ಪುರಂದರದಾಸರು
ಬಿನ್ನಹಕೆ ಬಾಯಿಲ್ಲ ಎನಗೆ ಅದರಿಂದ |ನಿನ್ನ ಮರೆದೆನೊ ಸ್ವಾಮಿ ಎನ್ನ ಕಾಯಯ್ಯ ಪ
ಅನ್ನಮದ ಅರ್ಥಮದಅಖಿಳವೈಭವದ ಮದ |ಮುನ್ನ ಪ್ರಾಯದ ಮದವುರೂಪಮದವು ||ತನ್ನ ಸತ್ವದ ಮದ ಧರಿತ್ರಿ ವಶವಾದ ಮದ |ಇನ್ನು ಎನಗಿದಿರಿಲ್ಲವೆಂಬ ಮದದಿ 1
ಶಶಿವದನೆಯರ ಮೋಹಜನನಿ- ಜನಕರ ಮೋಹ |ರಸಿಕ ಭ್ರಾಂತಿಯ ಮೋಹ ರಾಜಮನ್ನಣೆ ಮೋಹ ||ಪಶು ಮೋಹ ಶಿಶುಮೋಹ ಬಂಧುವರ್ಗದ ಮೋಹ |ಹಸನುಳ್ಳ ವಸ್ತ್ರ ಆಭರಣಗಳ ಮದದಿ 2
ಇಷ್ಟ ದೊರಕಿದರೆ ಮತ್ತಿಷ್ಟು ಬೇಕೆಂಬಾಸೆ |ಅಷ್ಟು ದೊರಕಿದರೆ ಮತ್ತಷ್ಟರಾಸೆ ||ಕಷ್ಟ ಜೀವನದಾಸೆಕಾಣಾಚಿಕೊಂಬಾಸೆನಷ್ಟ ಜೀವನ ಬಿಡಿಸೆಪುರಂದರವಿಠಲ3
********

No comments:
Post a Comment