Monday, 1 November 2021

ರಾಮರಾಮಾ ರಾಮಾ ಎನ್ನ ಬಾರದೇ ankita tande muddumohana vittala

 ರಾಗ -  :  ತಾಳ - 


ರಾಮರಾಮಾ ರಾಮಾ ಎನ್ನ ಬಾರದೇ ll ಪ ll


ರಾಮನ ನೆನೆದರೆ ಪಾಪವು ತೊಲಗುವುದು ll ಅ ಪ ll


ಪಾದಧೂಳಿಯಿಂದಹಲ್ಯೆಯನು ಉದ್ಧರಿಸಿದ ಪಾದವನೇ

ಅನುದಿನದಲ್ಲಿ ನುತಿಸಿದವಗೆ ಪಾವನಗೈಯ್ಯುವ ರಾಮಾ ll 1 ll


ನರನಾಗಿ ಅವತರಿಸಿ ಸುರರನ್ನು ರಕ್ಷಿಸಿದ ಶ್ರೀ

ಸರ್ಪಶಯನನ ಚರಣವ ಸ್ಮರಿಸಿದವಗೆ ದುರಿತಗಳುಂಟೇ ll 2 ll


ತಂದೆಮುದ್ದುಮೋಹನರ ಶಿಷ್ಯನಾಗಿ ಅಂದದಿ ಮಂಗಳಸದನದೊಳು

ಮಂದಮತಿಯ ನೀಗಿ ಸೀತಾರಾಮವಿಟ್ಠಲನ ಭಜಿಸಿದವಗೇ ಪಾಪಭೀತಿಯುಂಟೆ ll 3 ll

***


No comments:

Post a Comment