Madhwanama
by Sri Venugopal Khatawkar LEARN FROM THIS AUDIO
CHAITRA SURESH RAO Dallas Texas 2018
CLICK-> INDEX ದೇವರನಾಮ ಕೇಳಿ ಕಲಿಯಲು ಲಿಂಕ್ LINKS TO LEARN DEVARANAMA
or just scroll down for other devaranama
Madhwanama by Sripadarajaru
ಜಯ ಜಯ ಜಗತ್ರಾಣ
ಜಗದೊಳಗೆ ಸುತ್ರಾಣ
ಅಖಿಳ ಗುಣ ಸದ್ಧಾಮ ಮಧ್ವನಾಮ || ಪ. ||
ಆವ ಕಚ್ಚಪ ರೂಪದಿಂದ
ಲಂಡೋದಕವ ಓವಿ ಧರಿಸಿದ ಶೇಷಮೂರುತಿಯನು
ಆವವನ ಬಳಿ ವಿಡಿದು ಹರಿಯ ಸುರರೆಯ್ದುವರು
ಆ ವಾಯು ನಮ್ಮ ಕುಲ ಗುರುರಾಯನು || 1 ||
ಆವವನು ದೇಹದೊಳಗಿರಲು ಹರಿ ನೆಲಸಿಹನು
ಆವವನು ತೊಲಗೆ ಹರಿ ತಾ ತೊಲಗುವ
ಆವವನು ದೇಹದ ಒಳ ಹೊರಗೆ ನಿಯಾಮಕನು
ಆ ವಾಯು ನಮ್ಮ ಕುಲ ಗುರುರಾಯನು || 2 ||
ಕರುಣಾಭಿಮಾನಿ ಸುರರು ದೇಹವ ಬಿಡಲು
ಕುರುಡ ಕಿವುಡ ಮೂಕನೆಂದೆನಿಸುವ
ಪರಮ ಮುಖ್ಯಪ್ರಾಣ ತೊಲಗಲಾ ದೇಹವನು
ಅರಿತು ಪೆಣವೆಂದು ಪೇಳುವರು ಬುಧ ಜನ || 3 ||
ಸುರರೊಳಗೆ ನರರೊಳಗೆ ಸರ್ವ ಭೂತಗಳೊಳಗೆ
ಪರತರನೆನಿಸಿ ನಿಯಾಮಿಸಿ ನೆಲಸಿಹ
ಹರಿಯನಲ್ಲದೆ ಬಗೆಯ ಅನ್ಯರನು ಲೋಕದೊಳು
ಗುರು ಕುಲ ತಿಲಕ ಮುಖ್ಯ ಪವಮಾನನು || 4 ||
ತ್ರೇತೆಯಲಿ ರಘುಪತಿಯ ಸೇವೆ ಮಾಡುವೆನೆಂದು
ವಾತ ಸುತ ಹನುಮಂತನೆಂದೆನಿಸಿದ
ಪೋತ ಭಾವದಿ ತರಣಿ ಬಿಂಬಕ್ಕೆ ಲಂಘಿಸಿದ
ಈತಗೆಣೆಯಾರು ಮೂರ್ಲೋಕದೊಳಗೆ || 5 ||
ತರಣಿ ಗಭಿಮುಖನಾಗಿ ಶಬ್ದ ಶಾಸ್ತ್ರವ ರಚಿಸಿ
ಉರವಣಿಸಿ ಹಿಂದು ಮುಂದಾಗಿ
ನಡೆದ ಪರಮ ಪವಮಾನಸುತ ಉದಯಾಸ್ತ
ಶೈಲಗಳಭರದಿಯೈದಿದಗೀತಗುಪಮೆ ಉಂಟೇ || 6 ||
ಅಖಿಳ ವೇದಗಳ ಸಾರ ಪಠಿಸಿದನು ಮುನ್ನಲ್ಲಿ
ನಿಖಿಳ ವ್ಯಾಕರಣಗಳ ಇವ ಪಠಿಸಿದ
ಮುಖದಲ್ಲಿ ಕಿಂಚಿದಪ ಶಬ್ದ ಇವಗಿಲ್ಲೆಂದು
ಮುಖ್ಯಪ್ರಾಣನನು ರಾಮನನುಕರಿಸಿದ || 7 ||
ತರಣಿ ಸುತನನು ಕಾಯ್ದು ಶರಧಿಯನು
ನೆರೆ ದಾಟಿ ಧರಣಿ ಸುತೆಯಳ ಕಂಡು ದನುಜರೊಡನೆ
ಭರದಿ ರಣವನೆ ಮಾಡಿ ಗೆಲಿದು ದಿವ್ಯಾಸ್ತ್ರಗಳ
ಉರುಹಿ ಲಂಕೆಯ ಬಂದ ಹನುಮಂತನು || 8 ||
ಹರಿಗೆ ಚೂಡಾಮಣಿಯನಿತ್ತು ಹರಿಗಳ ಕೂಡಿ
ಶರಧಿಯನು ಕಟ್ಟಿ ಬಲು ರಕ್ಕಸರನು ಒರಸಿ ರಣದಲಿ
ದಶ ಶಿರನ ಹುಡಿ ಗುಟ್ಟಿದ
ಮೆರೆದ ಹನುಮಂತ ಬಲವಂತ ಧೀರ || 9 ||
ಉರಗ ಬಂಧಕೆ ಸಿಲುಕಿ ಕಪಿವರರು ಮೈಮರೆಯೆ
ತರಣಿ ಕುಲ ತಿಲಕನಾಜ್ಞೆಯ ತಾಳಿದಗಿರಿ ಸಹಿತ
ಸಂಜೀವನವ ಕಿತ್ತು ತಂದಿತ್ತ ಹರಿವರಗೆ
ಸರಿಯುಂಟೆ ಹನುಮಂತಗೆ || 10 ||
ವಿಜಯ ರಘುಪತಿ ಮೆಚ್ಚಿ ಧರಣಿ ಸುತೆಯಳಿಗೀಯೆ
ಭಜಿಸಿ ಮೌಕ್ತಿಕದ ಹಾರವನು ಪಡೆದ
ಅಜ ಪದವಿಯನು ರಾಮ ಕೊಡುವೆನೆನೆ ಹನುಮಂತ
ನಿಜ ಭಕುತಿಯನೆ ಬೇಡಿ ವರವ ಪಡೆದ || 11 ||
ಆ ಮಾರುತನೆ ಭೀಮನೆನಿಸಿ ದ್ವಾಪರದಲ್ಲಿ
ಸೋಮ ಕುಲದಲಿ ಜನಿಸಿ ಪಾರ್ಥನೊಡನೆ
ಭೀಮ ವಿಕ್ರಮ ರಕ್ಕಸರ ಮುರಿದೊಟ್ಟಿದ
ಆ ಮಹಿಮನಮ್ಮ ಕುಲ ಗುರು ರಾಯನು || 12 ||
ಕರದಿಂದ ಶಿಶು ಭಾವನಾದ ಭೀಮನ ಬಿಡಲು.
ಗಿರಿ ವಡೆದು ಶತ ಶೃಂಗವೆಂದೆನಿಸಿತು
ಹರಿಗಳ ಹರಿಗಳಿಂ ಕರಿಗಳ ಕರಿಗಳಿಂ ಅರೆವ ವೀರನಿಗೆ
ಸುರ ನರರು ಸರಿಯೇ || 13 ||
ಕುರುಪ ಗರಳವನಿಕ್ಕೆ ನೆರೆ ಉಂಡು ತೇಗಿ
ಹಸಿದುರಗಗಳ ಮ್ಯಾಲೆ ಬಿಡಲದನೊರಸಿದ
ಅರಗಿನರಮನೆಯಲ್ಲಿ ಉರಿಯನಿಕ್ಕಲು ವೀರ ಧರಿಸಿ
ಜಾಹ್ನವಿಗೊಯ್ದ ತನ್ನನುಜರ || 14 ||
ಅಲ್ಲಿರ್ದ ಬಕ ಹಿಡಿಂಬಕರೆಂಬ ರಕ್ಕಸರನಿಲ್ಲದೊರಸಿದ
ಲೋಕ ಕಂಟಕರನು ಬಲ್ಲಿದಸುರರ ಗೆಲಿದು
ದ್ರೌಪದಿಯ ಕೈವಿಡಿದು
ಎಲ್ಲ ಸುಜನರಿಗೆ ಹರುಷವ ತೋರಿದ || 15 ||
ರಾಜಕುಲ ವಜ್ರನೆನಿಸಿದ ಮಾಗಧನ ಸೀಳಿ
ರಾಜಸೂಯ ಯಾಗವನು ಮಾಡಿಸಿದನು
ಆಜಿಯೊಳು ಕೌರವರ ಬಲವ ಸವರುವೆನೆಂದು
ಮೂಜಗವರಿಯೆ ಕಂಕಣ ಕಟ್ಟಿದ || 16 ||
ಮಾನನಿಧಿ ದ್ರೌಪದಿಯ ಮನದಿಂಗಿತವನರಿತು
ದಾನವರ ಸವರಬೇಕೆಂದು ಬ್ಯಾಗಕಾನನವ ಪೊಕ್ಕು
ಕಿಮ್ಮೀರಾದಿಗಳ ತರಿದು
ಮಾನಿನಿಗೆ ಸೌಗಂಧಿಕವನೆ ತಂದ || 17 ||
ದುರುಳ ಕೀಚಕನು ತಾಂ ದ್ರೌಪದಿಯ
ಚಲುವಿಕೆಗೆ ಮರುಳಾಗಿ ಕರೆ ಕರೆಯ ಮಾಡಲವನಾ
ಗರಡಿ ಮನೆಯಲ್ಲಿ ವರೆಸಿ ಅವನನ್ವಯದ ಕುರುಪನಟ್ಟಿದ
ಮಲ್ಲ ಕುಲವ ಸದೆದ || 18 ||
ಕೌರವರ ಬಲ ಸವರಿ ವೈರಿಗಳ ನೆಗ್ಗೊತ್ತಿ
ಓರಂತೆ ಕೌರವನ ಮುರಿದು ಮೆರೆದ
ವೈರಿ ದುಶ್ಯಾಸನ್ನ ರಣದಲ್ಲಿ ಎಡೆ ಗೆಡಹಿ
ವೀರ ನರಹರಿಯ ಲೀಲೆಯ ತೋರಿದ || 19 ||
ಗುರು ಸುತನು ಸಂಗರದಿ ನಾರಾಯಣಾಸ್ತ್ರವನು
ಉರವಣಿಸಿ ಬಿಡಲು ಶಸ್ತ್ರವ ಬಿಸುಟರು
ಹರಿ ಕೃಪೆಯ ಪಡೆದಿರ್ದ ಭೀಮ ಹುಂಕಾರದಲಿ
ಹರಿಯ ದಿವ್ಯಾಸ್ತ್ರವನು ನೆರೆ ಅಟ್ಟಿದ || 20 ||
ಚಂಡ ವಿಕ್ರಮನು ಗದೆಗೊಂಡು ರಣದಿ
ಭೂಮಂಡಲದೊಳಿದಿರಾಂತ ಖಳರನೆಲ್ಲಾಹಿಂಡಿ
ಬಿಸುಟಿಹ ವೃಕೋದರನ ಪ್ರತಾಪವನುಕಂಡು
ನಿಲ್ಲುವರಾರು ತ್ರಿಭುವನದೊಳು || 21 ||
ದಾನವರು ಕಲಿಯುಗದೊಳವತರಿಸಿ ವಿಬುಧರೊಳು
ವೇನನ ಮತ ವನರುಹಲದನರಿತು
ಜ್ಞಾನಿ ತಾ ಪವಮಾನ ಭೂತಳದೊಳವತರಿಸಿ
ಮಾನನಿಧಿ ಮಧ್ವಾಖ್ಯನೆಂದೆನಿಸಿದ || 22 ||
ಅರ್ಭಕತನದೊಳೈದಿ ಬದರಿಯಲಿ
ಮಧ್ವಮುನಿ ನಿರ್ಭಯದಿ ಸಕಳ ಶಾಸ್ತ್ರವ ಪಠಿಸಿದ
ಉರ್ವಿಯೊಳು ಮಾಯೆ ಬೀರಲು ತತ್ವ ಮಾರ್ಗವನು
ಓರ್ವ ಮಧ್ವಮುನಿ ತೋರ್ದ ಸುಜನರ್ಗೆ || 23 ||
ಸರ್ವೇಶ ಹರಿ ವಿಶ್ವ ಎಲ್ಲ ತಾ ಪುಸಿಯೆಂಬ
ದುರ್ವಾದಿಗಳ ಮತವ ನೆರೆ ಖಂಡಿಸಿ
ಸರ್ವೇಶ ಹರಿ ವಿಶ್ವ ಸತ್ಯವೆಂದರುಹಿ
ದಾಶರ್ವಾದಿ ಗೀರ್ವಾಣ ಸಂತತಿಯಲಿ || 24 ||
ಬದರಿಕಾಶ್ರಮಕೆ ಪುನರಪಿಯೈದಿ ವ್ಯಾಸಮುನಿ
ಪದಕೆರಗಿ ಅಖಿಳ ವೇದಾರ್ಥಗಳನು
ಪದುಮನಾಭನ ಮುಖದಿ ತಿಳಿದು
ಬ್ರಹ್ಮತ್ವಯ್ಯೆದಿದ ಮಧ್ವಮುನಿರಾಯಗಭಿವಂದಿಪೆ || 25 ||
ಜಯ ಜಯತು ದುರ್ವಾದಿ ಮತ
ತಿಮಿರ ಮಾರ್ತಾಂಡ ಜಯ ಜಯತು ವಾದಿ ಗಜ ಪಂಚಾನನ
ಜಯ ಜಯತು ಚಾರ್ವಾಕ ಗರ್ವ ಪರ್ವತ ಕುಲಿಶ
ಜಯ ಜಯ ಜಗನ್ನಾಥ ಮಧ್ವನಾಥ || 26 ||
ತುಂಗ ಕುಲ ಗುರು ವರನ ಹೃತ್ಕಮಲದಲಿ ನಿಲಿಸಿ
ಭಂಗ ವಿಲ್ಲದೆ ಸುಖದ ಸುಜನಕೆಲ್ಲ
ಹಿಂಗದೆ ಕೊಡುವ ನಮ್ಮ ಮಧ್ವಾಂತರಾತ್ಮಕ
ರಂಗವಿಠಲನೆಂದು ನೆರೆ ಸಾರಿರೈ || 27 ||
*“ಮಧ್ವನಾಮ” ಕೃತಿಗೆ
ಶ್ರೀ ಜಗನ್ನಾಥದಾಸರ ಫಲಶ್ರುತಿ
ಸೋಮ ಸೂರ್ಯೋಪ ರಾಗದಿ
ಗೋಸಹಸ್ರಗಳ ಭೂಮಿ ದೇವರಿಗೆ
ಸುರ ನದಿಯ ತೀರದಿ ಶ್ರೀಮುಕುಂದಾರ್ಪಣವೆನುತ
ಕೊಟ್ಟ ಫಲಮಕ್ಕುಈ ಮಧ್ವನಾಮ ಬರೆದೋದಿದರ್ಗೆ || 1 ||
ಪುತ್ರರಿಲ್ಲದವರು ಸತ್ಪುತ್ರರೈದುವರು
ಸರ್ವತ್ರದಲಿ ದಿಗ್ವಿಜಯವಹುದು
ಸಕಲಶತ್ರುಗಳು ಕೆಡುವರಪಮೃತ್ಯು ಬರಲಂಜವುದು
ಸೂತ್ರ ನಾಮಕನ ಸಂಸ್ತುತಿ ಮಾತ್ರದಿ || 2 ||
ಶ್ರೀಪಾದರಾಯ ಪೇಳಿದ
ಮಧ್ವನಾಮ ಸಂತಾಪ ಕಳೆದಖಿಳ
ಸೌಖ್ಯವ ನೀವುದು ಶ್ರೀಪತಿ ಜಗನ್ನಾಥವಿಠಲನ
ತೋರಿ ಭವಕೂಪಾರದಿಂದ ಕಡೆ ಹಾಯಿಸುವುದು || 3 ||
ಶ್ರೀ ಶ್ರೀಪಾದರಾಯರ ಕೃತಿ
***
P
Pallavi
Jaya jaya jagat-trāṇa jagadoḷage sutrāṇa
akhiḷa guṇa saddhāma madhvanāma ||
1
Āva kaccapa rūpadinda laṇḍōdakava
ōvi dharisida śēṣamūrutiyanu
āvavana baḷi viḍidu hariya surareyduvaru
ā vāyu namma kula gururāyanu ||
2
Āvavanu dēhadoḷagiralu hari nelasihanu
āvavanu tolage hari tā tolaguva
āvavanu dēhada oḷa horage niyāmakeru
ā vāyu namma kula gururāyanu ||
3
Karuṇābhimāni suraru dēhava biḍalu
kuruḍa kivuḍa mūkanenendenisuva
parama mukhyaprāṇa tolagalā dēhavanu
aritu peṇavendu pēḷuvaru budha jana ||
4
Suraroḷage nararoḷage sarva bhūtageḷoḷage
parataranenisi niyāmisi nelasiha
hariyanallade bageya anyaranu lōkadoḷu
guru kula tilaka mukhya pavamānanu ||
5
Trētayali raghupatiya sēve māḍuvenendu
vāta suta hanumantanendenisida
pōta bhāvadi taraṇi bimbakke laṅghisida
ītageṇeyāru mūrlōkadoḷage ||
6
Taraṇi gabhimukhanāgi śabda śāstrava racisi
uravaṇisi hindu mundāgi
naḍeda parama pavamānasuta udayāsta
śailageḷabharadiyaididagītagupame uṇṭē ||
7
Akhiḷa vēdageḷa sāra paṭhisidanu mun nalli
nikhiḷa vyākaraṇageḷa iva paṭhisida
mukhadalli kiñcidapa śabda ivagillendu
mukhyaprāṇananu rāmananukarisida ||
8
Taraṇi sutananu kāydu śaradhiyanu
nere dāṭi dharaṇi suteyaḷa kaṇḍu danujaroḍane
bharadi raṇavane māḍi gelidu divyāstrageḷa
