Audio by Mrs. Nandini Sripad
ಗುರುವಿಜಯವಿಟ್ಠಲ ಅಂಕಿತ ಶ್ರೀ ಮೊದಲಕಲ್ಲು ಶೇಷದಾಸಾರ್ಯ ವಿರಚಿತ ಮಖ ಸುಳಾದಿ - ರಾಗ ಕಲ್ಯಾಣಿ
(ಜ್ಞಾನಯಜ್ಞ ಸುಳಾದಿ - ಆಧ್ಯಾತ್ಮ ಉಪಾಸನೆ)
ಧ್ರುವತಾಳ
ಮಖವನ್ನೇ ಮಾಡುವದು ಮರ್ಮವ ನೀನರಿತು
ವಿಖನಸಾರ್ಚಿತಪಾದ ಮನದಿ ನಿಲಿಸಿ
ಕಕುಲಾತಿಯನ್ನೆ ಬಿಟ್ಟು ದುರುಳರಿಗರುಹದಲೆ
ಭಕುತಿಯಿಂದಲಿ ಯಜಿಸು ಸ್ನೇಹದಿಂದ
ನಖಶಿಖ ಪರಿಪೂರ್ಣ ಹರಿ ತಾನು ವಿಧಿಶಿವಾದಿ
ಕೃಕವಾಕ ಮೊದಲಾದ ಅಶೀತಿ ನಾಲ್ಕುಲಕ್ಷ
ಸಕಲ ಜೀವಿಗಳಲ್ಲಿ ತನ್ನಾಮ ತದ್ರೂಪ
ಸಖನಾಗಿ ಧರಿಸಿ ತತ್ತಚ್ಚೇಷ್ಟೆಗಳ
ಯುಕುತಿಯಿಂದಲಿ ಮಾಳ್ಪ ಅಂಬಸಪದ್ಮಮಿವ ಆ -
ಸಕುತಿಯಿಂದಲಿ ಗ್ರಹಿಸೊ ಮುಖ್ಯವಾಗಿ
ತ್ವಕು ಮೊದಲಾದ ಧಾತು ಕರಣಾ ದೇಹದಲ್ಲಿ ಅ -
ನೇಕ ರೂಪಗಳಿಂದ ವ್ಯಾಪ್ತನಾಗಿ
ಪ್ರಕೃತಿ ಕಾಲ ಕರ್ಮ ಜೀವ ಲಕ್ಷಣದಂತೆ
ಸಖನಾಗಿ ಮಾಡಿ ತಜ್ಜನಿತವಾದ
ಸುಖ ದುಃಖ ಫಲ " ಅನಶ್ನನ್ " ಎಂಬೊ ಶೃತಿಯಂತೆ
ಏಕಮೇವನು ಉಣದೆ ಜೀವರಿಗೆ
ಹಾಕುವ ತೆರ ಆತ್ಮೋಪಮ್ಯೇನ ಸರ್ವತ್ರ
ಲೋಕ ಲೋಕಾದಿ ತಿಳಿಯೋ ಇನಿತು ನೀನು
" ಯೋಂತಶ್ಚರತಿ ಭೂತಾತ್ಮಾ ಯಸ್ತಪತ್ಯಂಡ ಮಧ್ಯಗಃ "
ಶುಕಮುನಿ ವಾಕ್ಯದಂತೆ ದೃಢದಿ ನಂಬೊ
ಶಕತನಾದ ಹರಿ ನಿಂದು ಮಾಡಿಸದಿರೆ
ಲಕುಮಿ ವಿರಂಚಿ ಭವ ಶಕ್ರಾದ್ಯರು ಅ -
ಶಕ್ತರಯ್ಯಾ ಶ್ವಾಸ ಬಿಡಲು ಯೋಗ್ಯರಲ್ಲ
ಪ್ರಕಟವಾಗಿದೆ ಶ್ರುತಿ ಶಾಸ್ತ್ರದಲ್ಲಿ
ಮುಕುತಿಗೆ ದ್ವಾರವಿದು ಇನಿತು ತಿಳಿವ ನರ
ರಿಕತನಲ್ಲವೊ ಬಲು ಭಾಗ್ಯಾಧಿಕನು
ಭಕುತಿಯಿಂದಲಿ ಅಲ್ಪ ಜಲವ ಕೊಡುವನ್ಯಾಕೆ
ವಿಖನಸಾಂಡ ದಾನವಿತ್ತ ಫಲಕ್ಕೆ ಅ -
ಧಿಕಾರಿಯಾಗುವನು ಸಂಸಾರ ಮುಕ್ತನಾಗಿ
ಶಕಟಭಂಜನ ಕರವ ಪಿಡಿವ ಬೇಗ
ಕೃಕಳಂತರ್ಯಾಮಿ ಗುರುವಿಜಯವಿಟ್ಠಲರೇಯ
ಮಖಶಬ್ದವಾಚ್ಯನು ಮಖಭೋಕ್ತನು ॥ 1 ॥
ಮಟ್ಟತಾಳ
ವಾಜಪೇಯ ಪೌಂಡರೀಕ ಮೊದಲಾದ
ರಾಜಸ ಯಜ್ಞಗಳು ಬಲು ವಿಧವಾದಂಥ
ವ್ಯಾಜಗಳಲ್ಲದಲೆ ಸರ್ವರಿಗೊಶವಲ್ಲ ಸ -
ಹಾಜವಾಗಿದ್ದ ರಜೋಗುಣ ಕರ್ಮಗಳು
ರಾಜಿಸುವ ಸತ್ವಗುಣ ಮಿಶ್ರವಿಲ್ಲದಲೆ
ಭೋಜಕುಲೋತ್ತಮನ ಪ್ರೀತಿಯಾಗದು ಕೇಳಿ ವೈ -
ರಾಜವಾದ ಜ್ಞಾನದ ವ್ಯತಿರಿಕ್ತ
ರಾಜೀವ ಪೀಠ ಮಿಕ್ಕಾದವರೆಲ್ಲ
ನೈಜವಾದ ಗತಿ ಐದರು ಎಂದಿಗೂ
ರಾಜೀವ ಮಿತ್ರ ಗಗನದಿ ಉದಯಿಸದೆ ಆ -
ರಾಜಿತವಾದ ತಮ ಓಡದು ಎಂದಿಗೂ
ಬೀಜಮಾತಿದು ಕೇಳಿ " ನಹಿ ಜ್ಞಾನೇನ ಸದೃಶಂ "
ಸುಜನರು ಇದನ್ನು ನಿರ್ವ್ಯಾಜದಿ ತಿಳಿದು
ಮೂರ್ಜಗದೊಡೆಯನ್ನ ಪೂಜಿಸು ಜ್ಞಾನದಲಿ
ವಾಜಿವದನ ಗುರುವಿಜಯವಿಟ್ಠಲರೇಯನ
ಆಜನ್ಮವ ಭಜಿಸೆ ಅವಗಾವದು ಸಮ ॥ 2 ॥
ರೂಪಕತಾಳ
ಸ್ನಾನವಿಲ್ಲದ ಕರ್ಮ ಎಣಿಕೆಯಿಲ್ಲದ ಜಪ
ಪಾನಯಿಲ್ಲದ ಅನ್ನದಾನದಂತೆ
ಜ್ಞಾನವಿಲ್ಲದ ಕರ್ಮ ಏನೇನು ಮಾಡಲು
ಮಾಣದೆ ಗಜಭುಕ್ತ ಕಪಿತ್ಥವತು " ಕ -
ರ್ಮಣಾ ಜ್ಞಾನಮಾಪ್ನೋತಿ ಜ್ಞಾನೇನ ಅಮೃತೀ ಭವತಿ "
ಈ ನುಡಿ ಪ್ರಮಾಣದಂತೆ ಜನರು ಕೇಳಿ
ಜ್ಞಾನ ಮಾರ್ಗದಿಂದ ಹರಿಯ ಯಜಿಸೋ
ಗೌಣಾವಧಿಕವಾದ ಅಧಿಷ್ಠಾನಗಳ ಗ್ರಹಿಸು
ಆನಂದತೀರ್ಥರ ವಾಕ್ಯದಂತೆ
ಸಾನುರಾಗದಿ ಶ್ರುತಿಗೆ ಅಪ್ರಾಮಾಣ್ಯ ಬರಲೀಯದೆ
ಧೇನಿಸು ಹರಿವ್ಯಾಪ್ತಿ ಜಡ ಚೇತನದಿ ಅ -
ಜ್ಞಾನಿ ಜನರೊಳು ಬೆರೆದಿದ್ದ ಕಾಲಕ್ಕು
ಮನಸಿನಲ್ಲಿ ವ್ಯಾಪ್ತಿ ಮರಿಯದಿರು
ಏನೇನು ಕರ್ಮಗಳು ಲಕುಮಿನಾರೇಯಣರು
ಪ್ರಾಣದೇವರ ದ್ವಾರ ಮಾಳ್ಪರೆನ್ನು
ಪ್ರಾಣನಾಥನು ಖಗ ಅಹಿಪೇಶ ಮೊದಲಾದ
ಸುಮನಸರಿಂದಲಿ ಮಾಳ್ಪನೆನ್ನು
ಗೌಣರಿಗಧಿಕರು ಪ್ರೇರಕರಾಗಿಹರು
ಕಾಣಿಸದಿಪ್ಪರು ಮಂದರಿಗೆ
ಜ್ಞಾನ ಪ್ರಾಪುತವಾಗೆ ಪ್ರತ್ಯಕ್ಷವಾಹರು
ದಾನವಾಂತಕಗಿವರು ಅಧಿಷ್ಠಾನರು
ಸ್ಥಾಣು ಚೇತನ ಮಿಕ್ಕ ಆವಾವ ಸ್ಥಳದಲ್ಲಿ
ಮಾಣದೆ ತಿಳಿ ಇನಿತು ಲಕ್ಷಣದಿ
ಜ್ಞಾನಿಗಳರಸ ಗುರುವಿಜಯವಿಟ್ಠಲರೇಯ
ಪ್ರಾಣಿಗಳಲ್ಲಿ ವ್ಯಾಪ್ತನಾಗಿಹನು ॥ 3 ॥
ಝಂಪೆತಾಳ
ಸಾಧನದೊಳಧಿಕ ಸಾಧನಾವೆನಿಸುವದು
ಸಾದರದಿ ಕೇಳುವದು ವಿಬುಧರೆಲ್ಲ
ಮೇದಿನಿಯೊಳಗಿದ್ದ ಖಳರು ಅಹಂಕಾರದಲಿ
ಗೋ ಧನ ಮೊದಲಾದ ಮಹದಾನವ
ಕ್ರೋಧಾದಿ ಗುಣದಿಂದ ಇತ್ತರಾದಡೆ ಅವಗೆ
ಮೋದವಾಹದೆಂತೊ ಇಹಪರದಿ
ಸಾಧುಗಳು ಇದು ತಿಳಿದು ಜ್ಞಾನಾಖ್ಯ ಸುಧಿಯನ್ನು ಆ -
ಸ್ವಾದಿಪರು ಕ್ರೋಧಾದಿ ಗುಣವ ಮರೆದು
ಶ್ರೀಧರನು ತನ್ನ ನಿಜ ಸಂಕಲ್ಪದಿಂದಲ್ಲಿ ಅ -
ನಾದಿ ಕರ್ಮ ಪ್ರಕೃತಿ ಕಾಲ ಜೀವ
ಅಧಿಕಾರವನರಿತು ಕೊಟ್ಟದಕೆ ಮತ್ತಧಿಕ ಬೇ -
ಡದಲಿರು ಶ್ರೀಶನಾಜ್ಞವೆಂದು
ಯದ್ರಿಚ್ಛ ಲಾಭದಿಂ ಸಂತುಷ್ಟನಾಗಿ ನೀನು
ಮೋದ ವೈದು ಇದ್ದ ವಿಭವದೊಳು
ಅಧಿಕಾಧಿಕವಾದ ಜ್ಞಾನವಾಪೇಕ್ಷಿಸುತ
ಬೋಧಕರ ಸಂಗದಲಿ ಬೆರೆದು ನೀನು
ಮೇದಿನಿ ಸುರರನ್ನು ಕರೆದು ಮನ್ನಿಸಿ ಪರಮ
ಆದರದಿ ಅನ್ನೋದಕವ ಕೊಡಲು
ಮೋದಮಯ ತಾನುಂಡು ಕೋಟ್ಯಾಧಿಕವಾದ
ಸಾಧು ಯಜ್ಞದ ಫಲವು ತಂದು ಉಣಿಪ
ಮಾಧವನ ಅರ್ಚನೆಗೆ ಭೂಸುರೋತ್ತಮ ತಾನು
ಅಧಿಷ್ಠಾನವೆಂದು ಗ್ರಹಿಸೋ ನೀನು
ಮೇದಿನಿ ಮೇಲಿದ್ದ ಕ್ಷೇತ್ರ ಮೂರುತಿ ಬಿಟ್ಟು
ಸಾದರದಿ ಕ್ಷೇತ್ರವನ್ನು ಭಜಿಸಿದವಗೆ
ಖೇದವಲ್ಲದೆ ಅವಗೆ ಮೋದವಾಹದೇನೋ
ಮೇದಿನಿ ಸುರರಲ್ಲಿ ವ್ಯಾಪ್ತನಾದ
ಆದಿದೇವನ ತುತಿಸಿ ಷೋಡಶೋಪಚಾರ
ಈ ದ್ವಾರದಲಿ ಮಾಡುವದು ಜ್ಞಾನದಿಂದ
ವೈದರ್ಭಿರಮಣ ಗುರುವಿಜಯವಿಟ್ಠಲರೇಯನ
ಸಾಧಿಸೀಪರಿಯಿಂದ ತಿಳಿದು ನೀನು ॥ 4 ॥
ತ್ರಿವಿಡಿತಾಳ
ಮೇಲಭಾಗದಲ್ಲಿ ಶಿರಸ್ಸಿನಲ್ಲಿಗೆ ದ್ವಿದಶಾಂ -
ಗುಲಿ ಮೇಲೆ ದ್ವಿದಶ ದಳಯುಕ್ತ
ಕೀಲಾಲಜ ಉಂಟು ಚಂದ್ರಪ್ರಕಾಶದಂತೆ
ಮೂಲರೂಪನಾದ ವಾಸುದೇವಾ
ಆಲಯವೆನಿಪದು ಮುಕ್ತಾಮುಕ್ತರಿಂದ
ವಾಲಗಗೊಳುತಿಪ್ಪ ಸರ್ವಸಾಕ್ಷಿಯಾಗಿ
ಬಾಲಮತಿಯ ಬಿಟ್ಟು ಗುರುಮುಖದಿಂದ ತಿಳಿದು
ಕಾಲಕಾಲಕೆ ತಿಳಿ ಸ್ವ ಪರದೇಹದಲ್ಲಿ
ಖೂಳ ಜನರಿಗೆ ಕುರುಹು ಕಾಣಿಸದಲೆ
ವ್ಯಾಳೆ ವ್ಯಾಳೆಗೆ ಪರಮ ಭಕುತಿಯಿಂದ
ಶೀಲಮೂರುತಿಯ ಧೇನಿಸಿ ನೀನಿತ್ತ
ಸ್ಥೂಲರಸವನ್ನು ಸ್ವೀಕರಿಸು ಎಂದು
ಲೋಲ ಮನಸ್ಸಿನಿಂದ ಬೇಡಿಕೊಳ್ಳಲು ಹರಿ
ವಾಲಗ ಸಹವಾಗಿ ಪ್ರೀತನಾಗಿ
ಆಲಸವಿಲ್ಲದಲೆ ತೃಣ ಮೇರು ಮಾಡಿ ತನ್ನ
ಆಲಯದಲಿ ವಾಸ ಮಾಡಿಸುವನು
