Saturday, 14 December 2019

ರತುನ ದೊರಕಿತಲ್ಲ ಎನಗೆ ದಿವ್ಯ ರತುನ ankita jagannatha vittala RATUNA DORAKITALLA ENAGONDU DIVYA



ರತುನ ದೊರಕಿತಲ್ಲ ಎನಗೆ ದಿವ್ಯ-
ರತುನ ದೊರಕಿತಲ್ಲ ||ಪ||

ರತುನ ದೊರಕಿತು ಎನ್ನ ಜನ್ಮ ಪ-
ವಿತ್ರವಾಯಿತು ಈ ದಿನವು ನಾ
ಯತುನಗೈವುತ ಬರುತಿರಲು ಪ್ರ-
ಯತನವಿಲ್ಲದೆ ವಿಜಯರಾಯರೆಂಬ ||ಅ. ಪ||

ಪಥದಿ ನಾ ಬರುತಿರಲು ಥಳಥಳವೆಂದು
ಅತಿಕಾಂತಿ ಝಳಪಿಸಲು ಬೆರಗಾಗುತ್ತ
ಅತಿಚೋದ್ಯವ ಕಾಣಲು ಸೇವಿಸುತಿರೆ
ಸತತ ಕರಪಿಡಿದಾದರಿಸಿ ಮನೋ
ರಥವ ಪೂರೈಸುತಲಿ ದಿವ್ಯ ಸ-
ನ್ಮತಿಯ ಪಾಲಿಸಿ ಮೋಕ್ಷ ಸುಪಥವ
ಅತಿಶಯದಿ ತೋರುತಲಿ ಪೊರೆಯುವ ||೧||

ಜ್ಞಾನವೆಂಬೋ ಪುತ್ಥಳಿ ಕಂಬಿಯಲಿ
ಅಣಿಮುತ್ತಿನ ಭಕ್ತಿಲಿ ಸುಕೃತಮಾತಾ
ನಾನಾ ವಿಧ್ಹ್ ವಳದಲಿ ಸೇರಿಸುತಿರೆ
ಪ್ರಾಣಪದಕವೆಂಬ ಮಾಲಾನು-
ಮಾನವಿಲ್ಲದೆ ಕೊರಳಿಗ್ಹಾಕುತ
ಗಾನದಿಂ ಕುಣಿಯುತಲಿ ಪಾಡುತ
ದೀನ ಜನರುದ್ಧಾರ ಗಯ್ಯುವ ||೨||

ಶೋಧಿಸಿ ಗ್ರಂಥಗಳ ಸುಳಾದಿಯ
ಮೋದದಿಂದಲಿ ಬಹಳ ಕವಿತೇ ಮಾಡಿ
ಸಾಧುಜನಕೆ ಸುಕಾಲ ಆನಂದವಿತ್ತು
ವಾದಿ ಜನರನು ಗೆದ್ದು ವಾದಿಸಿ
ಮಾಧವ ಜಗನ್ನಾಥವಿಠಲನ
ಪಾದಕಮಲಕೆ ಮಧುಪನಂದದಿ
ಸಾದರದಿ ತೋರಿಸುತ ಮೆರೆಯುವ ||೩||
***

ರಾಗ: ಬಿಲಹರಿ( ಭೀಮ್ ಪಲಾಸ್ ) ಆಟತಾಳ(ದೀಪಚಂದಿ)

Rathuna dhorakithalla enagondu Rathuna dhorakithalla||

rathuna dhorakithu enna januma pavithra vaayuthu
indhina dhinaa adhisayathu thuthusithire
baruthiralu prayathana maadadhe vijayaraayarembo||

Gnanavembo buddhli gambiyali
aani mutthina bakthili sukrutha maala
naana vidhadha vanadhali yochisuthire
praana padhakava maale vembanu
maana villadhe korallig haakidha
ganadhindhali kunithu paadalu
dheena janaruddhara gayutha||1||

paddhathi naa baruthiralu thala thala vendu
adhi kaanthi thaalalu beragaagutha
athi sothyana paadalu sevisuthire
sathatha karapidi tha darisi
manorathava booraisuthali
sanmathiya paalisu moksha supathavage
premaadhi sayathi thori mereyutha||2||

sodhisi granthagala sulaadhiya
modha dhindhali bahala kavithaa maadi
sadhu janaka sakalaandhava niddhu
vaadhiyanu tha kaadhu geddhu
maadhava jagannatha vittalana
paadha kamalakke madhupanandhadhi
saadharadhi arpisutha mereyutha||3|| 
***

pallavi

ratna dorakitalla enage divya ratna dorakitalla

anupallavi

ratuna dorakitu enna janma pavitravAyitu I dinavu nAyatuna gaivuta barutiralu prayatanavillade vijayarAyaremba