uruhi laṅkeya banda hanumantanu ||
9
Harige cūḍāmaṇiyanittu harigeḷa kūḍi
śaradhiyanu kaṭṭi balu rakkasaranu orasi raṇadali
daśa śirana huḍi guṭṭida
mereda hanumanta balavanta dhīra ||
10
Uraga bandhake siluki kapivararu maimareye
taraṇi kula tilakanājñeya tāḷidagiri sahita
sañjīvanava kittu tanditta harivarage
sariyuṇṭe hanumantage ||
11
Vijaya raghupati mecci dharaṇi suteyaḷigīye
bhajisi mauktikada hāravanu paḍeda
aja padaviyanu rāma koḍuvenene hanumanta
nija bhakutiyane bēḍi varava paḍeda ||
12
Ā mārutane bhīmanenisi dvāparadalli
sōma kuladali janisi pārthanoḍane
bhīma vikrama rakkasara muridōṭṭida
ā mahimanamma kula guru rāyanu ||
13
Karadinda śiśu bhāvanāda bhīmana biḍalu
giri vaḍedu śata śr̥ṅgavendenisitu
harigeḷa harigeḷiṁ karigeḷa karigeḷiṁ areva vīranige
sura nararu sariyē ||
14
Kurupa garaḷavanikke nere uṇḍu tēgi
hasiduragageḷa myāle biḍaladanorasida
araginaramaneyalli uriyanikkalu vīra dharisi
jāhnavigoyda tannanujara ||
15
Allirda baka hiḍimbakaremba rakkasaranillodorasida
lōka kaṇṭakaranu ballidasurara gelidu
draupadiya kaiviḍidu
ella sujanarige haruṣava tōrida ||
16
Rājakula vajranenisida māgadhana sīḷi
rājasūya yāgavanu māḍisidanu
ājiyoḷu kauravara balava savaruvenendu
mūjagavariye kaṅkaṇa kaṭṭida ||
17
Mānanidhi draupadiya manadingitavanaritu
dānavara savarabēkendu byāgakānanava pokku
kimmīrādi-geḷa taridu
māninige saugandhikavane tanda ||
18
Duruḷa kīcakanu tāṁ draupadiya
caluvikege maruḷāgi kare kareya māḍalavanā
garaḍi maneyalli varesi avananvaya-da kurupanaṭṭida
malla kulava sadeda ||
19
Kauravara bal savari vairigeḷa neggotti
ōrante kauravana muridu mereda
vairi duśśāsanna raṇadalli eḍe geḍahi
vīra narahariya līleya tōrida ||
20
Guru sutanu saṅgaradi nārāyaṇāstra-vanu
uravaṇisi biḍalu śastrava bisuṭaru
hari kr̥peya paḍedirda bhīma huṅkāradali
hariya divyāstra-vanu nere aṭṭida ||
21
Caṇḍa vikramanu gadegoṇḍu raṇadi
bhūmaṇḍaladoḷidirānta khaḷaranellā hiṇḍi
bisuṭiha vr̥kōdarana pratāpavanukaṇḍu
nilluvarāru tribhuvanadoḷu ||
22
Dānavaru kaliyugadoḷavatarisi vibudharoḷu
vēnana mata vanaruhaladanaritu
jñāni tā pavamāna bhūtaḷadoḷavatarisi
mānanidhi madhvākhyanendenisida ||
23
Arbhakatanadoḷaidi badariyali
madhvamuni nirbhayadi sakaḷa śāstrava paṭhisida
urviyoḷu māye bīralu tattva mārgavanu
ōrva madhvamuni tōrda sujanarge ||
24
Sarvēśa hari viśva ella tā pusiyemba
durvādigeḷa matava nere khaṇḍisi
sarvēśa hari viśva satyavendaruhi
dāśarvādi gīrvāṇa santatiyali ||
25
Badarikāśramake punarapiyaidi vyāsamuni
padakeragi akhiḷa vēdārthageḷanu
padumanābhana mukhadalli tiḷidu
brahmatvayaidida madhvamunirāyagabhivandipe ||
26
Jaya jayatu durvādi mata timira mārtāṇḍa
jaya jayatu vādi gaja pañcānana
jaya jayatu cārvāka garva parvata kuliśa
jaya jaya jagannātha madhvanātha ||
27
Tuṅga kula guru varana hr̥tkamaladali nilisi
bhaṅgavillade sukhada sujanakella
hiṅgade koḍuva namma madhvāntarātmaka
raṅgaviṭhalanendu nere sārirai ||
Phalaśruti (By Sri Jagannatha Dasa)
1
Sōma sūryōpa rāgadi gō-sahasrageḷa
bhūmi dēvarige sura nadiya tīradi
śrīmukuṇḍārpaṇavenuta koṭṭa phalamakku
ī madhvanāma baredōdidarge ||
2
Putrarilladavaru satputraraiduvaru
sarvatradali digvijayavahudu
sakalaśatrugeḷu keḍuvarapamr̥tyu baralañjavudu
sūtra nāmakana saṁstuti mātradi ||
3
Śrīpādarāya pēḷida madhvanāma santāpa kaḷedakhiḷa
saukhyava nīvudu śrīpati jagannāthaviṭhalana
tōri bhavakūpāradinda kaḍe hāyisuvudu ||
***
Pronunciation Key
ṁ: Nasal sound (Anusvara).
ronunciation Key
Long Vowels: Ā, Ē, Ī, Ō, Ū are held longer (e.g., Mā-dhva).
Retroflexes: ḷ, ṇ, ḍ, ṭ involve curling the tongue (e.g., akhiḷa).
ḷ: Retroflex 'l' (tongue curls back to the roof of the mouth).
Aspiration: Add a soft breath for bh, dh, th, gh (e.g., Bhīma)
ṇ, ḍ, ṭ: Retroflex 'n', 'd', and 't'.
Special 'ś': Use a soft "sh" for ś (as in śāstra).
ṣ: Hard "sh" (as in Vishu).
ś: Soft "sh" (as in shanti).
Nasal 'ṅ': Sounds like "ng" in "sing" (e.g., laṅghisida).
r̥: Vocalic 'r' (as in Kr̥ṣṇa).
***
ಶ್ರೀಪಾದರಾಜರ ವಿರಚಿತ "ಮಧ್ವನಾಮ" ಕೃತಿಯ ಪ್ರತಿ ಪದ್ಯದ ವಿವರವಾದ ಭಾವಾರ್ಥ ಇಲ್ಲಿದೆ.
ಸಾರಾಂಶ (Summary)
ಮಧ್ವನಾಮವು ವಾಯುದೇವರ ಮೂರು ಅವತಾರಗಳಾದ ಹನುಮಂತ, ಭೀಮ ಮತ್ತು ಮಧ್ವಾಚಾರ್ಯರ ಲೀಲೆಗಳನ್ನು ಕೊಂಡಾಡುವ ಪವಿತ್ರ ಕೃತಿ. ವಾಯುದೇವನೇ ಜಗತ್ತಿನ ಪ್ರಾಣಶಕ್ತಿ (ಮುಖ್ಯಪ್ರಾಣ) ಮತ್ತು ಹರಿಯ ಅಚ್ಚುಮೆಚ್ಚಿನ ದಾಸ ಎಂದು ಈ ಕೃತಿ ಪ್ರತಿಪಾದಿಸುತ್ತದೆ. ಈ ಕೃತಿಯ ಪಠನೆಯಿಂದ ಜ್ಞಾನ, ಭಕ್ತಿ ಮತ್ತು ಸಕಲ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂಬ ನಂಬಿಕೆಯಿದೆ.
ಭಾವಾರ್ಥ (Stanza-wise Meaning in Kannada)
ಪಲ್ಲವಿ: ಜಗತ್ತನ್ನು ರಕ್ಷಿಸುವ, ಸಕಲ ಸದ್ಗುಣಗಳ ಗಣಿಯಾದ ಮುಖ್ಯಪ್ರಾಣನಿಗೆ (ಮಧ್ವನಾಮ) ಜಯವಾಗಲಿ.
೧: ವಾಯುದೇವನು ಕೂರ್ಮ ರೂಪಿಯಾದ ಹರಿಗೆ ಆಧಾರವಾಗಿ ಬ್ರಹ್ಮಾಂಡವನ್ನು ಹೊತ್ತಿದ್ದಾನೆ. ದೇವತೆಗಳು ಹರಿಯನ್ನು ತಲುಪಬೇಕಾದರೆ ಈ ವಾಯುದೇವರ ಮೂಲಕವೇ ಹೋಗಬೇಕು.
೨: ದೇಹದೊಳಗೆ ವಾಯುದೇವನಿದ್ದರೆ ಮಾತ್ರ ಹರಿ ನೆಲೆಸುತ್ತಾನೆ. ಪ್ರಾಣ ಹೋದರೆ ಹರಿಯೂ ಹೊರಡುತ್ತಾನೆ. ದೇಹದ ಒಳ ಹೊರಗೆಲ್ಲಾ ನಿಯಂತ್ರಕನೇ ಈ ವಾಯುದೇವ.
೩: ದೇಹದಲ್ಲಿರುವ ದೇವತೆಗಳು ಹೊರಹೋದರೆ ಮನುಷ್ಯ ಕುರುಡ, ಕಿವುಡನಾಗುತ್ತಾನೆ. ಆದರೆ ಮುಖ್ಯಪ್ರಾಣ ಹೊರಹೋದರೆ ದೇಹವು ಕೇವಲ 'ಹೆಣ' (ಶವ) ಎನಿಸಿಕೊಳ್ಳುತ್ತದೆ.
೪: ಸುರ-ನರ ಹಾಗೂ ಸಕಲ ಜೀವಿಗಳಲ್ಲಿ ನೆಲಸಿ ನಿಯಮಿಸುವವನು ವಾಯುದೇವ. ಅವನು ಹರಿಯನ್ನು ಬಿಟ್ಟು ಅನ್ಯರನ್ನು ದೇವರೆಂದು ಬಗೆಯದ ಹರಿಭಕ್ತ.
೫ (ಹನುಮ): ತ್ರೇತಾಯುಗದಲ್ಲಿ ಹನುಮಂತನಾಗಿ ಅವತರಿಸಿ ಸೂರ್ಯಬಿಂಬಕ್ಕೆ ಹಾರಿದ ಸಾಹಸಿ. ಇವನಿಗೆ ಮೂರು ಲೋಕದಲ್ಲಿ ಸಾಟಿಯಿಲ್ಲ.
೬: ಸೂರ್ಯನಿಗೆ ಮುಖಮಾಡಿ ವ್ಯಾಕರಣ ಶಾಸ್ತ್ರವನ್ನು ರಚಿಸಿದ ಮಹಾಜ್ಞಾನಿ ಹನುಮಂತ. ಇವನ ವೇಗ ಮತ್ತು ಜ್ಞಾನಕ್ಕೆ ಉಪಮೆಯೇ ಇಲ್ಲ.
೭: ಸಕಲ ವೇದಗಳ ಸಾರವನ್ನು ಅರಿತವನು. ಹನುಮಂತನ ಮಾತಿನಲ್ಲಿ ಒಂದು ಅಪಶಬ್ದವೂ ಇರಲಿಲ್ಲ ಎಂದು ಸ್ವತಃ ಶ್ರೀರಾಮನೇ ಮೆಚ್ಚಿಕೊಂಡಿದ್ದಾನೆ.
೮: ಸುಗ್ರೀವನನ್ನು ಕಾಯ್ದು, ಸಮುದ್ರ ದಾಟಿ, ಸೀತೆಯನ್ನು ಕಂಡು, ಲಂಕೆಯನ್ನು ಸುಟ್ಟು ಬಂದ ಪರಾಕ್ರಮಿ ಹನುಮಂತ.
