Thursday, 17 October 2019

ಕಂಗೆಡದಿರು ಮನವೆ ankita vijaya vittala

ಕಂಗೆಡದಿರು ಮನವೆ
ಕಂಗೆಡದಿರು ಒಡನೊಡನೆ ನೆರೆದು ಬಂದು

ಜನಕೆ ಗ್ರಾಸವೆಂತಹುದೆಂದು
ಅನುಮಾನ ಹಚ್ಚಿಕೊಂಡು
ಬಡವಾಗದಿರೆಲೆ ಆಲೋಚನೆ ಮಾಡು
ನಿನ್ನೊಳಗೆ ತಿಳಿದು ಮರಳಿ ಮರಳಿ
ಘನಮಹಿಮ ನಾರಾಯಣ ಅನಾದಿ ಸ್ವಾಭಾವಿಕ
ಚಿನುಮಯ ಸತ್ಯಸಂಕಲ್ಪ ದೇವ| ||1||

ಇನಿತು ಜೀವಿಗಳಿಗೆ ಕಾಲಕಾಲಕೆ
ತೃಣ ಮೊದಲಾದ ಗ್ರಾಸ ಮಾಡಿಯಿಪ್ಪಾ
ಕ್ಷಣಮಿರಗೊಡದೆ ಆವಲ್ಲಿಯಿದ್ದರೂ
ವುಣಿಸುವ ಉಚಿತವನ್ನೆ ತಿಳಿದು ನೋಡಿ
ದಿನ ದಿನಕೆ ಅಧಿಕವಿಲ್ಲಾ ತತ್ಪೂರ್ವ ಚೇತನಕೆ
ನಿರ್ಮಾಣ ಮಾಡಿದಂತೆ ಬೊಮ್ಮಾ||2||

ಫಣಿತಿಯಲ್ಲಿ ಬರೆದಿರುವ ಆಯು:ಕರ್ಮವಿದ್ಯಾ
ಧನ ನಿಧಾನನೆನೆಸಿ ಶ್ರೀಹರಿಯ ಆದಿ
ಜನಿಸುವಾಗಲೆ ಅವರವರವಾಡಿಪನಾ
ಕೊನೆಯ ಸೆರಗಿನಲಿ ಕಟ್ಟಿಹನೋ
ನಿನಗೆ ಕಾಣಬಾರದೋ ಪದಶಾಸ್ತ್ರಗಳಿಂದೆ
ಗುಣಿಸಿ ನೋಡಿದರೆ ಕಾರುಣಿಕÀವಹುದೊ ||3||

ಅಣುಮಾತ್ರನಿಂ ನಿಂದಾ ಆಗುವಾ ಶೌರ್ಯವೇನೋ
ಅನುಭವಕೆ ತಂದುಕೊಂಡು ಗ್ಲಾನಿಯಾಗೋ
ಮಿನುಗು ಚಿಂತೆಗಳಿಂದಾ ಬರುವ ಲಾಭವೇ ಕಾಣೆ
ತನುವ ಶೋಷಿಸಿ ವಿರೋಧಾವಾಗಿ ಕೊಂಬೆ
ಧನವಂತಾ ಸಿರಿ ನಮ್ಮ ವಿಜಯವಿಠಲರೇಯಾ
ಮನುಜಾದಿ ದೇಹಿಗಳಿಗೆ ಸ್ವಾಮಿಯಾಗಿಪ್ಪನೋ ||4||
***********

ವಿಜಯದಾಸ
ಕಂಗೆಡದಿರು ಮನವೆ
ಕಂಗೆಡದಿರು ಒಡನೊಡನೆ ನೆರೆದು ಬಂದು ಪ
ಜನಕೆ ಗ್ರಾಸವೆಂತಹುದೆಂದು
ಅನುಮಾನ ಹಚ್ಚಿಕೊಂಡು
ಬಡವಾಗದಿರೆಲೆ ಆಲೋಚನೆ ಮಾಡು
ನಿನ್ನೊಳಗೆ ತಿಳಿದು ಮರಳಿ ಮರಳಿ
ಘನಮಹಿಮ ನಾರಾಯಣ ಅನಾದಿ ಸ್ವಾಭಾವಿಕ
ಚಿನುಮಯ ಸತ್ಯಸಂಕಲ್ಪ ದೇವ| 1
ಇನಿತು ಜೀವಿಗಳಿಗೆ ಕಾಲಕಾಲಕೆ
ಗ್ರಾಸ ಮಾಡಿಯಿಪ್ಪಾ
ಕ್ಷಣಮಿರಗೊಡದೆ ಆವಲ್ಲಿಯಿದ್ದರೂ
ವುಣಿಸುವ ಉಚಿತವನ್ನೆ ತಿಳಿದು ನೋಡಿ
ದಿನ ದಿನಕೆ ಅಧಿಕವಿಲ್ಲಾ ತತ್ಪೂರ್ವ ಚೇತನಕೆ
ನಿರ್ಮಾಣ ಮಾಡಿದಂತೆ ಬೊಮ್ಮಾ2
ಫಣಿತಿಯಲ್ಲಿ ಬರೆದಿರುವ ಆಯು:ಕರ್ಮವಿದ್ಯಾ
ಧನ ನಿಧಾನನೆನೆಸಿ ಶ್ರೀಹರಿಯ ಆe್ಞÁದಿ
ಜನಿಸುವಾಗಲೆ ಅವರವರವಾಡಿಪನಾ
ಕೊನೆಯ ಸೆರಗಿನಲಿ ಕಟ್ಟಿಹನೋ
ನಿನಗೆ ಕಾಣಬಾರದೋ ಪದಶಾಸ್ತ್ರಗಳಿಂದೆ
ಗುಣಿಸಿ ನೋಡಿದರೆ ಕಾರುಣಿಕÀವಹುದೊ 3
ಅಣುಮಾತ್ರನಿಂ ನಿಂದಾ ಆಗುವಾ ಶೌರ್ಯವೇನೋ
ಅನುಭವಕೆ ತಂದುಕೊಂಡು ಗ್ಲಾನಿಯಾಗೋ
ಮಿನುಗು ಚಿಂತೆಗಳಿಂದಾ ಬರುವ ಲಾಭವೇ ಕಾಣೆ
ತನುವ ಶೋಷಿಸಿ ವಿರೋಧಾವಾಗಿ ಕೊಂಬೆ
ಸಿರಿ ನಮ್ಮ ವಿಜಯವಿಠಲರೇಯಾ
ಮನುಜಾದಿ ದೇಹಿಗಳಿಗೆ ಸ್ವಾಮಿಯಾಗಿಪ್ಪನೋ
*********

No comments:

Post a Comment