Wednesday, 1 September 2021

ಪರಮ ಸಾಧ ಐಕೂರು ನರಸಿಂಹಾರ್ಯರ ankita shyamasundara

 ..

ಪರಮ ಸಾಧ ಐಕೂರು ನರಸಿಂಹಾರ್ಯರ ಪ


ಕೃಷ್ಣತೀರದಿ ಮಿಂದು | ಕೃಷ್ಣÀವರನೊಳು

ಜಿಷ್ಣು ಸೂತನ ನೋಳ್ಪ | ವಿಷ್ಣು ದಾಸರ 1

ತರುಳತನದಲಿ | ಸದ್ಗುರುವರೇಣ್ಯರ

ಚರಣ ಸೇವಿಸಿ ಶಾಸ್ತ್ರವರಿತ ಧೀರರ 2

ಸತತ ನಂಬಿದ ಶಿಷ್ಯತತಿಗೆ ಹರಿಗುಣ

ಹಿತದಿ ಸುರಿದ | ಅಪ್ರತಿಮ ಮಹಿಮರ 3

ಪವನ ಶಾಸ್ತ್ರವೇದ | ಕವನವೆನ್ನುತ

ವಿವರಿಸುತ್ತಲಿ ತನ್ನವರ ಪೊರೆದರ 4

ಏನು ಬಂದರು ಮನದಿ ಶ್ರೀನಿವಾಸನ

ಧ್ಯಾನ ಬಿಡದಿಹ | ಮಹಾನುಭಾವರ 5

ಭಕುತಿ ಜ್ಞಾನವ ತಮ್ಮ ಭಕುತ ವರ್ಗಕೆ

ಪ್ರಕಟಗೊಳಿಸಿದ ಇಂಥ | ಮುಕುತಿ ಯೋಗ್ಯರ 6

ಭುವನ ಮೇಲಿಹ ಇವರು ದಿವಿ ಭವಾಂಶರು

ರವಿ ನಿಭಾಂಗರು | ಜವನ ಭವಣೆ | ತರಿದರು 7

ಇವರು ಪೇಳುವ ವಚನ ಶ್ರವವಣಗೈಯಲು

ಭವದಿ ಬಳಲದೆ ಶೌರಿ ಭುವನ ಪಡೆವರು 8

ಕಂತುಪಿತ ಕಥಾ ಸುಧಾ | ಗ್ರಂಥ ಮರ್ಮವ ಆ

ದ್ಯಂತ ಬಲ್ಲರು ಪರಮ ಶಾಂತಿ ಶೀಲರು 9

ಮೌನಧ್ಯಾನದ ಜ್ಞಾನ ಖೂನ ತೋರದೆ

ಹೀನರಂದದಿ ಹೊರಗೆ ಕಾಣಿಸುವರು 10

ಬಾಲಕೃಷ್ಣನ ದಿವ್ಯಲೀಲೆ ಚರಿತೆಯ

ಕೇಳಿ ಹೇಳದೆ ನಿಮಿಷ ಕಾಲ ಕಳೆಯರು 11

ನಿಂದ್ಯ ವಂದನೆ ಬಂದ ಕುಂದು ಶ್ಲಾಘನೆ

ಇಂದಿರೇಶನೆ ತಾನೆ ತಂದ ನೆಂಬರು 12

ಪಾದ ಪೊಂದಿದ ಜನಕೆ | ಮೋದಗರೆವರು

ವ್ಯಾಧಿ ಕಳೆದರು ವೇದ ಬೋಧಿಸಿದರು 13

ವಿವಿಧ ವೈಭವ ಮೇಣ್ | ಕುವರ ಭಾಗ್ಯವ

ವಿವಿಧ ಭೋಗವ ಶಿಷ್ಯ ನಿವಹಕಿತ್ತರು 14

ಸತ್ಯದೇವನ ಮಹಿಮೆ ನಿತ್ಯ ಪೇಳುತ

ಭೃತ್ಯನಿಕರಕೆ ಸಧೃಡ ಚಿತ್ತವಿತ್ತರು 15

ಕಾಮವಾಸನೆ ಸುಟ್ಟು | ನೇಮ ಪೂರ್ವಕ

ರಾಮನೊಲಿಮೆಯ | ವಿಶ್ವಪ್ರೇಮವೆಂಬರು 16

ಈ ಸುಮಹಿಮರ | ಸದುಪದೇಶ ಕೊಳ್ಳಲು

ಕ್ಲೇಶಬಾರದು | ಯಮನು ಘಾಸೆÉಗೊಳಿಸನು 17

ಧರಣಿವಲಯದಿ ಇವರ ಚರಿತೆ ತಿಳಿಯದೆ

ಜರಿವ ಮನುಜರು ಘೋರ ನಿರಯ ಪಾತ್ರರು 18

ಇನಿತುಪಾಸನೆಗೈವ ಘುನ ಮಹಾತ್ಮರ

ಗುಣಗಣಂಗಳ | ತುತಿಸಲೆನಗೆ ಸಾಧ್ಯವೆ 19

ಅರುಣನುದಿಯದಿ | ಇವರ ಚರಣ ಕಮಲವ

ಸ್ಮರಣ ಮಾಡಲು | ಹರಿಯ ಕರುಣವಾಹದು 20

ಸಾಮಜವರ ವರದ ಶಾಮಸುಂದರನ

ಪ್ರೇಮಪಾತ್ರ ನಿಷ್ಕಾಮ ಪೂರ್ಣರು 21

***


No comments:

Post a Comment