೯: ರಾಮನಿಗೆ ಸೀತೆಯ ಚೂಡಾಮಣಿಯನ್ನು ತಂದುಕೊಟ್ಟು, ರಾವಣನ ಅಹಂಕಾರವನ್ನು ಮಣ್ಣುಮುಕ್ಕಿಸಿ ಗೆದ್ದ ಧೀರ ಹನುಮಂತ.
೧೦: ಲಕ್ಷಣ ಮತ್ತು ಕಪಿವೀರರು ಉರಗಬಂಧಕ್ಕೆ ಸಿಲುಕಿದಾಗ, ಸಂಜೀವಿನಿ ಪರ್ವತವನ್ನೇ ಕಿತ್ತು ತಂದು ಎಲ್ಲರನ್ನು ಬದುಕಿಸಿದ ಮಹಾನುಭಾವ.
೧೧: ಶ್ರೀರಾಮನು ಬ್ರಹ್ಮಪದವಿಯನ್ನು ಕೊಡುತ್ತೇನೆಂದರೂ ಬೇಡದೆ, ಕೇವಲ ಹರಿಯ ನಿರಂತರ ಭಕ್ತಿಯನ್ನೇ ವರವಾಗಿ ಪಡೆದ ನಿಷ್ಕಾಮ ಭಕ್ತ.
೧೨ (ಭೀಮ): ದ್ವಾಪರದಲ್ಲಿ ಭೀಮನಾಗಿ ಜನಿಸಿ ಪಾರ್ಥನ ಜೊತೆಗೂಡಿ ರಕ್ಕಸರ ಸಂಹಾರ ಮಾಡಿದ ಪರಾಕ್ರಮಿ.
೧೩: ಶಿಶುವಾಗಿದ್ದಾಗ ಬೆಟ್ಟದ ಮೇಲೆ ಬಿದ್ದಾಗ ಭೀಮನ ಹೊಡೆತಕ್ಕೆ ಬೆಟ್ಟವೇ ನುಚ್ಚುನೂರಾಯಿತು. ಇವನ ಬಲಕ್ಕೆ ಯಾರೂ ಸರಿಯಿಲ್ಲ.
೧೪: ಕೌರವರು ಕೊಟ್ಟ ವಿಷವನ್ನು ಉಂಡು ತೇಗಿದವನು, ಅರಗಿನ ಮನೆಯಿಂದ ತನ್ನ ಸಹೋದರರನ್ನು ಹೊತ್ತು ತಂದ ಮಹಾಬಲಿಷ್ಠ.
೧೫: ಬಕ ಮತ್ತು ಹಿಡಿಂಬರೆಂಬ ರಾಕ್ಷಸರನ್ನು ಸಂಹರಿಸಿ ಲೋಕಕ್ಕೆ ಶಾಂತಿ ತಂದನು. ದ್ರೌಪದಿಯನ್ನು ಮದುವೆಯಾಗಿ ಸಜ್ಜನರಿಗೆ ಹರುಷ ನೀಡಿದನು.
೧೬: ಜರಾಸಂಧನನ್ನು ಸೀಳಿ ರಾಜಸೂಯ ಯಾಗ ಮಾಡಿಸಿದನು. ಕೌರವರ ಸೈನ್ಯವನ್ನು ಮುಗಿಸಲು ಪ್ರತಿಜ್ಞೆ ಮಾಡಿದ ವೀರ.
೧೭: ದ್ರೌಪದಿಯ ಇಚ್ಛೆಯಂತೆ ಕಾನನ ಹೊಕ್ಕು ಕಿಮ್ಮೀರರನ್ನು ಕೊಂದು ಅವಳಿಗೆ ಸೌಗಂಧಿಕಾ ಪುಷ್ಪವನ್ನು ತಂದುಕೊಟ್ಟನು.
೧೮: ದ್ರೌಪದಿಯನ್ನು ಪೀಡಿಸಿದ ಕೀಚಕ ಮತ್ತು ಅವನ ಮಲ್ಲ ಕುಲವನ್ನೇ ಸದೆಬಡಿದ ಗದಾಯುದ್ಧ ಪ್ರವೀಣ.
೧೯: ಕುರುಕ್ಷೇತ್ರ ಯುದ್ಧದಲ್ಲಿ ಕೌರವರ ಬಲ ಅಡಗಿಸಿ, ದುಶ್ಯಾಸನನ ಸಂಹಾರ ಮಾಡಿ ವೀರ ನರಹರಿಯ ಲೀಲೆಯನ್ನು ತೋರಿದವನು.
೨೦: ಅಶ್ವತ್ಥಾಮನು ನಾರಾಯಣಾಸ್ತ್ರ ಬಿಟ್ಟಾಗ ಎಲ್ಲರೂ ಶಸ್ತ್ರತ್ಯಾಗ ಮಾಡಿದರು, ಆದರೆ ಭೀಮನು ತನ್ನ ಹುಂಕಾರದಿಂದಲೇ ಅದನ್ನು ಎದುರಿಸಿದನು.
೨೧: ಗದೆಯನ್ನು ಹಿಡಿದು ರಣರಂಗದಲ್ಲಿ ನಿಂತ ವೃಕೋದರನ (ಭೀಮ) ಪ್ರತಾಪಕ್ಕೆ ಮೂರು ಲೋಕದಲ್ಲಿ ಎದುರಾಳಿಯೇ ಇಲ್ಲ.
೨೨ (ಮಧ್ವ): ಕಲಿಯುಗದಲ್ಲಿ ಜ್ಞಾನಮಾರ್ಗ ತೋರ್ಪಡಿಸಲು ಮಧ್ವಾಚಾರ್ಯರಾಗಿ ಅವತರಿಸಿ ದುರ್ಮತಗಳನ್ನು ಖಂಡಿಸಿದವರು.
೨೩: ಬಾಲಪ್ರಾಯದಲ್ಲೇ ಬದರಿಯಲ್ಲಿ ಸಕಲ ಶಾಸ್ತ್ರಗಳನ್ನು ಕಲಿತು, ಮಾಯಾವಾದವನ್ನು ಅಳಿಸಿ ತತ್ವಮಾರ್ಗವನ್ನು ತೋರಿದವರು.
೨೪: ಜಗತ್ತು ಸುಳ್ಳು ಎಂಬ ವಾದವನ್ನು ಅಳಿಸಿ, 'ಹರಿಯೇ ಸರ್ವೋತ್ತಮ' ಮತ್ತು 'ಜಗತ್ತು ಸತ್ಯ' ಎಂದು ಸಾರಿದ ಜ್ಞಾನಿನಿಧಿ.
೨೫: ಬದರಿಕಾಶ್ರಮದಲ್ಲಿ ವೇದವ್ಯಾಸರ ಪಾದಕ್ಕೆರಗಿ ವೇದಾರ್ಥಗಳನ್ನು ತಿಳಿದು ಬ್ರಹ್ಮತ್ವವನ್ನು ಪಡೆದ ಮಧ್ವಮುನಿಗಳಿಗೆ ನಮಸ್ಕಾರ.
೨೬: ದುರ್ಮತಗಳೆಂಬ ಕತ್ತಲೆಗೆ ಸೂರ್ಯನಂತಿರುವ, ವಾದಿಗಳೆಂಬ ಆನೆಗಳಿಗೆ ಸಿಂಹನಂತಿರುವ ಮಧ್ವನಾಥನಿಗೆ ಜಯವಾಗಲಿ.
೨೭: ಶ್ರೀಪಾದರಾಜರ ಹೃದಯದಲ್ಲಿ ನೆಲಸಿರುವ ಮಧ್ವಾಂತರಾತ್ಮಕ ರಂಗವಿಠಲನೇ ನಮಗೆ ಸುಖ ನೀಡುವವನು ಎಂದು ಸಾರಿರಿ.
***
"Madhwanama," composed by Sri Sripadaraja.
Summary
Madhwanama is a sacred work that celebrates the divine plays of the three incarnations of Lord Vayu: Hanuman, Bhima, and Madhvacharya. This work establishes that Vayu is the primary life force of the universe (Mukhyaprana) and the most beloved devotee of Lord Hari. It is believed that chanting this work grants knowledge, devotion, and the fulfillment of all righteous desires.
Stanza-wise Meaning (English)
Pallavi: Victory to Mukhyaprana (named here as Madhva), the protector of the universe and the storehouse of all noble virtues.
1: Lord Vayu supports the universe by providing a foundation to Lord Hari in His Kurma (tortoise) form. If the celestial beings wish to reach Lord Hari, they must go through Lord Vayu.
2: Lord Hari resides within the body only as long as Vayu is present. If the life breath (Prana) leaves, Lord Hari also departs. Vayu is the supreme controller both inside and outside the body.
3: When the presiding deities of the senses leave the body, a person becomes blind, deaf, or mute. However, when Mukhyaprana (Vayu) leaves the body, the wise declare the body to be merely a "corpse."
4: Lord Vayu resides in and governs gods, humans, and all living creatures. He is a staunch devotee who considers no one else as God except Lord Hari.
5 (Hanuman): In the Treta Yuga, he incarnated as Hanuman and displayed his valor by leaping toward the solar disc (the sun). He is unrivaled in all three worlds.
6: A great scholar, Hanuman composed works on grammar while facing the Sun God. There is no parallel to his immense speed and wisdom.
7: He mastered the essence of all the Vedas. Lord Rama himself praised Hanuman, noting that there was not a single improper word in his speech.
8: Hanuman protected Sugriva, crossed the vast ocean, found Mother Sita, and returned after setting Lanka ablaze with his prowess.
9: The brave and mighty Hanuman delivered Sita’s crest-jewel (Chudamani) to Rama, crushed the pride of Ravana, and emerged victorious in battle.
10: When Lakshmana and the Vanara heroes were trapped by the serpent-noose (Uragabandha), the great Hanuman brought the entire Sanjeevini mountain to revive and save everyone.
11: A selfless devotee, Hanuman refused the post of Brahma offered by Lord Rama, choosing instead the boon of eternal and uninterrupted devotion to Lord Hari.
12 (Bhima): In the Dvapara Yuga, he was born as Bhima, the powerful hero who joined Arjuna to annihilate the demons.
13: When he was an infant, he fell upon a mountain, and such was his strength that the mountain shattered into a hundred pieces. No god or human can equal his might.
14: The great hero survived the poison given by the Kauravas and carried his brothers to safety on his shoulders when the palace of wax was set on fire.
15: He eliminated the demons Baka and Hidimba, who were a menace to the world. By marrying Draupadi, he brought joy to all righteous people.
16: He split the powerful Jarasandha and facilitated the Rajasuya Yaga. He took a vow before the whole world to wipe out the Kaurava army.
17: Understanding the inner wish of Draupadi, he entered the forest to slay demons like Kimmira and brought her the celestial Saugandhika flowers.
18: When the wicked Keechaka lusted after Draupadi and troubled her, Bhima crushed him and his clan of wrestlers in the gymnasium.
19: In the Kurukshetra war, he decimated the Kaurava forces, slew Dushasana on the battlefield, and demonstrated the divine play of Lord Narasimha.
20: When Ashwatthama released the Narayana-astra, everyone laid down their weapons, but Bhima, empowered by the grace of Hari, drove back the divine weapon with a mere roar.
21: Witnessing Vrikodara (Bhima) standing in the battlefield with his mace, crushing all the wicked enemies of the earth, no one in the three worlds could stand against his glory.
22 (Madhva): To show the path of true knowledge in the Kali Yuga, Lord Vayu incarnated as Madhvacharya and refuted all false doctrines.
23: Even in his childhood at Badari, the sage Madhva mastered all scriptures. When the veil of illusion spread over the earth, he alone showed the path of Truth to the virtuous.
24: He refuted the arguments of those who claimed the universe is an illusion. He established that Lord Hari is the Supreme Sovereign and that the universe is real.
25: I bow to Sage Madhva, who reached Badarikashrama, prostrated at the feet of Sage Vedavyasa, learned the true meaning of the Vedas, and attained the status of Brahma.
26: Victory to Lord Madhva, who is like the sun to the darkness of false doctrines, a lion to the elephants of opposing debaters, and a thunderbolt to the mountain of pride.
27: Proclaim loudly that Rangavittala, the soul of Madhva who resides in the heart-lotus of the great Guru Sripadaraja, is the one who grants us eternal bliss.
***
GIST IN KANNADA
ಸಾರಾಂಶ (Summary)
ಶ್ರೀಪಾದರಾಜರು ವಿರಚಿಸಿದ "ಮಧ್ವನಾಮ" ಕೃತಿಯು ವಾಯುದೇವರ ಮೂರು ಅವತಾರಗಳಾದ ಹನುಮಂತ, ಭೀಮಸೇನ ಮತ್ತು ಮಧ್ವಾಚಾರ್ಯರ ಮಹಿಮೆಯನ್ನು ಕೊಂಡಾಡುವ ಅತ್ಯಂತ ಶ್ರೇಷ್ಠ ಸ್ತೋತ್ರವಾಗಿದೆ. ಈ ಕೃತಿಯು ಹರಿದಾಸ ಸಾಹಿತ್ಯದ ರತ್ನದಂತಿದ್ದು, ಸಂಸ್ಕೃತದ 'ವಾಯುಸ್ತುತಿ'ಗೆ ಸಮಾನವಾದ ಗೌರವವನ್ನು ಹೊಂದಿದೆ. ವಾಯುದೇವನೇ ಜಗತ್ತಿನ ಪ್ರಾಣಶಕ್ತಿ (ಮುಖ್ಯಪ್ರಾಣ), ಅವರಿಲ್ಲದೆ ಹರಿ ನೆಲೆಸಲಾರ ಎಂಬ ತತ್ವವನ್ನು ಇಲ್ಲಿ ಸಾರಲಾಗಿದೆ. ತ್ರೇತಾಯುಗದ ರಾಮಭಕ್ತಿ, ದ್ವಾಪರಯುಗದ ಭೀಮಪರಾಕ್ರಮ ಮತ್ತು ಕಲಿಯುಗದ ಜ್ಞಾನಮಾರ್ಗ (ದ್ವೈತ ಸಿದ್ಧಾಂತ) - ಈ ಮೂರೂ ಅವತಾರಗಳ ಲೀಲೆಗಳನ್ನು ದಾಸರು ಅತಿ ಮನೋಹರವಾಗಿ ಚಿತ್ರಿಸಿದ್ದಾರೆ.
ಭಾವಾರ್ಥ (Paragraph-wise Meaning in Kannada)
ಪಲ್ಲವಿ: ಜಗತ್ತನ್ನು ರಕ್ಷಿಸುವ, ಸಕಲ ಸದ್ಗುಣಗಳ ಆಶ್ರಯನಾದ ಮಧ್ವಾಚಾರ್ಯರಿಗೆ ಜಯವಾಗಲಿ.
