ಎಣೆಯಾರೊ ನಿನಗೆ ಹನುಮಂತರಾಯ ಪ.
ಎಣೆಯಾರೊ ನಿನಗೆ ತ್ರಿಭುವನದೊಳಗೆಲ್ಲಪ್ರಣತಜನಮಂದಾರ ಪವನಸುಕುಮಾರ ಅ.ಪ.
ಅಡಿಗಡಿಗೆ ರಾಮ ಪದಾಂಬುಜಕೆ ವಂದಿಸುತ
ನಡೆನಡೆದು ಮುದ್ರಿಕೆಯ ಪಡೆದು ಮುದದಿ
ದಡದಡನೆ ಅಂಬುಧಿಯ ದಾಟಿ ಸೀತೆಗೆ ಗುರುತ
ಕೊಡುಕೊಡುತ ಕುಸ್ತ್ತರಿಸಿದಂಥ ಹನುಮಂತ1
ಗರಗರನೆ ಪಲ್ಗಡಿದು ಕಲುಷದೈತ್ಯರನೆಲ್ಲ
ಚರಚರನೆ ಸೀಳಿ ಸಂಭ್ರಮದಿಂದ
ಬಿರಬಿರನೆ ಕಣ್ಬಿಡುತ ಬಿಂಕದಲಿ
ಲಂಕೆಯನುಸುರಸುರನೆ ಬಾಲದಲಿ ಸುಟ್ಟ ರಣದಿಟ್ಟ 2
ಫಳಫಳನೆ ಆರ್ಭಟದಿಂದ ರಾವಣನ
ನಳನಳನೆ ಬೆಳೆದ ನಂದನವ ಕಿತ್ತು
ಖಳಖಳನೆ ನಗುತ ದಶಕಂದರನ ಗುದ್ದಿ ಬಂದೆ
ಭಳಿಭಳಿರೆ ಹಯವದನ ದಾಸ ನಿಸ್ಸೀಮ 3
***
Pallavi
Eṇiyārō ninage hanumantarāya |
Tribhuvanadoḷagella praṇatajanamandāra pavanasukumāra ||
Charana 1
Aḍigaḍige rāma padāmbujake vandisuta |
Naḍenaḍedu mudrikeya paḍedu mudadi |
Daḍadaḍane ambudhiya dāṭi sītēge guruta |
Koḍukoḍuta kustarisidantha hanumanta ||
Charana 2
Garagarane palgaḍidu kaluṣadaityaranella |
Charachara ne sīḷi sambhramadinda |
Birabirane kaṇbiḍuta biṅkadali |
Laṅkēyanusurasurane bālādali suṭṭa raṇadiṭṭa ||
Charana 3
Phaḷaphaḷane ārbhaṭadinda rāvaṇana |
Naḷanaḷane beḷeda nandanava kiṭṭu |
Khaḷakhaḷane naguta daśakandaranaguddi bande |
Bhaḷibhaḷire hayavadana dāsa nissīma ||
***
Pronunciation Guide (Simplified)
Retroflex Sounds (ḍ, ḷ, ṇ, ṣ, ṭ): Curl your tongue tip back to touch the roof of the mouth.
Aspirated Consonants (dh, bh, gh, kh, ph): Add a soft puff of air after the letter.
Vowel Length (ā, ī, ū, ē, ō): Hold these sounds for twice the duration of short vowels.
'Ś' Sound: Pronounce 'ś' like the 'sh' in "shoe".
Rhythmic Flow: Maintain a steady pace, holding the final syllables of each line slightly longer to keep the musical rhythm.
***
ಶ್ರೀ ವಾದಿರಾಜ ತೀರ್ಥರು ಹನುಮಂತರಾಯನ ಪರಾಕ್ರಮವನ್ನು ವರ್ಣಿಸಿರುವ ಈ ಅದ್ಭುತ ಕೀರ್ತನೆಯ ಸಾರಾಂಶ ಮತ್ತು ಅರ್ಥ ಇಲ್ಲಿದೆ.
