ankita ನರಹರಿವಿಠಲ
ರಾಗ: ಮಾಂಡ್ ತಾಳ: ಧುಮಾಳಿ
ವಂದಿಪೆನು ಇಂದಿನ ಸುಂದರ ಗುರುರಾಜರಂ ಮಾ-
ನಂದಮತಾಂಬುಧಿಚಂದಿರ ರಾಘವೇಂದ್ರರ ಪ
ಭಾವಶುದ್ಧಿಯಿಂದಲಿ ವರಭಜನೆ ಮಾಡುತಿಹ ಜನರ
ಕಾವಕರುಣಿ ನಮ್ಮ ಯತಿವರ ಗುರುವರರೆ 1
ಚಂದ್ರಿಕ ಪರಿಮಳಾರ್ಯರ ರಾಮಚಂದ್ರರನುಗ್ರಹಪಾತ್ರರ
ಹಿಂದೆ ಕನಕಕಶ್ಯಪಜಾತರ ವ್ಯಾಸರ 2
ಮರೆಯದಿವರ ಸ್ತೋತ್ರ ಪಠಿಸುವವರಿಗೆ ನರಹರಿವಿಠಲ ಒಲಿಯುವ
ದುರಿತರಾಶಿಗಳ ತರಿಯುವ ಸುಖಗರಿವ 3
***
No comments:
Post a Comment