Tuesday, 5 October 2021

ಜನಮನದಲಿ ಸಧ್ಭಾವನೆ ಬಿತ್ತಲು ankita pranesha vittala JANAMANADALI SADBHAAVANE BITTALU

 



raga chandrakauns

ಜನಮನದಲಿ ಸಧ್ಭಾವನೆ ಬಿತ್ತಲು  - ರಾಯರ ಮೇಲೆ ಕೃತಿ
ರಚನೆ: ಶ್ರೀ ಪ್ರಾಣೇಶ ದಾಸರು
ರಾಗ: ಚಂದ್ರಕೌನ್ಸ್


ಜನಮನದಲಿ ಸದ್ಭಾವನೆ ಬಿತ್ತಲು ಇನ್ನೊಮ್ಮೆ ಬಾ ಗುರುರಾಯಾ ।| PA ||

ಪಾಪವಿಲೋಕದಿ ತುಂಬಿ ನಿಂತಿದೆ
ಪಾಪಹರಣ ನೀ ಬೇಗನೆ ಬಾರೋ || A PA ||

ತನುಮನ ಧನವನು ನಿನಗರ್ಪಿಸಿದೆ ಇನಿತು
ಪೇಳುತಲಿ ನಾ ಪಾಪದಿ ನೊಂದೆ |
ದೀನರ ರಕ್ಷಿಸು ಎಂದು ನಾ ಬೇಡಿದೆ |
ಗುರುರಾಜಾ ನಿನ್ನ ಕಾಡಿ ನಾ ಬೇಡಿದೆ || 1 ||

ಗಂಗಾ ನದಿಯ ಚೆಲ್ವಿಕೆ ಪಡೆದ |
ತುಂಗೆಯ ದಡದಲಿ ವಾಸ ಮಾಡಿದ |
ಅಘದ ಜನುಮಗಳ ಪಾಪವ ತೊಳೆಯಲು
ರಾಘವೇಂದ್ರಗುರು ಇನ್ನೊಮ್ಮೆ ನೀ ಬಾರೋ || 2 ||

ಮಂತ್ರಾಲಯದ ಚೆಲುವ ಚಂದಿರ |
ಅಂತರಂಗದಲ್ಲಿ ನೆಲೆಸಿ ನಿರಂತರ |
ಕಂತು ಪಿತನೆ ಶ್ರೀ ಪ್ರಾಣೇಶ ವಿಠಲನೆ |
ಸಂತಸದೀ ನೀ ಭಕುತರ ಪೊರೆಯಲು || 3 ||
***


janamanadali sadbhāvane bittalu innom’me bā gururāyā।| PA ||

pāpavilōkadi tumbi nintide pāpaharaṇa nī bēgane bārō || A PA ||

tanumana dhanavanu ninagarpiside initu pēḷutali nā pāpadi nonde |

dīnara rakṣisu endu nā bēḍide | gururājā ninna kāḍi nā bēḍide || 1 ||

gaṅgā nadiya celvike paḍeda | tuṅgeya daḍadali vāsa māḍida |

aghada janumagaḷa pāpava toḷeyalu rāghavēndraguru innom’me nī bārō || 2 ||

mantrālayada celuva candira | antaraṅgadalli nelesi nirantara |

kantu pitane śrī prāṇēśa viṭhalane | santasadī nī bhakutara poreyalu || 3 ||

Plain English

janamanadali sadbhavane bittalu innom’me ba gururaya।| PA ||

papavilokadi tumbi nintide papaharana ni begane baro || A PA ||

tanumana dhanavanu ninagarpiside initu pelutali na papadi nonde |

dinara raksisu endu na bedide | gururaja ninna kadi na bedide || 1 ||

ganga nadiya celvike padeda | tungeya dadadali vasa madida |

aghada janumagala papava toleyalu raghavendraguru innom’me ni baro || 2 ||

mantralayada celuva candira | antarangadalli nelesi nirantara |

kantu pitane sri pranesa vithalane | santasadi ni bhakutara poreyalu || 3 ||
***





No comments:

Post a Comment