Summary (Kannada)
ಈ ಕೀರ್ತನೆಯಲ್ಲಿ ವಾದಿರಾಜರು ಹನುಮಂತನನ್ನು "ತ್ರಿಭುವನದಲ್ಲಿ ಸಾಟಿಯಿಲ್ಲದವನು" ಎಂದು ಬಣ್ಣಿಸಿದ್ದಾರೆ. ರಾಮಭಕ್ತಿಯಲ್ಲಿ ಮಗ್ನನಾದ ಹನುಮಂತನು ಸಮುದ್ರ ಲಂಘನ ಮಾಡಿದ್ದು, ಸೀತಾದೇವಿಗೆ ರಾಮನ ಮುದ್ರಿಕೆಯನ್ನು ನೀಡಿದ್ದು, ಲಂಕೆಯನ್ನು ಸುಟ್ಟದ್ದು ಮತ್ತು ರಾವಣಾದಿ ದುಷ್ಟರನ್ನು ಸಂಹರಿಸಿದ ದೃಶ್ಯಗಳನ್ನು ಕಣ್ಣಿಗೆ ಕಟ್ಟುವಂತೆ ಇಲ್ಲಿ ಚಿತ್ರಿಸಲಾಗಿದೆ.
Padyada Artha (Kannada)
ಪಲ್ಲವಿ:
ಎಣೆಯಾರೊ ನಿನಗೆ ಹನುಮಂತರಾಯ | ತ್ರಿಭುವನದೊಳಗೆಲ್ಲ ಪ್ರಣತಜನಮಂದಾರ ಪವನಸುಕುಮಾರ ||
ಅರ್ಥ: ಹನುಮಂತರಾಯ, ಮೂರೂ ಲೋಕಗಳಲ್ಲಿ ನಿನಗೆ ಸಾಟಿಯಾರೂ ಇಲ್ಲ. ಶರಣಾದ ಭಕ್ತರಿಗೆ ಕಲ್ಪವೃಕ್ಷದಂತಿರುವವನೇ, ವಾಯುದೇವನ ಮಗನೇ ನಿನಗೆ ನಮನ.
ಚರಣ 1:
ಅಡಿಗಡಿಗೆ ರಾಮ ಪದಾಂಬುಜಕೆ ವಂದಿಸುತ | ನಡೆನಡೆದು ಮುದ್ರಿಕೆಯ ಪಡೆದು ಮುದದಿ | ದಡದಡನೆ ಅಂಬುಧಿಯ ದಾಟಿ ಸೀತೆಗೆ ಗುರುತ | ಕೊಡುಕೊಡುತ ಕುಸ್ತ್ತರಿಸಿದಂಥ ಹನುಮಂತ ||
ಅರ್ಥ: ಪ್ರತಿ ಹೆಜ್ಜೆಯಲ್ಲೂ ರಾಮನ ಪಾದಗಳಿಗೆ ನಮಸ್ಕರಿಸುತ್ತಾ, ಮುದ್ರಿಕೆಯನ್ನು ಪಡೆದು, ಸಮುದ್ರವನ್ನು ದಾಟಿ ಸೀತಾದೇವಿಗೆ ಗುರುತನ್ನು ನೀಡಿದ ಪರಾಕ್ರಮಿ ನೀನು.