caraNam 1

pathadi nA barutiralu thaLathaLavendu ati kAnti jhaLa piasalu beragAgutta
aticOdyava kANalu sEvisutirE satata kara piDidAsarisi manOrathava pUraisutali
divya sanmatiya pAlisi mOkSa supathava atishayadi tOrutali poreyuva

caraNam 2

jnAnavembO putthaLi kambiyali aNimuttina bhaktili sukratamAtA
nAnAvidhavaLadali tErisutirE prANa padakavemba mAlAnu mAnavillade
koraLighAkuta gAnadim kUniyutali pADuta

caraNam 3

dIna janaruddhAra gayyuva shOdisi granthagaLa suLAdiya mOdadindali bahuLa
kavitE mADi sAdhujanakE sukhAla Anandavittu vAdijanaranu geddu vAdisi mAdhava
jagannAtha viThalana pAda kamalake madhupanandadi sAdaradi tOrisuta neneyuva
***

ರತುನ ದೊರಕಿತಲ್ಲ | ಎನಗೆ ದಿವ್ಯ ರತುನ ದೊರಕಿತಲ್ಲ ಪ
ರತುನ ದೊರಕಿತು ಎನ್ನ ಜನುಮ ಪ
ವಿತರವಾಯಿತು ಈ ದಿನದಿ ನಾ
ಯತನ ಗೈಯುತ ಬರುತಿರಲು ಪ್ರ
ಯತನವಿಲ್ಲದೆ ವಿಜಯರಾಯರೆಂಬೊ ಅ.ಪ.
ಪಥದಿ ನಾ ಬರುತಿರಲು ಥಳಥಳವೆಂದು
ಅತಿ ಕಾಂತಿ ಝಳಪಿಸಲು ಬೆರಗಾಗುತ್ತ
ಅತಿ ಚೋದ್ಯವ ಕಾಣಲು ಸೇವಿಸುತಿರೆ
ಸತತ ಕರಪಿಡಿದಾದರಿಸಿ ಮನೋ
ರಥವ ಪೂರೈಸುತಲಿ ದಿವ್ಯ | ಸ
ನ್ಮತಿಯ ಪಾಲಿಸಿ ಮೋಕ್ಷ ಸುಪಥವ
ಅತಿಶಯದಿ ತೋರುತ್ತ ಪೊರೆದ 1

ಪುತ್ಥಳಿ ಕಂಬಿಯಲ್ಲಿ
ಸುಕೃತ ಮಾಲಾ
ನಾನಾವಿಧ ಹವಳದಲಿ ಸೇರಿಸುತಲಿ
ಪ್ರಾಣ ಪದಕವೆಂಬ ಮಾಲೆಯನು ಅನು
ಮಾನವಿಲ್ಲದೆ ಕೊರಳಿಗ್ಹಾಕುತ
ಗಾನದಿಂ ಕುಣಿಯುತ್ತ ಪಾಡುತ್ತ
ದೀನ ಜನರುದ್ಧಾರ ಗೈಯುವ 2

ಶೋಧಿಸಿ ಗ್ರಂಥಗಳ - ಸುಳಾದಿಯ
ಮೋದದಿಂದಲಿ ಬಹಳ ಕವಿತೆ ಮಾಡಿ
ಸಾಧುಜನಕೆ ಸಕಾಲ ಆನಂದ ವಿತ್ತು
ವಾದಿಜನರನು ಗೆದ್ದು ಬೋಧಿಸಿ
ಮಾಧವ ಜಗನ್ನಾಥ ವಿಠಲನ
ಪಾದ ಕಮಲಕೆ ಮಧು ಪನಂದದಿ
ಸಾದರದಿ ತೋರುತ್ತ ಮೆರೆಯುವ 3
********

ರತುನ ದೊರಕಿತಲ್ಲ ಎನಗೆ ದಿವ್ಯ-
ರತುನ ದೊರಕಿತಲ್ಲ ||ಪ||

ರತುನ ದೊರಕಿತು ಎನ್ನ ಜನ್ಮ ಪ-
ವಿತ್ರವಾಯಿತು ಈ ದಿನವು ನಾ
ಯತುನಗೈವುತ ಬರುತಿರಲು ಪ್ರ-
ಯತನವಿಲ್ಲದೆ ವಿಜಯರಾಯರೆಂಬ ||ಅ. ಪ||

ಪಥದಿ ನಾ ಬರುತಿರಲು ಥಳಥಳವೆಂದು
ಅತಿಕಾಂತಿ ಝಳಪಿಸಲು ಬೆರಗಾಗುತ್ತ
ಅತಿಚೋದ್ಯವ ಕಾಣಲು ಸೇವಿಸುತಿರೆ
ಸತತ ಕರಪಿಡಿದಾದರಿಸಿ ಮನೋ
ರಥವ ಪೂರೈಸುತಲಿ ದಿವ್ಯ ಸ-
ನ್ಮತಿಯ ಪಾಲಿಸಿ ಮೋಕ್ಷ ಸುಪಥವ
ಅತಿಶಯದಿ ತೋರುತಲಿ ಪೊರೆಯುವ ||೧||

