಗಳಿಪ್ಪಾಲೆಯಕೆತನ ಭಯವಿಲ್ಲ l ಮೊದಲೆ ಉದಕವಿಲ್ಲ ಆದಕಾರಣದಿಂದ ಮುದದಿ ತಾನಾದಳು ಅಚ್ಯುತಗೆ ಅಂಭುದಿಯಾದಳು l 

ಆಗ ಮಹಾಲಕುಮಿ ಅಂಬರದ ಆಭರಣವಾದಳು l ಪೊಂಬಣ್ಣದ ಅಲೆಯಾದಳು ಎನೆಂಬೆ ಇವಳ

ಸಾಹಸಕ್ಕೆ l  ಶ್ರೀಭೂ ದುರ್ಗೆಯರ ಆಲಿಸಿದನು ಹರಿಯು ತಾ ಆಲದೆಲೆಯ ಮೇಲೆ ಮಲಗಿದನು l  ಅಚ್ಯುತನ ಹೃದಯದಲೆ ಲಿಂಗವಿಶಿಷ್ಟರಾದ ಇನಿತು ಜೀವರ ಹಿಡಿ ತುಂಬಿಕೊಂಡು l ತನಯನ ನೂರು ವರ್ಷ ಪರಿಯಂತದಿ ವನಜಾಕ್ಷ ವಟಪತ್ರ ಶಯನನಾಗಿ  l ಜನರೆಲ್ಲ ತಮ್ಮ ಗತಿಗೆ ತಕ್ಕ ಸಾಧನವ ಸಾಧಿಸಿ ಕೊಳ್ಳಲೆಂದುl  ಕರುಣಿ ಪುನರಪಿ ಸೃಷ್ಟಿಯ ಮಾಡುವೆ ನೆಂದು l ಲಾಲನೆಗೆ ಪ್ರಕೃತಿಯ ಮಮತೆಯಿತ್ತು l ಗುಣತ್ರಯಾತ್ಮಕ ಸೂಕ್ಷ್ಮ ತತ್ವರಾಶಿಯ ಜೀವರನು  ಸೃಜಿಸಿದ ಹಯವದನನು||

***


No comments:

Post a Comment