ಚರಣ 2:
ಗರಗರನೆ ಪಲ್ಗಡಿದು ಕಲುಷದೈತ್ಯರನೆಲ್ಲ | ಚರಚರನೆ ಸೀಳಿ ಸಂಭ್ರಮದಿಂದ | ಬಿರಬಿರನೆ ಕಣ್ಬಿಡುತ ಬಿಂಕದಲಿ | ಲಂಕೆಯನುಸುರಸುರನೆ ಬಾಲದಲಿ ಸುಟ್ಟ ರಣದಿಟ್ಟ ||
ಅರ್ಥ: ಹಲ್ಲು ಕಡಿದು ದುಷ್ಟ ದೈತ್ಯರನ್ನು ಸೀಳಿ, ಕೆಂಪು ಕಣ್ಣುಗಳಿಂದ ಲಂಕೆಯನ್ನು ತನ್ನ ಬಾಲದಿಂದ ಸುಟ್ಟ ಯುದ್ಧವೀರ ನೀನು.
ಚರಣ 3:
ಫಳಫಳನೆ ಆರ್ಭಟದಿಂದ ರಾವಣನ | ನಳನಳನೆ ಬೆಳೆದ ನಂದನವ ಕಿತ್ತು | ಖಳಖಳನೆ ನಗುತ ದಶಕಂದರನ ಗುದ್ದಿ ಬಂದೆ | ಭಳಿಭಳಿರೆ ಹಯವದನ ದಾಸ ನಿಸ್ಸೀಮ ||
ಅರ್ಥ: ಆರ್ಭಟಿಸುತ್ತಾ ರಾವಣನ ಅಶೋಕವನವನ್ನು ಕಿತ್ತು, ನಗುತ್ತಾ ರಾವಣನಿಗೆ ಗುದ್ದು ನೀಡಿದವನೇ. ಹಯವದನನ ದಾಸನೇ, ನೀನು ಅದ್ವಿತೀಯನು.
***
Summary
In this Kirtana, Vadirajaru glorifies Hanuman as the incomparable hero of the three worlds. He vividly describes Hanuman's legendary feats: crossing the ocean to deliver Rama's signet ring to Sita, his fierce battle against the demons, setting Lanka ablaze with his tail, and his triumphant confrontation with Ravana. He concludes by praising Hanuman as the ultimate devotee of Lord Hayavadana.
Pallavi
Eniyaro ninage hanumantaraya |
Tribhuvanadolagella pranatajanamandara pavanasukumara ||
Meaning: O Hanuman, who can equal you? You are peerless in the three worlds, a wish-fulfilling tree to those who surrender to you, and the son of the Wind god.
Stanza 1
Adigadige rama padambujake vandisuta |
Nadenadedu mudrikeya padedu mudadi |
Dadadadane ambudhiya dati sit ege guruta |
Kodukoduta kustarisidantha hanumanta ||
Meaning: Bowing to Rama's lotus feet at every step, receiving the ring with joy, you crossed the ocean, gave the sign of Rama to Sita, and acted with great agility.
Stanza 2
Garagarane palgadidu kalushadaityaranella |
Charachara ne sili sambhramadinda |
Birabirane kanbiduta binkadali |
Lankeyanusurasurane baladali sutta ranaditta ||
Meaning: Gnashing your teeth, you tore apart the sinful demons with delight, stared fiercely with wide eyes, and proudly burned Lanka with your tail, O great warrior.
Stanza 3
Phalaphalane arbhatadinda ravanana |
Nalanale beled nandanava kittu |
Khalakhalane naguta dashakandaranaguddi bande |
Bhalibhalire hayavadana dasa nissima ||
Meaning: Roaring fiercely, you uprooted the beautiful Ashoka garden of Ravana, and laughing heartily, you punched Ravana and returned. Glory to you, the boundless devotee of Hayavadana!