೧-೪: ವಾಯುದೇವನು ದೇಹದ ಒಳಗೂ ಹೊರಗೂ ನಿಯಾಮಕನಾಗಿರುತ್ತಾನೆ. ಅವನು ದೇಹವನ್ನು ಬಿಟ್ಟರೆ ಹರಿಯೂ ಹೊರಡುತ್ತಾನೆ, ದೇಹವು ಕೇವಲ ಶವವಾಗುತ್ತದೆ. ಇವನೇ ನಮ್ಮ ಕುಲದ ಪರಮ ಗುರು.
೫-೧೧ (ಹನುಮದವತಾರ): ತ್ರೇತಾಯುಗದಲ್ಲಿ ಹನುಮಂತನಾಗಿ ರಾಮನ ಸೇವೆ ಮಾಡಿದವನು. ಸೂರ್ಯನಿಗೆ ಮುಖಮಾಡಿ ವ್ಯಾಕರಣ ಕಲಿತವನು, ಸಮುದ್ರ ದಾಟಿ ಸೀತೆಯನ್ನು ಕಂಡು ಲಂಕೆಯನ್ನು ಸುಟ್ಟು ಬಂದವನು. ರಾಮನಿಂದ ಬ್ರಹ್ಮಪದವಿಯ ವರ ಸಿಕ್ಕರೂ ಕೇವಲ ನಿಷ್ಕಾಮ ಭಕ್ತಿಯನ್ನೇ ಬೇಡಿದ ಧೀರ.
೧೨-೨೧ (ಭೀಮಾವತಾರ): ದ್ವಾಪರದಲ್ಲಿ ಭೀಮನಾಗಿ ಜನಿಸಿ ಶತ್ರು ಸಂಹಾರ ಮಾಡಿದವನು. ಮಗುವಾಗಿದ್ದಾಗ ಬೆಟ್ಟದ ಮೇಲೆ ಬಿದ್ದು ಬೆಟ್ಟವನ್ನೇ ಪುಡಿಮಾಡಿದವನು. ಬಕ-ಹಿಡಿಂಬರ ಸಂಹಾರ, ಕೀಚಕನ ವಧೆ ಮತ್ತು ಕುರುಕ್ಷೇತ್ರ ಯುದ್ಧದಲ್ಲಿ ಕೌರವರ ಬಲವನ್ನು ಸದೆಬಡಿದು ಧರ್ಮದ ಸ್ಥಾಪನೆ ಮಾಡಿದವನು.
೨೨-೨೫ (ಮಧ್ವಾವತಾರ): ಕಲಿಯುಗದಲ್ಲಿ ದುರ್ಮತಗಳನ್ನು ಖಂಡಿಸಿ ಸತ್ಯವಾದ ತತ್ವಮಾರ್ಗವನ್ನು (ಹರಿಯೇ ಸರ್ವೋತ್ತಮ ಎಂಬ ಜ್ಞಾನ) ತೋರಲು ಮಧ್ವಾಚಾರ್ಯರಾಗಿ ಅವತರಿಸಿದವನು. ಬದರಿಯಲ್ಲಿ ವೇದವ್ಯಾಸರಿಂದ ಜ್ಞಾನ ಪಡೆದು ಬ್ರಹ್ಮತ್ವವನ್ನು ಹೊಂದಿದ ಮುನಿರಾಯ ಇವನು.
೨೬-೨೭: ದುರ್ಮತಗಳೆಂಬ ಕತ್ತಲಿಗೆ ಸೂರ್ಯನಂತಿರುವ ಮಧ್ವನಾಥನಿಗೆ ಜಯವಾಗಲಿ. ನಮ್ಮ ಹೃದಯದಲ್ಲಿರುವ ಮಧ್ವಾಂತರಾತ್ಮಕ ರಂಗವಿಠಲನೇ ಸುಖ ನೀಡುವವನು ಎಂದು ಸಾರಬೇಕು.
GIST IN ENGLISH
Summary: The "Madhwanama" by Sri Sripadaraja is a magnificent hymn dedicated to the three incarnations of Mukhyaprana (Vayu): Hanuman, Bhima, and Madhvacharya. It serves as a vernacular equivalent to the Sanskrit 'Vayu Stuti'. The poem establishes that Vayu is the primary life force (Jivottama) without whom Lord Hari does not reside in the body. It chronicles the strength, devotion, and supreme knowledge exhibited across the Treta, Dvapara, and Kali ages.
Stanza-wise Meaning:
1-4: Vayu is the savior of the world. He controls the body internally and externally. If Prana leaves, the Lord (Hari) also leaves, and the body is called a corpse.
5-11 (Hanuman): In Treta, as Hanuman, he served Rama. He leaped across the ocean, found Sita, burnt Lanka, and humbled demons. Though offered the post of Brahma, he chose only eternal devotion.
12-21 (Bhima): In Dvapara, as Bhima, he displayed immense strength. He protected the Pandavas from fire and poison, killed demons like Bakasura, and defeated the Kaurava army to establish righteousness.
22-25 (Madhva): In Kali, as Madhvacharya, he defeated false philosophies and established that Lord Hari is the Supreme Truth and the world is real (Satyatva). He received supreme knowledge from Vedavyasa at Badari.
26-27: Victory to the one who is like a sun to the darkness of ignorance. Worship Lord Rangavittala, who resides within Madhva.
***
EXTRA INFO
meaning
ಶ್ರೀ ಶ್ರೀಪಾದರಾಜರು ವಿರಚಿಸಿದ "ಮಧ್ವನಾಮ" ಸ್ತೋತ್ರವು ವಾಯುದೇವರ ಮೂರು ಅವತಾರಗಳಾದ ಹನುಮಂತ, ಭೀಮ ಮತ್ತು ಮಧ್ವಾಚಾರ್ಯರ ಮಹಿಮೆಯನ್ನು ಸಾರುವ ಅದ್ಭುತ ಕೃತಿ. ಇದರ ಅರ್ಥವನ್ನು ಇಲ್ಲಿ ನೀಡಲಾಗಿದೆ:
ಖಂಡಿತ, ಶ್ರೀ ಶ್ರೀಪಾದರಾಜರು ವಿರಚಿಸಿದ "ಮಧ್ವನಾಮ" ಸ್ತೋತ್ರದ ಪ್ರತಿ ಚರಣ ಮತ್ತು ಅದರ ಭಾವಾರ್ಥ ಇಲ್ಲಿದೆ:
ಪಲ್ಲವಿ
ಜಯ ಜಯ ಜಗತ್ರಾಣ ಜಗದೊಳಗೆ ಸುತ್ರಾಣ |
ಅಖಿಳ ಗುಣ ಸದ್ಧಾಮ ಮಧ್ವನಾಮ ||
ಅರ್ಥ: ಜಗತ್ತನ್ನು ರಕ್ಷಿಸುವವನಿಗೆ ಜಯವಾಗಲಿ. ಜಗತ್ತಿನ ಒಳಗಿದ್ದು ಎಲ್ಲರಿಗೂ ಚೈತನ್ಯದ ಶಕ್ತಿಯನ್ನು (ಸುತ್ರಾಣ) ನೀಡುವವನಿಗೆ ಜಯವಾಗಲಿ. ಸಕಲ ಕಲ್ಯಾಣ ಗುಣಗಳಿಗೆ ಆಶ್ರಯನಾದ ವಾಯುದೇವರ (ಮಧ್ವನಾಮ) ಸ್ತುತಿಯೇ ಈ ಕೃತಿ.
ವಾಯುದೇವರ ಮಹಿಮೆ (ಚರಣ 1 - 4)
1. ಆವ ಕಚ್ಚಪ ರೂಪದಿಂದ ಲಂಡೋದಕವ ಓವಿ ಧರಿಸಿದ ಶೇಷಮೂರುತಿಯನು |
ಆವವನ ಬಳಿ ವಿಡಿದು ಹರಿಯ ಸುರರೆಯ್ದುವರು ಆ ವಾಯು ನಮ್ಮ ಕುಲ ಗುರುರಾಯನು ||
ಅರ್ಥ: ಶ್ರೀಹರಿಯು ಕೂರ್ಮ (ಕಚ್ಚಪ) ರೂಪದಲ್ಲಿದ್ದಾಗ ಮಂದರ ಪರ್ವತವನ್ನು ಬೆನ್ನ ಮೇಲೆ ಹೊತ್ತಂತೆ, ವಾಯುದೇವರು ಶೇಷರೂಪಿಯಾಗಿ ಭೂಮಿಯನ್ನು ಧರಿಸಿದ್ದಾರೆ. ದೇವತೆಗಳು ಯಾರ ಆಶ್ರಯ ಪಡೆದು ಶ್ರೀಹರಿಯನ್ನು ತಲುಪುತ್ತಾರೋ, ಅಂತಹ ವಾಯುದೇವರೇ ನಮ್ಮ ಕುಲಗುರುಗಳು.
2. ಆವವನು ದೇಹದೊಳಗಿರಲು ಹರಿ ನೆಲಸಿಹನು ಆವವನು ತೊಲಗೆ ಹರಿ ತಾ ತೊಲಗುವ |
ಆವವನು ದೇಹದ ಒಳ ಹೊರಗೆ ನಿಯಾಮಕನು ಆ ವಾಯು ನಮ್ಮ ಕುಲ ಗುರುರಾಯನು ||
ಅರ್ಥ: ಈ ದೇಹದೊಳಗೆ ಮುಖ್ಯಪ್ರಾಣನು ಇರುವವರೆಗೆ ಮಾತ್ರ ಶ್ರೀಹರಿಯು ನೆಲೆಸಿರುತ್ತಾನೆ. ಪ್ರಾಣದೇವರು ದೇಹ ಬಿಟ್ಟ ತಕ್ಷಣ ಹರಿಯೂ ಹೊರನಡೆಯುತ್ತಾನೆ. ಶರೀರದ ಒಳಗಿನ ಮತ್ತು ಹೊರಗಿನ ಎಲ್ಲಾ ಕ್ರಿಯೆಗಳ ನಿಯಾಮಕನೇ ನಮ್ಮ ಗುರುರಾಯ.
3. ಕರುಣಾಭಿಮಾನಿ ಸುರರು ದೇಹವ ಬಿಡಲು ಕುರುಡ ಕಿವುಡ ಮೂಕನೆಂದೆನಿಸುವ |
ಪರಮ ಮುಖ್ಯಪ್ರಾಣ ತೊಲಗಲಾ ದೇಹವನು ಅರಿತು ಪೆಣವೆಂದು ಪೇಳುವರು ಬುಧ ಜನ ||
ಅರ್ಥ: ಕಣ್ಣು, ಕಿವಿ ಮುಂತಾದ ಇಂದ್ರಿಯಗಳ ದೇವತೆಗಳು ದೇಹ ಬಿಟ್ಟರೆ ಮನುಷ್ಯ ಕುರುಡ ಅಥವಾ ಕಿವುಡ ಎನಿಸಿಕೊಳ್ಳುತ್ತಾನಷ್ಟೆ. ಆದರೆ ಮುಖ್ಯಪ್ರಾಣನು ದೇಹ ಬಿಟ್ಟ ತಕ್ಷಣವೇ ಜ್ಞಾನಿಗಳು ಇದನ್ನು "ಹೆಣ" (ಶವ) ಎಂದು ಕರೆಯುತ್ತಾರೆ.
4. ಸುರರೊಳಗೆ ನರರೊಳಗೆ ಸರ್ವ ಭೂತಗಳೊಳಗೆ ಪರತರನೆನಿಸಿ ನಿಯಾಮಿಸಿ ನೆಲಸಿಹ |
ಹರಿಯನಲ್ಲದೆ ಬಗೆಯ ಅನ್ಯರನು ಲೋಕದೊಳು ಗುರು ಕುಲ ತಿಲಕ ಮುಖ್ಯ ಪವಮಾನನು ||
ಅರ್ಥ: ದೇವತೆಗಳು, ಮನುಷ್ಯರು ಮತ್ತು ಸಕಲ ಜೀವಿಗಳಲ್ಲಿ ಶ್ರೀಹರಿಯೇ ಸರ್ವೋತ್ತಮ ಮತ್ತು ಎಲ್ಲರನ್ನೂ ನಿಯಂತ್ರಿಸುವವನು ಎಂದು ತಿಳಿದು, ಹರಿಯ ಹೊರತು ಅನ್ಯರನ್ನು ಸ್ವತಂತ್ರರೆಂದು ಭಾವಿಸದ ಮುಖ್ಯಪ್ರಾಣನೇ ಗುರುಕುಲದ ಶ್ರೇಷ್ಠ ನಾಯಕ.
ಮೊದಲ ಅವತಾರ: ಹನುಮಂತ (ಚರಣ 5 - 11)
5. ತ್ರೇತೆಯಲಿ ರಘುಪತಿಯ ಸೇವೆ ಮಾಡುವೆನೆಂದು ವಾತ ಸುತ ಹನುಮಂತನೆಂದೆನಿಸಿದ |
ಪೋತ ಭಾವದಿ ತರಣಿ ಬಿಂಬಕ್ಕೆ ಲಂಘಿಸಿದ ಈತಗೆಣೆಯಾರು ಮೂರ್ಲೋಕದೊಳಗೆ ||
ಅರ್ಥ: ತ್ರೇತಾಯುಗದಲ್ಲಿ ಶ್ರೀರಾಮನ ಸೇವೆಗಾಗಿ ಹನುಮಂತನಾಗಿ ಅವತರಿಸಿದನು. ಬಾಲ್ಯದಲ್ಲಿ ಸೂರ್ಯಬಿಂಬವನ್ನು ಹಣ್ಣೆಂದು ಭಾವಿಸಿ ಆಕಾಶಕ್ಕೆ ನೆಗೆದ ಈತನ ಪರಾಕ್ರಮಕ್ಕೆ ಮೂರು ಲೋಕಗಳಲ್ಲಿ ಸಾಟಿಯಿಲ್ಲ.
6. ತರಣಿ ಗಭಿಮುಖನಾಗಿ ಶಬ್ದ ಶಾಸ್ತ್ರವ ರಚಿಸಿ ಉರವಣಿಸಿ ಹಿಂದು ಮುಂದಾಗಿ |
ನಡೆದ ಪರಮ ಪವಮಾನಸುತ ಉದಯಾಸ್ತ ಶೈಲಗಳಭರದಿಯೈದಿದಗೀತಗುಪಮೆ ಉಂಟೇ ||
ಅರ್ಥ: ಸೂರ್ಯನಿಗೆ ಅಭಿಮುಖವಾಗಿ ಚಲಿಸುತ್ತಾ, ಉದಯಾಚಲದಿಂದ ಅಸ್ತಗಿರಿವರೆಗೆ ವೇಗವಾಗಿ ಸಂಚರಿಸುತ್ತಾ ಸಕಲ ವ್ಯಾಕರಣ ಮತ್ತು ಶಾಸ್ತ್ರಗಳನ್ನು ಕಲಿತ ಹನುಮಂತನಿಗೆ ಉಪಮೆ ನೀಡಲು ಸಾಧ್ಯವೇ ಇಲ್ಲ.