ಹೇಳನ ಬುದ್ಧಿಯಿಂದ ಇದನು ತಿಳಿಯದಲೆ
ಸಾಲು ಕೋಟಿಗೆ ಅನ್ನವಿತ್ತೆನೆಂದು
ಬಾಲಮತಿಗಾನು ಬರಿದೆ ಅಹಂಕಾರದಿಂದ
ಪ್ರಲಾಪಿಸಿದರೆ ಹರಿ ತುಷ್ಟನಾಹನೆ
ವ್ಯಾಳವ್ಯಾಘ್ರನಾಮ ಗುರುವಿಜಯವಿಟ್ಠಲರೇಯನ
ಲೀಲೆ ಇನಿತೆಂದು ಸ್ಮರಿಸಿ ಬದುಕೋ ॥ 5 ॥
ಅಟ್ಟತಾಳ
ಸತ್ಯಲೋಕವು ಶೀರ್ಷದಲ್ಲೆ ಇಪ್ಪದು ಕೇಳಿ
ಸತ್ಯಲೋಕಾಧಿಪನು ಸಹಸ್ರರೂಪನ್ನ
ಭಕ್ತಿಯಿಂದಲಿ ಭಜಿಪ ಸಾಸಿರ ಕೇಸರ
ಯುಕ್ತವಾದ ಕಮಲ ಮಧ್ಯದಿ ಪೊಳೆವನ್ನ
ಕೃತ್ತಿವಾಸನು ಮೊದಲಾದ ಗೀರ್ವಾಣರು
ಭೃತ್ಯರಾಗಿ ಸೇವೆ ಮಾಳ್ಪರು ಕ್ರಮದಿಂದ
ಉತ್ತಮೋತ್ತಮ ದೇವಾ ಪರಿವಾರ ಸಮೇತ
ತುತ್ತಿಸಿಕೊಳ್ಳುತ್ತ ವ್ಯಕ್ತವಾಗಿಹನು ಧಾ -
ರಿತ್ರಿಯೊಳಗೆ ಇದು ತಿಳಿದ ಮನುಜನು
ಮೃತ್ಯು ರೂಪವಾದ ಸಂಸಾರ ದೂರನು
ಪಾರತ್ರಿಕವಾದ ಸುಖದಿ ನಿತ್ಯನು ಕಾಣೊ
ಈ ತೆರದಿಂದಲಿ ತಿಳಿದು ಈ ಬಗೆಯಿಂದ
ತೃಪ್ತರಾಗೆಂದೆನ್ನೆ ಭಕ್ತಿಗೆ ವಶನಾಗಿ
ಉಕ್ತಿ ಲಾಲಿಪದೈಯ್ಯಾ ಉದಾಸೀನ ಮಾಡದೆ
ಕರ್ತೃನೆನಿಪ ಗುರುವಿಜಯವಿಟ್ಠಲರೇಯ
ಸತ್ಯವಾದ ಪದ ಐದಿಪ ಶೀಘ್ರದಿ ॥ 6 ॥
ಆದಿತಾಳ
ದ್ವಿದಳಯುಕ್ತವಾದ ಕಿಂಜಲ್ಕ ಫಾಲಭಾಗ
ಮಧ್ಯದಲಿ ಇಪ್ಪದು ಇದನೇವೆ ತಪೊಲೋಕ
ಯದುಕುಲಶ್ರೇಷ್ಠ ತಾನು ಲೋಕಾಧಿಪತಿ ಮಿಕ್ಕ
ಆದಿತ್ಯರಿಂದ ಸೇವೆಗೊಂಬುವ ನಿತ್ಯದಲ್ಲಿ
ಆದರದಲಿ ತಿಳಿ ಸ್ವಪರ ದೇಹದಲ್ಲಿ
ಭೂದೇವತಿಗಳ ಪ್ರಿಯ ಗುರುವಿಜಯವಿಟ್ಠಲರೇಯನ್ನ
ಪದಗಳ ಧೇನಿಸು ಈ ಬಗೆಯಿಂದ ತಿಳಿದು ॥ 7 ॥
ಧ್ರುವತಾಳ
ಇಂದ್ರಯೋನಿಯಲ್ಲಿ ಷೋಡಶದಳ ಅರ -
ವಿಂದ ಶೋಭಿಸುವದು ಧವಳ ವರ್ಣ -
ದಿಂದ ಪೊಳೆವದು ಇದನೇವೆ ಜನೋಲೋಕ -
ವೆಂದು ಕರೆವರು ವಿಬುಧರೆಲ್ಲ
ಹೊಂದಿಕೊಂಡಿಪ್ಪನು ಲಕುಮಿ ನಾರಾಯಣ
ವೃಂದಾರಕ ಶ್ರೇಷ್ಠ ಅಹಿಪದೇವ -
ರಿಂದ ಪೂಜೆಯಗೊಂಬ ನವವಿಧ ಭಕುತಿಯಿಂದ
ಕಂದುಕಂಧರ ಮಿಕ್ಕ ದಿವಿಜರೆಲ್ಲ
ವಂದಿಸಿಕೊಳುತಲಿ ಆನಂದದಲಿಹರು
ತಂದು ಈವರು ಫಲವ ತಿಳಿದವರ್ಗೆ
ಚಂದ್ರಕಲಾಭಿಮಾನಿ ದಿವಿಜರ ಸಂತತಿ
ಮಂದಿರವೆನಿಪದು ಆವಕಾಲಾ
ಕುಂದು ಜನರ ಮನಕೆ ಎಂದಿಗೂ ತೋರನಯ್ಯ ನಿ -
ಸ್ಸಂದೇಹದಲ್ಲಿ ನಂಬಿದವಗೆ
ಮುಂದೊಲಿದು ಪೊಳೆವನು ವೇದೈಕವೇದ್ಯನು
ಒಂದಿಷ್ಟು ಅಹಂಕಾರ ಬಂದೊದಗೆ
ಇಂದ್ರಗಾದರು ಶಿಕ್ಷೆ ಮಾಡದೆ ಬಿಡನಯ್ಯ
"ಚಂದ್ರ ಶತಾನನ ಕುಂದ ಸುಹಾಸ
ವಂದಿತ ದೈವತ ಆನಂದ ಸಂಪೂರ್ಣ"
ಎಂದೆಂದು ಬಿಡದೆ ಎಮ್ಮ ಸಲಹುತಿಪ್ಪ -
ನೆಂದು ಕೊಂಡಾಡಿ ಪರಮ ಭಕುತಿಯಿಂದಲಿ ನಮಿಸಿ
ಎನ್ನಿಂದಲಿ ಪ್ರೀತನಾಗು ಎಂದು ಬೇಡೆ
ಇಂದಿರಾಪತಿ ತನ್ನ ಪರಿವಾರ ಸಹಿತ
ನಿಂದು ತೃಪ್ತನಾಹ ಭಕುತಿ ಪಾಶ -
ದಿಂದ ಕಟ್ಟಿಸಿಕೊಂಬ ಸ್ವತಂತ್ರ ಪುರುಷನಾಗೆ
ಮಂದತನವ ಬಿಟ್ಟು ಇದನೇ ಗ್ರಹಿಸು
ಕಂದರ್ಪ ಕೋಟಿರೂಪ ಗುರುವಿಜಯವಿಟ್ಠಲರೇಯ
ಬಂಧುನೆನಿಪ ಭಕುತ ನಿಕರಕೆಲ್ಲ ॥ 8 ॥
ಮಟ್ಟತಾಳ
ಉರದಲ್ಲಿ ದ್ವಾದಶ ದಳ ಪದುಮ ಉಂಟು
ಕರೆಸುವದು ಇದನೆ ಮಹರ್ಲೋಕವು ಯೆಂದು
ಹರಿನಾಮಕ ಮಿಕ್ಕಾ ಭಗವದ್ರೂಪಗಳು
ಮಿರುಗುತಿವೆ ನೋಡು ಭೇದಗಳಿಲ್ಲದಲೆ
ಪುರವೈರಿ ತನ್ನ ನಿಜಸತಿ ಸಹಿತದಲಿ
ಪರಮ ಭಕುತಿಯಿಂದ ವಾಲ್ಗೈಸುತಲಿಹನು
ಸುರಪತಿ ಮಿಕ್ಕಾದ ದಿವಿಜರ ಸಂಘವನ್ನು
ಪರಿತೋಷದಲಿಂದ ಪೂಜೆಯ ಮಾಡುವರು
ನರನೆ ಈ ಪರಿ ತಿಳಿದು ಕರವ ಮುಗಿದು ನಮಿಸಿ
ಪರಿತೃಪ್ತಿಯನೈದು ನೀನಿತ್ತ ರಸದಿಂದ
ಪರಿಪೂರ್ಣನಾದರೂ ಭಕ್ತರ ವಶನಾಗಿ
ಸ್ವೀಕರಿಸುವನು ಬಿಡದೆ ನಿತ್ಯತೃಪ್ತನಾಗೆ
ಪರಿಪೂರ್ಣಮೂರುತಿ ಗುರುವಿಜಯವಿಟ್ಠಲರೇಯ
ಸಾರಹೃದಯ ನೋಡಿ ಸ್ವೀಕೃತನಾಗುವ ॥ 9 ॥
ತ್ರಿವಿಡಿತಾಳ
ಹೃದಯದಲಿ ಅಷ್ಟದಳದ ಪದುಮ ಉಂಟು
ಉದಯಾದಿತ್ಯ ವರ್ನದಂತಿಪ್ಪದೋ
ಇದನೇವೆ ಸ್ವರ್ಲೋಕವೆಂಬುವರು ಜ್ಞಾನಿಗಳು
ತ್ರಿದಶಾಧಿಪತಿಯಾದ ಇಂದ್ರ ಮಿಕ್ಕ
ಆದಿತೇಯರಿಂದ ಪೂಜೆಯ ಗೊಂಬುವನು
ಮೋದಸಾಂದ್ರನು ಲಕುಮಿ ನಾರಾಯಣ
ಆದಿಮೂರುತಿ ಕೇಶವಾದಿ ಚತುರ ದ್ವಿದಶ ಮ -
ತ್ಸ್ಯಾದಿ ರೂಪವು ಮಿಕ್ಕಾ ವರ್ಣಾ ಪ್ರತಿ -
ಪಾದನ ರೂಪ ಸ್ವಮೂರ್ತಿಗಣ ಮಧ್ಯಗನಾಗಿ
ಆ ದಿಕ್ಪಾಲಕರಿಂದ ಪೂಜಿಗೊಳುತ
ಪದೋಪದಿಗೆ ಬಂದು ಪ್ರಹರಿಯಾ ತಿರುಗುತ್ತ
ಸದಾಕಾಲದಲ್ಲಿ ವಿಹಿತಾವಿಹಿತ ಮಾಳ್ಪ
ಇದು ಮೀರಲೊಶವಲ್ಲ ವಿಧಿ ಭವ ನಿರ್ಜರರು
ಇದೇ ಮಾರ್ಗದಿಂದ ಸಂಚರಿಸುವರು
ಇದೇ ಮೂಲಪತಿ ಪದಕೆ ಅಭಿಮುಖನಾಗಿ ಪ್ರಾಣ
ಪಾದವ ಆಶ್ರೈಸಿ ಇಪ್ಪ ಜೀವ ತಾನು
ಐದು ದ್ವಾರದಲಿ ಪಂಚರೂಪನಾದ
ಬೋಧ ಮೂರುತಿ ಪ್ರಾಣರುಂಟು ಕೇಳಿ
ಮೊದಲ ದ್ವಾರದಲ್ಲಿ ಪ್ರಾಣನಾಶ್ರಯದಿ ಪುಷ್ಕ -
ರಾದ್ಯರು ಅನಿರುದ್ಧನ ನೋಳ್ಪರಯ್ಯಾ
ಸುದಕ್ಷಿಣ ದ್ವಾರದಲಿ ಅಪಾನಾಂತರ್ಗತ
ಪ್ರದ್ಯುಮ್ನನ ನೋಳ್ಪರು ಋಷಿಗಳೆಲ್ಲ
ಆದರದಲಿ ಕೇಳೊ ಮೂರನೆ ದ್ವಾರದಲಿ
ಅರಿದಲ್ಲಣ ವ್ಯಾನಾಂತರ್ಗತ ಸಂಕರುಷಣನ್ನ
ವಿಧಿಯಿಂದ ನೋಳ್ಪರು ಪಿತೃದೇವತೆಗಳು
ಮುದದಿಂದ ತಿಳಿವದು ನಾಲ್ಕನೆ ದ್ವಾರದಲ್ಲಿ ಜ -
ಗದ ಸೂತ್ರನೆನಿಪ ಸಮಾನಂತರ್ಗತನಾದ ವಾ -
ಸುದೇವನ ತುತಿಪರು ಗಂಧರ್ವ ಗಣರು
ಐದನೆ ದ್ವಾರ ಊರ್ಧ್ವ ಭಾಗದಲ್ಲಿಪ್ಪದು
ಉದಾನಾಂತರ್ಗತ ಲಕ್ಷೀನಾರಾಯಣನಾ
ಮದನವೈರಿ ಮಿಕ್ಕ ಸುರರೆಲ್ಲ ವಂದಿಪರು
ಮೊದಲು ಪೇಳಿದ ನಾಲ್ಕು ದ್ವಾರದಲ್ಲಿ
ನಂದ ಸುನಂದನ ಮೊದಲಾದ ಅಷ್ಟ ಜನ
ಆದಿದೇವನ ಪ್ರಥಮ ದ್ವಾರದಲ್ಲಿ
ಇದರ ಮೇಲೆ ಮೂರು ಮಂಡಲ ವುಂಟು ಕೇಳು ಮ -
ತ್ತಿದರ ಮೇಲೆ ವಿಶಾಲ ದೇಶವುಂಟು ಆ
ಪ್ರದೇಶದಲ್ಲಿ ನೂರು ಖಂಬದ ತೇರು
ಉದಯಾರ್ಕನಂತಾದಂತೆ ಪೊಳೆವುವದೊ ಚಿ -
ನ್ನದ ದಾಮದಿಂದ ವಿರಾಜಿಸುವ ಘಂಟಾ
ನಾದದಿಂದೆಸೆವುತಿದೆ ಮುತ್ತಿನ ಗೊಂಚಲ -
ದಿಂದ ಬೆಳಗುತಿದೆ ಚಂದ್ರಪ್ರಕಾಶದಂತೆ
ಮುದದಿ ಶೋಭಿತವಾದ ರಥದ ಮಧ್ಯ
ಅದುಭೂತವಾದ ಮಹಿಮ ಪ್ರಾಜ್ಞನಾಮಕ ತಾನು
ವಿಧಿಭವಾದಿಗಳಿಂದ ಪೂಜೆಗೊಳುತ
ಒದಗಿ ತುತಿಪ ಜನಕೆ ಅಭಯ ಕೊಡುವನಾಗಿ ಈ ತೆ -
ರದಿ ನಿಂದಿಹ್ಯ ಕರುಣಾವನಧಿ ಹರಿ
ಪ್ರಾದೇಶ ಪರಿಮಿತ ಹರಿ ತಾನು ನಿಂದು
ಈ ದೇಹ ರಕ್ಷಿಪನು ನಾಳದಲಿ ನಿಂತು
ವಿಧಿಭವ ಸುರರಿಂದ ವಂದಿತನಾಗಿ ಹರಿ
ಹೃದಯದೊಳಗೆ ಇರಲು ತಿಳಿಯದಲೆ
ಉದಯಾಸ್ತಮಾನ ಬರಿದೆ ಸಾಧನ ಮಾಡುವನ್ನ
ಹದುಳತನಕೆ ನಾನೇನೆಂಬೆನೋ
