Friday, 19 November 2021

ನಾರಸಿಂಹ ನಮಿಪೆ ನಿಮ್ಮ ನತಜನಾಶ್ರಯ ankita gururama vittala

 ರಾಗ –  :  ತಾಳ – 


ನಾರಸಿಂಹ ನಮಿಪೆ ನಿಮ್ಮ ನತಜನಾಶ್ರಯ ll ಪ Il


ಘೋರ ದುರಿತದೂರ ಭಕ್ತಕುಮುದಕುಡುರಾಯ ll ಅ ಪ ll


ವಿವಿಧಗತಿಯಲಸುರ ಸುತನ ವೇಧೆಪಡಿಸಲು

ತವ ಪದಾಂಬುರುಹವ ನೆನೆಯೆ ಒಂದೆ ಕ್ಷಣದೊಳು ll ೧ ll 


ಕೋಟಿ ಸಿಡಿಲು ಬಡಿದ ತೆರದಿ ಕೂಗು ಪುಟ್ಟಲು

ಚಾಟ ಸ್ತಂಭದೊಳುದಿಸೆ ದನುಜಕೂಟ ಬೆದರಲು ll ೨ ll 


ಹಿರಣ್ಯ ಕಶಿಪುನಸುವ ಬಗೆದು ಕರುಳ ಧರಿಸಿದೆ

ತರಳಗೊಲಿದೆ ಗುರುರಾಮವಿಟ್ಠಲ ನಂಬಿದೆ ll ೩ ll

***


No comments:

Post a Comment