Friday, 6 December 2019

ವಿಷ ಕುಡಿಯುತೇನೆ ನೋಡು ನೋಡು ಗಂಡ purandara vittala

ರಾಗ ಪಂತುವರಾಳಿ ಆದಿತಾಳ 

ವಿಷ ಕುಡಿಯುತೇನೆ ನೋಡು , ನೋಡು ಗಂಡ
ವಿಷ ಕುಡಿಯುತೇನೆ ನೋಡು ||ಪ||
ವಿಷ ಕುಡಿಯುತೇನೆ ಹಸನಾಗಿರು
ಹಂಸದಂತೆ ದೇಹವ ಹತಮಾಡುತೇನೆ ||ಅ||

ಕಬ್ಬಿನ ರಸದೊಳಗೆ , ಗಸಗಸೆ
ರುಬ್ಬಿಯೆ ನೀ ಬೆರೆಸಿ
ಹಬ್ಬು ಜೇನುತುಪ್ಪ , ತಂಪಿಗೆ
ಯಾಲಕ್ಕಿಪುಡಿ ಹಾಕಿ
ಸಜ್ಜನರೆಲ್ಲ ಕೈಸೇರಿದ ಬಳಿಕ
ಹಬ್ಬ ಬಂದಿತೆಂದು
ಉಬ್ಬುಬ್ಬಿ ಈಗ ||

ಕಡಲೆ ಹೂರಣ ಮಾಡಿ , ತೂಕಕ್ಕೆ
ಪಡಿಬೆಲ್ಲವನೆ ಬೆರೆಸಿ
ಒಡೆದ ಕೊಬ್ಬರಿ ಹಾಕಿ , ಗಡಿಗೆಗೆ
ಹಿಡಿ ಹುಲ್ಲನೆ ತುರುಕಿ
ಸದಗರದಿಂದಲಿ ಕಡುಬು ಮಾಡಿಕೊಂಡು
ನಡುಮನೆಯಲ್ಲಿ ಕುಳಿತು
ಹುಡಿಲೇಸ್ ನೋಡು ಗಂಡ ||

ಸಣ್ಣ ಶಾವಿಗೆ ಸೆಳೆದು , ಸಕ್ಕರೆ
ಬೆಣ್ಣೆ ಕಾಸಿಯೇ ಕರಿದು
ಕಾಸಿದ ನೊರೆಹಾಲು ಕೂಡಿಸಿ
ಅಸೆಯಿಂದಲಿ ಕುಳಿತು
ಪುರಂದರವಿಠಲನ ಚರಣವ ನೆನೆಯುತ
ಎಂದೆಂದಿಗೂ ಜೀವ
ಸತ್ತು ಪುಟ್ಟದಂತೆ ||
*******

No comments:

Post a Comment