7. ಅಖಿಳ ವೇದಗಳ ಸಾರ ಪಠಿಸಿದನು ಮುನ್ನಲ್ಲಿ ನಿಖಿಳ ವ್ಯಾಕರಣಗಳ ಇವ ಪಠಿಸಿದ |
ಮುಖದಲ್ಲಿ ಕಿಂಚಿದಪ ಶಬ್ದ ಇವಗಿಲ್ಲೆಂದು ಮುಖ್ಯಪ್ರಾಣನನು ರಾಮನನುಕರಿಸಿದ ||
ಅರ್ಥ: ಸಕಲ ವೇದಗಳ ಸಾರ ಮತ್ತು ವ್ಯಾಕರಣಗಳನ್ನು ಇವನು ಪೂರ್ಣವಾಗಿ ಅರಿತಿದ್ದಾನೆ. ಈತನ ಮಾತಿನಲ್ಲಿ ಒಂದು ಸಣ್ಣ ಅಪಶಬ್ದವೂ ಇಲ್ಲವೆಂದು ಸ್ವತಃ ಶ್ರೀರಾಮನೇ ಹನುಮಂತನನ್ನು ಶ್ಲಾಘಿಸಿದನು.
8. ತರಣಿ ಸುತನನು ಕಾಯ್ದು ಶರಧಿಯನು ನೆರೆ ದಾಟಿ ಧರಣಿ ಸುತೆಯಳ ಕಂಡು ದನುಜರೊಡನೆ |
ಭರದಿ ರಣವನೆ ಮಾಡಿ ಗೆಲಿದು ದಿವ್ಯಾಸ್ತ್ರಗಳ ಉರುಹಿ ಲಂಕೆಯ ಬಂದ ಹನುಮಂತನು ||
ಅರ್ಥ: ಸುಗ್ರೀವನನ್ನು ರಕ್ಷಿಸಿ, ಸಮುದ್ರವನ್ನು ದಾಟಿ, ಸೀತಾದೇವಿಯನ್ನು ಕಂಡು, ರಾಕ್ಷಸರೊಂದಿಗೆ ಯುದ್ಧ ಮಾಡಿ, ಲಂಕೆಯನ್ನು ದಹಿಸಿ ವಿಜಯಶಾಲಿಯಾಗಿ ಮರಳಿದನು ಹನುಮಂತ.
9. ಹರಿಗೆ ಚೂಡಾಮಣಿಯನಿತ್ತು ಹರಿಗಳ ಕೂಡಿ ಶರಧಿಯನು ಕಟ್ಟಿ ಬಲು ರಕ್ಕಸರನು ಒರಸಿ ರಣದಲಿ |
ದಶ ಶಿರನ ಹುಡಿ ಗುಟ್ಟಿದ ಮೆರೆದ ಹನುಮಂತ ಬಲವಂತ ಧೀರ ||
ಅರ್ಥ: ರಾಮನಿಗೆ ಸೀತೆಯ ಚೂಡಾಮಣಿಯನ್ನು ತಲುಪಿಸಿ, ವಾನರ ಸೈನ್ಯದೊಂದಿಗೆ ಸೇತುವೆ ಕಟ್ಟಿ, ಯುದ್ಧದಲ್ಲಿ ದೊಡ್ಡ ರಾಕ್ಷಸರನ್ನು ಸಂಹರಿಸಿ ರಾವಣನ ಅಹಂಕಾರವನ್ನು ಮಣ್ಣುಪಾಲು ಮಾಡಿದ ಧೀರ ಈತ.
10. ಉರಗ ಬಂಧಕೆ ಸಿಲುಕಿ ಕಪಿವರರು ಮೈಮರೆಯೆ ತರಣಿ ಕುಲ ತಿಲಕನಾಜ್ಞೆಯ ತಾಳಿದಗಿರಿ ಸಹಿತ |
ಸಂಜೀವನವ ಕಿತ್ತು ತಂದಿತ್ತ ಹರಿವರಗೆ ಸರಿಯುಂಟೆ ಹನುಮಂತಗೆ ||
ಅರ್ಥ: ನಾಗಪಾಶ ಮತ್ತು ಶಕ್ತಿ ಆಯುಧಕ್ಕೆ ಕಪಿಸೈನ್ಯ ತತ್ತರಿಸಿದಾಗ, ಶ್ರೀರಾಮನ ಆಜ್ಞೆಯಂತೆ ದ್ರೋಣ ಗಿರಿಯನ್ನೇ (ಸಂಜೀವಿನಿ) ಕಿತ್ತು ತಂದು ಎಲ್ಲರನ್ನೂ ಬದುಕಿಸಿದ ಹನುಮಂತನಿಗೆ ಯಾರೂ ಸಮನಿಲ್ಲ.
11. ವಿಜಯ ರಘುಪತಿ ಮೆಚ್ಚಿ ಧರಣಿ ಸುತೆಯಳಿಗೀಯೆ ಭಜಿಸಿ ಮೌಕ್ತಿಕದ ಹಾರವನು ಪಡೆದ |
ಅಜ ಪದವಿಯನು ರಾಮ ಕೊಡುವೆನೆನೆ ಹನುಮಂತ ನಿಜ ಭಕುತಿಯನೆ ಬೇಡಿ ವರವ ಪಡೆದ ||
ಅರ್ಥ: ರಾಮನು ನೀಡಿದ ಮುತ್ತಿನ ಹಾರವನ್ನು ಪಡೆದ ಹನುಮಂತನಿಗೆ, ರಾಮನು "ಬ್ರಹ್ಮ ಪದವಿ" (ಅಜ ಪದವಿ) ನೀಡುವುದಾಗಿ ಹೇಳಿದನು. ಆದರೆ ಹನುಮಂತನು ಅದನ್ನು ನಿರಾಕರಿಸಿ, ತನಗೆ ಕೇವಲ ನಿರಂತರವಾದ ರಾಮಭಕ್ತಿಯೊಂದೇ ಸಾಕೆಂದು ವರ ಕೇಳಿದನು.
ಎರಡನೇ ಅವತಾರ: ಭೀಮಸೇನ (ಚರಣ 12 - 21)
12. ಆ ಮಾರುತನೆ ಭೀಮನೆನಿಸಿ ದ್ವಾಪರದಲ್ಲಿ ಸೋಮ ಕುಲದಲಿ ಜನಿಸಿ ಪಾರ್ಥನೊಡನೆ |
ಭೀಮ ವಿಕ್ರಮ ರಕ್ಕಸರ ಮುರಿದೊಟ್ಟಿದ ಆ ಮಹಿಮನಮ್ಮ ಕುಲ ಗುರು ರಾಯನು ||
ಅರ್ಥ: ಅದೇ ಮಾರುತನು ದ್ವಾಪರಯುಗದಲ್ಲಿ ಚಂದ್ರವಂಶದಲ್ಲಿ ಭೀಮನಾಗಿ ಜನಿಸಿದನು. ಅರ್ಜುನನೊಡಗೂಡಿ ದುಷ್ಟ ರಾಕ್ಷಸರನ್ನು ಸಂಹರಿಸಿದ ಆ ಮಹಿಮನೇ ನಮ್ಮ ಗುರುಗಳು.
13. ಕರದಿಂದ ಶಿಶು ಭಾವನಾದ ಭೀಮನ ಬಿಡಲು ಗಿರಿ ವಡೆದು ಶತ ಶೃಂಗವೆಂದೆನಿಸಿತು |
ಹರಿಗಳ ಹರಿಗಳಿಂ ಕರಿಗಳ ಕರಿಗಳಿಂ ಅರೆವ ವೀರನಿಗೆ ಸುರ ನರರು ಸರಿಯೇ ||
ಅರ್ಥ: ಶಿಶುವಾಗಿದ್ದಾಗ ಭೀಮನು ಬೆಟ್ಟದ ಮೇಲೆ ಬಿದ್ದಾಗ, ಆತನ ದೇಹದ ಏಟಿಗೆ ಸಿಲುಕಿ ಬೆಟ್ಟವೇ ನೂರು ಹೋಳಾಯಿತು (ಶತಶೃಂಗ). ಸಿಂಹ ಮತ್ತು ಆನೆಗಳನ್ನು ಅನಾಯಾಸವಾಗಿ ಸದೆಬಡಿಯುವ ಈ ವೀರನಿಗೆ ಯಾರೂ ಸಮನಲ್ಲ.
14. ಕುರುಪ ಗರಳವನಿಕ್ಕೆ ನೆರೆ ಉಂಡು ತೇಗಿ ಹಸಿದುರಗಗಳ ಮ್ಯಾಲೆ ಬಿಡಲದನೊರಸಿದ |
ಅರಗಿನರಮನೆಯಲ್ಲಿ ಉರಿಯನಿಕ್ಕಲು ವೀರ ಧರಿಸಿ ಜಾಹ್ನವಿಗೊಯ್ದ ತನ್ನನುಜರ ||
ಅರ್ಥ: ದುರ್ಯೋಧನ ನೀಡಿದ ವಿಷವನ್ನುಂಡು ತೇಗಿದನು, ಹಾವಿನ ಕಡಿತವನ್ನೂ ಗೆದ್ದನು. ಅರಗಿನ ಮನೆಯಲ್ಲಿ ಬೆಂಕಿ ಇಟ್ಟಾಗ ತನ್ನ ಸೋದರರನ್ನು ಹೆಗಲ ಮೇಲೆ ಹೊತ್ತು ಗಂಗೆಯ ತೀರಕ್ಕೆ ಸುರಕ್ಷಿತವಾಗಿ ತಲುಪಿಸಿದನು.
15. ಅಲ್ಲಿರ್ದ ಬಕ ಹಿಡಿಂಬಕರೆಂಬ ರಕ್ಕಸರನಿಲ್ಲದೊರಸಿದ ಲೋಕ ಕಂಟಕರನು ಬಲ್ಲಿದಸುರರ ಗೆಲಿದು |
ದ್ರೌಪದಿಯ ಕೈವಿಡಿದು ಎಲ್ಲ ಸುಜನರಿಗೆ ಹರುಷವ ತೋರಿದ ||
ಅರ್ಥ: ಬಕ ಮತ್ತು ಹಿಡಿಂಬಕ ಎಂಬ ಲೋಕಕಂಟಕ ರಾಕ್ಷಸರನ್ನು ಸಂಹರಿಸಿದನು. ದ್ರೌಪದಿಯನ್ನು ಮದುವೆಯಾಗಿ ಪಾಂಡವರಿಗೆ ಮತ್ತು ಸುಜನರಿಗೆ ಸಂತೋಷವನ್ನು ನೀಡಿದನು.
16. ರಾಜಕುಲ ವಜ್ರನೆನಿಸಿದ ಮಾಗಧನ ಸೀಳಿ ರಾಜಸೂಯ ಯಾಗವನು ಮಾಡಿಸಿದನು |
ಆಜಿಯೊಳು ಕೌರವರ ಬಲವ ಸವರುವೆನೆಂದು ಮೂಜಗವರಿಯೆ ಕಂಕಣ ಕಟ್ಟಿದ ||
ಅರ್ಥ: ಜರಾಸಂಧನನ್ನು (ಮಾಗಧ) ಸಂಹರಿಸಿ ಧರ್ಮರಾಜನಿಂದ ರಾಜಸೂಯ ಯಾಗವನ್ನು ಮಾಡಿಸಿದನು. ಕುರುಕ್ಷೇತ್ರ ಯುದ್ಧದಲ್ಲಿ ಕೌರವರ ಸೈನ್ಯವನ್ನು ಅಳಿಸುವೆನೆಂದು ಲೋಕಕ್ಕೆ ತಿಳಿಯುವಂತೆ ಪ್ರತಿಜ್ಞೆ ಮಾಡಿದನು.
17. ಮಾನನಿಧಿ ದ್ರೌಪದಿಯ ಮನದಿಂಗಿತವನರಿತು ದಾನವರ ಸವರಬೇಕೆಂದು ಬ್ಯಾಗಕಾನನವ ಪೊಕ್ಕು |
ಕಿಮ್ಮೀರಾದಿಗಳ ತರಿದು ಮಾನಿನಿಗೆ ಸೌಗಂಧಿಕವನೆ ತಂದ ||
ಅರ್ಥ: ದ್ರೌಪದಿಯ ಆಸೆಯಂತೆ ಕಾನನವನ್ನು ಪ್ರವೇಶಿಸಿ ಕಿಮ್ಮೀರ ಮುಂತಾದ ರಾಕ್ಷಸರನ್ನು ಕೊಂದನು ಮತ್ತು ದೇವಲೋಕದ ಸೌಗಂಧಿಕಾ ಪುಷ್ಪಗಳನ್ನು ಅವಳಿಗಾಗಿ ತಂದನು.
18. ದುರುಳ ಕೀಚಕನು ತಾಂ ದ್ರೌಪದಿಯ ಚಲುವಿಕೆಗೆ ಮರುಳಾಗಿ ಕರೆ ಕರೆಯ ಮಾಡಲವನಾ |
ಗರಡಿ ಮನೆಯಲ್ಲಿ ವರೆಸಿ ಅವನನ್ವಯದ ಕುರುಪನಟ್ಟಿದ ಮಲ್ಲ ಕುಲವ ಸದೆದ ||
ಅರ್ಥ: ದ್ರೌಪದಿಯನ್ನು ಪೀಡಿಸಿದ ಕೀಚಕನನ್ನು ಮಲ್ಲಯುದ್ಧದ ಶಾಲೆಯಲ್ಲಿ ಸಂಹರಿಸಿದನು ಮತ್ತು ಅವನ ಸೈನ್ಯವನ್ನೆಲ್ಲ ಸದೆಬಡಿದನು.
19. ಕೌರವರ ಬಲ ಸವರಿ ವೈರಿಗಳ ನೆಗ್ಗೊತ್ತಿ ಓರಂತೆ ಕೌರವನ ಮುರಿದು ಮೆರೆದ |
ವೈರಿ ದುಶ್ಯಾಸನ್ನ ರಣದಲ್ಲಿ ಎಡೆ ಗೆಡಹಿ ವೀರ ನರಹರಿಯ ಲೀಲೆಯ ತೋರಿದ ||
ಅರ್ಥ: ಕೌರವರ ಸೈನ್ಯವನ್ನು ನಾಶಮಾಡಿ, ದುರ್ಯೋಧನನ ತೊಡೆ ಮುರಿದನು. ಯುದ್ಧರಂಗದಲ್ಲಿ ದುಶ್ಯಾಸನನ ಎದೆ ಸೀಳಿ, ನರಸಿಂಹ ದೇವರಂತೆ ರೌದ್ರಾವತಾರವನ್ನು ತೋರಿದನು.
