Saturday, 11 December 2021

ಈ ಪರಿಯ ಸೊಬಗಾವ ದೇವರಲಿ ನಾ ಕಾಣೆ ಪಾಪರಾಶಿಯ ankita moolarama EEPARIYA SOBAGAAVA DEVARALI NAA KAANE PAAPARAASHIYA

 


ಕೃತಿ -  kruti  by - not known ಅಂಕಿತ ಮೂಲರಾಮ 

 ಈ  ಪರಿಯ ಸೊಬಗಾವ ದೇವರಲಿ ನಾ ಕಾಣೆ ll ಪ ll


ಪಾಪರಾಶಿಯ ಕಳೆವ ವೇಂಕಟೇಶಗಲ್ಲದೇ ll ಅನು ಪ ll


ಹೊಳೆವ ಮುಕುಟವ ಕಂಡೆ ನಗುವಮುಖವನು ಕಂಡೆ

ಫಾಲ ತಿಲಕವ ಕಂಡೆ ಕರ್ಣಕುಂಡಲ ಕಂಡೆ l

ಬಿಲ್ಲಿನಂದದಿ ತೋರ್ಪ ಭ್ರೂ ವಿಲಾಸವ ಕಂಡೆ

ನಳಿನ ನಾಸಿಕ ಕಂಡೆ ಚೆಲುವ ಕಂಗಳ ಕಂಡೆll 1 ll


ಎಡಬಲದ ಕರಗಳಲಿ ಶಂಖಚಕ್ರವ ಕಂಡೆ

ಬಿಡದೆಜಗಂಗಳ ಪೊರೆವ ಬಾಹುಯುಗ್ಮವ ಕಂಡೆ

ಬೇಡಿದ ವರಗಳನು ಕೊಡುವ ಕರವನು ಕಂಡೆ

ಕೇಡುಗಳ ಕಳೆವಂಥ ಅಭಯ ಹಸ್ತವ ಕಂಡೆ ll2ll


ಸಿರಿದೇವಿ ಒಪ್ಪಿರುವ ವಕ್ಷಸ್ಥಲವನು ಕಂಡೆ

ಹಾರಗಳ ಇಂಬಿಟ್ಟ ಚೆಲುವ ಕಂಠವ ಕಂಡೆ

ಸರಸಿಜೋದ್ಭವಬ್ರಹ್ಮನ ಪಡೆದ ನಾಭಿಯ ಕಂಡೆ

ಸರಸಿಜಾಂಡವ ಪೊತ್ತ ಉದರವನು ಕಂಡೆ ll 3ll


ಶ್ರೇಷ್ಟವಾಗಿರುವಂಥ  ಕಟಿತಟವ ನಾಕಂಡೆ

ನೀಟಾಗಿ ಬಿಗಿದುಟ್ಟ ಪಟ್ಟವಾಳಿಯ ಕಂಡೆ

ಪಟುತರದಿ ಶೋಭಿಸುವ ಜಾನುಜಂಘೆಯ ಕಂಡೆ

ಸಾಟಿಯಿಲ್ಲದ ಚೆಲುವ ಪಾದಯುಗವನು ಕಂಡೆ ll 4 ll


ಸಂಕಟವ ಕಳೆವಂಥ ವೇಂಕಟೇಶನ ಕಂಡೆ

ಬಿಂಕದಿಂ ಬಿರುದುಗಳ ಪೊತ್ತು ಮೆರೆವನ ಕಂಡೆ

ಓಂಕಾರ ಮೂರುತಿ ಪರಮ ಪುರುಷನ ಕಂಡೆ 

ಪಂಕಜಾಕ್ಷ ವೇಂಕಟೇಶ ಮೂಲರಾಮನ ಕಂಡೆ ll5ll

***



English 

E pariya sobagava devarali na kane||

Paparashiya kaleva Venkateshagallade||


Holeva mukutava kande naguva mukhavanu kande|

Phala tilakava kande karna kundala kande|

Billinandadi torpa bhroo vilasava kande|

Nalina nasika kande cheluva kangala kande||1||


Eda balada karagalali shankha chakravanu kande|

Bidade jagangala poreva bahu yugmava kande|

Bedida varagalanu koduva karavanu kande|

Kedugala kalevantha abhaya hastava kande||2||


Siridevi oppiruva vaksha sthalavanu kande|

Haragala imbitta cheluva kanthavanu kande|

Sarasijodbhava Brahmana padeda nabhiya kande|

Sarasijandava potta udaravanu kande||3||


Shreshthavagiruvantha kati tatava na kande|

Neetagi bigidutta pattavaliya kande|

Patu taradi shobhisuva jaanu jangheya kande|

Satiyillada cheluva pada yugavanu kande||4||


Sankatava kalevantha Venkateshana kande|

Binkadim birudugala pottu merevana kande|

Omkara mooruti parama purushana kande|

Pankajaksha Venkatesha Moolaramana kande||5||

***


No comments:

Post a Comment