***
Ene yaro ninage hanumantaraya ||pa ||
Ene yaro ninage tribuvanadolagella |
Punata jana mandara pavana sukumara || a. Pa ||
Adigadige ramara padambujake vandisuta |
Nada nadedu mudrikeyagondu mudadi ||
Dhadadhadane ambudhiya dati sitege guru ta |
Koda kodutta kustarisidanta hanumanta || 1 ||
Garagarane halgiridu kalusha daityaranella |
Caracarane sili sambramadindali ||
Biribirine kanbiduta binkadali lankeyanu |
Surasurane baladali sutta rana dhitta || 2 ||
Galagalane arbatisi bapure ravanana
Belebeleda nandanavanava kitti ||
Kalakalane naguta dasakamdharana guddideyo |
Balibalire hayavadanana dasa nirdosha || 3 ||
***
pallavi
eNeyaaro ninage hanumaMtaraaya praNata jana maMdaara pavana sukumaara
caraNam 1
aDigaDige raamapaadaaMbujake vaMdisuta
naDedodoDane mudrikeya paDedu mudadi
daDhadaDhane aMbhudiya daaTi seetege guruta
koDukoDuta kustarisidaMta hanumaMta
caraNam 2
garagarane halkaDidu kalusha daityaranella
caracharane seeLi saMbhramadiMdali
birabirane kaNbiDuta biMkadali laMkeyanu
surasurane baaladali suTTa balu diTTa
caraNam 3
phaLaphaLane aarbhaTadiMdalaa raavaNana
naLanaLane beLeda naMdanavakittu
khaLakhaLane naguta dashakaMdarana guddi baMde
bhaLibhaLire hayavadana daasa nirdOSha
***
pallavi
eNeyAro ninage hanumantarAya praNata jana mandAra pavana sukumAra
caraNam 1
aDigaDige rAmapAdAmbujake vandisuta naDedodoDane mudrikeya paDedu mudadi
daDhadaDhane ambhudiya dATi sItege guruta koDukoDuta kustarisidanta hanumanta
caraNam 2
garagarane halkaDidu kaluSa daityaranella caracarane sILi sambhramadindali
birabirane kaNbiDuta binkadali lankeyanu surasurane bAladali suTTa balu diTTa
caraNam 3
phaLaphaLane ArbhaTadindalA rAvaNana naLanaLane beLeda nandanavakittu
khaLakhaLane naguta dashakandarana guddi bande bhaLibhaLire hayavadana dAsa nirdOSa
***
ಎಣೆಯಾರೊ ನಿನಗೆ ಹನುಮಂತರಾಯ ||
ಎಣೆಯಾರೊ ನಿನಗೆ ತ್ರಿಭುವನದೊಳಗೆಲ್ಲಪ್ರಣತಜನಮಂದಾರ ಪವನಸುಕುಮಾರ ||
ಅಡಿಗಡಿಗೆ ರಾಮ ಪದಾಂಬುಜಕೆ ವಂದಿಸುತ
ನಡೆನಡೆದು ಮುದ್ರಿಕೆಯ ಪಡೆದು ಮುದದಿ
ದಡದಡನೆ ಅಂಬುಧಿಯ ದಾಟಿ ಸೀತೆಗೆ ಗುರುತ
ಕೊಡುಕೊಡುತ ಕುಸ್ತ್ತರಿಸಿದಂಥ ಹನುಮಂತ||
ಗರಗರನೆ ಪಲ್ಗಡಿದು ಕಲುಷದೈತ್ಯರನೆಲ್ಲ
ಚರಚರನೆ ಸೀಳಿ ಸಂಭ್ರಮದಿಂದ
ಬಿರಬಿರನೆ ಕಣ್ಬಿಡುತ ಬಿಂಕದಲಿ ಲಂಕೆಯನು
ಸುರಸುರನೆ ಬಾಲದಲಿ ಸುಟ್ಟ ರಣದಿಟ್ಟ ||
ಫಳಫಳನೆ ಆರ್ಭಟದಿಂದ ರಾವಣನ
ನಳನಳನೆ ಬೆಳೆದ ನಂದನವ
ಕಿತ್ತುಖಳಖಳನೆ ನಗುತ ದಶಕಂದರನ ಗುದ್ದಿ
ಬಂದೆಭಳಿಭಳಿರೆ ಹಯವದನ ದಾಸ ನಿಸ್ಸೀಮ ||
***
No comments:
Post a Comment