Monday, 6 September 2021

ಇದಿರಾರೋ ಗುರುವೆ ಸಮರಾರೊ ankita shreerama vittala

 ankita ಶ್ರೀರಾಮವಿಠಲ

ರಾಗ: ಆನಂದಭೈರವಿ ತಾಳ: ಅಟ


ಇದಿರಾರೋ ಗುರುವೆ ಸಮರಾರೊ


ಸದಮಲ ವೈರಾಗ್ಯ ನಿಧಿಯೆ ಅ-

ಸ್ಮದ್ಗುರು ರಾಘವೇಂದ್ರ ನಿನಗೆ ಜಗದಿ ಅ.ಪ


ಅಲವಬೋಧರಮತದ ಹಲವು ಶಾಸ್ತ್ರವ ರಚಿಸಿ

ಕಲಿಮಾಯಿಗಳ ಮತಗಳ ಖಂಡ್ರಿಸಿ

ಜಲಜನಾಭನ ಜಗದೇಕನೆಂದರುಹಿ

ಭಲೇ ಮಧ್ವಮತಧ್ವಜವ ಜಗದಿನಿಲಿಸಿರುವಿ 1

ವೆಗ್ಗಳ ಪುಣ್ಯವ ಅಗ್ಗಮಾಡುತ ನೀನು

ಬಗ್ಗಿಬರುವ ಭಕ್ತರ ಪೊರೆವೆ

ಹೆಗ್ಗಳವೆಂದರೆ ಕರೆದಲ್ಲಿ ನೀ ಬರುವಿ ನಿನಗೆ

ಬಗ್ಗದ ಕಲಿಗಳ ಬಗ್ಗುಬಡಿಯುವೆ 2

ಭೀತಿಭೂತಗಳ ಬಾಧೆಯ ಬಿಡಿಸಬಲ್ಲಿ

ಸೋತು ಬಂದವರನ್ನು ಸಲಹಬಲ್ಲಿ

ವಾತಸುತನಾವೇಶ ಬಲಪೂರ್ಣ ನೀನಿದ್ದು

ಸೀತಾಪತಿಶ್ರೀರಾಮವಿಠಲನ ಪೂಜಿಸುವ 3

***


No comments:

Post a Comment