ಉದಯಾರ್ಕ ಪ್ರಭಾ ಗುರುವಿಜಯವಿಟ್ಠಲನ್ನ
ಒದಗಿ ಬೇಡಿಕೊ ತೃಪ್ತನಾಗು ಎಂದು ॥ 10 ॥
ಅಟ್ಟತಾಳ
ನಾಭಿ ಸ್ಥಾನದಲ್ಲಿ ಆರುದಳದ ಪದ್ಮ
ಶೋಭಿಸುತಿಪ್ಪದು ಭುವರ್ಲೋಕ ನಾಮದಿಂದ ನೀ -
ಲಾಭ ಮೊದಲಾದ ಚತುರ ರೂಪಂಗಳು
ನಾಭಿಜಾತನ್ನ ಸಮನಾದ ದೇವನೊಳು
ಶೋಭಿಸುತಿಪ್ಪನು ಪ್ರದ್ಯುಮ್ನ ದೇವನು
ಸುಭಕುತಿಯಿಂದ ಗಣಪತಿ ಸೇವಿಪ
ನಾಭಿಸಂಭವ ಮೊದಲಾದ ದೇವತೆಗಳು
ವೈಭವದಿಂದಲಿ ವಂದಿಪರು ಪದುಮ -
ನಾಭನ ಸತಿಯರು ಆರು ಜನರು ಉಂಟು
ಸೌಭಾಗ್ಯವಂತನು ಇದು ತಿಳಿದವ, ಮುಖ್ಯ
ನಿರ್ಭಾಗ್ಯನೆ ಸರಿ ಈ ಸೊಬಗು ತಿಳಿಯದವ
ತ್ರಿಭುವನದೊಡಿಯ ಗುರುವಿಜಯವಿಟ್ಠಲರೇಯ
ಸಾಭಿಮಾನದಿಂದ ಪೊರೆವನೋ ತಿಳಿದರೆ ॥ 11 ॥
ರೂಪಕತಾಳ
ಮೂಲಸ್ಥಾನದಲ್ಲಿ ಚತುರದಳ ಕಮಲ ಪ್ರ -
ವಾಳ ಮಾಣಿಕ ವರ್ನದಂತಿಪ್ಪದು
ಭೂರ್ಲೋಕವಿದು ಯೆಂದು ಕರೆವರು ವಿಬುಧರು
ನೀಲೋತ್ಪಲ ಶ್ಯಾಮನಾಳುಗಳು
ನಾಲ್ಕು ನಾಡಿಗಳಲ್ಲಿ ನಾಲ್ಕು ರೂಪದಿ ಹರಿ
ನಾಲ್ಕು ವೇದಗಳಿಂದ ತುತಿಸಿಕೊಳುತ
ಮೇಲೆನಿಪ ಸುಷುಮ್ನದಲಿ ನಾರಾಯಣ ಲಕುಮಿ
ಕೀಲಾಲಜ ಮಿಕ್ಕ ಸುರರಿಂದಲಿ
ವಾಲಗ ಕೊಳುತಿಪ್ಪ ಆನಂದ ಪೂರ್ಣನು
ಶೀಲ ಭಕುತಿಯಿಂದ ಮನು ಶ್ರೇಷ್ಠನು
ನೀಲಾಭನನಿರುದ್ಧನರ್ಚಿಪ ನಿರುತ ಸ -
ಲೀಲಜಕೆ ಅಭಿಮಾನಿ ಎನಿಸಿ
ಕಾಲಚಕ್ರದ ತೆರದಿ ಜಡವಾಯು ತಾನಿಂದು
ಮೇಲಧೋ ಭಾಗದಲಿ ತಿರುಗುವದು
ಮೂರ್ಲೋಕನಾಥನು ಇನಿತು ವ್ಯಾಪಕನಾಗಿ ವಿ -
ಶಾಲ ಕರುಣದಿಂದ ಸಲಹುತಿರೆ
ಬಾಲಮತಿಗರಾಗಿ ಗ್ರಹಿಸದಿರುವ ಮನುಜ
ವ್ಯಾಳ ವ್ಯಾಘ್ರನೆ ಸರಿ ನರನಾದರೂ
ಹೂಳುವ ನಿರಯ ನಿತ್ಯದಲ್ಲಿ ಯಮ ತಾನು
ಬಾಳುವನೆಂತೋ ಮುಕ್ತಿ ಪಥದಿಂದಲಿ
ಕೀಲು ಕೀಲಿಗೆ ನಿಂದು ವ್ಯಾಪಾರ ಮಾಳ್ಪನ್ನ
ಆಲೋಚಿಸಿ ತಿಳಿಯದೆ ವ್ಯರ್ಥವಾಗಿ
ಸಾಲು ಕರ್ಮವ ಮಾಡೆ ಅವನ ಸಾಹಸವನ್ನು
ಸೂಳಿಗಿಕ್ಕಿದ ಧನದಂತೆ ನೋಡೊ
ಪಾಲಸಾಗರ ಶಾಯಿ ಗುರುವಿಜಯವಿಟ್ಠಲನ್ನ
ಲೀಲೆ ತಿಳಿದು ತೃಪ್ತನಾಗು ಇನ್ನು ॥ 12 ॥
ಝಂಪೆತಾಳ
ಊರು ದ್ವಯಗಳಲ್ಲಿ ಅತಳ ವಿತಳ ಲೋಕ
ಚಾರು ಜಾನುಗಳಲ್ಲಿ ಸುತಳ ಲೋಕ
ಸಾರ ಜಂಘದಿ ತಳಾತಳವು ಇಪ್ಪದು ನೋಡಿ
ಥೋರ ಗುಲ್ಫದಿ ಮಹಾತಳವು ಕೇಳಿ
ಸಾರುತಿದೆ ಪ್ರಪದದಲಿ ರಸಾತಳ ಲೋಕವೆಂದು
ಮೀರದಲೆ ಕೇಳೊ ಪಾತಾಳಲೋಕ
ತೋರುತಿದೆ ಪಾದಮೂಲದಲಿ ಸುಜನರುಗಳಿಗೆ
ಬರಿದೆ ಮಾತುಗಳಲ್ಲ ಶ್ರುತಿಸಿದ್ಧವೋ
ಮೂರುವರೆ ಕೋಟಿ ತೀರ್ಥಂಗಳುಂಟು ಅಂಗುಟದಿ
ಧಾರುಣಿಯ ಕೆಳಗಿಪ್ಪ ಜಲ ಸಂಜ್ಞದಿ
ನಾರಾಯಣನು ಕೂರ್ಮನಾಗಿ ಪೊತ್ತಿಹನಲ್ಲಿ
ಸಾರಸುಂದರ ಮೂರ್ತಿ ತೀರ್ಥಪಾದ
ನಾರಾಯಣನು ನಿಂದು ದೇಹ ದೇಹಂಗಳ
ಭಾರ ಪೊತ್ತಿಹ ಸಿರಿ ವಾಯು ಸಹಿತ
ಈ ರೀತಿ ಹರಿ ತನ್ನ ಪರಿವಾರ ಸಹಿತದಲಿ
ಶಾರೀರ ವ್ಯಾಪಾರ ಮಾಡುತಿರಲು
ಕ್ರೂರರಿದು ತಿಳಿಯದಲೆ ನಾನೇ ಸ್ವಾತಂತ್ರನೆಂದು
ಸಾರಿಸಾರಿಗೆ ನುಡಿವ ದುರುಳ ಜನರ
ಪೌರುಷಕೆ ಏನೆಂಬೆ ಸ್ವಾತಂತ್ರ ತಾನಾಗೆ
ಶಾರೀರಕೆ ವ್ಯಾಧಿ ಬರುವದ್ಯಾಕೋ
ಸರ್ವಕಾಲದಿ ಸುಖಾಪೇಕ್ಷ ಮಾಡುವ ನರಗೆ
ಮೀರಿ ತ್ರಯತಾಪದಲಿ ಬಳಲಿ ನರಕ
ಸೇರುವ ಬಗೆ ಯಾಕೆ ತೋರುತಿದೆ ಆಶ್ಚರ್ಯ
ಶಾರೀರ ಮೊದಲಾದ ಕರ್ಣಗಳು
ವಾರ ವಾರಕೆ ದೃಢವನಾಪೇಕ್ಷಿಯಾದವಗೆ
ಭರದಿ ಮಧ್ಯದಿ ನಾಶ ಬರುವದೇನೋ
ದೂರ ದೇಶಗಳೆಲ್ಲ ತಿರುಗಿ ಬರುವೆನೆಂದು
ಸಾರೆದಲಿ ಮೃತ್ಯು ವಶವಾಹದೇನೋ
ಸಾರೆ ದೂರುವ ಕಾಣದಿಪ್ಪ ಮೂಢನು ತಾನು ಅ -
ಪಾರ ಮಹಿಮೆಗೆ ಸಮಾನನೆನಿಸುವನೇ
ವರ ವಾದ ಪ್ರತ್ಯಕ್ಷ ಶಬ್ದನುಮಾನ ಅ -
ಪೌರುಷೇಯವಾದ ನಿಗಮಗಳಿಗೆ
ದೂರವಾಗಿಹ ಮಾತು ಸಜ್ಜನರ ಕಂಗಳಿಗೆ
ತೋರದಯ್ಯಾ ನಿಜವು ಎಂದೆಂದಿಗೆ ವೈ -
ಕಾರವಾಗಿದ್ದ ಚಿತ್ತ ವಿಭ್ರಮದಿಂದ
ಶಾರೀರ ಸ್ಮರಣೆಯನ್ನು ಇಲ್ಲದಿಪ್ಪ
ನರಾಧಮನು ತಾನು ನಾನಾ ವಾಕ್ಯವ ನುಡಿಯೆ
ಧೀರರಿಗೆ ಪ್ರಾಮಾಣ್ಯ ವೆನಿಸುವದೇ
ಕರವ ಚಲಿಸುವ ಶಕ್ತನಾಹದಿದ್ದವನಾಗಿ
ಮೇರು ಎತ್ತುವೆನೆಂಬ ಮೃಷವಾದಿ ತೆರದಿ
ವರಲಿ ಕೊಂಡದಕವನ ಮರಳಿ ನೋಡುವರಿಗೆ
ಸ್ವಾರಸ್ಯ ಎನಿಸುವದೆ ಎಂದಿಗನ್ನ
ಶ್ರೀರಮಣ ಸರ್ವೇಶ ಗುರುವಿಜಯವಿಟ್ಠಲರೇಯ
ಸಾರಿಗಾಣದೆಯಿದ್ದ ಸ್ವಾತಂತ್ರನೋ ॥ 13 ॥
ಧ್ರುವತಾಳ
ಪೆಟ್ಟಿಗೆಯೊಳಗಿಪ್ಪ ಮೂರ್ತಿಯ ಭಕುತಿಲಿ
ನಿಷ್ಠೆಯಿಂದಲಿ ಪೂಜೆ ಮಾಡಿಕೊಳುತ
ಇಷ್ಟ ಬೇಡುವದು ಸಹಜವೆ ಸರಿ ಬರಿದೆ
ಪೆಟ್ಟಿಗೆ ಪೂಜೆಯನ್ನು ಮಾಡಿ ತನ್ನ
ಇಷ್ಟ ವೈದುವೆನೆಂಬ ಸಾಹಸದಿಂದ ನೋಡಿ
ವಿಷ್ಣು ಸಕಲವಾದ ವಸ್ತುಗಳಲ್ಲಿ
ಧಿಟ್ಟನಾಗಿ ವ್ಯಾಪ್ತನಾಗಿ ಇರಲು ತಿಳಿಯದೆ ಅ -
ಶ್ರೇಷ್ಠವಾದ ಜೀವ ಸಂಘಗಳನು
ಮುಟ್ಟಿ ಭಜಿಸಿದರೆ ಶ್ರೇಷ್ಠರಾಗುವದೆಂತೊ
ಹೃಷ್ಟರಾಗರಯ್ಯಾ ಇಹಪರದಿ
ಧಿಟ್ಟಮೂರುತಿ ವ್ಯತಿರಿಕ್ತವಾಗಿ ಪರ -
ಮೇಷ್ಠಿ ಸುರರ ಪೂಜೆ ಸ್ವತಂತ್ರದಿ
ಶ್ರೇಷ್ಠವಾಗದಯ್ಯಾ ಶ್ರುತಿ ಸ್ಮೃತಿ ಸಮ್ಮತ ಶ್ರೀ -
ಕೃಷ್ಣನ ವಾಕ್ಯವುಂಟು " ಯೇಪ್ಪ್ಯೆನ್ನ ದೇವತಾ
ಭಕ್ತ್ಯಾಯಜಂತೆ ಶ್ರದ್ಧಯಾನ್ವಿತಾಃ
ತೇಪಿ ಮಾಮೇವ ಕೌಂತೇಯ ಯಜಂತ್ಯವಿಧಿಪೂರ್ವಕಂ "
ಸೃಷ್ಟಿಯೊಳಗೆ ಬ್ರಹ್ಮ ರುದ್ರಾದಿ ಸುರರ ಪೂಜಾ
ಪುಷ್ಟ ಷಾಡ್ಗುಣ್ಯ ತಾನೇ ಸ್ವೀಕರಿಸಿದರು
ಶಿಷ್ಟವಾದ ವಿಧಿ ಯೆನಿಸದು ಎಂದೆಂದಿಗೆ
ಹೃಷ್ಟ ಮನಸಿನಿಂದ ಗ್ರಹಿಸುವದು
ಶಿಷ್ಟರಾದವರನ್ನ ಭಜಿಸಿದ ಕಾಲಕ್ಕು ಅವರ ಹೃದ -
ಯಷ್ಟದಳದಲಿಪ್ಪ ದೇವನಲ್ಲಿ
ದೃಷ್ಟಿಯುಳ್ಳವನಾಗಿ ಮಾಡಿದ ಉಪಚಾರ
ಶ್ರೇಷ್ಠನಾದ ಹರಿಗೆ ಸಮರ್ಪಿಸು ಉ -
ತ್ಕೃಷ್ಟ ಮಹಿಮ ಗುರುವಿಜಯವಿಟ್ಠಲನ್ನ
ಬಿಟ್ಟು ಮಾಡಿದುದು ಅವಿಧಿಯು ॥ 14 ॥
ಮಟ್ಟತಾಳ
ಈ ವಿಧದಲಿ ತಿಳಿದು ಭಕುತಿಯಿಂದಲಿ ನೀನು
ದೇವದೇವನ ಯಜಿಸು ಜ್ಞಾನಪೂರ್ವಕದಿಂದ
ಆವ ಷಡ್ರಸದಿಂದ ಪೂರ್ಣನಾದ ಹರಿಗೆ
ಆವಾವ ಕಾಲದಲಿ ಆಪೇಕ್ಷೆಗಳಿಲ್ಲ
ಜೀವದ ನಿಮಿತ್ಯ ಸ್ಥೂಲಾನ್ನವ ಕೊಂಬ ಸ್ವ -
ಭಾವದಿಂದಲಿ ಹರಿ ಪರಿಪೂರ್ಣ ತಾನಾಗಿ
ಭುವನತ್ರಯವನ್ನು ನಿರ್ಮಾಣವ ಮಾಡಿ
ಪಾವಮಾನ ವಿಧಿ ಭವ ಇಂದ್ರಾದ್ಯರಿಗೆ
ಅವರವರ ಯೋಗ್ಯ ಪದವಿಯ ಕಲ್ಪಿಸಿ
ಆ ವಿಧಿ ಸ್ತಂಭ ಪರಿಯಂತವಾಗಿ
ಸುವಿಹಿತಾವಿಹಿತ ತೃಪ್ತಿಯ ನೀವಂಗೆ
ನಾವಿತ್ತನ್ನದಲಿ ಅಪೇಕ್ಷೆಗಳುಂಟೆ ?