20. ಗುರು ಸುತನು ಸಂಗರದಿ ನಾರಾಯಣಾಸ್ತ್ರವನು ಉರವಣಿಸಿ ಬಿಡಲು ಶಸ್ತ್ರವ ಬಿಸುಟರು |
ಹರಿ ಕೃಪೆಯ ಪಡೆದಿರ್ದ ಭೀಮ ಹುಂಕಾರದಲಿ ಹರಿಯ ದಿವ್ಯಾಸ್ತ್ರವನು ನೆರೆ ಅಟ್ಟಿದ ||
ಅರ್ಥ: ಅಶ್ವತ್ಥಾಮನು ನಾರಾಯಣಾಸ್ತ್ರವನ್ನು ಬಿಟ್ಟಾಗ ಎಲ್ಲರೂ ಶರಣಾದರು. ಆದರೆ ಹರಿಯ ಕೃಪೆ ಪಡೆದ ಭೀಮನು ಕೇವಲ ತನ್ನ 'ಹುಂ' ಎಂಬ ಧ್ವನಿಯಿಂದ ಆ ದಿವ್ಯಾಸ್ತ್ರದ ಪ್ರಭಾವವನ್ನು ತಡೆದನು.
21. ಚಂಡ ವಿಕ್ರಮನು ಗದೆಗೊಂಡು ರಣದಿ ಭೂಮಂಡಲದೊಳಿದಿರಾಂತ ಖಳರನೆಲ್ಲಾಹಿಂಡಿ |
ಬಿಸುಟಿಹ ವೃಕೋದರನ ಪ್ರತಾಪವನುಕಂಡು ನಿಲ್ಲುವರಾರು ತ್ರಿಭುವನದೊಳು ||
ಅರ್ಥ: ಯುದ್ಧಭೂಮಿಯಲ್ಲಿ ಗದೆಯನ್ನು ಹಿಡಿದು ದುಷ್ಟರನ್ನು ಪುಡಿಪುಡಿ ಮಾಡಿದ ಭೀಮನ (ವೃಕೋದರ) ಪ್ರತಾಪವನ್ನು ಎದುರಿಸಲು ಮೂರು ಲೋಕದಲ್ಲಿ ಯಾರೂ ಇಲ್ಲ.
ಮೂರನೇ ಅವತಾರ: ಮಧ್ವಾಚಾರ್ಯ (ಚರಣ 22 - 25)
22. ದಾನವರು ಕಲಿಯುಗದೊಳವತರಿಸಿ ವಿಬುಧರೊಳು ವೇನನ ಮತ ವನರುಹಲದನರಿತು |
ಜ್ಞಾನಿ ತಾ ಪವಮಾನ ಭೂತಳದೊಳವತರಿಸಿ ಮಾನನಿಧಿ ಮಧ್ವಾಖ್ಯನೆಂದೆನಿಸಿದ ||
ಅರ್ಥ: ಕಲಿಯುಗದಲ್ಲಿ ತಪ್ಪು ಸಿದ್ಧಾಂತಗಳು ಹರಡಿದಾಗ, ಸರಿಯಾದ ಜ್ಞಾನವನ್ನು ನೀಡಲು ವಾಯುದೇವರು ಮಧ್ವಾಚಾರ್ಯರಾಗಿ ಭೂಮಿಯಲ್ಲಿ ಅವತರಿಸಿದರು.
23. ಅರ್ಭಕತನದೊಳೈದಿ ಬದರಿಯಲಿ ಮಧ್ವಮುನಿ ನಿರ್ಭಯದಿ ಸಕಳ ಶಾಸ್ತ್ರವ ಪಠಿಸಿದ |
ಉರ್ವಿಯೊಳು ಮಾಯೆ ಬೀರಲು ತತ್ವ ಮಾರ್ಗವನು ಓರ್ವ ಮಧ್ವಮುನಿ ತೋರ್ದ ಸುಜನರ್ಗೆ ||
ಅರ್ಥ: ಚಿಕ್ಕ ವಯಸ್ಸಿನಲ್ಲೇ ಬದರಿಗೆ ತೆರಳಿ ಸಕಲ ಶಾಸ್ತ್ರಗಳನ್ನು ಕಲಿತರು. ಜಗತ್ತು ಮಿಥ್ಯ ಎಂಬ ವಾದಗಳನ್ನು ಖಂಡಿಸಿ, ಸತ್ಯವಾದ ತತ್ವ ಮಾರ್ಗವನ್ನು ಜಗತ್ತಿಗೆ ತೋರಿಸಿದರು.
24. ಸರ್ವೇಶ ಹರಿ ವಿಶ್ವ ಎಲ್ಲ ತಾ ಪುಸಿಯೆಂಬ ದುರ್ವಾದಿಗಳ ಮತವ ನೆರೆ ಖಂಡಿಸಿ |
ಸರ್ವೇಶ ಹರಿ ವಿಶ್ವ ಸತ್ಯವೆಂದರುಹಿ ದಾಶರ್ವಾದಿ ಗೀರ್ವಾಣ ಸಂತತಿಯಲಿ ||
ಅರ್ಥ: "ಜಗತ್ತು ಸುಳ್ಳು" ಎಂಬ ವಾದಗಳನ್ನು ತಳ್ಳಿಹಾಕಿ, "ಹರಿಯೇ ಸರ್ವೋತ್ತಮ ಮತ್ತು ಈ ಜಗತ್ತು ಸತ್ಯ" ಎಂಬ ದ್ವೈತ ಸಿದ್ಧಾಂತವನ್ನು ಸ್ಥಾಪಿಸಿದರು.
25. ಬದರಿಕಾಶ್ರಮಕೆ ಪುನರಪಿಯೈದಿ ವ್ಯಾಸಮುನಿ ಪದಕೆರಗಿ ಅಖಿಳ ವೇದಾರ್ಥಗಳನು |
ಪದುಮನಾಭನ ಮುಖದಿ ತಿಳಿದು ಬ್ರಹ್ಮತ್ವಯ್ಯೆದಿದ ಮಧ್ವಮುನಿರಾಯಗಭಿವಂದಿಪೆ ||
ಅರ್ಥ: ಮತ್ತೆ ಬದರಿಗೆ ತೆರಳಿ ವೇದವ್ಯಾಸರ ಚರಣಗಳಿಗೆ ನಮಸ್ಕರಿಸಿ, ಸಕಲ ವೇದಗಳ ರಹಸ್ಯವನ್ನು ತಿಳಿದು ಬ್ರಹ್ಮತ್ವವನ್ನು ಹೊಂದಿದ ಮಧ್ವಾಚಾರ್ಯರಿಗೆ ನಮಸ್ಕರಿಸುವೆನು.
ಮಂಗಳ ಮತ್ತು ಫಲಶ್ರುತಿ
26. ಜಯ ಜಯತು ದುರ್ವಾದಿ ಮತ ತಿಮಿರ ಮಾರ್ತಾಂಡ ಜಯ ಜಯತು ವಾದಿ ಗಜ ಪಂಚಾನನ |
ಜಯ ಜಯತು ಚಾರ್ವಾಕ ಗರ್ವ ಪರ್ವತ ಕುಲಿಶ ಜಯ ಜಯ ಜಗನ್ನಾಥ ಮಧ್ವನಾಥ ||
ಅರ್ಥ: ತಪ್ಪು ಮತಗಳೆಂಬ ಕತ್ತಲೆಗೆ ಸೂರ್ಯನಂತಿರುವ, ಅಹಂಕಾರದ ಆನೆಗಳಿಗೆ ಸಿಂಹನಂತಿರುವ ಮಧ್ವಾಚಾರ್ಯರಿಗೆ ಜಯವಾಗಲಿ.
27. ತುಂಗ ಕುಲ ಗುರು ವರನ ಹೃತ್ಕಮಲದಲಿ ನಿಲಿಸಿ ಭಂಗ ವಿಲ್ಲದೆ ಸುಖದ ಸುಜನಕೆಲ್ಲ |
ಹಿಂಗದೆ ಕೊಡುವ ನಮ್ಮ ಮಧ್ವಾಂತರಾತ್ಮಕ ರಂಗವಿಠಲನೆಂದು ನೆರೆ ಸಾರಿರೈ ||
ಅರ್ಥ: ಮಧ್ವಾಚಾರ್ಯರ ಹೃದಯದಲ್ಲಿ ನೆಲೆಸಿರುವ ಶ್ರೀರಂಗವಿಠಲನೇ ನಮಗೆ ಸಕಲ ಸುಖಗಳನ್ನು ನೀಡುವವನೆಂದು ಎಲ್ಲರೂ ಸಾರೋಣ.
(ಜಗನ್ನಾಥದಾಸರ ಫಲಶ್ರುತಿ)
ಈ ಮಧ್ವನಾಮವನ್ನು ಶ್ರದ್ಧೆಯಿಂದ ಓದಿದವರಿಗೆ ಗಂಗೆಯಲ್ಲಿ ಸ್ನಾನ ಮಾಡಿದ ಮತ್ತು ದಾನ ಮಾಡಿದ ಪುಣ್ಯ ಲಭಿಸುತ್ತದೆ. ಮಕ್ಕಳಿಲ್ಲದವರಿಗೆ ಸತ್ಪುತ್ರರು, ಕಷ್ಟಗಳು ನಿವಾರಣೆಯಾಗಿ ಸಕಲ ಸೌಖ್ಯಗಳು ಲಭಿಸುತ್ತವೆ ಎಂದು ಜಗನ್ನಾಥದಾಸರು ಹೇಳಿದ್ದಾರೆ.
ಸಾರಾಂಶ: ವಾಯುದೇವರ ಈ ಮೂರು ರೂಪಗಳ ಸ್ಮರಣೆಯು ನಮಗೆ ಬಲ, ಜ್ಞಾನ ಮತ್ತು ಭಕ್ತಿಯನ್ನು ನೀಡುತ್ತದೆ.
(whatsapp)
***
meaning of first para
ಆವ ಕಚ್ಛಪರೂಪದಿಂದ ಲಂಡೋದಕದಿ
ಓವಿಧರಿಸಿದ ಶೇಷಮೂರುತಿಯನು
ಆವವನ ಬಲಪಿಡಿದು ಹರಿಯ ಸುರರೈದುವರೊ
ಆವಾಯು ನಮ್ಮ ಕುಲಗುರು ರಾಯನು
ಸ ಏಷ ಕೂರ್ಮರೂಪೇಣ ವಾಯುರಂಡೋದಕೇ ಸ್ಥಿತಃ |
ವಿಷ್ಣುನ ವಾಯುಕೂರ್ಮರೂಪೇಣ ಧಾರಿತೋsನಂತಧಾರಕಃ |
ಅಸ್ಯ ಪಾದಾಹಿ ಚತ್ವಾರೋ ಹ್ಯಂಡೋದೇ ಕೋಣಸಂಸ್ಥಿತಾಃ |
ಉದರಂ ತು ಭೂಮಿಸಂಶ್ಲಿಷ್ಟಮತಿರಿಚ್ಯ ಭುವಂ ಪುನಃ |
ಪಾರ್ಶವತಃ ಪುಚ್ಛತಶ್ಚೈವ ಶಿರಶ್ಚೋದಕ ಸಂಸ್ಥಿತಾ ವಿಭೋಃ |
ಏವಂ ವಿಧ್ವಾಸಂಸ್ತು ಯತ್ರೈತಿ ತತ್ರೈವ ಪ್ರತಿತಿಷ್ಠತಿ ||
ಪ್ರಾಣದೇವರು ಕೂರ್ಮರೂಪರಾಗಿ ಬ್ರಹ್ಮಾoಡದಲ್ಲಿರುವ ಆಗಾಧ ಜಲರಾಶಿಯಲ್ಲಿದ್ದು ಕೂರ್ಮರೂಪಿಯಾದ ವಿಷ್ಣುವಿನ ಬಾಲವನ್ನು ಆಶ್ರಯಿಸಿಕೊಂಡು ಶೇಷನನ್ನು ಧರಿಸಿ ಜಗತ್ತನ್ನು ಹೊತ್ತಿರುವರು.ವಾಯು ಕೂರ್ಮದ ನಾಲ್ಕು ಪಾದಗಳು ಅಂಡೊದಕದ ನಾಲ್ಕು ಕೊಣ ಮೂಲೆಗಳಲ್ಲಿ ನೀರಿನಲ್ಲಿ ನೆಲೆಸಿವೆ .ಭೂಮಿಯು ಎದೆಯನ್ನಾಶ್ರಯಿಸಿದೆ .ಶಿರಸ್ಸು ಪೂರ್ವದಿಕ್ಕಿನಲ್ಲಿದೆ ಬಾಲವು ಪಶ್ಚಿಮದಲ್ಲಿದೆ.ಉದರದಲ್ಲಿ ಆಕಾಶವೂ ,ದ್ಯುಲೋಕವು ಬೆನ್ನಿನ ಮೇಲೂ ಇದೆ ವಾಯುದೇವರ ಈ ಜಗದ್ಧಾರಕ ಕೂರ್ಮರೂಪವನ್ನು ಉಪಾಸನೆ ಮಾಡುವ ಜ್ಞಾನಿಯು ಬಯಸಿದೆಡೆ ನೆಲೆಸಬಲ್ಲ ಎಂದು ಬೃಹದಾರಣ್ಯಕೋಪನಿಷದ್ಭಾಷ್ಯದಲ್ಲಿ ಜಗದ್ಗುರು ಶ್ರೀಮಧ್ವಾಚಾರ್ಯರು ತಿಳಿಸಿದ್ದಾರೆ .
ಇದನ್ನೇ ಶ್ರೀಪಾದರಾಜರು ಆವ ಕಚ್ಚಪ ರೂಪ ದಿಂದ ಅಂಡೊದಕದಿ ಓವಿ ಧರಿಸಿದ ಶೇಷಮೂರುತಿಯನು ಎಂದು ತಿಳಿಸಿರುವರು.
ಆವವನ ಬಲಪಿಡಿದು ಹರಿಯಾ ಸುರರೈದುವರು
ಈ ಶರೀರದಿಂದ ಉತ್ಕ್ರಮಣಗೊಂಡ ಮುಕ್ತಿಯೋಗ್ಯರು ,ಅಗ್ನಿಪುತ್ರನಾದ ಅರ್ಚಿ,ವಾಯುಪುತ್ರನಾದ ,ಅತಿವಾಹಿಕವಾಯು ,ಹಗಲು ,
ಶುಕ್ಲಪಕ್ಷ ,ಉತ್ತರಾಯಣ,ಸಂವತ್ಸರ ,ತಟಿತ್ ಅಭಿಮಾನಿ ದೇವತೆಗಳನ್ನು ,ಪ್ರಜಾಪತಿ,ಸೂರ್ಯ,ವೈಶ್ವಾನರ,
ಇಂದ್ರ,ಧ್ರುವ,ಭಾರತಿದೇವಿಯರನ್ನು ಹೊಂದಿ ಮುಂದೆ ವಾಯುಲೋಕವನ್ನು ಹೊಂದಿ ಅವನ ಅನುಗ್ರಹದಿಂದಲೇ ಭಗವಂತನನ್ನು ವಿಶೇಷವಾಗಿ ತಿಳಿದು ಅವನನ್ನು ಸೇರುವರು ಎಂದು ಬ್ರಹ್ಮಸೂತ್ರಭಾಷ್ಯದಲ್ಲಿ ಶ್ರೀಮದಾಚಾರ್ಯರು ತಿಳಿಸಿದ್ದಾರೆ .