ಜ್ಞಾನವೆಂಬೋ ಪುತ್ಥಳಿ ಕಂಬಿಯಲಿ
ಅಣಿಮುತ್ತಿನ ಭಕ್ತಿಲಿ ಸುಕೃತಮಾತಾ
ನಾನಾ ವಿಧ್ಹ್ ವಳದಲಿ ಸೇರಿಸುತಿರೆ
ಪ್ರಾಣಪದಕವೆಂಬ ಮಾಲಾನು-
ಮಾನವಿಲ್ಲದೆ ಕೊರಳಿಗ್ಹಾಕುತ
ಗಾನದಿಂ ಕುಣಿಯುತಲಿ ಪಾಡುತ
ದೀನ ಜನರುದ್ಧಾರ ಗಯ್ಯುವ ||೨||

ಶೋಧಿಸಿ ಗ್ರಂಥಗಳ ಸುಳಾದಿಯ
ಮೋದದಿಂದಲಿ ಬಹಳ ಕವಿತೇ ಮಾಡಿ
ಸಾಧುಜನಕೆ ಸುಕಾಲ ಆನಂದವಿತ್ತು
ವಾದಿ ಜನರನು ಗೆದ್ದು ವಾದಿಸಿ
ಮಾಧವ ಜಗನ್ನಾಥವಿಠಲನ
ಪಾದಕಮಲಕೆ ಮಧುಪನಂದದಿ
ಸಾದರದಿ ತೋರಿಸುತ ಮೆರೆಯುವ ||೩||
*******

ಜಗನ್ನಾಥದಾಸರು
ರತುನ ದೊರಕಿತಲ್ಲ | ಎನಗೆ ದಿವ್ಯ ರತುನ ದೊರಕಿತಲ್ಲ ಪ

ರತುನ ದೊರಕಿತು ಎನ್ನ ಜನುಮ ಪ
ವಿತರವಾಯಿತು ಈ ದಿನದಿ ನಾ
ಯತನ ಗೈಯುತ ಬರುತಿರಲು ಪ್ರ
ಯತನವಿಲ್ಲದೆ ವಿಜಯರಾಯರೆಂಬೊ ಅ.ಪ.

ಪಥದಿ ನಾ ಬರುತಿರಲು ಥಳಥಳವೆಂದು
ಅತಿ ಕಾಂತಿ ಝಳಪಿಸಲು ಬೆರಗಾಗುತ್ತ
ಅತಿ ಚೋದ್ಯವ ಕಾಣಲು ಸೇವಿಸುತಿರೆ
ಸತತ ಕರಪಿಡಿದಾದರಿಸಿ ಮನೋ
ರಥವ ಪೂರೈಸುತಲಿ ದಿವ್ಯ | ಸ
ನ್ಮತಿಯ ಪಾಲಿಸಿ ಮೋಕ್ಷ ಸುಪಥವ
ಅತಿಶಯದಿ ತೋರುತ್ತ ಪೊರೆದ 1

ಪುತ್ಥಳಿ ಕಂಬಿಯಲ್ಲಿ
ಸುಕೃತ ಮಾಲಾ
ನಾನಾವಿಧ ಹವಳದಲಿ ಸೇರಿಸುತಲಿ
ಪ್ರಾಣ ಪದಕವೆಂಬ ಮಾಲೆಯನು ಅನು
ಮಾನವಿಲ್ಲದೆ ಕೊರಳಿಗ್ಹಾಕುತ
ಗಾನದಿಂ ಕುಣಿಯುತ್ತ ಪಾಡುತ್ತ
ದೀನ ಜನರುದ್ಧಾರ ಗೈಯುವ 2

ಶೋಧಿಸಿ ಗ್ರಂಥಗಳ - ಸುಳಾದಿಯ
ಮೋದದಿಂದಲಿ ಬಹಳ ಕವಿತೆ ಮಾಡಿ
ಸಾಧುಜನಕೆ ಸಕಾಲ ಆನಂದ ವಿತ್ತು
ವಾದಿಜನರನು ಗೆದ್ದು ಬೋಧಿಸಿ
ಮಾಧವ ಜಗನ್ನಾಥ ವಿಠಲನ
ಪಾದ ಕಮಲಕೆ ಮಧು ಪನಂದದಿ

ಸಾದರದಿ ತೋರುತ್ತ ಮೆರೆಯುವ 3
***********

No comments:

Post a Comment