ಸಾವಿರ ಕೋಟ್ಯಾಧಿಕ ಸಂಪನ್ನನು ಎನಿಸಿ
ಜೀವ ಕೋಟಿಗಳಿಗೆ ಅನ್ನವ ನೀವಂಗೆ
ಕೇವಲ ದಾರಿದ್ರನ ಅನ್ನಾಪೇಕ್ಷೆ ಮಾಡುವನೆ
ಸುವಿಮಲವಾದ ನವನವ ಭಕುತಿಯಲಿ
ಭಾವ ಭರಿತನಾಗಿ ಪ್ರಾರ್ಥಿಸೆ ಕರುಣಿಸಿ
ಆವ ರಸದ ದ್ವಾರ ಭಕುತಿಯ ಸ್ವೀಕರಿಪ
ಭಾವದಲಿ ಭಕುತಿ ಇಲ್ಲದಿದ್ದರೆ ನೋಡಾ
ದೇವ ದೃಷ್ಟಿಲಿ ನೋಡ ಕಾಲತ್ರಯದಲ್ಲಿ
ಶ್ರಾವ್ಯವೆ ಸರಿ ಧಾರ್ತರಾಷ್ಟ್ರನ ಧಿಕ್ಕರಿಸಿ
ಆ ವಿದುರನ ಮನೆಯ ಪಾಲುಂಡನು ಕೃಷ್ಣ
ಭೂವಿಬುಧರ ಪ್ರಿಯ ಗುರುವಿಜಯವಿಟ್ಠಲರೇಯ
ಸಾವಿರ ಮಾತಿಗ್ಯೂ ಭಕುತಿಯಿಂದಲಿ ವಶನೋ ॥ 15 ॥
ತ್ರಿವಿಡಿತಾಳ
ಒದಗಿ ಕೇಳುವದು ಭಕುತಿಯಿಂದಲಿ ಮನವೆ
ಇದನು ಗ್ರಹಿಸಿದವ ಜೀವನ್ಮುಕ್ತಾ
ಇದನು ಗ್ರಹಿಸಿದವಗೆ ಪುನರಪಿ ಜನ್ಮವಿಲ್ಲ
ಇದನು ಗ್ರಹಿಸೆ ಹರಿ ವಶನಾಗುವ
ಇದನು ಗ್ರಹಿಸಿದವನ ಸುರರೆಲ್ಲ ಮನ್ನಿಪರು
ಇದನು ಗ್ರಹಿಸಿದವ ಮಾನ್ಯನಾಹ
ಇದನು ಗ್ರಹಿಸಿದವ ಕುಲಕೋಟಿ ಸಹವಾಗಿ
ಮಧುವೈರಿ ಪುರವನ್ನೆ ಸೂರೆಗೊಂಬ
ಇದನು ಗ್ರಹಿಸಿದವಗೆ ನರಕದ ಭಯವಿಲ್ಲ
ಇದನು ಗ್ರಹಿಸೆ ನಿತ್ಯ ಸುಖಿಯಾಹನೋ
ಮೊದಲು ಪೇಳಿದಂತೆ ಗುಣಿಸು ಅಂತರದಲ್ಲಿ
ಅದುಭೂತ ಮಹಿಮನ್ನ ಸ್ವಪರ ದೇಹದಲ್ಲಿ
ಸದಮಲ ಮೂರ್ತಿಗಳು ಅಸಂಖ್ಯವಾಗಿ ವುಂಟು
ವಿಧಿ ಭವ ಮುಖರಿಂದ ಎಣಿಸಲೊಶವೆ
ಯಾದವ ಕುಲಮಣಿ ಕೃಷ್ಣನ ವಾಕ್ಯ ಉಂಟು
" ಅವಿಭಕ್ತಂಚ ಭೂತೇಷು ವಿಭಕ್ತಮಿವಚಸ್ಥಿತಂ "
ಆದರದಲಿ ತಿಳಿ ಐದು ಮೂರು ಮತ್ತೆ ಕೃದ್ಧೋಲ್ಕಾದಿ
ವಿಧಿ ಶಿವ ಪ್ರವರ್ತಕ ಕೇಶವಾದಿ ಚತುರ್ವಿಂಶತಿ
ವಿದ್ಯ ಮತ್ಯಾದಿ ಮೂರುತಿ ದ್ವಾದಶವು
ಕುಧರಾದಿ ದಶರೂಪ ಹಿಂಕಾರ ಪ್ರಸ್ಥಾವ
ಉದ್ಗೀಥ ಮೊದಲಾದ ನಾನಾರೂಪ ಅ -
ಜಾದಿ ಐವತ್ತೊಂದು ನಾರಾಯಣಾದಿ ನೂರು ವಿ -
ಶ್ವಾದಿ ಸಹಸ್ರ ಪಂಚಕೋಶದಿಪ್ಪ
ಐದು ಲಕ್ಷದ ಎಂಭತ್ತೈದು ಸಾಸಿರ ನಾಲ್ಕು ನೂರು
ಮೋದಸಾಂದ್ರನು ಎಪ್ಪತ್ತೆರಡು ಸಹಸ್ರ ನಾಡಿಗಳಲ್ಲಿ
ಇದೇ ಕ್ಲಿಪ್ತದಿಂದಲಿ ಸ್ತ್ರೀ ಪುರುಷರೂಪ ಉಂಟು ಅಜಿ -
ತಾದಿ ಅನಂತನಂತವಾದ ರೂಪ ಧರಿಸಿ
ಆದಿಮೂರುತಿ ಪರಾದಿ ಅನಂತಾನಂತ
ಸದಮಲ ರೂಪದಿಂದ ವ್ಯಾಪ್ತನೆನಿಸಿ
ಈ ದೇಹದಲ್ಲಿದ್ದು ರಕ್ಷಿಪ ಬಗೆಯನರಿದೆ
ಅಧಮ ನರನು ನಾನೇ ಸ್ವಾತಂತ್ರನೆನ್ನೆ
ಬುಧರಿಗೆ ಪ್ರಿಯನಾದ ವೀರನ ಗದೆಯಿಂದ
ವೇದನವಾಗದಲೆ ಮೀರುವನೇ
ಇದನು ಗ್ರಹಿಸದವ ಮುಕ್ತಿಯೋಗ್ಯನಾಗೆ
ಬಾಧಿ ತಪ್ಪಿಸಿಕೊಳನು ನರಕದಲ್ಲಿ
ಇದನು ಇರಲಿ ಮತ್ತೆ ಮುಂದೆ ಕೇಳುವದು
ಮೇದಿನಿಯಲ್ಲಿದ್ದ ಸಕಲ ಲಕ್ಷಣವ
ಇದನು ಅಂಶಿಯೆಂದು ತಿಳಿವರು ಜ್ಞಾನಿಗಳು
ಹೃದಯದಲ್ಲಿಪ್ಪದು ಅಂಶವೆನ್ನು
ಇದನು ಕೇಳು ಪರಮ ವಿಸ್ತಾರವಾದ ಮಹಿಮೆ
ಆದಿಪುರುಷ ವೈಕುಂಠವಾಸಿ
ವದನ ಸಾಸಿರನ್ನ ನೆನೆದು ಅವರವರ
ಹೃದಯದಿಪ್ಪವಂಗೆ ಏಕೀಕರಣ ಮಾಡು
ಉದಯಾರ್ಕ ಕೋಟಿ ಪ್ರಭಾ ಅನಂತಾಸನದಿಪ್ಪ
ಪದುಮನಾಭ ಮತ್ತೆ ಕ್ಷೀರಾಬ್ಧಿಶಾಯಿ
ವದನ ಸಾಸಿರ ತಲ್ಪನಾದ ನಾರಾಯಣ
ಬದರಿ ನಿವಾಸಿಯಾದ ವೇದವ್ಯಾಸ ಮ -
ಹಿದಾಸ ಶಿಂಶುಮಾರ ಹಯಶೀರ್ಷ ವಡಭಾ ಕಲ್ಕಿ
ಸುಧನ್ವಂತ್ರಿ ಹಂಸವಕ್ತ್ರಾ ಕಪಿಲ ಋಷಭ
ಮೋದ ಸಾಂದ್ರನಾದ ಪುರುಷರೂಪ ತ್ರಯ
ಆದ್ಯಂತ ರಹಿತನಾದ ದತ್ತಾತ್ರಯ
ಆದಿ ಮೂರುತಿ ಅವತಾರಗಳೆಲ್ಲ ಸ್ಮರಿಸಿ
ಅದ್ವೈತ ತ್ರಯಂಗಳ ಅನ್ವಯಿಸೋ
ಪ್ರಾದೇಶ ಮೂರ್ತಿ ತಾನೆ ಯಜ್ಞನಾಮಕನೆಂದು
ಪದೋಪದಿಗೆ ತಿಳಿದು ಸಕಲ ರೂಪ
ಹೃದಯ ಸಂಸ್ಥಿತನಲ್ಲಿ ಐಕ್ಯ ಚಿಂತನೆ ಮಾಡೊ
ಭೇದವಿಲ್ಲ ನೋಡೊ ಎಳ್ಳಿನಿತು
ಬೋಧ ಮೂರುತಿ ಗುರುವಿಜಯವಿಟ್ಠಲರೇಯ
ಇದನು ತಿಳಿದವನ್ನ ಕ್ಷಣವಗಲನೋ ॥ 16 ॥
ರೂಪಕತಾಳ
ಬದರಿ ದ್ವಾರಕಾ ಲೋಹಕ್ಷೇತ್ರ ಕಾಶಿ ಪ್ರಯಾಗ ಶ್ರೀ -
ಪದವೀವ ಗಯಾಕ್ಷೇತ್ರ ಅಯೋಧ್ಯ
ಯದುಗಿರಿ ತೋತಾದ್ರಿ ಶ್ರೀಮುಷ್ಣ ಮನ್ನಾರಿ
ಪದುಮನಾಭಾನಂತ ವೈಕುಂಠಾಚಲಾ
ನಿಧಿ ಮೊದಲಾದ ಸುಕ್ಷೇತ್ರದಲ್ಲಿಪ್ಪ
ವಿಧಿಭವ ಮುಖರಿಂದ ಪೂಜೆಗೊಂಬ
ಸದಮಲ ಮೂರ್ತಿಗಳು ಇರುವ ಕ್ರಮದಿಂದ ದಶ
ವಿಧದಿಂದ ಇರುತಿಪ್ಪ ಬಗೆಯನರಿತು
ಹೃದಯ ಸಂಸ್ಥಿತನಲ್ಲಿ ತಂದು ಕೂಡಿಸು ಮರಳೆ
ಇದೇ ಲೋಕವಿಡಿದು ಮತ್ತೆ ಪಾತಾಳದಿ
ಐದೆರಡು ಲೋಕಾದಿ ಇರುತಿಪ್ಪ ಮೂರ್ತಿಗಳು
ಒದಗಿ ಚಿಂತಿಸಿ ಐಕ್ಯ ತಿಳಿಯೊ ನೀನು ಈ
ವಿಧದಿಂದ ಸಂಸ್ತುತಿಸಿ ಪರಮ ಭಕುತಿಯಿಂದ
ಉದಕ ಕೊಡುವನ್ಯಾಕೆ ಅಮೃತೋಪಮವೋ
ಪದುಮನಾಭನಿಗಿದೆ ಪೂಜೆಯೆನಿಸುವದಯ್ಯಾ
ಇದೇ ಬಗೆಯನೆ ತಿಳಿಯದೆ ವ್ಯರ್ಥವಾಗಿ
ಬುಧರು ನಾವೆಂತೆಂದು ಬರಿದೆ ಹಿಗ್ಗುವ ನರನ
ಮದಗರ್ವಕ್ಕೇನೆಂಬೆ ಮಹಿಯೊಳಗೆ
ಸುಧಿಯಾಬ್ಧಿ ಪ್ರಯತ್ನವಿಲ್ಲದೆ ಜಗದೊಳು
ಉದುಭವಿಸಿರೆ ಬಿಟ್ಟು ಯತ್ನದಿಂದ
ಆದರದಿ ವಿಷವನ್ನು ಪಾನ ಮಾಡುವರೆಲ್ಲ
ವಿಧಿಲಿಖಿತವನು ಮೀರಲಾಪರಾರು
ಪದುಮ ಸಂಭವನುತ ಗುರುವಿಜಯವಿಟ್ಠಲನ್ನ
ಪದಗಳ ಬಿಗಿದಪ್ಪಿ ಸುಖಿಸೊ ಸತತ ॥ 17 ॥
ಝಂಪೆತಾಳ
ಸತ್ಯವಿದು ಗ್ರಹಿಸುವದು ಶ್ರುತಿ ಸ್ಮೃತಿಯಲಿರುತಿಪ್ಪ
ಅರ್ಥಗಳಿವು ಕೇಳು ಭಕುತಿಯಿಂದ
ಮಿಥ್ಯವೆಂದಿಗು ಅಲ್ಲ ಅದೃಷ್ಟಹೀನನಾಗಿ
ಅತಥ್ಯವೆಂದರೆ ಅದಕೆ ಮಾಳ್ಪದೇನು
ವ್ಯರ್ಥವಾಗಿ ಭವದಿ ದುಃಖಗಳುಣಲೇಕೆ ಉ -
ಧೃತ್ಯ ನಾಗುವೆನೆಂಬ ಮನಸಿನಿಂದ
ಕೀರ್ತಿಸು ಹರಿಯನ್ನು ಪೂರ್ವೋಕ್ತದಂತೆ ತಿಳಿದು
ಭಕ್ತಿಯಿಂದಲಿ ಯಜಿಸೋ ವಿಧಿಪೂರ್ವಕ
ಸತ್ಯಲೋಕಾಧಿಪನ ಸತಿಸಹಿತ ಮಿಕ್ಕಾದ ಲೋ -
ಕಸ್ಥರೆಲ್ಲರ ಸ್ಮರಿಸು ತಪೋ ಜನೋಲೋಕವ
ಮತ್ತೆ ಮಹರ್ಲೋಕ ಸ್ವರ್ಲೋಕ ಭುವರ್ಲೋಕ
ಮರ್ತ್ಯಲೋಕವು ಮತ್ತೆ ಅಧೋಲೋಕಂಗಳ
ಸಪ್ತವನ ಚಿಂತಿಸು ಮರೆಯದಲೆ ಲೋಕಾಧಿ -
ಪತ್ಯರನು ಭೃತ್ಯರನು ಸತಿಯರಿಂದ
ಯುಕ್ತರಾದವರೆಲ್ಲ ಅಂಶಿಯೆನಿಸುವರಯ್ಯಾ
ಹೃತ್ಪುಂಢ್ರದಲಿ ನಿಲಿಸಿ ಹರಿ ಅಂಶವೆನ್ನು
ಉಕ್ತಿಯನು ಲಾಲಿಪುದು ಅಂಶಾಂಶ ಭಾಗಗಳು ಏ -
ಕತ್ರ ಚಿಂತಿಸು ಬಿಡದೆ ದೇಹದಲ್ಲಿ ಆ -
ಸಕ್ತಿಯಿಂದಲಿ ಮನದಿ ಪ್ರಾರ್ಥಿಸಿ ಅವರವರ
ಹೃತ್ಕಮಲದಲ್ಲಿದ್ದ ಮೂರ್ತಿಗಳನು
ಮತ್ತೆ ಕೂಡಿಸು ಮರಳೆ ಸಕಲ ರೂಪಗಳಲ್ಲಿ
ಅತ್ಯಂತ ಅಭೇದವೆಂದು ತಿಳಿಯೊ ಅ -
ಸತ್ಯವೆನ್ನಲಿ ಸಲ್ಲ ಅರ್ಜುನಗೆ ಶ್ರೀಕೃಷ್ಣ
ಮಿತ್ರನಾಗಿ ಪೇಳ್ದ ವಾಕ್ಯವುಂಟು
" ವಿದ್ಯಾ ವಿನಯ ಸಂಪನ್ನೆ ಬ್ರಾಹ್ಮಣೆ ಗವಿಹಸ್ತಿನಿ
ಶುನಿಚೈವ ಶ್ವಪಾಕೇಚ ಪಂಡಿತಾಃ ಸಮದರ್ಶಿನಃ "
ಈ ತೆರದಲಿ ತಿಳಿದು ಸಂದೇಹ ಮಾಡದೆ
ಸರ್ವಮೂರ್ತಿಗಳ ಕೂಡಿಪದು ಬಿಂಬನಲ್ಲಿ
ಮರ್ತ್ಯರಾರಂಭಿಸಿ ಸಕಳ ಜಡಚೇತನ ಎಂ -
ಭತ್ತು ನಾಲ್ಕು ಲಕ್ಷ ಜಾತಿಗಳನು
ಉತ್ತಮೋತ್ತಮ ಬಗೆಯನರಿತು ಅವರಂತೆ
ಸ್ತುತ್ಯ ಹರಿಮೂರ್ತಿಗಳು ಐಕ್ಯ ತಿಳಿಯೋ
ತತ್ವವಿದು ತಿಳಿಯದಲೆ ಕೋಟ್ಯಾಧಿಕ ಜೀವರಿಗೆ
ವಿತ್ತನ್ನ ಮೊದಲಾದ ದಾನಗಳನು
ಇತ್ತರೇನು ಫಲವು ಅಲ್ಪ ಪುಣ್ಯಗಳಿಂದ
ಮತ್ತೆ ಮತ್ತೆ ಬರುವ ಭೂಮಿಯಲ್ಲಿ
ಮೃತ್ಯುವಿಗೆ ಸಮನಾದ ದುಃಖಗಳು ಮೀರುವನೆ
ಎತ್ತಲಿದ್ದರೇನು ಹರಿ ವಿಮುಖನೋ
ನಿತ್ಯ ತೃಪ್ತನಾದ ಗುರುವಿಜಯವಿಟ್ಠಲರೇಯ
ಎತ್ತಿ ನೋಡನು ಮುಖವು ಎಂದಿಗನ್ನ ॥ 18 ॥
ಆದಿತಾಳ
ಇದು ಪರಮ ಗೌಪ್ಯವಯ್ಯಾ ಗುಹ್ಯಾದ್ಗುಹ್ಯೋತ್ತಮ
ಆದಿತೇಯ ವಿದ್ಯವಿದು , ಅಧಮರಿಗೆ ಯೋಗ್ಯವಲ್ಲ
ಮೋದತೀರ್ಥ ಮತಾನುಗರಾಗಿದ್ದ ಸುಜನರ
ಪಾದಕ್ಕೆರಗಿ ಬೇಡಿಕೊಂಬೆ ದುರುಳರಿಗೆ ಪೇಳಸಲ್ಲ
ಸದಮಲ ಯಜ್ಞ ಶೇಷ ಶುನಕಗೆ ಯೋಗ್ಯವಲ್ಲ
ಇದರಂತೆ ತಿಳಿವದು ಮನ್ನಿಸಿ ಕರುಣದಿ
ಆದರದಲಿ ಹರಿಪದಗಳ ಭಜಿಸುವ
ಬುಧರಿದು ಭಕುತಿಲಿ ಸ್ವೀಕಾರ ಮಾಡುವದು
ಇದೆ ಬಗೆ ತಿಳಿವರ್ಗೆ ಪುನರಪಿ ಜನ್ಮವಿಲ್ಲ
ಇದು ಎನ್ನ ಮಾತಲ್ಲ ಶ್ರೀಹರಿ ವಾಕ್ಯವುಂಟು
" ಸರ್ಗೋಪಿನೋಪ ಜಾಯಂತೆ ಪ್ರಳಯೇನವ್ಯಥಂತಿಚ "
ಎಂದು ಇದು ಗ್ರಹಿಸಿ ಸುರರೆಲ್ಲ ಸುಖಬಡುವರು ನಿತ್ಯ
ಇದು ತಿಳಿದ ಮಾನವರು ನರರಲ್ಲ ಸುರರೇ ಸರಿ
ವಿಧುಃ ಶ್ರೀವತ್ಸಲಾಂಛನ ಗುರುವಿಜಯವಿಟ್ಠಲರೇಯ
ಬದಿಯಲ್ಲಿ ಇರುತಿಪ್ಪ ಇದು ಗ್ರಹಿಸಿದವರಿಗೆ ॥ 19 ॥
ಜತೆ
ಹರಿಯ ಯಜಿಸು ಇನಿತು ಜನುಮದೊಳಗೆ ಒಮ್ಮೆ
ಮರಳೆಬಾರದು ದೇಹ ಗುರುವಿಜಯವಿಟ್ಠಲ ಬಲ್ಲ ॥
***
1. Dhruvatāḷa
Makhavannē māḍuvadu marmava nīnaritu |
Vikhanasārcitapāda manadi nilisi |
Kakulātiyanne biṭṭu duruḷarigaruhadale |
Bhukutiyindali yajisu snēhadinda |
Nakhaśikha paripūrṇa hari tānu vidhiśivādi |
Kṛkavāka modalāda aśīti nālkulakṣa |
Sakala jೀvigaḷalli tannāma tadrūpa |
Sakhanāgi dharisi tattaccēṣṭegaḷa |
Yukutiyindali māḷpa ambasapadmiva ā - |
Sakutiyindali grahiso mukhyavāgi |
Tvaku modalāda dhātu karaṇā dēhadalli a - |
Nēka rūpagaḷinda vyāptanāgi |
Prakṛti kāla karma jīva lakṣaṇadante |
Sakhanāgi māḍi tajjanitavāda |
Sukha duḥkha phala "anaśnan" embo śrutiyante |
Ēkamēvanu uṇade jīvarige |
Hākuva tera ātmōpamyēna sarvatra |
Lōka lōkādi tiḷiyō initu nīnu |
"Yōntaścarati bhūtātmā yastapatyaṇḍa madhyagaḥ" |
Śukamuni vākyadante dṛḍhadi nambo |
Śakatanāda hari nindu māḍisadire |
Lakumi virañci bhava śakrādyaru a - |
Śaktarayyā śvāsa biḍalu yōgyaralla |
Prakaṭavāgide śruti śāstradalli |
Mukutige dvāravidu initu tiḷiva nara |
Rikatanallavo balu bhāgyādhikanu |
Bhukutiyindali alpa jalava koḍuvanyāke |
Vikhanasāṇḍa dānavitta phalakke a - |
Dhikāriyāguvanu saṃsāra muktanāgi |
Śakaṭabhañjana karava piḍiva bēga |
Kṛkaḷantaryāmi guruvijayaviṭṭhalarēya |
Makhaśabdavācyanu makhabhōktanu ||
2. Maṭṭatāḷa
Vājapēya pauṇḍarīka modalāda |
Rājasa yajñagaḷu balu vidhavādantha |
Vyājagaḷalladale sarvarigośavalla sa - |
Hājavāgidda rajōguṇa karmagaḷu |
Rājisuva satvaguṇa miśravilladale |
Bhōjakulōttamana prītiyāgadu kēḷi vai - |
Rājavāda jñānada vyatirikta |
Rājīva pīṭha mikkādavarella |
Naijavāda gati aidaru endigū |
Rājīva mitra gaganadi udayisade ā - |
Rājitavāda tama ōḍadu endigū |
Bījamātidu kēḷi "nahi jñānēna sadṛśaṃ" |
Sujanaru idannu nirvyājadi tiḷidu |
Mūrjagadoḍeyanna pūjisu jñānadali |
Vājivadana guruvijayaviṭṭhalarēyana |
Ājanmava bhajise avagāvadu sama ||
3. Rūpakatāḷa
Snānavillada karma eṇikeyillada japa |
Pānayillada annadānadante |
Jñānavillada karma ēnēnu māḍalu |
Māṇade gajabhukta kapitthavatu "ka - |
Rmaṇā jñānamāpnōti jñānēna amṛtī bhavati" |
Ī nuḍi pramāṇadante janaru kēḷi |
Jñāna mārgadinda hariya yajisō |
Gauṇāvadhikavāda adhiṣṭhānagaḷa grahisu |
Ānandatīrthara vākyadante |
Sānurāgadi śrutige aprāmāṇya baralīyade |
Dhēnisu harivyāpti jaḍa cētanadi a - |
Jñāni janaroḷu beredidda kālakku |
Manasinalli vyāpti mariyadiru |
Ēnēnu karmagaḷu lakuminārēyaṇaru |
Prāṇadēvara dvāra māḷparennu |
Prāṇanāthanu khaga ahipēśa modalāda |
Sumanasirindali māḷpanennu |
Gauṇarigadhikaru prērakarāgiharu |
Kāṇisadipparu mandarige |
Jñāna prāputavāge pratyakṣavāharu |
Dānavāntakagivaru adhiṣṭhānaru |
Sthāṇu cētana mikka āvāva sthaḷadalli |
Māṇade tiḷi initu lakṣaṇadi |
Jñānigaḷarasa guruvijayaviṭṭhalarēya |
Prāṇigaḷalli vyāptanāgihanu ||
4. Jhampetāḷa
Sādhanadoḷadhika sādhanāvenisuvadu |
Sādaradi kēḷuvadu vibudharella |
Mēdiniyoḷagidda khaḷaru ahaṅkāradali |
Gō dhana modalāda mahādānava |
Krōdhādi guṇadinda ittarādaḍe avage |
Mōdavāhadento ihaparadi |
Sādhugaḷu idu tiḷidu jñānākhya sudhiyunnu ā - |
Svādiparu krōdhādi guṇava maredu |
Śrīdharanu tanna nija saṅkalpadindalli a - |
Nādi karma prakṛti kāla jīva |
Adhikāravanaritu koṭṭadake mattadhika bē - |
Ḍadaliru śrīśanājñevendu |
Yadriccha lābhadhiṃ saṃtuṣṭanāgi nīnu |
Mōda vaidu idda vibhavadoḷu |
Adhikāadhikavāda jñānavāpēkṣisuta |
