ಹರಿ ನಿನ್ನ ಭಕುತಿಗುನ್ಮತ ಬಿಡಬೇಕು ಗುರು ಹೇಳುವ ಮಾತು ಕೈಗೂಡಬೇಕು pa
ಕಾಮೋನ್ಮತ್ತಗೆಲ್ಲಿಹದೊ ನಿಜಭಕ್ತಿ ನೇಮ ಉಂಟೆ ಪರಾಮರಿಸುವ ಶಕ್ತಿ ಕೋಮಲತಿಯರ ಕಂಡು ಕಳವಳಾದ್ಯುಕ್ತಿ ಪಾಮರಗಳಿಗೆಲ್ಲಿಹ್ಯದೊ ವಿರಕ್ತಿ 1
ಧನೋನ್ಮತ್ತಗೆಲ್ಲಿಹುದೊ ನಿಜಧ್ಯಾನ ಕಾಣನೆಂದಿಗೆ ಕಣ್ದೆರದು ತಾ ಖೂನ ಹೆಣ್ಣು ಹೊನ್ನಿನ ಮ್ಯಾಲೆ ಇಟ್ಟಿಹ ಜೀವ ಪ್ರಾಣ ಹೀನ ಮನುಜರಿಗೆಲ್ಲಿಹುದೊ ಸುಜ್ಞಾನ 2
ಉನ್ಮತ ಹೋದರೆ ಸನ್ಮತದಿಂದ ತನ್ಯಯಾಗುವರು ಸದ್ಘನ ಕೃಪೆಯಿಂದ ಉನ್ಮನಾಗುವಂತೆ ನೋಡೋ ಮುಕುಂದ ಚಿಣ್ಣ ಮಹಿಪತಿಗೆ ಸದ್ಬೋಧ ಆನಂದ 3
***
No comments:
Post a Comment