kruti by ಗುರುಗೋವಿಂದಠಲ (ಮೈಸೂರು)
ರಾಗ: ವಸಂತ ತಾಳ: ಆದಿ
ಯತಿವರ್ಯ ಯತಿವರ್ಯ ಪ
ಯತಿ ಸುಧೀಂದ್ರಕರ ಸುತನೆಂದೆನಿಸಿದ ಅ.ಪ.
ಆರ್ತ ಜನೋದ್ಧಾರ ಕೀರ್ತಿ ನಿನ್ನದೆನೆ-
ವಾರ್ತೆ ಕೇಳಿ ಪರಮಾರ್ಥವ ಯಾಚಿಪೆ 1
ಪ್ರಣವಪಾದ್ಯ ಹರಿ ಗುಣ ಸಂಪೂರ್ಣನ
ಗುಣವರ್ಣನ ಸುe್ಞÁನವನೀಯೊ 2
ಪರಿಮಳಾರ್ಯ ತವ ಚರಣಾರಾಧನೆ
ಕರುಣಿಸಿ ಸುಧೆರಸ ಎರೆವುದೆನಗೆ ಗುರು 3
ಅನ್ಯನಲ್ಲ ನಾ ನಿನ್ನವರವನೈ
ಘನ್ನ ಮಹಿಮ ಸಂಪನ್ನ ಪೊರೆಯೊ ಗುರು 4
ಯೋಗಿವರ್ಯ ತವ ಅಘಹರನಾಮಕೆ
ಮಿಗಿಲಿಲ್ಲವೊ ಗುರು ಬಾಗಿ ನಮಿಪೆ ನಿನ್ನ 5
ಕಾಮಧೇನು ಪರಿ ಕಾಮ ಫಲಪ್ರದ
ಪಾಮರ ಮನುಜನ ನೀ ಮಾಣದೆ ಪೊರೆ 6
ಭೂಮಾರ್ಣವ ಗುರುಗೋವಿಂದವಿಠಲನ
ಕಾಮಿಪೆ ಮನ್ಮನ ಸೀಮೆಯಲಿರಿಸೋ 7
***
No comments:
Post a Comment