Bōdhakara saṅgadali beredu nīnu |
Mēdini surarannu karedu mannisi parama |
Ādaradi annōdakava koḍalu |
Mōdamaya tānuṇḍu kōṭyādhikavāda |
Sādhu yajñada phalavu tandu uṇipa |
Mādhavana arccanēge bhūsurōttama tānu |
Adhiṣṭhānavendu grahisō nīnu |
Mēdini mēlidda kṣētra mūrutibiṭṭu |
Sādaradi kṣētravannu bhajisadavage |
Khēdavallade avage mōdavāhadēnō |
Mēdini suraralli vyāptanāda |
Ādidēvana tutisi ṣōḍaśōpacāra |
Ī dvāradali māḍuvadu jñānadinda |
Vaidarbhiramaṇa guruvijayaviṭṭhalarēyana |
Sādhisīpariyinda tiḷidu nīnu ||
5. Triviḍitāḷa
Mēlabhāgadalli śirassinallige dvidashāṃ - |
Guli mēle dvidasha daḷayukta |
Kīlālaja uṇṭu candraprakāśadante |
Mūlarūpanāda vāsudēvā |
Ālayavenipadu muktāmuktarainda |
Vālagagoḷutippa sarvasākṣiyāgi |
Bālamatiya biṭṭu gurumukhadinda tiḷidu |
Kālakālake tiḷi sva paradēhadalli |
Khūḷa janarige kuruhu kāṇisadale |
Vyaḷe vyāḷege parama bhakutiyinda |
Śīlamūrutitya dhēnisu nīnitta |
Sthūlarasavannu svīkarisu endu |
Lōla manassinainda bēḍikoḷḷalu hari |
Vālaga sahavāgi prītanāgi |
Ālasavilladale tṛṇa mēru māḍi tanna |
Ālayadali vāsa māḍisuvanu |
Hēḷana buddhiyainda idanu tiḷiyadale |
Sālu kōṭige annavittēnendu |
Bālamatigānu baride ahaṅkāradinda |
Pralāpisidare hari tuṣṭanāhane |
Vyāḷavyāghranāma guruvijayaviṭṭhalarēyana |
Līle initendu smarisi badukō ||
6. Aṭṭatāḷa
Satyalōkavu śīrṣadalle ippadu kēḷi |
Satyalōkādhipanu sahasrarūpanna |
Bhakutiyindali bhajipa sāsira kēsara |
Yuktavāda kamala madhyadi poḷevanna |
Kṛttivāsanu modalāda gīrvāṇaru |
Bhṛtyarāgi sēve māḷparu kramadinda |
Uttamōttama dēvā parivāra samēta |
Tuttisikoḷḷutta vyaktavāgihanu dhā - |
Ritriyōḷage idu tiḷida manujanu |
Mṛtyu rūpavāda saṃsāra dūranu |
Pāratrikavāda sukhadi nityanu kāṇo |
Ī teradinda tiḷidu ī bageyinda |
Tṛptarāgendennē bhaktige vaśanāgi |
Ukti lālipadaiyyā udāsīna māḍade |
Kartṛnenipa guruvijayaviṭṭhalarēya |
Satyavāda pada aidipa śīghradi ||
7. Āditāḷa
Dvidalayuktavāda kiñjalka phālabhāga |
Madhyadali ippadu idanēve tapōlōka |
Yadukulaśrēṣṭha tānu lōkādhipati mikka |
Ādityarinda sēvegombuva nityadalli |
Ādaradali tiḷi svapara dēhadalli |
Bhūdēvatigaḷa priya guruvijayaviṭṭhalarēyanna |
Padagaḷa dhēnisu ī bageyinda tiḷidu ||
8. Dhruvatāḷa
Indrayōniyalli ṣōḍaśadaḷa ara - |
vinda śōbhisuvadu dhavaḷa varṇa - |
dinda poḷevadu idanēve janōlōka - |
vendu karevaru vibudharella |
Hondikoṇḍippanu lakumi nārāyaṇa |
Vṛndāraka śrēṣṭha ahipadēva - |
rinda pūjeyagomba navavidha bhakutiyinda |
Kandukandhara mikka divijarella |
Vandisikoḷutali āṇandadaliharu |
Tandu īvaru phalava tiḷidavarge |
Candrakalābhimāni divijara santati |
Mandiravenipadu āvakālā |
Kundu janara manake endigū tōranayya ni - |
ssandēhadalli nambidavage |
Mundolidu poḷevanu vēdaikavēdyanu |
Ondiṣṭu ahaṅkāra bandodage |
Indragādaru śikṣe māḍade biḍanayya |
"Candra śatānana kunda suhāsa |
Vandita daivata āṇanda sampūrṇa" |
Endendu biḍade emma salahutippa - |
nendu koṇḍāḍi parama bhakutiyindali namisi |
Ennindali prītanāgu endu bēḍe |
Indirāpati tanna parivāra sahita |
Nindu tṛptanāha bhakuti pāśa - |
dinda kaṭṭisikoṃba svatantra puruṣanāge |
Mandatanava biṭṭu idanē grahisu |
Kandarpakōṭirūpa guruvijayaviṭṭhalarēya |
Bandhunenipa bhukuta nikarakella ||
9. Maṭṭatāḷa
Uradalli dvādaśadaḷa paduma uṇṭu |
Karesuvadu idane maharlōkavu yendu |
Harināmaka mikkā bhagavadrūpagaḷu |
Mirugutive nōḍu bhēdagaḷilladale |
Puravairi tanna nijasati sahitadali |
Parama bhakutiyinda vālgaisutalihanu |
Surapati mikkāda divijara saṅghavannu |
Paritōṣadalinda pūjeya māḍuvaru |
Narane ī pari tiḷidu karava mugidu namisi |
Paritṛptiyanaidu nīnitta rasadainda |
Paripūrṇanādarū bhaktara vaśanāgi |
Svīkarisuvanu biḍade nityatṛptanāge |
Paripūrṇamūrutitya guruvijayaviṭṭhalarēya |
Sāra hṛdaya nōḍi svīkṛtanāguva ||
10. Triviḍitāḷa
Hṛdayadali aṣṭadaḷada paduma uṇṭu |
Udayāditya varnadantippadō |
Idanēve svarlōkavembuvaru jñānigaḷu |
Tridaśādhipatiyāda indra mikka |
Ādityēyarinda pūjeya gombuvanu |
Mōdasāndranu lakumi nārāyaṇa |
Ādimūrutitya kēśavādi catura dvidaśa ma - |
tsyādi rūpavu mikkā varṇā prati - |
pādana rūpa svamūrtigaṇa madhyaganāgi |
Ā dikpālakarainda pūjigoḷuta |
Padopadige bandu prahariyā tirugutta |
Sadākāladalli vihitāvihita māḷpa |
Idu mīralośavalla vidhi bhava nirjararu |
Idē mārgadainda sañcarisuvaru |
Idē mūlapati padake abhimukhanāgi prāṇa |
Pādava āśraisi ippa jīva tānu |
Aidu dvāradali pañcarūpanāda |
Bōdha mūrutitya prāṇaruṇṭu kēḷi |
Modala dvāradalli prāṇanāśrayadi puṣka - |
rādyaru aniruddhana nōḷparayyā |
Sudakṣiṇa dvāradali apānāntargata |
Pradyumnana nōḷparu ṛṣigaḷella |
Ādaradali kēḷo mūranē dvāradali |
Aridallaṇa vyānāntargata saṃkaruṣaṇanna |
Vidhiyainda nōḷparu pitṛdēvategaḷu |
Mudadinda tiḷivadu nālkanē dvāradalli ja - |
gada sūtranenipa samānāntargatanāda vā - |
sudēvana tutiparu gandharva gaṇaru |
Aidanē dvāra ūrdhva bhāgadallippadu |
Udānāntargata lakṣīnārāyaṇaṇā |
Madanavairi mikka surarella vandiparu |
Modalu pēḷida nālku dvāradalli |
Nanda sunandana modalāda aṣṭa jana |
Ādidēvana prathama dvāradalli |
Idara mēle mūru maṇḍalavu uṇṭu kēḷu ma - |
ttidara mēle viśāla dēśavuṇṭu ā |
pradēśadalli nūru khambada tēru |
Udayārkanantādante poḷevuvadō ci - |
nnada dāmadainda virājisuva ghaṇṭā |
nādadaindaisevutide muttina goñcala - |
dinda beḷagutide candraprakāśadante |
Mudadi śōbhitavāda rathada madhya |
Adhubhūtavāda mahima prājñānāmaka tānu |
Vidhibhavāidigaḷinda pūjēgoḷuta |
Odagi tutipa janake abhaya koḍuvanāgi ī te - |
radi nindihya karuṇāvanadhi hari |
Prādēśa parimita hari tānu nindu |
Ī dēha rakṣipanu nāḷadali nintu |
Vidhibhava surarinda vanditanāgi hari |
Hṛdayadoḷage iralu tiḷiyadale |
Udayāstamāna baride sādhana māḍuvanna |
Haduḷatanake nānēnembēno |
Udayārka prabhā guruvijayaviṭṭhalanna |
Odagi bēḍiko tṛptanāgu endu ||
11. Aṭṭatāḷa
Nābhishthānadalli ārudaḷada padma |
Śōbhisutippadu bhuvarlōka nāmadainda nī - |
lābha modalāda catura rūpaṅgaḷu |
Nābhijātanna samanāda dēvanoḷu |
Śōbhisutippanu pradyumna dēvanu |
Subhakutiyinda gaṇapati sēvipa |
Nābhisaṃbhava modalāda dēvategaḷu |
Vaibhavadainda vandiparu paduma - |
nābhana satiyaru āru janaru uṇṭu |
Saubhāgyavantanu idu tiḷidava, mukhya |
Nirbhāgyane sari ī sobagu tiḷiyadava |
Tribhuvanadoḍiya guruvijayaviṭṭhalarēya |
Sābhimānadainda porevanō tiḷidare ||
12. Rūpakatāḷa
Mūlasthānadalli caturadaḷa kamala pra - |
vāḷa māṇika varnadantippadu |
Bhūrlōkavidu yendu karevaru vibudharu |
Nīlōtpala śyāmanāḷugaḷu |
Nālku nāḍigaḷalli nālku rūpadi hari |
Nālku vēdagaḷinda tutisikoḷḷuta |
Mēlenipa suṣumnadali nārāyaṇa lakumi |
Kīlālaja mikka surarindali |
Vālaga koḷḷutippa āṇanda pūrṇanu |
Śīla bhakutiyinda manu śrēṣṭhanu |
Nīlābhananiruddhanarcipa niruta sa - |
līlajake abhimāni enisi |
Kālacakrada teradi jaḍavāyu tānaindu |
Mēladhō bhāgadali tiruguvadu |
Mūrlōkanāthanu initu vyāpakanāgi vi - |
śāla karuṇadainda salahutire |
Bālamatigarāgi grahasidiruva manuja |
Vyāḷa vyāghranē sari naranādarū |
Hūḷuva niraya nityadalli yama tānu |
Bāḷuvanentō mukti pathadainda |
Kīlu kīlige nindu vyāpāra māḷpanna |
Ālōcisi tiḷiyade vyarthavāgi |
Sālu karmava māḍe avana sāhasavannu |
Sūḷigikkida dhanadante nōḍo |
Pālasāgara śāyi guruvijayaviṭṭhalanna |
Līle tiḷidu tṛptanāgu innu ||
13. Jhampetāḷa
Ūru dvayagaḷalli ataḷa vitaḷa lōka |
Cāru jānugaḷalli sutaḷa lōka |
Sāra jaṅghadi taḷātaḷavu ippadu nōḍi |
Thōra gulphadi mahātaḷavu kēḷi |
Sārutide prapadadali rasātaḷa lōkavendu |
Mīradale kēḷo pātāḷalōka |
Tōrutide pādamūladalli sujanarugaḷige |
Baride mātugaḷalla śrutisiddhavō |
Mūruvare kōṭi tīrthaṅgaḷuṇṭu aṅguṭadi |
Dhāruṇiya keḷagippa jala sañjñadi |
Nārāyaṇanu kūrmanāgi pottihanolli |
Sārasundara mūrti tīrthapāda |
Nārāyaṇanu nindu dēha dēhaṅgaḷa |
Bhāra pottiha siri vāyu sahita |
Ī rīti hari tanna parivāra sahitadali |
Śārīra vyāpāra māḍutiralu |
Krūraridu tiḷiyadale nānē svātantranendu |
Sārisārige nuḍiva duruḷa janara |
Pauruṣake ēnembē svātantra tānāge |
Śārīrake vyādhi baruvadyākō |
Sarvakāladalli sukhāpēkṣe māḍuva narage |
Mīri trayatāpadali baḷali naraka |
Sēruva bage yāke tōrutide āścaryā |
Śārīra modalāda karṇagaḷu |
Vāra vārake dṛḍhavanāpēkṣiyādavage |