ವಿದ್ಯತ್ಪತಿವಾಯುರೇವ ನಯೇತ್ ಬ್ರಹ್ಮನಯೇತ್ ಬ್ರಹ್ಮ ನ ಚಾಪರಃ |
ಕುತೋನ್ಯಸ್ಯ ಭವೇಚ್ಛಕ್ತಿಃ ತಮೃತೇ ಪ್ರಾಣನಾಯಕಮ್
ವಿದ್ಯುತ್ತಿಗೆ ಅಭಿಮಾನಿನಿಯಾದ ಭಾರತೀದೇವಿಯ ಪತಿಯಾದ ವಾಯುದೇವರೇ ಎಲ್ಲಾ ದೇವತೆಗಳಿಗೆ ಬ್ರಹ್ಮನನ್ನು ಹೊಂದಿಸುವವರು. ಪ್ರಾಣನಾಯಕರಾದ ವಾಯುದೇವರನ್ನು ಹೊರತಾಗಿ ಮತ್ತಾರಿಗೆ ಆ ಶಕ್ತಿ ?
ಈ ಆಶಯವನ್ನೆ ಶ್ರೀಪಾದರಾಜರು ಆವವನಬಲಪಿಡಿದು ಹರಿಯ ಸುರರೈದುವರು ಎಂದು ಹೇಳಿದ್ದಾರೆ
ಓವಿಧರಿಸಿದ - ಎಂಬ ಪದಗಳಿಂದಾಗಿ ವಾಯುದೇವರು ಧರಿಸುವುದೆಂದರೆ ಜಡ ಮನೆ ಹೇಗೋ ಹಾಗೆ ಬರೇ ಹೊರಗೆ ಧಾರಕನಾಗಿ ಅಲ್ಲ ; ಶೇಷದೇವರಿಗೆ ಬ್ರಹ್ಮಾಂಡದ ಧಾರಣೆಗೆ ಬೇಕಾದ ಸಾಮರ್ಥ್ಯಾದಿಗಳನ್ನು ನೀಡುವ ಮೂಲಕ ಒಳಗಿನ ರಕ್ಷಕನಾಗಿಯೂ ಅನುಗ್ರಹಿಸುತ್ತಿರುವರು ಎಂದು ಸೂಚಿತವಾಗುವುದು.
ಓವಿಧರಿಸಿದ ಶೇಷಮೂರುತಿಯನು
ಆವವನ ಬಲಪಿಡಿದು ಹರಿಯ ಸುರರೈದುವರೊ
ಆವಾಯು ನಮ್ಮ ಕುಲಗುರು ರಾಯನು
ಸ ಏಷ ಕೂರ್ಮರೂಪೇಣ ವಾಯುರಂಡೋದಕೇ ಸ್ಥಿತಃ |
ವಿಷ್ಣುನ ವಾಯುಕೂರ್ಮರೂಪೇಣ ಧಾರಿತೋsನಂತಧಾರಕಃ |
ಅಸ್ಯ ಪಾದಾಹಿ ಚತ್ವಾರೋ ಹ್ಯಂಡೋದೇ ಕೋಣಸಂಸ್ಥಿತಾಃ |
ಉದರಂ ತು ಭೂಮಿಸಂಶ್ಲಿಷ್ಟಮತಿರಿಚ್ಯ ಭುವಂ ಪುನಃ |
ಪಾರ್ಶವತಃ ಪುಚ್ಛತಶ್ಚೈವ ಶಿರಶ್ಚೋದಕ ಸಂಸ್ಥಿತಾ ವಿಭೋಃ |
ಏವಂ ವಿಧ್ವಾಸಂಸ್ತು ಯತ್ರೈತಿ ತತ್ರೈವ ಪ್ರತಿತಿಷ್ಠತಿ ||
ಪ್ರಾಣದೇವರು ಕೂರ್ಮರೂಪರಾಗಿ ಬ್ರಹ್ಮಾoಡದಲ್ಲಿರುವ ಆಗಾಧ ಜಲರಾಶಿಯಲ್ಲಿದ್ದು ಕೂರ್ಮರೂಪಿಯಾದ ವಿಷ್ಣುವಿನ ಬಾಲವನ್ನು ಆಶ್ರಯಿಸಿಕೊಂಡು ಶೇಷನನ್ನು ಧರಿಸಿ ಜಗತ್ತನ್ನು ಹೊತ್ತಿರುವರು.ವಾಯು ಕೂರ್ಮದ ನಾಲ್ಕು ಪಾದಗಳು ಅಂಡೊದಕದ ನಾಲ್ಕು ಕೊಣ ಮೂಲೆಗಳಲ್ಲಿ ನೀರಿನಲ್ಲಿ ನೆಲೆಸಿವೆ .ಭೂಮಿಯು ಎದೆಯನ್ನಾಶ್ರಯಿಸಿದೆ .ಶಿರಸ್ಸು ಪೂರ್ವದಿಕ್ಕಿನಲ್ಲಿದೆ ಬಾಲವು ಪಶ್ಚಿಮದಲ್ಲಿದೆ.ಉದರದಲ್ಲಿ ಆಕಾಶವೂ ,ದ್ಯುಲೋಕವು ಬೆನ್ನಿನ ಮೇಲೂ ಇದೆ ವಾಯುದೇವರ ಈ ಜಗದ್ಧಾರಕ ಕೂರ್ಮರೂಪವನ್ನು ಉಪಾಸನೆ ಮಾಡುವ ಜ್ಞಾನಿಯು ಬಯಸಿದೆಡೆ ನೆಲೆಸಬಲ್ಲ ಎಂದು ಬೃಹದಾರಣ್ಯಕೋಪನಿಷದ್ಭಾಷ್ಯದಲ್ಲಿ ಜಗದ್ಗುರು ಶ್ರೀಮಧ್ವಾಚಾರ್ಯರು ತಿಳಿಸಿದ್ದಾರೆ .
ಇದನ್ನೇ ಶ್ರೀಪಾದರಾಜರು ಆವ ಕಚ್ಚಪ ರೂಪ ದಿಂದ ಅಂಡೊದಕದಿ ಓವಿ ಧರಿಸಿದ ಶೇಷಮೂರುತಿಯನು ಎಂದು ತಿಳಿಸಿರುವರು.
ಆವವನ ಬಲಪಿಡಿದು ಹರಿಯಾ ಸುರರೈದುವರು
ಈ ಶರೀರದಿಂದ ಉತ್ಕ್ರಮಣಗೊಂಡ ಮುಕ್ತಿಯೋಗ್ಯರು ,ಅಗ್ನಿಪುತ್ರನಾದ ಅರ್ಚಿ,ವಾಯುಪುತ್ರನಾದ ,ಅತಿವಾಹಿಕವಾಯು ,ಹಗಲು ,
ಶುಕ್ಲಪಕ್ಷ ,ಉತ್ತರಾಯಣ,ಸಂವತ್ಸರ ,ತಟಿತ್ ಅಭಿಮಾನಿ ದೇವತೆಗಳನ್ನು ,ಪ್ರಜಾಪತಿ,ಸೂರ್ಯ,ವೈಶ್ವಾನರ,
ಇಂದ್ರ,ಧ್ರುವ,ಭಾರತಿದೇವಿಯರನ್ನು ಹೊಂದಿ ಮುಂದೆ ವಾಯುಲೋಕವನ್ನು ಹೊಂದಿ ಅವನ ಅನುಗ್ರಹದಿಂದಲೇ ಭಗವಂತನನ್ನು ವಿಶೇಷವಾಗಿ ತಿಳಿದು ಅವನನ್ನು ಸೇರುವರು ಎಂದು ಬ್ರಹ್ಮಸೂತ್ರಭಾಷ್ಯದಲ್ಲಿ ಶ್ರೀಮದಾಚಾರ್ಯರು ತಿಳಿಸಿದ್ದಾರೆ .
ವಿದ್ಯತ್ಪತಿವಾಯುರೇವ ನಯೇತ್ ಬ್ರಹ್ಮನಯೇತ್ ಬ್ರಹ್ಮ ನ ಚಾಪರಃ |
ಕುತೋನ್ಯಸ್ಯ ಭವೇಚ್ಛಕ್ತಿಃ ತಮೃತೇ ಪ್ರಾಣನಾಯಕಮ್
ವಿದ್ಯುತ್ತಿಗೆ ಅಭಿಮಾನಿನಿಯಾದ ಭಾರತೀದೇವಿಯ ಪತಿಯಾದ ವಾಯುದೇವರೇ ಎಲ್ಲಾ ದೇವತೆಗಳಿಗೆ ಬ್ರಹ್ಮನನ್ನು ಹೊಂದಿಸುವವರು. ಪ್ರಾಣನಾಯಕರಾದ ವಾಯುದೇವರನ್ನು ಹೊರತಾಗಿ ಮತ್ತಾರಿಗೆ ಆ ಶಕ್ತಿ ?
ಈ ಆಶಯವನ್ನೆ ಶ್ರೀಪಾದರಾಜರು ಆವವನಬಲಪಿಡಿದು ಹರಿಯ ಸುರರೈದುವರು ಎಂದು ಹೇಳಿದ್ದಾರೆ
ಓವಿಧರಿಸಿದ - ಎಂಬ ಪದಗಳಿಂದಾಗಿ ವಾಯುದೇವರು ಧರಿಸುವುದೆಂದರೆ ಜಡ ಮನೆ ಹೇಗೋ ಹಾಗೆ ಬರೇ ಹೊರಗೆ ಧಾರಕನಾಗಿ ಅಲ್ಲ ; ಶೇಷದೇವರಿಗೆ ಬ್ರಹ್ಮಾಂಡದ ಧಾರಣೆಗೆ ಬೇಕಾದ ಸಾಮರ್ಥ್ಯಾದಿಗಳನ್ನು ನೀಡುವ ಮೂಲಕ ಒಳಗಿನ ರಕ್ಷಕನಾಗಿಯೂ ಅನುಗ್ರಹಿಸುತ್ತಿರುವರು ಎಂದು ಸೂಚಿತವಾಗುವುದು.
(whatsapp)
****
just scroll down for other devaranama
..
ಶ್ರೀ ಭಾವೀ ಸಮೀರ ವಾದಿರಾಜರು ರಚಿಸಿದ
#ಶ್ರೀ ಸರಸಭಾರತೀ ವಿಲಾಸದಲ್ಲಿ ಶ್ರೀ* ಮುಖ್ಯಪ್ರಾಣ ದೇವರ ,ವಾಯುದೇವರನ್ನು ಜೀವೋತ್ತಮನೆಂದು ವರ್ಣಿಸುವ ಅದ್ಭುತ ಪ್ರಸಂಗ*
ಶ್ರೀ ಭಾವೀ ಸಮೀರ ವಾದಿರಾಜರು ರಚಿಸಿದ ಶ್ರೀ ಸರಸಭಾರತೀ ವಿಲಾಸದಲ್ಲಿ ಶ್ರೀ ಮುಖ್ಯಪ್ರಾಣ ದೇವರ ,ವಾಯುದೇವರನ್ನು ಜೀವೋತ್ತಮನೆಂದು ವರ್ಣಿಸುವ ಅದ್ಭುತ ಪ್ರಸಂಗ.
ಮನೋಜವಂ ಮಾರುತತುಲ್ಯ ವೇಗಂ ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಟಂ ವಾತಾತ್ಮಜಂ ವಾನರಯೂಥ ಮುಖ್ಯಂ ಶ್ರೀರಾಮ ದೂತಂ ಶಿರಸಾ ನಮಾಮಿ.//.
ತಪೋ ವಿದ್ಯಾ ವಿರಕ್ತ್ಯಾದಿ ಸದ್ಗುಣೌಘಾಕರನಹಮ್ ವಾದಿರಾಜ ಗುರೂನ್ವಂದೇ ಹಯಗ್ರೀವ ದಯಾಶ್ರಯಾನ್.
ನಮಸ್ತೇ ಪ್ರಾಣೇಶ ಪ್ರಣತವಿಭವಾಯಾನಿಮಗಾ:/
ನಮಃ ಸ್ವಾಮಿನ್ ರಾಮ ಪ್ರಿಯತಮ ಹನೂಮಾನ್ ಗುರುಗುಣ/
ನಮಸ್ತುಭ್ಯಂ ಭೀಮ ಪ್ರಬಲತಮ ಕೃಷ್ಣೇಷ್ಟ ಭಗವನ್
ನಮಃ ಶ್ರೀ ಮನ್ ಮಧ್ವ ಪ್ರದಿಶ ಸುದೃಶ್ಯಂನೋ ಜಯ ಜಯ//..
ಶ್ರೀ ಸರಸಭಾರತೀ ವಿಲಾಸದಲ್ಲಿ ಶ್ರೀ ವಾಯುದೇವರು.
ಒಂದಾನೊಂದು ಕಾಲದಲ್ಲಿ ಶಿವ ಮೊದಲಾದ ಇಂದ್ರಿಯಾಧೀಶರು ನಾನು ಶ್ರೇಷ್ಠ ನಾನು ಶ್ರೇಷ್ಠ ಎಂಬ ಅಹಂಕಾರ ಪಟ್ಟರು.
ಇವರೆಲ್ಲಾ ದೇವತೆಗಳು ಬ್ರಹ್ಮಾಪರೋಕ್ಷಿಗಳು ,ಸರ್ವಜ್ಞರೂ ಆಗಿದ್ದರು.ಶುದ್ಧ ಸ್ವಭಾವದ ಇವರಲ್ಲಿ ಕಲಹವನ್ನುಂಟು ಮಾಡುವ ಕಲಿಯ ಪ್ರವೇಶವಾಗಿದ್ದರಿಂದ ಈ ರೀತಿ ಅಹಂಕಾರ ಬುದ್ಧಿ ಉಂಟಾಗುತ್ತದೆ.
ಈ ರೀತಿಯಾದ ಶ್ರೇಷ್ಠ ತೆಯ ಅಹಂಕಾರ ವನ್ನು ದೇವತೆ ಗಳು ಹೊಂದಿ. ಪರಸ್ಪರ ಕಲಹ ಗಳುಂಟಾಯಿತು.
ಶ್ರೀ ಮುಖ್ಯಪ್ರಾಣ ದೇವರು ತನ್ನ ವರಾದ ದೇವತೆಗಳಿಗೆ
ಬುದ್ದಿ ಹೇಳಲು ಶಕ್ತನಾಗಿದ್ದರೂ ಈ ರೀತಿ ಒಂದು ಉಪಾಯ ವನ್ನು ಮಾಡಿಸಿದನು. ತಾನೇ ತನ್ನ ಮಹಿಮೆ ಗಳನ್ನು ಹೇಳಿಕೊಂಡರೆ ನಾನು ಅಹಂಕಾರಿ ಎಂಬ ಭಾವನೆ ಬರುತ್ತದೆ ಎಂದು ಚತುರ್ಮುಖ ಬ್ರಹ್ಮನ ಬಳಿ ಇಂದ್ರಿಯಾಭಿಮಾನಿ ದೇವತೆಗಳೊಂದಿಗೆ ಬ್ರಹ್ಮ ಲೋಕಕ್ಕೆ ಹೋದನು.