Bharadi madhyadi nāśa baruvadēnō |
Dūra dēśagaḷella tirugi baruvenendu |
Sāredali mṛtyu vaśavāhadēnō |
Sāre dūruva kāṇadippa mūḍhanu tānu a - |
pāra mahimege samānanenisuvanē |
Vara vāda pratyakṣa śabdanumāna a - |
pauruṣēyavāda nigamagaḷige |
Dūravāgiha mātu sajjanara kaṅgaḷige |
Tōradayyā nijavu endendige vai - |
kāravāgidda citta vibhramadainda |
Śārīra smaraṇeyannu illadippa |
Narādhamanu tānu nānā vākyava nuḍiye |
Dhīrarige prāmāṇya venisuva dē |
Karava calisuva śaktanāhadiddavanāgi |
Mēru ettuvenemba mṛṣavādi teradi |
Varali koṇḍadakavannu maraḷi nōḍuvarige |
Svārasya enisuva dē endiganna |
Śrīramaṇa sarvēśa guruvijayaviṭṭhalarēya |
Sārigāṇadeyidda svātantranō ||
14. Dhruvatāḷa
Peṭṭigeyoḷagippa mūrtiya bhakutili |
Niṣṭheyindali pūje māḍikoḷuta |
Iṣṭa bēḍuvadu sahajave sari baride |
Peṭṭige pūjeyannu māḍi tanna |
Iṣṭa vaiduvenemba sāhasadainda nōḍi |
Viṣṇu sakalavāda vastugaḷalli |
Dhiṭṭanāgi vyāptanāgi iralu tiḷiyade a - |
śrēṣṭhavāda jīva saṅghagaḷanu |
Muṭṭi bhajisidare śrēṣṭharāguva dento |
Hṛṣṭarāgarayyā ihaparadi |
Dhiṭṭamūrti vyatirikvavāgi para - |
mēṣṭhi surara pūje svatantradi |
Śrēṣṭhavāgadayyā śruti smṛti sammata śrī - |
kṛṣṇana vākyavuṇṭu "yēpyenya dēvatā |
bhaktyāyajantē śraddhayānvritāḥ |
tēpi māmēva kauntēya yajantyavidhipūrvakaṃ" |
Sṛṣṭiyoḷage brahma rudrādi surara pūjā |
Puṣṭa ṣāḍguṇya tānē svīkarisidaru |
Śiṣṭavāda vidhi yenisadu endendige |
Hṛṣṭa manasinainda grahasivadu |
Śiṣṭarādavaranna bhajisida kālakku avara hṛda - |
yaṣṭadaḷadalippa dēvanalli |
Dṛṣṭiyuḷḷavanāgi māḍida upacāra |
Śrēṣṭhanāda harige samarpisu u - |
tkṛṣṭa mahima guruvijayaviṭṭhalanna |
Biṭṭu māḍidudu avidhiyu ||
15. Maṭṭatāḷa
Ī vidhadali tiḷidu bhakutiyindali nīnu |
Dēvadēvana yajisu jñānapūrvakadainda |
Āva ṣaḍrasadainda pūrṇanāda harige |
Āvāvā kāladali āpēkṣegaḷilla |
Jīvada nimitya sthūlānnavu komba sva - |
bhāvadainda hari paripūrṇa tānāgi |
Bhuvaṇatrayavannu nirmāṇava māḍi |
Pāvamāna vidhi bhava indrādyarige |
Avaravara yōgya padaviya kalpisi |
Ā vidhi stambha pariyantavāgi |
Suvihitāvihita tṛptiya nīvaṃge |
Nāvittānnavadali apēkṣegaḷuṇṭe? |
Sāvira kōṭyādhika sampannanu enisi |
Jīva kōṭigaḷige annava nīvaṃge |
Kēvala dāridrana annāpēkṣe māḍuvane |
Suvimalavāda navanava bhakutiyali |
Bhāva bharitanāgi prārthise karuṇisi |
Āva rasada dvāra bhakutiya svīkaripa |
Bhāvadali bhakuti illadiddare nōḍā |
Dēva dṛṣṭili nōḍa kālatrayadalli |
Śrāvyave sari dhārtarāṣṭrana dhikkarisi |
Ā vidurana maneya pāluṇḍanu kṛṣṇa |
Bhūvibudhara priya guruvijayaviṭṭhalarēya |
Sāvira mātigyū bhakutiyindali vaśanō ||
16. Triviḍitāḷa
Odagi kēḷuvadu bhakutiyindali manave |
Idanu grahasidava jīvanmuktā |
Idanu grahasidavage punarapi janmavilla |
Idanu grahase hari vaśanāguva |
Idanu grahasidavana surarella manniparu |
Idanu grahasidava mānyanāha |
Idanu grahasidava kulakōṭi sahavāgi |
Madhuvairi puravannē sūregoṃba |
Idanu grahasidavage narakada bhayavilla |
Idanu grahase nitya sukhiyāhanō |
Modalu pēḷidante guṇisu antaradalli |
Adhubhūta mahimanna svapara dēhadalli |
Sadamala mūrtigaḷu asaṅkhyavāgi uṇṭu |
Vidhi bhava mukharinda eṇisalośave |
Yādava kulamaṇi kṛṣṇana vākya uṇṭu |
"avibhaktanca bhūtēṣu vibhaktamivacashthitaṃ" |
Ādaradali tiḷi aidu mūru matte kṛddhōlkādi |
Vidhi śiva pravartaka kēśavādi caturviṃśati |
Vidya matyādi mūrutitya dvādaśavu |
Kudharādi daśarūpa hiṃkāra prasthāva |
Udgītha modalāda nānārūpa a - |
jādi aivattondu nārāyaṇādi nūru vi - |
śvādi sahasra pañcakōśadippa |
Aidu lakṣada eṃbhattaindu sāsira nālku nūru |
Mōdasāndranu eppatteraḍu sahasra nāḍigaḷalli |
Idē kliptadainda strī puruṣarūpa uṇṭu aji - |
tādi anantanantavāda rūpa dharisi |
Ādimūrutitya parādi anantānanta |
Sadamala rūpadainda vyāptanenisi |
Ī dēhadalliddu rakṣipa bageyanaride |
Adhama naranu nānē svātantranennē |
Budharige priyanāda vīrana gadēyainda |
Vēdanavāgadale mīruvanē |
Idanu grahasidava muktiyōgyanāge |
Bādhi tappisikoḷanu narakadalli |
Idanu irali matte munde kēḷuvadu |
Mēdiniyallidda sakala lakṣaṇava |
Idanu aṃśiyendu tiḷivaru jñānigaḷu |
Hṛdayadallippadu aṃśavennu |
Idanu kēḷu parama vistaravāda mahime |
Ādipurūṣa vaikunṭhavāsi |
Vadana sāsiranna nenedu avaravara |
Hṛdayadippavaṃge ēkīkaraṇa māḍu |
Udayārka kōṭi prabhā anantāsanadippa |
Padumanābha matte kṣīrābdhiśāyi |
Vadana sāsira talpanāda nārāyaṇa |
Badari nivāsiyāda vēdavyāsa ma - |
hidāsa śiṃśumāra hayaśīrṣa vaḍabhā kalki |
Sudhanvantri haṃsavaktrā kapila ṛṣabha |
Mōda sāndranāda puruṣarūpa traya |
Ādyanta rahitanāda dattātrēya |
Ādi mūrutitya avatāragaḷella smarisi |
Advaita trayaṅgaḷa anvayisō |
Prādēśa mūrti tāne yajñanāmakanendu |
Padōpadige tiḷidu sakala rūpa |
Hṛdaya saṃsthitanolli aikya cintane māḍo |
Bhēdavilla nōḍo eḷḷinitu |
Bōdha mūrutitya guruvijayaviṭṭhalarēya |
Idanu tiḷidavanna kṣaṇavagalanō ||
17. Rūpakatāḷa
Badari dvārakā lōhakṣētra kāśi prayāga śrī - |
padavīva gayākṣētra ayōdhya |
Yadugiri tōtādri śrīmuṣṇa mannāri |
Padumanābhānanta vaikuṇṭhācalā |
Nidhi modalāda sukṣētradallippa |
Vidhibhava mukharinda pūjēgoṃba |
Sadamala mūrtigaḷu iruva kramadainda daśa |
vidhadainda irutippa bageyanaritu |
Hṛdaya saṃsthitanolli tandu kūḍisu maraḷe |
Idē lōkaviḍidu matte pātāḷadi |
Aideraḍu lōkādi irutippa mūrtigaḷu |
Odagi cintisi aikya tiḷiyō nīnu ī |
vidhadainda saṃstutisi parama bhakutiyinda |
Udaka koḍuvanyāke amṛtōpamavō |
Padumanābhanigide pūjeyenisuvadayyā |
Idē bageyane tiḷiyade vyarthavāgi |
Budharu nāventendu baride higguva narana |
Madagarvakkēnembē mahiyoḷage |
Sudhiyābdhi prayatnavillade jagadoḷu |
Udubhavisire biṭṭu yatnavadainda |
Ādaradi viṣavannu pāna māḍuvarella |
Vidhilikhitavannu mīralāparāru |
Paduma saṃbhavanuta guruvijayaviṭṭhalanna |
Padagaḷa bigidappi sukhiso satata ||
18. Jhampetāḷa
Satyavidu grahasivadu śruti smṛtiyalirutippa |
Artha gaḷivu kēḷu bhakutiyinda |
Mithyavendigū alla adṛṣṭahīnanāgi |
Atathyavendare adake māḷpadēnu |
Vyarthavāgi bhavadi duḥkhagaḷuṇalēke u - |
dhṛtya nāguvenemba manasinainda |
Kīrtisu hariyannu pūrvōktadaante tiḷidu |
Bhakutiyindali yajisō vidhipūrvaka |
Satyalōkādhipana satisahita mikkāda lō - |
kastharella smarisu tapō janōlōkava |
Matte maharlōka svarlōka bhuvarlōka |
Martyalōkavu matte adhōlōkaṅgaḷa |
Saptavana cintisu mareyadale lōkādhi - |
patyarannu bhṛtyarannu satiyarinda |
Yuktarādavarella aṃśiyenisuvarayyā |
Hṛtpuṇḍradali nilisi hari aṃśavennu |
Uktiyannu lālipudu aṃśāṃśa bhāgagaḷu ē - |
katra cintisu biḍade dēhadalli ā - |
saktiyainda manadi prārthisi avaravara |
Hṛtkamaladallidda mūrtigaḷannu |
Matte kūḍisu maraḷe sakala rūpagaḷalli |
Atyanta abhēdavendu tiḷiyō a - |
satyavennali salla arjunage śrīkṛṣṇa |
mitranāgi pēḷda vākyavuṇṭu |
"vidyā vinaya sampannē brāhmaṇē gavihastini |
shuniciaiva śvapākēca paṇḍitāḥ samadarśinaḥ" |
Ī teradali tiḷidu sandēha māḍade |
Sarvamūrtigaḷa kūḍipadu biṃbanalli |
Martyarārabhaisi sakaḷa jaḍacētana eṃ - |
bhattu nālku lakṣa jātigaḷannu |
Uttamōttama bageyanaritu avarante |
Stutya harimūrtigaḷu aikya tiḷiyō |
Tatvavidu tiḷiyadale kōṭyādhika jīvarige |
Vittānna modalāda dānagaḷannu |
Ittarēnu phalavu alpa puṇyagaḷinda |
Matte matte baruva bhūmiyalli |
Mṛtyuvige samānāda duḥkhagaḷu mīruvanē |
Ettaliddarēnu hari vimukhanō |
Nitya tṛptanāda guruvijayaviṭṭhalarēya |
Etti nōḍanu mukhavu endiganna ||
19. Āditāḷa
Idu parama gaupyavayyā guhyādguhyōttama |
Ādityēya vidyavidu, adhamarige yōgyavalla |
Mōdatīrtha matānugarāgidda sujanara |
Pādakkeregi bēḍikombe duruḷarige pēḷasalla |
Sadamala yajña śēṣa śunakage yōgyavalla |
Idara nte tiḷivadu mannisi karuṇadi |
Ādaradali haripadagaḷa bhajisuva |
Budharidu bhakutili svīkāra māḍuvadu |
Idē bage tiḷivarge punarapi janmavilla |
Idu enna mātalalla śrīhari vākyavuṇṭu |
"sargōpinōpa jāyantē praḷayēnavyathantica" |
Endu idu grahasisi surarella sukhabaḍuvaru nitya |
Idu tiḷida mānavaru nararalla surarē sari |
Vidhuḥ śrīvatsalāñchana guruvijayaviṭṭhalarēya |
Badiyalli irutippa idu grahasidavarige ||
Jate (Conclusion)
Hariya yajisu initu janumadoḷage omme |
Maraḷebāradu dēha guruvijayaviṭṭhala ball ||
***
a as in cup; ā as in father; i as in it; ī as in feel; u as in put; ū as in boot.
e as in get; ē as in say; o as in hot; ō as in go; ai as in aisle; au as in out.
ṭ, ḍ, ṇ, ḷ (with dots) are retroflex: curl your tongue back to touch the roof of the mouth.
ś is soft like sure; ṣ is a deep sh (retroflex); h is always voiced; ñ as in canyon.
ṃ (Anusvara) is a nasal hum; ṛ is a vocalic 'r' sound like the start of rhythm.
***
ಶ್ರೀ ಮೊದಲಕಲ್ಲು ಶೇಷದಾಸಾರ್ಯರು (ಅಂಕಿತ: ಗುರುವಿಜಯವಿಟ್ಠಲ) ವಿರಚಿತ ಈ "ಮಖ ಸುಳಾದಿ" (ಜ್ಞಾನಯಜ್ಞ ಸುಳಾದಿ) ದಾಸ ಸಾಹಿತ್ಯದ ಅತ್ಯಂತ ಗಹನವಾದ ಮತ್ತು ತಾತ್ವಿಕವಾದ ಕೃತಿಗಳಲ್ಲಿ ಒಂದು. ಇಲ್ಲಿ "ಮಖ" ಎಂದರೆ ಯಜ್ಞ. ಬಾಹ್ಯವಾಗಿ ಮಾಡುವ ಹೋಮ-ಹವನಗಳಿಗಿಂತ, ಶರೀರವನ್ನೇ ದೇವಸ್ಥಾನವನ್ನಾಗಿಸಿ, ಮನಸ್ಸಿನಲ್ಲಿಯೇ ಮಾಡುವ "ಅಧ್ಯಾತ್ಮ ಉಪಾಸನೆ" ಅಥವಾ "ಜ್ಞಾನಯಜ್ಞ" ಶ್ರೇಷ್ಠವಾದುದು ಎಂಬುದು ಈ ಸುಳಾದಿಯ ಸಾರ.
ಸಂಕ್ಷಿಪ್ತ ಸಾರಾಂಶ (Summary)
ಈ ಸುಳಾದಿಯಲ್ಲಿ ದಾಸಾರ್ಯರು ಮನುಷ್ಯ ದೇಹವನ್ನೇ ಬ್ರಹ್ಮಾಂಡಕ್ಕೆ ಹೋಲಿಸಿ, ಶರೀರದ ವಿವಿಧ ಭಾಗಗಳಲ್ಲಿರುವ ಸಪ್ತಲೋಕಗಳು ಮತ್ತು ಅಲ್ಲಿ ನೆಲೆಸಿರುವ ಪರಮಾತ್ಮನ ರೂಪಗಳನ್ನು ವರ್ಣಿಸಿದ್ದಾರೆ. ಬಾಹ್ಯ ಯಜ್ಞಗಳಿಗಿಂತ ಜ್ಞಾನಪೂರ್ವಕವಾಗಿ ಭಗವಂತನ ವ್ಯಾಪ್ತಿಯನ್ನು ತಿಳಿದು ಮಾಡುವ ಸೇವೆಯೇ ಮುಕ್ತಿಗೆ ದಾರಿಯೆಂದು ಸಾರುತ್ತಾರೆ. ಪರಮಾತ್ಮನು ಸರ್ವಜೀವಿಗಳಲ್ಲಿ ಬಿಂಬರೂಪಿಯಾಗಿ ನಿಂತು ಸಕಲ ವ್ಯಾಪಾರಗಳನ್ನು ಮಾಡಿಸುತ್ತಿದ್ದಾನೆ ಎಂಬ "ಅಸ್ವತಂತ್ರ ಸಿದ್ಧಾಂತ" ಮತ್ತು "ಬೀಮರೂಪೋಪಾಸನೆ" ಈ ಕೃತಿಯ ಕೇಂದ್ರಬಿಂದುವಾಗಿದೆ.
ಪದಗಳ ಅರ್ಥ ಮತ್ತು ಭಾವಾರ್ಥ (Paragraph-wise Meaning)
1. ಧ್ರುವತಾಳ: ದೇಹವೇ ಯಜ್ಞಶಾಲೆ
ಯಜ್ಞದ ಮರ್ಮವನ್ನು ಅರಿತು ಮಾಡು. ಭಗವಂತನು ನಖಶಿಖಾಂತವಾಗಿ ವ್ಯಾಪಿಸಿದ್ದಾನೆ. 84 ಲಕ್ಷ ಜೀವರಾಶಿಗಳಲ್ಲಿ ಆಯಾ ನಾಮ ಮತ್ತು ರೂಪಗಳಿಂದ ಅವನೇ ಇದ್ದು ಚೇಷ್ಟೆಗಳನ್ನು ಮಾಡಿಸುತ್ತಿದ್ದಾನೆ. ನಮ್ಮ ದೇಹದ ಧಾತುಗಳಲ್ಲಿ, ಇಂದ್ರಿಯಗಳಲ್ಲಿ ವ್ಯಾಪ್ತನಾಗಿ ಸುಖ-ದುಃಖಗಳನ್ನು ಉಣಿಸುತ್ತಾನೆ, ಆದರೆ ತಾನು ಮಾತ್ರ ನಿರ್ಲಿಪ್ತ ("ಅನಶ್ನನ್"). ಈ ಜ್ಞಾನವಿಲ್ಲದೆ ಉಸಿರಾಡಲು ಕೂಡ ಯಾರಿಗೂ ಶಕ್ತಿಯಿಲ್ಲ. ಇದನ್ನು ಅರಿತವನೇ ಭಾಗ್ಯವಂತ.
2. ಮಟ್ಟತಾಳ: ಜ್ಞಾನದ ಮಹತ್ವ
ವಾಜಪೇಯ, ಪೌಂಡರೀಕ ಮುಂತಾದ ದೊಡ್ಡ ಯಜ್ಞಗಳು ಕೇವಲ ರಾಜಸ ಗುಣದವು. ವೈರಾಗ್ಯ ಮತ್ತು ಜ್ಞಾನವಿಲ್ಲದ ಭಕ್ತಿ ಭಗವಂತನಿಗೆ ಪ್ರಿಯವಲ್ಲ. "ನಹಿ ಜ್ಞಾನೇನ ಸದೃಶಂ" (ಜ್ಞಾನಕ್ಕೆ ಸಮನಾದುದು ಯಾವುದೂ ಇಲ್ಲ) ಎಂಬಂತೆ ಜ್ಞಾನದೀಪವಿಲ್ಲದೆ ಅಜ್ಞಾನದ ಕತ್ತಲೆ ಓಡುವುದಿಲ್ಲ. ಜನ್ಮವಿಡೀ ಗುರುವಿಜಯವಿಟ್ಠಲನನ್ನು ಜ್ಞಾನದಿಂದ ಭಜಿಸುವುದೇ ಶ್ರೇಷ್ಠ.
3. ರೂಪಕತಾಳ: ಅಧಿಷ್ಠಾನಗಳ ಅರಿವು
ಸ್ನಾನವಿಲ್ಲದ ಕರ್ಮ, ಜಪವಿಲ್ಲದ ಪಾನ ವ್ಯರ್ಥ. ಹಾಗೆಯೇ ಜ್ಞಾನವಿಲ್ಲದ ಕರ್ಮ ಆನೆಯು ತಿಂದ ಮದದ ಹಣ್ಣಿನಂತೆ (ಹೊರಗೆ ಚೆನ್ನಾಗಿದ್ದರೂ ಒಳಗೆ ಶೂನ್ಯ). ಮಧ್ವಾಚಾರ್ಯರ (ಆನಂದತೀರ್ಥರ) ವಾಕ್ಯದಂತೆ ಹರಿವ್ಯಾಪ್ತಿಯನ್ನು ಜಡ ಮತ್ತು ಚೇತನಗಳಲ್ಲಿ ಗುರುತಿಸಬೇಕು. ಪ್ರಾಣದೇವರ ಮೂಲಕ ಹರಿಯೇ ಎಲ್ಲವನ್ನೂ ಮಾಡಿಸುತ್ತಿದ್ದಾನೆ ಎಂಬ ಅಧಿಷ್ಠಾನ ಜ್ಞಾನವೇ ಮುಕ್ತಿಗೆ ದ್ವಾರ.
4. ಝಂಪೆತಾಳ: ಸಾಧನ ಮತ್ತು ದಾನ
ಅಹಂಕಾರದಿಂದ ನೀಡುವ ದಾನಕ್ಕಿಂತ, ಜ್ಞಾನಪೂರ್ವಕವಾಗಿ ಸಾತ್ವಿಕ ಗುಣದಿಂದ ನೀಡುವ ಅಲ್ಪ ಜಲವೂ ಶ್ರೇಷ್ಠ. ನಮಗೆ ಬಂದ ಲಾಭದಲ್ಲಿ ಸಂತುಷ್ಟರಾಗಿ, ಜ್ಞಾನಿಗಳ ಸಂಗದಲ್ಲಿ ಭಗವಂತನ ಗುಣಗಾನ ಮಾಡಬೇಕು. ಭೂಸುರರಲ್ಲಿ (ಬ್ರಾಹ್ಮಣರಲ್ಲಿ/ಜ್ಞಾನಿಗಳಲ್ಲಿ) ಹರಿ ವ್ಯಾಪ್ತನಾಗಿದ್ದಾನೆ ಎಂದು ತಿಳಿದು ಮಾಡುವ ಸೇವೆಯೇ ನಿಜವಾದ ಯಜ್ಞ.
5. ತ್ರಿವಿಡಿತಾಳ: ಶಿರಸ್ಸಿನ ತತ್ವ (ಸತ್ಯಲೋಕ)
ನಮ್ಮ ಶಿರಸ್ಸಿನ ಮೇಲ್ಭಾಗದಲ್ಲಿ ಸಹಸ್ರಾರ ಕಮಲವಿದೆ. ಅಲ್ಲಿ ಚಂದ್ರನಂತೆ ಪ್ರಕಾಶಿಸುವ ವಾಸುದೇವ ರೂಪದ ಪರಮಾತ್ಮನಿದ್ದಾನೆ. ಇದನ್ನು ಗುರುಮುಖದಿಂದ ಅರಿಯಬೇಕು. ಅಲ್ಪ ಆಹಾರವನ್ನು ನೀಡುವಾಗಲೂ ಇದು ಭಗವಂತನಿಗೆ ಅರ್ಪಿತವೆಂಬ ಭಾವವಿರಲಿ. ಅಹಂಕಾರದ ಪ್ರಲಾಪ ದೇವರಿಗೆ ಇಷ್ಟವಿಲ್ಲ.
6 & 7. ಅಟ್ಟತಾಳ ಮತ್ತು ಆದಿತಾಳ: ಸತ್ಯಲೋಕ ಮತ್ತು ತಪೋಲೋಕ
ಶಿರಸ್ಸಿನಲ್ಲಿ ಸತ್ಯಲೋಕವಿದ್ದು ಅಲ್ಲಿ ಚತುರ್ಮುಖ ಬ್ರಹ್ಮಾದಿಗಳು ಹರಿಯನ್ನು ಸೇವಿಸುತ್ತಿದ್ದಾರೆ. ಹಾಗೆಯೇ ಹಣೆ (ಫಾಲಭಾಗ) ಯಲ್ಲಿ ತಪೋಲೋಕವಿದೆ. ಯದುಕುಲ ಶ್ರೇಷ್ಠನಾದ ಹರಿಯು ಅಲ್ಲಿ ನೆಲೆಸಿದ್ದಾನೆ ಎಂದು ಧೇನಿಸಬೇಕು.