ಆಗ ಎಲ್ಲಾ ದೇವತೆ ಗಳು ಬ್ರಹ್ಮ ದೇವರನ್ನು "ನಮ್ಮಲ್ಲಿ ಯಾರು ಶ್ರೇಷ್ಠರು.? ಎಂದು ಕೇಳುತ್ತಾರೆ.
ಆಗ ಬ್ರಹ್ಮ ದೇವರು "ಯಾರು ಶರೀರದಿಂದ ಮೇಲೆಕ್ಕೆದ್ದು ಹೋದರೆ ಶರೀರವು ಬೀಳುವುದೋ,
ಯಾರು ಪ್ರವೇಶ ಮಾಡಿದರೆ ಶರೀರವು ನಿಲ್ಲುವುದೋ
ಆ ದೇವತೆ ಯು ಗುಣಗಳಿಂದ ಶ್ರೇಷ್ಟನು,ವಯಸ್ಸಿನಿಂದಲೂ ಅವನೇ ಸರ್ವಜ್ಯೇಷ್ಟನು "
ಎಂದು ಹೇಳಿದರು.
ಈ ರೀತಿ ಯಾಗಿ ಹೇಳಿದಾಗ ಆ ದೇವತೆಗಳು ಶರೀರದಿಂದ ಒಬ್ಬೊಬ್ಬರಾಗಿ ಹೊರಬಂದರೂ ಮುಖ್ಯಪ್ರಾಣ ದೇವರ ಬಲದಿಂದ ಆ ದೇಹವು ಬೀಳಲಿಲ್ಲ.
ಹೀಗೆ ಕಣ್ಣು ಕಿವಿಯ ಅಭಿಮಾನಿ ದೇವತೆ ಗಳು ಕ್ರಮವಾಗಿ ಹೊರಬಂದರೂ ಅತ್ಯಂತ ಬಲಶಾಲಿ ಯಾದ ಮುಖ್ಯಪ್ರಾಣನ ಸಾಮರ್ಥ್ಯ ದಿಂದಲೇ ದೇಹವು ಕುಸಿದು ಬೀಳಲಿಲ್ಲ.
ಮನೋಭಿಮಾನಿ,ಕಿವಿಯ ಅಭಿಮಾನಿ ದೇವತೆಗಳು ಒಂದು ವರ್ಷದ ಕಾಲ ಹೊರಗಿದ್ದು ಅನಂತರ ಒಬ್ಬೊಬ್ಬರಾಗಿ ದೇಹವನ್ನು ಪ್ರವೇಶಿಸಿ ತಮ್ಮ ತಮ್ಮ ಇಂದ್ರಿಯಗಳಲ್ಲಿ ವಾಸಮಾಡಿದರು.
ಅಲ್ಲಿಗೆ ಅವರ ಅಹಂಕಾರ ಶಾಂತವಾಗಿತ್ತು.
ಆನಂತರ ತನ್ನ ಸರದಿ ಯೆಂದು ತಿಳಿದು ಮುಖ್ಯಪ್ರಾಣನು ಶರೀರದಿಂದ ಹೊರಗೆ ಬರಲು ಯತ್ನಿಸಿದಾಗ ಎಲ್ಲಾ ಇಂದ್ರಿಯ ದೇವತೆಗಳನ್ನು ಅವರವರ ಸ್ಥಳಗಳಿಂದ ಜಗ್ಗಿ ಎಳೆದಂತಾಯಿತು.
ಪ್ರಾಣದೇವರು ಹೊರಟಾಗ ಅವನ ಹಿಂದೆಯೇ ಹೊರಟರು.
ಆಗ ದೇಹವು ಕುಸಿದು ಬಿತ್ತು.
ಪುನಃ ಮುಖ್ಯಪ್ರಾಣ ನು ತನ್ನ ಜೊತೆಗೆ ಬಂದ ದೇವತೆ ಗಳನ್ನು ಬಿಟ್ಟು ತನ್ನ ಅಪಾರ ಶಕ್ತಿ ಯನ್ನು ತೋರಿಸಲು ತಾನೊಬ್ಬನೇ ಬ್ರಹ್ಮ ದೇಹವನ್ನು ಪ್ರವೇಶಿಸಿ ,ಯಾವ ಶಕ್ತಿಯಿಂದ ಈ ದೇಹವು ಎದ್ದಿತು ಎಂದು ತೋರಿಸಲು
ತಾನಿಲ್ಲದಿದ್ದರೆ ಈ ದೇಹದಲ್ಲಿ ಶಕ್ತಿ ಇಲ್ಲ ವೆಂದು ತಿಳಿಸುವುದಕ್ಕಾಗಿ ಹಗ್ಗದ ಸಮೇತ ಗೂಟ ಕಿತ್ತಿದ ಕುದುರೆ ಯಂತೆ ಎಲ್ಲಾ ದೇವತೆ ಗಳನ್ನು ತನ್ನ ಜೊತೆಗೇ
ಎಳೆದುಕೊಂಡು ಬಂದನು.
ಹೀಗೆ ಎಲ್ಲಾ ಇಂದ್ರಿಯಗಳಿಗಿಂತ ಪ್ರಾಣದೇವರ ಶ್ರೇಷ್ಠ ರೆಂದು ಸ್ಪಷ್ಟ ವಾಗುತ್ತದೆ.
ಎಲ್ಲರೂ ದೇಹದಲ್ಲಿ ಇದ್ದರೂ ಮುಖ್ಯಪ್ರಾಣ ನಿಲ್ಲದೇ ದೇಹವು ಏಳಲಾರದು .
ವಾಯು ದೇವರು ಇದ್ದರೆ ಮಾತ್ರ ವೇ ದೇಹ ನಿಲ್ಲುವುದು,ಕಾರ್ಯ ಸಮರ್ಥ ವಾಗುವುದು ಎಂದು ತಿಳಿದು ಬರುತ್ತದೆ.
#ಶ್ರೀಪಾದರಾಜರು ರಚಿಸಿದ ಶ್ರೀ #ಮಧ್ವನಾಮದಲ್ಲಿ
ಜಯ ಜಯ ಜಗತ್ರಾಣ/ಜಗದೊಳಗೆ ಸುತ್ರಾಣ/
ಅಖಿಲ ಗುಣ ಸದ್ಧಾಮ ಮಧ್ವನಾಮ//.
ಆವಾತನು ದೇಹದಿರೆ ಹರಿಯು ತಾ ನೆಲೆಸಿರುವ
ಆವಾತನು ತೊಲಗೆ ಹರಿ ತಾ ತೊಲಗುವ/
ಆವಾತನು ದೇಹದೊಳ ಹೊರಗೆ ನಿಯಾಮಕನು
ಆ ವಾಯು ನಮ್ಮ ಕುಲ ಗುರುರಾಯನು//
ಕರುಣಾಭಿಮಾನಿ ದಿವಿಜರು ದೇಹವನು ಬಿಡಲು
ಕುರುಡ ಕಿವುಡನು ಮೂಕನೆಂದೆನಿಸುವ/
ಪರಮ ಮುಖ್ಯಪ್ರಾಣ ತೊಲಗಾಲ ದೇಹವನು
ಅರಿತು ಪೆಣನೆಂದು ಪೇಳ್ವರು ಬುಧಜನಾ//
ಸುರರೊಳಗೆ ನರರೊಳಗೆ ಸರ್ವಭೂತಗಳೊಳಗೆ
ಪರತರನೆನಿಸಿ ನೇಮದಿ ನೆಲಿಸಿಹ/
ಹರಿಯನಲ್ಲದೆ ಬಗೆಯ ಅನ್ಯರನು ಲೋಕದೊಳು
ಗುರು ಕುಲತಿಲಕ ಮುಖ್ಯ ಪವಮಾನನು//
ಎಂದು ವರ್ಣಿಸಿದ್ದಾರೆ.
//ಶ್ರೀ ಹರಿ ಸಮರ್ಪಣೆ.//
ಹರಿ ಸರ್ವೋತ್ತಮ ವಾಯು ಜೀವೋತ್ತಮ.//
(whatsapp)
***
jaya jaya jagatrANa jagadoLage sutrANa
akhiLa guNa saddhAma madhvanAma
Ava kachchapa rUpadiMda laMDOdakava
Ovi dharisida shEShamUrutiyanu
avatana baLiviDidu hariya surareyduvaru
A vAyu namma kulagururAyanu
avatana dehadoLagiralu hari nelasihanu
avatana tolage hari tA tolaguva
avatana dEhada oLa horage niyAmakanu
A vAyu namma kulagururAyanu
karuNAbhimAni suraru dEhava biDalu
kuruDa kivuDa mUkaneMdenisuva
parama mukhyaprANa tolagalA dEhavanu
aritu peNaveMdu pELuvaru budhajanava
suraroLage nararoLage sarva bhUtagaLoLage
parataranenisi niyAmisi nelasiha
hariyanallade bageya anyaranu lOkadoLu
guru kulatilaka mukhya pavamAnanu
trEteyali raghupatiya sEve mADuveneMdu
vAtasuta hanumaMtaneMdenisida
pOta bhAvadi taraNi biMbakke laMghisida
ItageNeyAru mUlO.rkadoLage
taraNigabhimukhanAgi shabda shAstrava rachisi
uravaNisi hiMdu muMdAgi naDeda
parama pavamAnasuta udayAsta shailagaLa
bharadiyaididagItagupame uMTE
akhiLa vEdagaLa sAraparisidanu munnalli
nikhiLa vyAkaraNagaLa iva parisida
mukhadalli kiMchidapashabda ivagilleMdu
mukhyaprANananu rAmananukarisida
taraNi sutananu kAydu sharadhiyanu neredATi
dharaNi suteyaLa kaMDu danujaroDane
bharadi raNavane mADi gelidu divyAstragaLa
uruhi laMkeya baMda hanumaMtanu
harige chUDAmaNiyanittu harigaLa kUDi
sharadhiyanu kaTTi balu rakkasaranu
orasi raNadali dashashirana huDiguTTida
mereda hanumaMta balavaMta dhIra
uraga baMdhake saluki kapivararu maimareye
taraNi kulatilakanAjneya tALida
girisahita saMjIvanava kittu taMditta
harivarage sariyuMTe hanumaMtage
vijaya raghupati mechchi dharaNisuteyaLigIye
bhajisi yauktikada hAravanu paDeda
ajapadaviyanu rAma koDuvenene hanumaMta
nija bhakutiyane bEDi varava paDeda
A mArutane bhImanenisi dvAparadalli
sOmakuladali janisi pArtharoDane
bhIma vikrama rakkasara muridoTTida
A mahimanamma kulaguru rAyanu
karadiMda shishubhAvanAda bhImana biDalu
girivaDedushatashriMgaveMdenisitu
harigaLa harigaLiM karigaLa karigaLiM
areva vIranige sura nararu sariyE
kurupa garaLavanikke nere uMDu tEgi
hasiduragagaLa myAle biDaladanorasida
araginaramaneyalli uriyanikkalu vIra
dharisi jAhnavigoyda tannanujara
allida baka hiDiMbakareMba rakkasara
nilladorasida lOkakaMTakaranu
ballidasurara gelidu draupadiya karaviDidu
ella sujanarige haruShava tOrida
rAjakula vajranenisida mAgadhana sILi
rAjasUya yAgavanu mADisidanu
AjeyoLu kauravara balava savaruveneMdu
mUjagavariye kaMkaNa kaTTida
mAnanidhi draupadiya manadiMgitavanaritu
dAnavara savarabEkeMdu byAga
kAnanava pokku kimmIrAdigaLa taridu
mAninige saugaMdhikavane taMda
duruLa kIchakanu tAM draupadiya chaluvikege
maruLAgi karekareya mADalavanA
garaDi maneyalli varisi avananvayada
kurupanaTTida mallakulava sadeda
kauravara bala savari vairigaLa neggotti
OraMte kauravana muridu mereda
vairi dushshAsanna raNadalli edegeDahi
vIra narahariya leeleya tOrida
gurusutanu saMgaradi nArAyaNAstravanu
uravaNisi biDalu shastrava bisuTaru
harikripeya paDedirda bhIma huMkAradali
hariya divyAstravanu nere aTTida
chaMDa vikrimanu gadegoMDu raNadi bhU
maMDaladoLidirAMta khaLaranellA
hiMDi bisuTiha vrikOdarana pratApavanu
kaMDunilluvarAru tribhuvanadoLu
naarirodhana keli gurusutana harhiDidu
shiroratna kitti tegedA
nirolagaDagidda duryodhanana horagedahi
uruyuga tanna gedeyinda muridA
dAnavaru kaliyugadoLavatarisi vibudharoLu
vEnana matavanaruhaladanaritu
jnAni tA pavamAna bhUtaLadoLavatarisi
mAnanidi madhvAkhyaneMdenisida
arbhakatanadoLaidi badariyali madhvamuni
nirbhayadi sakaLa shAstrava paThisida
urviyoLu mAye bIralu tatvamArgavanu
Orva madhvamuni tOrida sujanarige
sarvesha hari vishva ella tA pusiyeMba
durvAdigaLa matava nere khaMDisi
save.rsha hari vishva satyaveMdaruhidA
sharvAdi gIrvANa saMtatiyali
badarikAshramake punarapiyaidi vyAsamuni
padakeragi akhiLa vEdAtha.rgaLanu
padumanAbhana mukhadi tiLidu brahmatva
yyedida madhvamunirAyagabhivaMdipe
jayajayatu duvA.rdimatatimira mAtA.rMDa
jayajayatu vAdigaja paMchAnana
jayajayatu chArvAkagarvaparvata kulisha
jaya jaya jagannAtha madhvanAtha
tuMgakula guruvarana hR^itkamaladali nilisi
bhaMgavillade sukhada sujanakella
hiMgade koDuva namma madhvAMtarAtmaka
raMgaviThalaneMdu nere sArirai
madhvanAma kriitige shrI jagannAthadAsara phalashruti
sOma sUryOparAgadi gOsahasragaLa
bhUmidEvarige suranadiya tIradi
shrImukuMdArpaNavenuta koTTa phalamakku
I madhvanAma baradOdidavarige
putrarilladavaru satputra aiduvaru
sarvatradali digvijayavahudu sakala
satrugaLu keDuvarapamrityu baralaMjavudu
sUtranAmakana saMstuti mAtradi
shrIpAdarAya pELida madhvanAma saM
tApakaLedakhiLa saukhyavanIvudu
shrIpati jagannAthaviThalana tOri bhava
kUpAradiMda kaDe hAyisuvudu
***
***

No comments:
Post a Comment