8. ಧ್ರುವತಾಳ: ಜನೋಲೋಕ
ನಮ್ಮ ಇಂದ್ರಿಯ ಮೂಲದಲ್ಲಿ (ಇಂದ್ರಯೋನಿ) ಜನೋಲೋಕವಿದ್ದು, ಲಕುಮಿ-ನಾರಾಯಣರು ನೆಲೆಸಿದ್ದಾರೆ. ಅಲ್ಲಿ ದೇವತೆಗಳು ಹರಿಯನ್ನು ನವವಿಧ ಭಕ್ತಿಯಿಂದ ಪೂಜಿಸುತ್ತಾರೆ. ಅಹಂಕಾರ ಪಟ್ಟರೆ ಇಂದ್ರನಿಗೇ ಶಿಕ್ಷೆ ತಪ್ಪಿದ್ದಲ್ಲ, ಆದ್ದರಿಂದ ನಮ್ರತೆಯಿಂದ ಭಜಿಸು.
9. ಮಟ್ಟತಾಳ: ಮಹರ್ಲೋಕ
ಎದೆಯ ಭಾಗದಲ್ಲಿ (ಉರದಲ್ಲಿ) ಹನ್ನೆರಡು ದಳದ ಪದ್ಮವಿದೆ, ಇದುವೇ ಮಹರ್ಲೋಕ. ಇಲ್ಲಿ ಹರಿಯ ವಿವಿಧ ರೂಪಗಳು ಭೇದವಿಲ್ಲದೆ ಬೆಳಗುತ್ತಿವೆ. ಶಿವನು ಪಾರ್ವತಿ ಸಮೇತನಾಗಿ ಇಲ್ಲಿ ಹರಿಯನ್ನು ಸೇವಿಸುತ್ತಿದ್ದಾನೆ.
10. ತ್ರಿವಿಡಿತಾಳ: ಸ್ವರ್ಲೋಕ ಮತ್ತು ಹೃದಯ ಕಮಲ
ಹೃದಯದಲ್ಲಿ ಅಷ್ಟದಳ ಪದ್ಮವಿದ್ದು ಇದು ಸ್ವರ್ಲೋಕ. ಇಲ್ಲಿ ಪರಮಾತ್ಮನು ಐದು ದ್ವಾರಗಳಲ್ಲಿ ಪಂಚರೂಪಿಯಾಗಿ (ಪ್ರಾಣ, ಅಪಾನ, ವ್ಯಾನ, ಸಮಾನ, ಉದಾನ) ನೆಲೆಸಿದ್ದಾನೆ. ದೇಹದ ರಕ್ಷಣೆ ಮಾಡುವ ಈ ಹೃದಯವಾಸಿ ಹರಿಯನ್ನು ಮರೆತು ಹೊರಗೆ ಸಾಧನೆ ಮಾಡುವುದು ವ್ಯರ್ಥ.
11 & 12. ಅಟ್ಟತಾಳ ಮತ್ತು ರೂಪಕತಾಳ: ಭುವರ್ಲೋಕ ಮತ್ತು ಭೂರ್ಲೋಕ
ನಾಭಿ (ಹೊಕ್ಕುಳು) ಸ್ಥಾನದಲ್ಲಿ ಭುವರ್ಲೋಕವಿದ್ದು ಪ್ರದ್ಯುಮ್ನ ರೂಪದ ಹರಿಯಿದ್ದಾನೆ. ಮೂಲಾಧಾರ ಚಕ್ರದಲ್ಲಿ ಭೂರ್ಲೋಕವಿದ್ದು ಅನಿರುದ್ಧ ರೂಪದ ಹರಿಯಿದ್ದಾನೆ. ಈ ಲೋಕತ್ರಯಗಳ ಸ್ವಾಮಿ ಹರಿಯು ದೇಹದ ಕೀಲು ಕೀಲುಗಳಲ್ಲಿ ನಿಂತು ವ್ಯಾಪಾರ ಮಾಡುತ್ತಿದ್ದಾನೆ.
13. ಝಂಪೆತಾಳ: ಅಧೋಲೋಕಗಳು ಮತ್ತು ಅಸ್ವತಂತ್ರ ಜ್ಞಾನ
ತೊಡೆ, ಮೊಣಕಾಲು, ಪಾದಗಳಲ್ಲಿ ಅತಳ, ವಿತಳ ಮುಂತಾದ ಏಳು ಅಧೋಲೋಕಗಳಿವೆ. ಇಡೀ ಬ್ರಹ್ಮಾಂಡದ ಲೋಕಗಳು ನಮ್ಮ ದೇಹದಲ್ಲಿವೆ. ನಾನೇ ಸ್ವತಂತ್ರ ಎಂದು ಮೆರೆಯುವವನು ಮೂರ್ಖ. ಶರೀರಕ್ಕೆ ವ್ಯಾಧಿ ಬಂದಾಗ ತಡೆಯಲಾಗದ ಮನುಷ್ಯ ತಾನು ಸ್ವತಂತ್ರನೆಂದು ಹೇಳಿಕೊಳ್ಳುವುದು ಹಾಸ್ಯಾಸ್ಪದ.
14. ಧ್ರುವತಾಳ: ಬಿಂಬರೂಪದ ಪೂಜೆ
ಕೇವಲ ಪೆಟ್ಟಿಗೆಯಲ್ಲಿರುವ ವಿಗ್ರಹ ಪೂಜೆಯಷ್ಟೇ ಸಾಲದು. ವಿಷ್ಣು ಸಕಲ ವಸ್ತುಗಳಲ್ಲಿ ವ್ಯಾಪ್ತನಾಗಿದ್ದಾನೆ ಎಂದು ತಿಳಿಯಬೇಕು. ಬ್ರಹ್ಮ-ರುದ್ರಾದಿಗಳ ಪೂಜೆಯೂ ಅಂತರಾಮಿಯಾದ ಕೃಷ್ಣನಿಗೇ ಸೇರುತ್ತದೆ. ಸರ್ವಸಮರ್ಪಣಾ ಭಾವದಿಂದ ಪೂಜಿಸು.
15. ಮಟ್ಟತಾಳ: ಭಕ್ತಿಗೆ ವಶ ಹರಿ
ಪರಮಾತ್ಮನಿಗೆ ನಾವು ನೀಡುವ ಅನ್ನದ ಹಸಿವಿಲ್ಲ, ಅವನು ನಿತ್ಯತೃಪ್ತ. ದುರ್ಯೋಧನನ ಔತಣ ಬಿಟ್ಟು ವಿದುರನ ಮನೆಗೆ ಹೋದ ಕೃಷ್ಣನಂತೆ, ಅವನು ಬಯಸುವುದು ಕೇವಲ ಭಕ್ತಿಯನ್ನು ಮಾತ್ರ.
16. ತ್ರಿವಿಡಿತಾಳ: ಹರಿಯ ಅನಂತ ರೂಪಗಳು
ದೇಹದ ನಾಡಿಗಳಲ್ಲಿ, ಕೋಶಗಳಲ್ಲಿ ಲಕ್ಷಾಂತರ ರೂಪಗಳಿಂದ ಹರಿಯಿದ್ದಾನೆ. ಸ್ತ್ರೀ-ಪುರುಷ ರೂಪಗಳಲ್ಲಿ ಅವನೇ ಇದ್ದಾನೆ. ಈ ಭೇದವಿಲ್ಲದ ಜ್ಞಾನವುಳ್ಳವನನ್ನು ಹರಿ ಎಂದೂ ಅಗಲನು.
17 & 18. ರೂಪಕತಾಳ ಮತ್ತು ಝಂಪೆತಾಳ: ಕ್ಷೇತ್ರ ಮತ್ತು ಸಕಲ ಜೀವಿಗಳಲ್ಲಿ ಹರಿ
ಕಾಶಿ, ಬದರಿ ಮುಂತಾದ ಪುಣ್ಯಕ್ಷೇತ್ರಗಳಲ್ಲಿರುವ ಹರಿಯ ರೂಪಗಳನ್ನು ನಮ್ಮ ಹೃದಯವಾಸಿ ಹರಿಯಲ್ಲಿ ಐಕ್ಯ ಮಾಡಬೇಕು. ಬ್ರಾಹ್ಮಣನಿಂದ ಚಂಡಾಲನವರೆಗೆ, ಹಸುವಿನಿಂದ ನಾಯಿಯವರೆಗೆ ಎಲ್ಲರಲ್ಲಿಯೂ ಸಮದೃಷ್ಟಿಯಿಂದ ಹರಿಯನ್ನು ಕಾಣುವುದೇ ಪಂಡಿತನ ಲಕ್ಷಣ.
19. ಆದಿತಾಳ ಮತ್ತು ಜತೆ: ಗುಹ್ಯ ವಿದ್ಯೆ
ಇದು ಅತ್ಯಂತ ರಹಸ್ಯವಾದ ವಿದ್ಯೆ. ಇದು ಶ್ರೀಹರಿಯ ವಾಕ್ಯ. ಇದನ್ನು ಅರಿತವರು ಮನುಷ್ಯರಲ್ಲ, ದೇವತೆಗಳೇ ಸರಿ. ಜೀವನದಲ್ಲಿ ಒಮ್ಮೆ ಈ ರೀತಿ ಜ್ಞಾನಪೂರ್ವಕವಾಗಿ ಹರಿಯನ್ನು ಯಜಿಸಿದರೆ ಮತ್ತೆ ಜನ್ಮವಿರುವುದಿಲ್ಲ.
ಗಮನಿಸಿ: ಈ ಸುಳಾದಿಯು ಭಗವಂತನ "ಸರ್ವವ್ಯಾಪಿತ್ವ" ಮತ್ತು ಮನುಷ್ಯನ **"ಪಾರತಂತ್ರ್ಯ"**ವನ್ನು ಸಾರುವ ಅದ್ಭುತ ಕೃತಿಯಾಗಿದೆ.
***
his profound composition by Sri Modalakallu Sheshadacharya (pen name: Guruvijayavitthala) is titled the "Makha Suladi" or the "Jnana Yajna Suladi." In the Haridasa tradition, a Suladi is a multi-talented rhythmic song used to explain complex philosophical concepts. "Makha" means sacrifice (Yajna). Here, the poet explains that the highest form of worship is not the external fire ritual, but the internal "Knowledge-Sacrifice" (Jnana Yajna), where one perceives the entire universe and the Divine within their own body.
Brief Summary
The poet describes the human body as a temple containing the entire cosmos. He maps the fourteen worlds (seven upper and seven lower) onto different parts of the body—from the crown of the head to the soles of the feet. The central theme is "Bimba Upasana" (Worship of the Reflection): realizing that Lord Hari (the Bimba) stays within the soul (the reflection) and performs every action, while the human is merely an instrument. He emphasizes that rituals without this knowledge are fruitless.
Stanza-wise Meaning
1. Dhruva Tala: The Body as the Altar
Understand the secret of the true sacrifice. Keep the Lord, whose feet are worshipped by the sages, in your heart. Give up anxiety and perform worship with pure love. From the tip of your nails to the hair on your head, Lord Hari is pervasive. Across 8.4 million species, He exists in every creature, performing all actions through them while remaining untouched by the results (Anashnan).
2. Matta Tala: The Superiority of Knowledge
Great sacrifices like Vajapeya are often driven by Rajas (passion). Without the light of knowledge (Jnana), the darkness of ignorance will never vanish. As the Gita says, "There is nothing equal to knowledge." Worship the Lord of the three worlds through this wisdom.
3. Rupaka Tala: Internal Presence
Rituals without knowledge are as useless as food without water or an elephant eating a wood-apple (which stays whole outside but is empty inside). Following the teachings of Sri Madhvacharya, recognize Hari’s presence in both the living and the inert. Realize that the Lord acts through the breath (Prana).
4. Jhampe Tala: Contentment and Service
Instead of the ego-driven charity of the wicked, the wise offer "the nectar of knowledge." Be content with what comes naturally (Yadriccha Labha). See the learned and the pious as the dwelling place (Adhisthana) of the Lord and serve them with respect.
5. Trivida Tala: The Crown (Satya Loka)
Twelve inches above the head lies the thousand-petaled lotus (Sahasrara), shining like the moon. This is the abode of Lord Vasudeva, known as Satya Loka. One must learn from a Guru to visualize this. When you offer anything, pray to the Lord to accept it, shedding the ego of "I am the giver."
6 & 7. Atta & Adi Tala: Higher Realms
The poet identifies Satya Loka at the crown and Tapo Loka at the forehead (Phala bhaga). He urges the seeker to meditate on the feet of Guruvijayavitthala, who is served by all deities in these internal realms.
8. Dhruva Tala: Janoloka
At the base of the senses (Indra-yoni) is Janoloka, where Lakshmi and Narayana reside in white splendor. Deities worship Him there with nine types of devotion. If ego enters, even Indra is punished; therefore, worship with humility.
9. Matta Tala: Maharloka
In the chest (Ura) lies a twelve-petaled lotus called Maharloka. Here, various forms of the Lord shine without difference. Lord Shiva and Parvati serve Him here with great devotion.
10. Trivida Tala: Svarga Loka and the Heart
In the heart resides an eight-petaled lotus, bright as the rising sun, known as Svarga Loka. Here, the Lord exists in five forms (Prana, Apana, Vyana, Samana, Udana). He protects the body from within. To seek Him only in external rituals while ignoring the dweller of the heart is a waste of effort.
11 & 12. Atta & Rupaka Tala: Bhuvarloka and Bhurloka
Bhuvarloka is at the navel (Nabhi) where Lord Pradyumna resides. Bhurloka is at the base (Muladhara) where Lord Aniruddha stays. The Lord of the three worlds moves through every joint and nerve of the body. One who fails to see this is compared to a wild animal in human form.
13. Jhampe Tala: The Lower Worlds and Independence
The seven lower worlds (Atala, Vitala, etc.) are located in the thighs, knees, and feet. The poet mocks those who claim "I am independent." If man were independent, why would he suffer disease or death? All power belongs to the Lord who carries the weight of the universe.
14. Dhruva Tala: Beyond the Idol Box
Worshipping an idol in a box is good, but thinking the Lord is only there is a mistake. He is everywhere. Even when worshipping other deities or elders, one should see the Lord dwelling in the eight-petaled lotus of their hearts.
15. Matta Tala: Bound by Devotion
The Lord, who creates the universe, does not need the food we offer. He is "Nitya Tripta" (Forever Satisfied). He rejected the feast of the egoistic Duryodhana but ate the simple grains at Vidura’s house because of love. He is won over only by devotion.
16. Trivida Tala: Infinite Forms
The Lord exists in infinite forms within the 72,000 nerves (Nadis) and various sheaths (Koshas) of the body. He is both masculine and feminine in His attributes. Realizing this "unity in diversity" ensures the Lord never leaves the seeker's side.
17 & 18. Rupaka & Jhampe Tala: Universal Integration
Visualize the deities of holy places like Kashi, Badari, and Ayodhya as being identical to the Lord in your heart. See the same Lord in a scholar, a cow, an elephant, or a dog (Samadarshina). Without this realization, all charity and rituals lead only to temporary rewards and rebirth.
19. Adi Tala & Closing: The Secret Wisdom
This is a "Gopya" (Secret) wisdom, intended only for the followers of the Sadh-Vaishnava path (Madhva philosophy). Those who understand this are not mere humans; they are divine. By performing this internal sacrifice even once in a lifetime, one escapes the cycle of birth and death.
Key Takeaway: The Suladi teaches that Self-Realization is the act of seeing the entire hierarchy of gods and the Supreme Lord working inside your own biological and spiritual framework.
***
Its a great work👌thanks for posting the script🙏
ReplyDelete